ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಹೋಗಬೇಕಿತ್ತು: ಎಚ್ ವಿಶ್ವನಾಥ್
ಕಾಂಗ್ರೆಸ್ ಪಕ್ಷದ ಹಿರಿಯರು ಆಹ್ವಾನಿಸಿದಾಗ ರಾಷ್ಟ್ರ ರಾಜಕಾರಣಕ್ಕೆ ಬರುತ್ತೇನೆಂದು ಸಿದ್ದರಾಮಯ್ಯ ಧೈರ್ಯ ತೋರಬೇಕಿತ್ತು ಎಂದು ವಿಶ್ವನಾಥ್ ಹೇಳಿದ್ದಾರೆ.
ಮೈಸೂರು: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಹೋಗುವುದಿಲ್ಲ ಎಂದು ನೀಡಿರುವ ಹೇಳಿಕೆಗೆ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅಭಿಪ್ರಾಯಪಟ್ಟರು. ಕಾಂಗ್ರೆಸ್ ಪಕ್ಷದ ಹಿರಿಯರು ಆಹ್ವಾನಿಸಿದಾಗ ರಾಷ್ಟ್ರ ರಾಜಕಾರಣಕ್ಕೆ ಬರುತ್ತೇನೆಂದು ಸಿದ್ದರಾಮಯ್ಯ ಧೈರ್ಯ ತೋರಬೇಕಿತ್ತು. ಆದರೆ ಅವರು ರಾಜಕೀಯ ಪುಕ್ಕಲತನ ಪ್ರದರ್ಶಿಸುತ್ತಿದ್ದಾರೆ ಎಂದು ವಿಶ್ವನಾಥ್ ವಿಶ್ಲೇಷಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಸಿದ್ದರಾಮಯ್ಯ ಹಗುರವಾಗಿ ಮಾತಾಡುತ್ತಾರೆ. ಆದರೆ ರಾಷ್ಟ್ರ ರಾಜಕಾರಣಕ್ಕೆ ಹೋಗಲು ಅವರಿಗೆ ಪುಕ್ಕಲತನವಿದೆ. ಇಷ್ಟು ಹೆದರಿಕೆ ಇರುವ ನೀವು ಹೇಗೆ ಮೋದಿ ಅವರ ಬಗ್ಗೆ ಲಘುವಾಗಿ ಮಾತಾಡಲು ಸಮರ್ಥರು? ಎಂದು ಪ್ರಶ್ನಿಸಿದರು.
ನೀರಾವರಿ ಇಲಾಖೆಯ ಅಧಿಕಾರಿಗಳು ದೊಡ್ಡ ಬಂಗಲೆಗಳನ್ನು ಕಟ್ಟಿಸಿದ್ದಾರೆ. ಇಂಥ ಬಂಗಲೆಗಳನ್ನು ಕಟ್ಟಿಸಲು ನೀರಾವರಿ ಕಾಮಗಾರಿಗಳ ಅಕ್ರಮದಿಂದ ಸಂಪಾದಿಸಿದ ಹಣ ಬಳಸಿಕೊಂಡಿದ್ದಾರೆ. ಹಾಗಾಗಿ ಅವರ ಮನೆಗಳಿಗೆ ಅಣೆಕಟ್ಟುಗಳ ಹೆಸರುಗಳನ್ನೇ ಇರಿಸಬೇಕು. ಈ ಬಗ್ಗೆ ವಿಧಾನಸಭೆಯಲ್ಲೂ ನಾನು ಮಾತನಾಡಿದ್ದೆ ಎಂದು ನೆನಪಿಸಿಕೊಂಡರು.
ಶ್ರೀನಿವಾಸಪುರದ ಶಾಸಕ ಕೆ.ಆರ್.ರಮೇಶ್ಕುಮಾರ್ ಅವರಂಥ ಭ್ರಷ್ಟ ಮತ್ತೊಬ್ಬ ಇಲ್ಲ. ಅರಣ್ಯ ಭೂಮಿ ನುಂಗಿರುವ ರಮೇಶ್ ಕುಮಾರ್, ಯಶಸ್ವಿನಿ ಯೋಜನೆಯನ್ನು ನಿಲ್ಲಿಸಿ ರೈತರಿಗೆ ಅನ್ಯಾಯ ಮಾಡಿದರು. ನನ್ನಂಥ ಪ್ರಾಮಾಣಿಕ ಇನ್ನೊಬ್ಬ ಇಲ್ಲ ಎನ್ನುತ್ತಾರೆ ಮಾಜಿ ಸ್ಪೀಕರ್. ಆದರೆ ವಾಸ್ತವದಲ್ಲಿ ಅವರಂಥ ಭ್ರಷ್ಟ ಇನ್ನೊಬ್ಬ ಇಲ್ಲ ಎಂದು ಲೇವಡಿ ಮಾಡಿದರು.
ಇದನ್ನೂ ಓದಿ: ಮುಂದೆ ಮೈಸೂರು ಕಟ್ಟಿಸಿದ್ದು ನಾನೇ ಅಂತಾರೆ ಪ್ರತಾಪ್ ಸಿಂಹ! ಎಮ್ಎಲ್ಸಿ ವಿಶ್ವನಾಥ್ ಮತ್ತೆ ವಾಗ್ದಾಳಿ ಇದನ್ನೂ ಓದಿ: ಬೆಂಗಳೂರು-ಮೈಸೂರು 6 ಪಥದ ರಸ್ತೆ ನಿರ್ಮಾಣ ವಿಚಾರ; ಸಂಸದ ಪ್ರತಾಪ್ ಸಿಂಹಗೆ ಹೆಚ್.ವಿಶ್ವನಾಥ್ ಟಾಂಗ್