ಅಫ್ಘಾನಿಸ್ತಾನದಲ್ಲಿ ನಾಳೆ ನಡೆಯಲಿರುವ ಜಿ 20 ಪ್ರಭಾವಿ ನಾಯಕರ ಶೃಂಗಸಭೆಯಲ್ಲಿ ಭಾಗಹಿಸಲಿದ್ದಾರೆ ನರೇಂದ್ರ ಮೋದಿ

Narendra Modi G20 ಇಟಲಿಯ ಅಧ್ಯಕ್ಷರ ಆಹ್ವಾನದ ಮೇರೆಗೆ, PM ನರೇಂದ್ರ ಮೋದಿ ಅವರು ಮುಂಬರುವ G20 ಪ್ರಭಾವಿ ನಾಯಕರ ಶೃಂಗಸಭೆಯಲ್ಲಿ ಅಕ್ಟೋಬರ್ 12 ರಂದು ವರ್ಚುವಲ್ ಆಗಿ ಭಾಗವಹಿಸಲಿದ್ದಾರೆ" ಎಂದು ಎಂಇಎ ಹೇಳಿದೆ..

ಅಫ್ಘಾನಿಸ್ತಾನದಲ್ಲಿ ನಾಳೆ ನಡೆಯಲಿರುವ ಜಿ 20 ಪ್ರಭಾವಿ ನಾಯಕರ ಶೃಂಗಸಭೆಯಲ್ಲಿ ಭಾಗಹಿಸಲಿದ್ದಾರೆ ನರೇಂದ್ರ ಮೋದಿ
ನರೇಂದ್ರ ಮೋದಿ

ದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಂಗಳವಾರ ಅಫ್ಘಾನಿಸ್ತಾನದಲ್ಲಿ ಜಿ 20 ಪ್ರಭಾವಿ ನಾಯಕರ ಶೃಂಗಸಭೆಯಲ್ಲಿ (G20 Extraordinary Leaders’ Summit) ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ತಿಳಿಸಿದೆ. ಶೃಂಗಸಭೆಗೆ ಹಾಜರಾಗಲು 20 ರಾಷ್ಟ್ರಗಳ ಗುಂಪಿನ ಇಟಲಿಯ ಅಧ್ಯಕ್ಷರಿಂದ ಆಹ್ವಾನವನ್ನು ನೀಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ಪ್ರಧಾನಿ ವಿಡಿಯೊ ಲಿಂಕ್ ಮೂಲಕ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

“G20 ಯ ಇಟಲಿಯ ಅಧ್ಯಕ್ಷರ ಆಹ್ವಾನದ ಮೇರೆಗೆ, PM ನರೇಂದ್ರ ಮೋದಿ ಅವರು ಮುಂಬರುವ G20 ಪ್ರಭಾವಿ ನಾಯಕರ ಶೃಂಗಸಭೆಯಲ್ಲಿ ಅಕ್ಟೋಬರ್ 12 ರಂದು ವರ್ಚುವಲ್ ಆಗಿ ಭಾಗವಹಿಸಲಿದ್ದಾರೆ” ಎಂದು ಎಂಇಎ ಹೇಳಿದೆ.

ಸಚಿವಾಲಯದ ಪ್ರಕಾರ ಮಧ್ಯ ಏಷ್ಯಾದ ದೇಶದಲ್ಲಿ ತಮ್ಮ ಸರ್ಕಾರವನ್ನು ಸ್ಥಾಪಿಸಿದ ತಾಲಿಬಾನ್ ದಂಗೆಕೋರರು ದೇಶವನ್ನು ಸ್ವಾಧೀನಪಡಿಸಿಕೊಂಡ ನಂತರ, ನಾಳಿನ ಸಭೆಯಲ್ಲಿ ಅಫ್ಘಾನ್ ಬಿಕ್ಕಟ್ಟಿನ ಮಾನವೀಯ ಅಂಶಗಳ ಬಗ್ಗೆ ಗಮನ ಕೇಂದ್ರೀಕರಿಸಲಿದ್ದಾರೆ. ಭದ್ರತೆ ಮತ್ತು ಭಯೋತ್ಪಾದನೆ ವಿರೋಧಿ ಹೋರಾಟದ ಬಗ್ಗೆಯೂ ಇಲ್ಲಿ ಚರ್ಚೆಯಾಗಲಿದೆ.


ಸಭೆಯ ಕಾರ್ಯಸೂಚಿಯು ಮಾನವೀಯ ಅಗತ್ಯಗಳಿಗೆ ಪ್ರತಿಕ್ರಿಯೆ ಮತ್ತು ಮೂಲಭೂತ ಸೇವೆಗಳು ಮತ್ತು ಜೀವನೋಪಾಯದ ವಿಷಯಗಳನ್ನು ಒಳಗೊಂಡಿರುತ್ತವೆ. ಭದ್ರತೆ ಮತ್ತು ಭಯೋತ್ಪಾದನೆ ವಿರುದ್ಧದ ಹೋರಾಟ,ಚಲನಶೀಲತೆ, ವಲಸೆ ಮತ್ತು ಮಾನವ ಹಕ್ಕುಗಳ ಬಗ್ಗೆ ಇಲ್ಲಿ ಚರ್ಚಿಸಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

ಆಗಸ್ಟ್ 15 ರಂದು ತಾಲಿಬಾನ್ ಕಾಬೂಲ್ ಅನ್ನು ವಶಪಡಿಸಿಕೊಂಡಿತು ಮತ್ತು ಆಗಸ್ಟ್ 31 ರ ವೇಳೆಗೆ ಯುನೈಟೆಡ್ ಸ್ಟೇಟ್ಸ್ ತನ್ನ ನಿಗದಿತ ಮಿಲಿಟರಿ ವಾಪಸಾತಿಯನ್ನು ಪೂರ್ಣಗೊಳಿಸಿತು.

ಇದನ್ನೂ ಓದಿ:  ಬಿಜೆಪಿ ಮತ್ತು ಅವರ ಕೋಟ್ಯಾಧಿಪತಿ ಗೆಳೆಯರು ಮಾತ್ರ ದೇಶದಲ್ಲಿ ಸುರಕ್ಷಿತರು: ಪ್ರಿಯಾಂಕಾ ಗಾಂಧಿ ವಾದ್ರಾ

Read Full Article

Click on your DTH Provider to Add TV9 Kannada