ಮಡಿಕೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ರದ್ದು
Madikeri News: ತಾಂತ್ರಿಕ ತಪ್ಪಿನಿಂದ ವೀಣಾ ಅಚ್ಚಯ್ಯಗೆ ನೋಟಿಸ್ ನೀಡಿರಲಿಲ್ಲ ಎಂದು ಅಧಿಕಾರಿ ವಿರುದ್ಧ ಬಿಜೆಪಿ ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ.
ಮಡಿಕೇರಿ: ಇಲ್ಲಿನ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ರದ್ದುಗೊಳಿಸಿ ಆದೇಶ ನೀಡಲಾಗಿದೆ. ಚುನಾವಣಾ ನೋಟಿಸ್ ನೀಡದ ಹಿನ್ನೆಲೆಯಲ್ಲಿ ಚುನಾವಣೆ ರದ್ದು ಮಾಡಲಾಗಿದೆ. ಎಮ್ಎಲ್ಸಿ ವೀಣಾ ಅಚ್ಚಯ್ಯಗೆ ಚುನಾವಣಾ ನೋಟಿಸ್ ನೀಡಿರಲಿಲ್ಲ. ಹೀಗಾಗಿ, ಚುನಾವಣಾ ಅಧಿಕಾರಿ ಈಶ್ವರ್ ಕುಮಾರ್ ಖಂಡು ಚುನಾವಣೆ ರದ್ದುಗೊಳಿಸಿದ್ದಾರೆ. ತಾಂತ್ರಿಕ ತಪ್ಪಿನಿಂದ ವೀಣಾ ಅಚ್ಚಯ್ಯಗೆ ನೋಟಿಸ್ ನೀಡಿರಲಿಲ್ಲ ಎಂದು ಅಧಿಕಾರಿ ವಿರುದ್ಧ ಬಿಜೆಪಿ ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ.
ಮಡಿಕೇರಿ ಕಡೆ ಯಾರೂ ಪ್ರವಾಸಕ್ಕೆ ಬರಬೇಡಿ- ಕೊಡಗು ಜಿಲ್ಲಾಡಳಿತದಿಂದ ಆದೇಶ ನವರಾತ್ರಿ ಉತ್ಸವ ಹಿನ್ನೆಲೆ ಕೊಡಗು ಜಿಲ್ಲೆ ಮಡಿಕೇರಿಯಲ್ಲಿ ಪ್ರವಾಸಿ ಕೇಂದ್ರಗಳನ್ನು ಬಂದ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿತ್ತು. ಅಕ್ಟೋಬರ್ 8 ರಿಂದ 11 ದಿನಗಳ ಕಾಲ ಮಡಿಕೇರಿ ನಗರ ವ್ಯಾಪ್ತಿ ಪ್ರವಾಸಿ ಕೇಂದ್ರಗಳನ್ನು ಬಂದ್ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಕೊರೊನಾ ಸೋಂಕು ತಡೆಗಟ್ಟಲು ಜಿಲ್ಲಾಡಳಿತ ಈ ಕ್ರಮ ತೆಗೆದುಕೊಂಡಿದೆ.
ಅಕ್ಟೋಬರ್ 17 ರ ವರೆಗೆ ಪ್ರವಾಸಿ ಕೇಂದ್ರಗಳನ್ನು ಬಂದ್ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ರಾಜಾಸೀಟು, ಗದ್ದುಗೆ, ಓಂಕಾರೇಶ್ವರ ದೇವಸ್ಥಾನ, ನೆಹರು ಮಂಟಪ, ಜನರಲ್ ತಿಮ್ಮಯ್ಯ ಮ್ಯೂಸಿಯಂ ಬಂದ್ ಆಗಲಿರುವ ಬಗ್ಗೆ ಹೇಳಲಾಗಿತ್ತು. ಕೊರೊನಾ ಸೋಂಕು ತಡೆಗಟ್ಟಲು ಜಿಲ್ಲಾಡಳಿತ ಈ ಕ್ರಮ ತೆಗೆದುಕೊಂಡಿತ್ತು. ಇದರಿಂದಾಗಿ ಮಡಿಕೇರಿ ನಗರಕ್ಕೆ ಆಗಮಿಸಿದ ಪ್ರವಾಸಿಗರಿಗೆ ನಿರಾಸೆಯಾಗಿದೆ.
ಇದನ್ನೂ ಓದಿ: ಮಡಿಕೇರಿ: ಆಸ್ತಿ ಆಸೆಗೆ ವಿಕಲಚೇತನ ವ್ಯಕ್ತಿಯನ್ನೇ ಕೊಲೆಗೈದ ಚಿಕ್ಕಪ್ಪ; ಆರೋಪಿಗಳನ್ನು ಬಂಧಿಸಿದ ಪೊಲೀಸರು
Published On - 3:08 pm, Mon, 11 October 21