ಮುಂದೆ ಮೈಸೂರು ಕಟ್ಟಿಸಿದ್ದು ನಾನೇ ಅಂತಾರೆ ಪ್ರತಾಪ್ ಸಿಂಹ! ಎಮ್​ಎಲ್​ಸಿ ವಿಶ್ವನಾಥ್ ಮತ್ತೆ ವಾಗ್ದಾಳಿ

ಪ್ರತಾಪ್ ಸಿಂಹ ತಮ್ಮ ಸ್ಥಾನಕ್ಕೆ ತಕ್ಕಂತೆ ಗೌರವದಿಂದ ಮಾತನಾಡಲಿ. ಅವರ ನಿನ್ನೆಯ ಪತ್ರವೂ ಸಂಸದರ ಸ್ಥಾನಕ್ಕೆ ಗೌರವ ತರುವುದಿಲ್ಲ. ದಶಪಥ ರಸ್ತೆ ಯೋಜನೆ ಹಿಂದಿನ ಸರ್ಕಾರದ್ದೆಂಬುದಕ್ಕೆ ದಾಖಲೆ ಇದೆ. ಹೀಗಾಗಿ ಯೋಜನೆ ತಮ್ಮದೆಂದು ಹೇಳಿಕೊಳ್ಳುವುದು ಸರಿಯಲ್ಲ ಎಂದು ಮೈಸೂರಿನಲ್ಲಿ ಬಿಜೆಪಿ ಎಂಎಲ್ಸಿ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ರು.

ಮುಂದೆ ಮೈಸೂರು ಕಟ್ಟಿಸಿದ್ದು ನಾನೇ ಅಂತಾರೆ ಪ್ರತಾಪ್ ಸಿಂಹ! ಎಮ್​ಎಲ್​ಸಿ ವಿಶ್ವನಾಥ್ ಮತ್ತೆ ವಾಗ್ದಾಳಿ
ಸಂಸದ ಪ್ರತಾಪ್ ಸಿಂಹ, ಹೆಚ್.ವಿಶ್ವನಾಥ್

ಮೈಸೂರು: ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕ್ರೆಡಿಟ್ ವಿಚಾರಕ್ಕೆ ಸಂಬಂಧಿಸಿ ಪ್ರತಾಪ್ ಸಿಂಹ(Pratap Simha) ವಿರುದ್ಧ MLC H.ವಿಶ್ವನಾಥ್(H Vishwanath) ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಮುಂದೆ ಮೈಸೂರು ಕಟ್ಟಿಸಿದ್ದು ನಾನೇ ಅಂತಾರೆ ಪ್ರತಾಪ್ ಸಿಂಹ ಎಂದು ಗುಡುಗಿದ್ದಾರೆ.

ಪ್ರತಾಪ್ ಸಿಂಹ ತಮ್ಮ ಸ್ಥಾನಕ್ಕೆ ತಕ್ಕಂತೆ ಗೌರವದಿಂದ ಮಾತನಾಡಲಿ. ಅವರ ನಿನ್ನೆಯ ಪತ್ರವೂ ಸಂಸದರ ಸ್ಥಾನಕ್ಕೆ ಗೌರವ ತರುವುದಿಲ್ಲ. ದಶಪಥ ರಸ್ತೆ ಯೋಜನೆ ಹಿಂದಿನ ಸರ್ಕಾರದ್ದೆಂಬುದಕ್ಕೆ ದಾಖಲೆ ಇದೆ. ಹೀಗಾಗಿ ಯೋಜನೆ ತಮ್ಮದೆಂದು ಹೇಳಿಕೊಳ್ಳುವುದು ಸರಿಯಲ್ಲ ಎಂದು ಮೈಸೂರಿನಲ್ಲಿ ಬಿಜೆಪಿ ಎಂಎಲ್ಸಿ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ರು.

