AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೃಂಗೇರಿಗೆ ರಾಷ್ಟ್ರಪತಿ ಭೇಟಿ: ದನಕರುಗಳು, ಕೋಳಿ, ಹಂದಿ ಮತ್ತು ಇತರ ಸಾಕುಪ್ರಾಣಿಗಳಿಗೂ ನಿರ್ಬಂಧ

ಸಾರ್ವಜನಿಕ ಸ್ಥಳ ಸೇರಿದಂತೆ ಯಾವುದೇ ಬೀದಿಯಲ್ಲಿ ಜಾನುವಾರುಗಳನ್ನು ಬಿಡದಂತೆ ಆದೇಶಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸಾಕುಪ್ರಾಣಿಗಳು ಸಿಕ್ಕರೆ ವಶಕ್ಕೆ ಪಡೆಯುವುದಾಗಿಯೂ ಜಿಲ್ಲಾಡಳಿತ ಘೋಷಿಸಿದೆ.

ಶೃಂಗೇರಿಗೆ ರಾಷ್ಟ್ರಪತಿ ಭೇಟಿ: ದನಕರುಗಳು, ಕೋಳಿ, ಹಂದಿ ಮತ್ತು ಇತರ ಸಾಕುಪ್ರಾಣಿಗಳಿಗೂ ನಿರ್ಬಂಧ
ರಾಮನಾಥ ಕೋವಿಂದ್
TV9 Web
| Updated By: guruganesh bhat|

Updated on: Oct 07, 2021 | 9:19 PM

Share

ಚಿಕ್ಕಮಗಳೂರು: ಶುಕ್ರವಾರ (ಅಕ್ಟೋಬರ್ 8) ಶೃಂಗೇರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಭೇಟಿ ನೀಡಲಿರುವ ಕಾರಣ ಶೃಂಗೇರಿ ನಾಗರಿಕರಿಗೆ ನಿರ್ಬಂಧಗಳ ಮೇಲೆ ನಿರ್ಬಂಧ ವಿಧಿಸಲಾಗುತ್ತಿದೆ. ಈಗಾಗಲೇ ಜನಸಾಮಾನ್ಯರ ಓಡಾಟದ ಮೇಲೆ ನಿರ್ಬಂಧ ಹೇರಿರುವ ಜಿಲ್ಲಾಡಳಿತ ಇದೀಗ ದನಕರುಗಳು, ಕೋಳಿ, ಹಂದಿ ಮತ್ತು ಇತರ ಸಾಕುಪ್ರಾಣಿಗಳಿಗೂ ನಿರ್ಬಂಧ ಹೇರಿದೆ. ಮನೆಯಲ್ಲೇ ದನಕರುಗಳು, ಕೋಳಿ, ಹಂದಿ ಕೂಡಿ ಹಾಕುವಂತೆ ಸಾರ್ವಜನಿಕರಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ. ಸಾರ್ವಜನಿಕ ಸ್ಥಳ ಸೇರಿದಂತೆ ಯಾವುದೇ ಬೀದಿಯಲ್ಲಿ ಜಾನುವಾರುಗಳನ್ನು ಬಿಡದಂತೆ ಆದೇಶಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸಾಕುಪ್ರಾಣಿಗಳು ಸಿಕ್ಕರೆ ವಶಕ್ಕೆ ಪಡೆಯುವುದಾಗಿಯೂ ಜಿಲ್ಲಾಡಳಿತ ಘೋಷಿಸಿದೆ.

