ಮೈಸೂರು ವಿವಿಯಲ್ಲಿ ಗೋಲ್ಡ್ ಮೆಡಲ್ ಪಡೆದ ಗೃಹಿಣಿ ಅನುಮಾನಾಸ್ಪದ ಸಾವು!

ಆಶಾ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮಡೇನಹಳ್ಳಿ ನಿವಾಸಿ. ಸದ್ಯ ಆಶಾ ಹಾಗೂ ನಾಗಾಪ್ರಸಾದ್ ಮೈಸೂರಿನಲ್ಲಿ ವಾಸವಾಗಿದ್ದರು. ಆಶಾಗೆ ಹಣ ತೆಗೆದುಕೊಂಡು ಬರುವಂತೆ ಗಂಡನಿಂದ ನಿರಂತರ ಕಿರುಕುಳ ನೀಡುತ್ತಿದ್ದರಂತೆ.

ಮೈಸೂರು ವಿವಿಯಲ್ಲಿ ಗೋಲ್ಡ್ ಮೆಡಲ್ ಪಡೆದ ಗೃಹಿಣಿ ಅನುಮಾನಾಸ್ಪದ ಸಾವು!
ಮೃತ ಮಹಿಳೆ ಆಶಾ

ಮೈಸೂರು: ಮೈಸೂರು ವಿಶ್ವವಿದ್ಯಾಲಯದಲ್ಲಿ ಗೋಲ್ಡ್ ಮೆಡಲ್ ಪಡೆದ ಗೃಹಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಕುಟುಂಬಸ್ಥರೇ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಎಂಟು ವರ್ಷಗಳ ಹಿಂದೆ ಆಶಾ ಎಂಬ ಮಹಿಳೆ ಪ್ರೀತಿಸಿ ಮದುವೆಯಾಗಿದ್ದರು. ಮಳವಳ್ಳಿಯ ನಾಗಾಪ್ರಸಾದ್ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆಶಾಗೆ ಹಣ ತೆಗೆದುಕೊಂಡು ಬರುವಂತೆ ಗಂಡ ನಿರಂತರ ಕಿರುಕುಳ ನೀಡುತ್ತಿದ್ದ ಎಂಬ ಮಾಹಿತಿ ಕೇಳಿಬಂದಿದೆ.

ಆಶಾ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮಡೇನಹಳ್ಳಿ ನಿವಾಸಿ. ಸದ್ಯ ಆಶಾ ಹಾಗೂ ನಾಗಾಪ್ರಸಾದ್ ಮೈಸೂರಿನಲ್ಲಿ ವಾಸವಾಗಿದ್ದರು. ಆಶಾಗೆ ಹಣ ತೆಗೆದುಕೊಂಡು ಬರುವಂತೆ ಗಂಡನಿಂದ ನಿರಂತರ ಕಿರುಕುಳ ನೀಡುತ್ತಿದ್ದರಂತೆ. ಈ ಬಗ್ಗೆ ಎರಡ್ಮೂರು ಬಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣ ಡೈವೋರ್ಸ್ ಹಂತಕ್ಕೆ ಹೋಗಿತ್ತು. ನಂತರ ಫ್ಯಾಮಿಲ್ ಕೋರ್ಟ್ನಲ್ಲಿ ರಾಜೀ ಮಾಡಲಾಗಿತ್ತು. ಇದಾದ ಮೇಲೂ ನಾಗಾಪ್ರಸಾದ್ ನಿರಂತರವಾಗಿ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದರಂತೆ.

ಆಶಾ ನಿನ್ನೆಯಷ್ಟೆ ಗಂಡನ ಮನೆ ಬಿಟ್ಟು ಪಿಜಿಯಲ್ಲಿ ಇರುತ್ತೇನೆ ಎಂದು ಹೇಳಿದ್ದರು. ಆದರೆ ನಿನ್ನೆ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಾಗಾಪ್ರಸಾದ್ ಕರೆಮಾಡಿದ್ದಾರೆ. ಆತ್ಮಹತ್ಯೆ ಅಲ್ಲ. ಇದು ಕೊಲೆ ಎಂದು ಆಶಾ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಸದ್ಯ ಮೈಸೂರಿನ ವಿದ್ಯಾರಣ್ಯಪುರಂ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

ಆಶಾ ಪತಿ ನಾಗಾಪ್ರಸಾದ್

ಇದನ್ನೂ ಓದಿ

ಕಲಬುರಗಿ: ಕಟ್ಟಿಗೆ ತರಲು ಹೋದ ಬಾಲಕಿಗೆ ವಿಷ ಕುಡಿಸಿ ಹತ್ಯೆ ಮಾಡಿದ ಆರೋಪ!

ತುಂತುರು ಮಳೆಗೆ ವಾರಾಂತ್ಯದಲ್ಲಿ ಬೆಂಗಳೂರು ಕೂಲ್ ಕೂಲ್; ಖುಷ್​ ಖುಷಿಯಾಗಿ ಓಡಾಡೋಣ ಅಂದ್ರೆ ಜಿಟಿ ಜಿಟಿ ಮಳೆ ಕಾಟ!

Read Full Article

Click on your DTH Provider to Add TV9 Kannada