ಇನ್ನು ಸಂಪುಟದಲ್ಲಿ ಉಳಿದಿರುವ ನಾಲ್ಕು ಸಚಿವ ಸ್ಥಾನ ವಿಚಾರಕ್ಕೆ ಸಂಬಂಧಿಸಿ ಯಾವುದೇ ಕಾರಣಕ್ಕೂ ಅದನ್ನು ಸಿಎಂ ಇಟ್ಟುಕೊಳ್ಳಬಾರದು. ಖಾತೆಗಳನ್ನು ಆದಷ್ಟು ಬೇಗ ಹಂಚಿಕೆ ಮಾಡಬೇಕು. ಬಹುಶಃ ಕಲಾಪ ಮುಗಿದ ನಂತರ ಹಂಚಿಕೆ ಮಾಡಲಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಿಎಸ್‌ವೈ ನೇತೃತ್ವದ ಸರ್ಕಾರ ಕನೆಕ್ಟಿಂಗ್ ಫ್ಯಾಮಿಲಿ ಆಗಿತ್ತು. ಈಗಿನ ಬೊಮ್ಮಾಯಿ ಸರ್ಕಾರ ಕನೆಕ್ಟಿಂಗ್ ಪೀಪಲ್ ಆಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಯಡಿಯೂರಪ್ಪ ನೆರಳಲ್ಲ. ಸಿಎಂ ಬೊಮ್ಮಾಯಿ ರಾಜ್ಯಕ್ಕೆ ಹೊಸ ಭರವಸೆ ಮೂಡಿಸಿದ್ದಾರೆ ಎಂದು ಹೆಚ್.ವಿಶ್ವನಾಥ್ ಸಿಎಂ ಬೊಮ್ಮಾಯಿಯವರನ್ನು ಹೊಗಳಿದ್ದಾರೆ. ಹಾಗೂ ಜನರ ಸುತ್ತ ಅಭಿವೃದ್ದಿ ಬೇಕು. ಅಭಿವೃದ್ದಿ ಸುತ್ತ ಜನ ಸುತ್ತಬಾರದು ಅನ್ನೋದನ್ನು ತೋರಿಸಿದ್ದಾರೆ. ಮುಂದಿನ ನಾಯಕತ್ವ ಬೊಮ್ಮಾಯಿ ನೇತೃತ್ವ ಎಂದು ಅಮಿತ್ ಶಾ ಹೇಳಿಕೆಗೆ ವಿಶ್ವನಾಥ್ ಬೆಂಬಲ ನೀಡಿದ್ದಾರೆ.

ಯಾರು ಸಿಎಂ ಪಕ್ಷದ ಅಧ್ಯಕ್ಷರಾಗಿರುತ್ತಾರೋ ಅವರದ್ದೆ ನಾಯಕತ್ವ ಇರುತ್ತದೆ. ಸಾಮೂಹಿಕ ನಾಯಕತ್ವ ಇದ್ದರೂ ಒಬ್ಬ ಮೇಟಿ ಬೇಕು. ಅದು ಬಿಜೆಪಿಯಲ್ಲಿ ಬಸವರಾಜ ಬೊಮ್ಮಾಯಿ ಆಗಿದ್ದಾರೆ ಎಂದರು.

ಇದನ್ನೂ ಓದಿ:
ವಿಶ್ವನಾಥ್ ಟೀಕೆ ಮಾಡದ ವ್ಯಕ್ತಿಗಳೇ ಇಲ್ಲ; ಟ್ರಂಪ್, ಬೈಡೆನ್ ಅವರನ್ನೂ ಬಿಟ್ಟಿಲ್ಲ, ಗ್ಯಾಪ್​ನಲ್ಲಿ ನನ್ನ ಟೀಕೆ ಮಾಡಿದ್ದಾರೆ: ಸಂಸದ ಪ್ರತಾಪ್ ಸಿಂಹ

ಮಾಜಿ ಸಚಿವ ಡಾ.ಮಹದೇವಪ್ಪಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು

Click on your DTH Provider to Add TV9 Kannada