ಮೈಸೂರು ಕೋರ್ಟ್‌ನಲ್ಲಿ 2016ರಲ್ಲಿ ಸ್ಪೋಟ ಪ್ರಕರಣ; ಮೂವರು ಆರೋಪಿಗಳು ತಪ್ಪಿತಸ್ಥರು ಎಂದು ತೀರ್ಪಿತ್ತ ಕೋರ್ಟ್
Mysuru court blast 2016 case : ಮೈಸೂರಿನ ಜಿಲ್ಲಾ ಕೋರ್ಟ್‌ನ ಶೌಚಾಲಯದಲ್ಲಿ ಅಡುಗೆ ಕುಕ್ಕರ್‌ನಲ್ಲಿ ಅಪರಾಧಿಗಳು ಬಾಂಬ್ ಸ್ಫೋಟಿಸಿದ್ದರು.
ಬೆಂಗಳೂರು: 2016ರ ಆಗಸ್ಟ್ 6ರಂದು ಮೈಸೂರಿನ ಕೋರ್ಟ್‌ನಲ್ಲಿ ಬಾಂಬ್ ಸ್ಫೋಟ ಪ್ರಕರಣದ ಮೂವರು ಆರೋಪಿಗಳು ತಪ್ಪಿತಸ್ಥರೆಂದು ಬೆಂಗಳೂರಿನ ಎನ್ಐಎ ಕೋರ್ಟ್ ತೀರ್ಪು ನೀಡಿದೆ. ನೈನಾರ್ ಅಬ್ಬಾಸ್ ಅಲಿ, ಅಬ್ದುಲ್ ಕರೀಂ ಹಾಗೂ ದಾವೂದ್ ಸುಲೈಮಾನ್ ತಪ್ಪಿತಸ್ಥರೆಂದು ಕೋರ್ಟ್ ತೀರ್ಪಿತ್ತಿದೆ. ಮೈಸೂರಿನ ಜಿಲ್ಲಾ ಕೋರ್ಟ್‌ನ ಶೌಚಾಲಯದಲ್ಲಿ ಅಡುಗೆ ಕುಕ್ಕರ್‌ನಲ್ಲಿ ಅಪರಾಧಿಗಳು ಬಾಂಬ್ ಸ್ಫೋಟಿಸಿದ್ದರು.
ತುಮಕೂರು: ಪೊಲೀಸ್ ಎಂದು ಹೆದರಿಸಿ ಅತ್ಯಾಚಾರವೆಸಗಿದ್ದ ಆರೋಪಿಯ ಬಂಧನ
ತುಮಕೂರು: ಪೊಲೀಸ್ ಎಂದು ಹೆದರಿಸಿ ಅತ್ಯಾಚಾರವೆಸಗಿದ್ದ ಆರೋಪಿಯೋರ್ವನನ್ನು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಅಮೃತೂರು ಪೊಲೀಸರು ಬಂಧಿಸಿದ್ದಾರೆ. ಪ್ರದೀಪ್ (37) ಎಂಬಾತನೇ ಬಂಧಿತ ವ್ಯಕ್ತಿ. ಆಗಸ್ಟ್ 1ರಂದು ಕುಣಿಗಲ್ ತಾಲೂಕಿನಲ್ಲಿ ‘ಸಾಹೇಬ್ರು ನಿನ್ನ ಕರೀತಿದ್ದಾರೆ ಬಾ’ ಎಂದು ಕರೆದೊಯ್ದು ಚಾಕು ತೋರಿಸಿ ಅತ್ಯಾಚಾರವೆಸಗಿ ಚಿನ್ನಾಭರಣ ದೋಚಿದ್ದ ಆರೋಪ ಬಂಧಿತ ವ್ಯಕ್ತಿಯ ಮೇಲಿದೆ. ಆರೋಪಿ ಪ್ರದೀಪ್ ಮಹಿಳೆ ಬಳಿ ಇದ್ದ 40 ಗ್ರಾಂ ಚಿನ್ನದ ಸರ, ಮೊಬೈಲ್ ಮತ್ತು ಎಟಿಎಂ ಕಾರ್ಡ್ ದೋಚಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈಕುರಿತು ಅಮೃತೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
ಇದನ್ನೂ ಓದಿ:
ಪಠ್ಯಪುಸ್ತಕ ಪರಿಶೀಲನಾ ಸಮಿತಿ ಅಧ್ಯಕ್ಷರಾಗಿ ರೋಹಿತ್ ಚಕ್ರತೀರ್ಥ; ಶಿಕ್ಷಣ ಸಚಿವ ಬಿ ಸಿ ನಾಗೇಶ್ ಸಮರ್ಥನೆ
Air India: ಟಾಟಾ ಸನ್ಸ್ ತೆಕ್ಕೆಗೆ ಏರ್ ಇಂಡಿಯಾ: ಸರ್ಕಾರದಿಂದ ಅಧಿಕೃತ ಘೋಷಣೆ
Published On - 6:04 pm, Fri, 8 October 21