ಶೃಂಗೇರಿ: ಕಾರಿನಿಂದ ಇಳಿದು ಶಾಲಾ ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್ ಹೇಳಿದ ರಾಷ್ಟ್ರಪತಿ; ವಿಡಿಯೋ ನೋಡಿ
Ramnath Kovind: ಮಕ್ಕಳಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶುಭ ಹಾರೈಸಿದ್ದಾರೆ. ದೇಗುಲದಿಂದ ಹೆಲಿಪ್ಯಾಡ್ಗೆ ತೆರಳುವಾಗ ಶುಭಾಶಯ ಕೋರಿದ್ದಾರೆ. ಕಾರಿನಿಂದ ಇಳಿದು ಮಕ್ಕಳಿಗೆ ಶುಭ ಹಾರೈಸಿದ್ದಾರೆ. ಕೆಲವು ಕ್ಷಣ ರಸ್ತೆಯಲ್ಲೇ ನಿಂತು ಮಕ್ಕಳ ಕಡೆಗೆ ರಾಷ್ಟ್ರಪತಿಗಳು ಕೈಬೀಸಿದ್ದಾರೆ.
ಚಿಕ್ಕಮಗಳೂರು: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶೃಂಗೇರಿಯಿಂದ ತೆರಳುವಾಗ ಶಾಲಾ ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ದೇಗುಲದಿಂದ ತೆರಳುವಾಗ ಈ ವಿಶೇಷ ಮತ್ತು ಭಾವನಾತ್ಮಕ ದೃಶ್ಯ ಕಂಡುಬಂದಿದೆ. ಮಕ್ಕಳಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶುಭ ಹಾರೈಸಿದ್ದಾರೆ. ದೇಗುಲದಿಂದ ಹೆಲಿಪ್ಯಾಡ್ಗೆ ತೆರಳುವಾಗ ಶುಭಾಶಯ ಕೋರಿದ್ದಾರೆ. ಕಾರಿನಿಂದ ಇಳಿದು ಮಕ್ಕಳಿಗೆ ಶುಭ ಹಾರೈಸಿದ್ದಾರೆ. ಕೆಲವು ಕ್ಷಣ ರಸ್ತೆಯಲ್ಲೇ ನಿಂತು ಮಕ್ಕಳ ಕಡೆಗೆ ರಾಷ್ಟ್ರಪತಿಗಳು ಕೈಬೀಸಿದ್ದಾರೆ.
ಮೆಣಸೆ ಹೆಲಿಪ್ಯಾಡ್ಗೆ ಹೆಲಿಕ್ಯಾಪ್ಟರ್ ಮೂಲಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಗಮಿಸಿದ್ದರು. ಕುಟುಂಬ ಸಮೇತರಾಗಿ ಶೃಂಗೇರಿ ಶಾರದಾಂಬೆ ದೇವಾಲಯಕ್ಕೆ ಭೇಟಿ ನೀಡಿದ್ದರು. ಮಠದ ವತಿಯಿಂದ ರಾಷ್ಟ್ರಪತಿಗಳಿಗೆ ಪೂರ್ಣಕುಂಭ ಸ್ವಾಗತ ನೀಡಲಾಗಿತ್ತು. ಆನೆ, ಅಶ್ವ, ಕುಂಭದೊಂದಿಗೆ ರಾಷ್ಟ್ರಪತಿ ಕೋವಿಂದ್ ಅವರಿಗೆ ಸ್ವಾಗತ ಕೋರಲಾತ್ತು. ಶಾರದಾಂಬೆಯ ದರ್ಶನ ಬಳಿಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಗುರುಗಳ ಆಶೀರ್ವಾದ ಪಡೆದಿದ್ದಾರೆ. ಆ ಬಳಿಕ ನವರಾತ್ರಿ ಉತ್ಸವದಲ್ಲಿ ಕುಟುಂಬ ಸಮೇತ ಭಾಗಿಯಾಗಿದ್ದರು. ಸಂಜೆ ನಾಲ್ಕು ಗಂಟೆವರೆಗೂ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಗಿಯಾಗಿದ್ದರು.
ಮಂಗಳೂರು ಏರ್ಪೋರ್ಟ್ನಿಂದ ಹೆಲಿಕಾಪ್ಟರ್ನಲ್ಲಿ ಶೃಂಗೇರಿಯತ್ತ ಪ್ರಯಾಣ ಬೆಳೆಸಿದ್ದರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಂಗಳೂರಿನಿಂದ ಶೃಂಗೇರಿಗೆ ತೆರಳಿದ್ದರು. ಮಂಗಳೂರಿನ ಸರ್ಕ್ಯೂಟ್ ಹೌಸ್ನಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಕೋವಿಂದ್ ತೆರಳಿದ್ದರು. ಏರ್ಪೋರ್ಟ್ನಿಂದ ಹೆಲಿಕಾಪ್ಟರ್ನಲ್ಲಿ ಶೃಂಗೇರಿಯತ್ತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಯಾಣಿಸಿದ್ದರು. ನಿನ್ನೆ ರಾತ್ರಿ ಮಂಗಳೂರಿನ ಸರ್ಕ್ಯೂಟ್ ಹೌಸ್ನಲ್ಲಿ ರಾಷ್ಟ್ರಪತಿ ವಾಸ್ತವ್ಯ ಹೂಡಿದ್ದರು. ಇಂದು ಶೃಂಗೇರಿಗೆ ಭೇಟಿ ನೀಡಿ ಶಾರದಾಂಬೆ ದರ್ಶನ ಪಡೆದಿದ್ದಾರೆ.
ಇದನ್ನೂ ಓದಿ: ಚಾಮರಾಜನಗರದಲ್ಲಿ 450 ಹಾಸಿಗೆಗಳ ಹೈಟೆಕ್ ಆಸ್ಪತ್ರೆ ಉದ್ಘಾಟಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್