ದಸರಾ ವಿಶೇಷ ಕೊಡುಗೆ; ನಾರಾಯಣ ಹೃದಯಾಲಯದಿಂದ ಮೈಸೂರಿನಲ್ಲಿ ಒಂದು ಸಾವಿರ ಜನರಿಗೆ ಉಚಿತ ಲಸಿಕೆ
ಮೈಸೂರಿನ ನಾರಾಯಣ ಹೃದಯಾಲಯವು ದಸರಾ ಕೊಡುಗೆ ನೀಡುತ್ತಿದೆ. ಸುಮಾರು 1 ಸಾವಿರ ಜನರಿಗೆ ಉಚಿತ ಲಸಿಕೆ ವಿತರಣೆಗೆ ಸಿದ್ಧವಾಗಿದೆ. ಇಂದಿನಿಂದ ಉಚಿತ ಲಸಿಕೆ ಕಾರ್ಯಕ್ರಮ ಶುರುವಾಗಿದೆ.
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಮೈಸೂರಿನ ನಾರಾಯಣ ಹೃದಯಾಲಯದಿಂದ ಉಚಿತವಾಗಿ ಒಂದು ಸಾವಿರ ಜನರಿಗೆ ಲಸಿಕೆ ನೀಡಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೈಸೂರು ನಗರದ ಶಿವರಾಂಪೇಟೆಯಯಲ್ಲಿರುವ ನಾರಾಯಣ ಮಲ್ಟಿ ಸ್ಪೆಷಲ್ ಕ್ಲಿನಿಕ್‌ನಲ್ಲಿ ಲಸಿಕೆ ನೀಡಲಾಗುತ್ತಿದೆ.
ಸಾಂಸ್ಕೃತಿಕ ನಗರಿ ದಸರಾಗಾಗಿ ಸಜ್ಜಾಗಿದೆ. ದಸರಾ ನೋಡಲು ಸಾವಿರಾರು ಮಂದಿ ಬರುತ್ತಿದ್ದಾರೆ. ಪ್ರವಾಸಿಗರು, ಕಲಾ ಪ್ರೇಮಿಗಳು ಮೈಸೂರಿನತ್ತ ಮುಖ ಮಾಡಿದ್ದರೆ. ಈ ನಡುವೆ ಮಹಾಮಾರಿ ಕೊರೊನಾ ಹೆಚ್ಚಾಗುವ ಸಾಧ್ಯತೆ ಎದುರಾಗಿದೆ. ಈ ನಿಟ್ಟಿನಲ್ಲಿ ಮೈಸೂರಿನ ನಾರಾಯಣ ಹೃದಯಾಲಯವು ದಸರಾ ಕೊಡುಗೆ ನೀಡುತ್ತಿದೆ. ಸುಮಾರು 1 ಸಾವಿರ ಜನರಿಗೆ ಉಚಿತ ಲಸಿಕೆ ವಿತರಣೆಗೆ ಸಿದ್ಧವಾಗಿದೆ. ಇಂದಿನಿಂದ ಉಚಿತ ಲಸಿಕೆ ಕಾರ್ಯಕ್ರಮ ಶುರುವಾಗಿದೆ. ನವರಾತ್ರಿಯ 5ನೇ ದಿನ ಸ್ಕಂದಮಾತೆಯ ಆರಾಧಿಸುವ ದಿನವಾದ ಇಂದು ನಾರಾಯನ ಮಲ್ಟಿ ಸ್ಪೆಷಲ್ ಕ್ಲಿನಿಕ್ ಕೊರೊನಾ ವಿರುದ್ಧ ಹೋರಾಟಕ್ಕೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.
ಇದನ್ನೂ ಓದಿ: ಆಫ್ರಿಕಾದ ಜೀವನಶೈಲಿಗೆ ವೇದಿಕೆಯಾದ ದಸರಾ ಬೊಂಬೆಗಳು; ದಂಪತಿ ವಿಶೇಷ ಆಸಕ್ತಿಗೆ ಸಾಕ್ಷಿಯಾದ ದಸರಾ