ಮೈಸೂರು ಕೋರ್ಟ್‌ನಲ್ಲಿ ಬಾಂಬ್ ಸ್ಫೋಟ ಪ್ರಕರಣ; ಮೂವರು ಅಲ್‌ಖೈದಾ ಉಗ್ರರಿಗೆ ಶಿಕ್ಷೆ ಪ್ರಮಾಣ ಪ್ರಕಟ

Mysuru Court Bomb Blast Case: ಬೆಂಗಳೂರಿನ ಎನ್​ಐಎ (NIA) ವಿಶೇಷ ಕೋರ್ಟ್‌ನಿಂದ ಶಿಕ್ಷೆ ಪ್ರಕಟ ಮಾಡಲಾಗಿದೆ. ಮೈಸೂರು ಕೋರ್ಟ್ ಬಳಿ ಬಾಂಬ್ ಸ್ಪೋಟ ಪ್ರಕರಣದ ತೀರ್ಪು ನೀಡಲಾಗಿದ್ದು, ಶಿಕ್ಷೆಯ ಪ್ರಮಾಣವೂ ಪ್ರಕಟಿಸಲಾಗಿದೆ.

ಮೈಸೂರು ಕೋರ್ಟ್‌ನಲ್ಲಿ ಬಾಂಬ್ ಸ್ಫೋಟ ಪ್ರಕರಣ; ಮೂವರು ಅಲ್‌ಖೈದಾ ಉಗ್ರರಿಗೆ ಶಿಕ್ಷೆ ಪ್ರಮಾಣ ಪ್ರಕಟ
ಎನ್​ಐಎ

ಬೆಂಗಳೂರು: ಮೈಸೂರಿನ ಕೋರ್ಟ್‌ನಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಮೂವರು ಅಲ್‌ಖೈದಾ ಉಗ್ರರಿಗೆ ಇಂದು (ಅಕ್ಟೋಬರ್ 11) ಶಿಕ್ಷೆ ಪ್ರಮಾಣ ಪ್ರಕಟವಾಗಿದೆ. ಬೆಂಗಳೂರಿನ ಎನ್​ಐಎ (NIA) ವಿಶೇಷ ಕೋರ್ಟ್‌ನಿಂದ ಶಿಕ್ಷೆ ಪ್ರಕಟ ಮಾಡಲಾಗಿದೆ. ಮೈಸೂರು ಕೋರ್ಟ್ ಬಳಿ ಬಾಂಬ್ ಸ್ಪೋಟ ಪ್ರಕರಣದ ತೀರ್ಪು ನೀಡಲಾಗಿದ್ದು, ಶಿಕ್ಷೆಯ ಪ್ರಮಾಣವೂ ಪ್ರಕಟಿಸಲಾಗಿದೆ.

ಮೂವರು ತಪ್ಪಿತಸ್ಥರೆಂದು ಎನ್ಐಎ ಕೋರ್ಟ್‌ ತೀರ್ಪು ನೀಡಿದೆ. ನೈನಾರ್ ಅಬ್ಬಾಸ್ ಅಲಿ, ಅಬ್ದುಲ್ ಕರೀಂ ಹಾಗೂ ದಾವೂದ್ ಸುಲೈಮಾನ್ ತಪ್ಪಿತಸ್ಥರೆಂದು ತೀರ್ಪು ನೀಡಲಾಗಿದೆ. 2016ರ ಆಗಸ್ಟ್ 6ರಂದು ಸ್ಫೋಟ ಘಟನೆ ನಡೆದಿತ್ತು. ಮೈಸೂರಿನ ಜಿಲ್ಲಾ ಕೋರ್ಟ್‌ನ ಶೌಚಾಲಯದಲ್ಲಿ ಸ್ಫೋಟವಾಗಿತ್ತು. ಅಪರಾಧಿಗಳು, ಅಡುಗೆ ಕುಕ್ಕರ್‌ನಲ್ಲಿ ಬಾಂಬ್ ಸ್ಫೋಟಿಸಿದ್ದರು.

ಪ್ರಕರಣದ ಆರೋಪಿ ನೈನಾರ್ ಅಬ್ಬಾಸ್ ಆಲಿಗೆ ಒಟ್ಟಾರೆ ಹತ್ತು ವರ್ಷ ಜೈಲು ಶಿಕ್ಷೆ ಹಾಗೂ 43 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ಕೊಡಲಾಗಿದೆ. ಸಮಸೂನ್ ಕರೀಮ್ ರಾಜಾಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಸಮಸೂನ್ ಕರೀಮ್ ರಾಜಾಗೆ 25 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಲಾಗಿದೆ. ಸುಲೈಮಾನ್ ಎಂಬಾತನಿಗೆ ಏಳು ವರ್ಷಗಳ ಜೈಲು ಶಿಕ್ಷೆ ಹಾಗೂ 38 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಲಾಗಿದೆ. ಅಕ್ಟೋಬರ್ 8 ರಂದೇ ಮೂವರು ಆರೋಪಿಗಳು ಅಪರಾಧಿಗಳೆಂದು ತೀರ್ಪು ನೀಡಲಾಗಿತ್ತು. ಎನ್​ಐಎ ವಿಶೇಷ ಕೋರ್ಟ್ ತೀರ್ಪು ನೀಡಿತ್ತು. ಇಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಿದೆ.

ಇದನ್ನೂ ಓದಿ: ಮೈಸೂರು ಕೋರ್ಟ್​ನಲ್ಲಿ 2016ರಲ್ಲಿ ಸ್ಪೋಟ ಪ್ರಕರಣ; ಮೂವರು ಆರೋಪಿಗಳು ತಪ್ಪಿತಸ್ಥರು ಎಂದು ತೀರ್ಪಿತ್ತ ಕೋರ್ಟ್

ಇದನ್ನೂ ಓದಿ: ಮೈಸೂರು ವಿವಿಯಲ್ಲಿ ಗೋಲ್ಡ್ ಮೆಡಲ್ ಪಡೆದ ಗೃಹಿಣಿ ಅನುಮಾನಾಸ್ಪದ ಸಾವು!

Read Full Article

Click on your DTH Provider to Add TV9 Kannada