ಈ ಹಿನ್ನೆಲೆ ಇಂದು (ಅ.7) ಮತ್ತು ನಾಳೆ (ಅ.8) ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣ ಬಂದ್ ಮಾಡಲಾಗಿದೆ. ಶೃಂಗೇರಿ ಪಟ್ಟಣ ಬಂದ್ ಮಾಡಿ ಜಿಲ್ಲಾಡಳಿತದ ಆದೇಶ ಹೊರಡಿಸಿದೆ. ಅಂಗಡಿ ಮುಂಗಟ್ಟು ಮುಚ್ಚಲು ಜಿಲ್ಲಾಡಳಿತ ಸೂಚಿಸಿದೆ. ಚಿಕ್ಕಮಗಳೂರು ಜಿಲ್ಲಾಡಳಿತದ ನಡೆಗೆ ವ್ಯಾಪಾರಸ್ಥರು ಗರಂ ಆಗಿದ್ದಾರೆ. ಎರಡು ದಿನದ ನಷ್ಟವನ್ನು ಭರಿಸುವಂತೆ ಜಿಲ್ಲಾಡಳಿತಕ್ಕೆ ಆಗ್ರಹಿಸುತ್ತಿದ್ದಾರೆ. ಜೊತೆಗೆ ಜಿಲ್ಲಾಡಳಿತ ತುಘಲಕ್ ದರ್ಬಾರ್ ನಡೆಸುತ್ತಿದೆ ಅಂತ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಕ್ಟೋಬರ್ 8ರಂದು ಶೃಂಗೇರಿ ಶಾರದಾಂಬಾ ದರ್ಶನಕ್ಕೆ ಭಕ್ತರಿಗೆ ನಿರ್ಬಂಧ ಅಕ್ಟೋಬರ್ 8ರಂದು ಶೃಂಗೇರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭೇಟಿ ನೀಡಲಿರುವ ಕಾರಣ ಅಂದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಶಾರದಾಂಬೆ ದೇಗುಲಕ್ಕೆ ಭಕ್ತರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಅಕ್ಟೋಬರ್ 8ರ ಬೆಳಗ್ಗೆ 11ರಿಂದ ಸಂಜೆ 4ರವರೆಗೆ ರಾಷ್ಟ್ರಪತಿಗಳ ಕಾರ್ಯಕ್ರಮ ಶೃಂಗೇರಿಯಲ್ಲಿ ನಡೆಯಲಿದೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶೃಂಗೇರಿಗೆ ಆಗಮಿಸುತ್ತಿರುವ ಹಿನ್ನೆಲೆ ಇಂದು ಮತ್ತು ನಾಳೆ ಶೃಂಗೇರಿ ಪಟ್ಟಣ ಬಂದ್ ಮಾಡಿ ಜಿಲ್ಲಾಡಳಿತ ಆದೇಶ ನೀಡಿದೆ. ಕೃಷಿ ಸಂಬಂಧಿತ ಕೆಲಸಗಳಿಗೂ ರೈತರು ಪಟ್ಟಣಕ್ಕೆ ಬಾರದಂತೆ ಸೂಚನೆ ನೀಡಿದೆ. ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಲು ಜಿಲ್ಲಾಡಳಿತ ಸೂಚಿಸಿದೆ. ಹೀಗಾಗಿ ಜಿಲ್ಲಾಡಳಿತ ವಿರುದ್ಧ ವ್ಯಾಪಾರಸ್ಥರು ಗರಂ ಆಗಿದ್ದಾರೆ. ಕೊರೊನಾ ಹಿನ್ನೆಲೆ ಈಗಾಗಲೇ ವ್ಯಾಪಾರಸ್ಥರು ನಷ್ಟ ಅನುಭವಿಸುತ್ತಿದ್ದಾರೆ. ನವರಾತ್ರಿ ಸಂದರ್ಭದಲ್ಲಿ ಮತ್ತೆ 2 ದಿನ ಅಂಗಡಿ ಮುಂಗಟ್ಟು ಮುಚ್ಚಲು ಜಿಲ್ಲಾಡಳಿತ ತಿಳಿಸಿದೆ. ಜಿಲ್ಲಾಡಳಿತದ ಈ ಆದೇಶಕ್ಕೆ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಎರಡು ದಿನದ ನಷ್ಟವನ್ನು ಭರಿಸುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: 

Shringeri Sharadamba: ಅಕ್ಟೋಬರ್ 8ರಂದು ಶೃಂಗೇರಿ ಶಾರದಾಂಬಾ ದರ್ಶನಕ್ಕೆ ಭಕ್ತರಿಗೆ ನಿರ್ಬಂಧ

ಚಾಮರಾಜನಗರದಲ್ಲಿ 450 ಹಾಸಿಗೆಗಳ ಹೈಟೆಕ್ ಆಸ್ಪತ್ರೆ ಉದ್ಘಾಟಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್