Pegasus row: ತಾಂತ್ರಿಕ ತಜ್ಞರ ಸಮಿತಿ ರಚಿಸಲು ಚಿಂತನೆ; ಪೆಗಾಸಸ್ ಪ್ರಕರಣ ಬಗ್ಗೆ ಸುಪ್ರೀಂ ಆದೇಶ ಮುಂದಿನ ವಾರ

| Updated By: ರಶ್ಮಿ ಕಲ್ಲಕಟ್ಟ

Updated on: Sep 23, 2021 | 1:38 PM

ಸಮಿತಿಯ ಸದಸ್ಯರಾಗಬೇಕೆಂದು ಬಯಸಿದ್ದ ಕೆಲವು ತಜ್ಞರು ವೈಯಕ್ತಿಕ ತೊಂದರೆಗಳ ಕಾರಣ ನೀಡಿ ತಂಡದ ಭಾಗವಾಗಲು ನಿರಾಕರಿಸಿದ್ದರಿಂದ ವಿಷಯವು ಸಮಯ ತೆಗೆದುಕೊಳ್ಳುತ್ತಿದೆ ಎಂದು ವಿಚಾರಣೆಯ ಸಮಯದಲ್ಲಿ,ಭಾರತದ ಮುಖ್ಯ ನ್ಯಾಯಾಧೀಶರಾದ ಎನ್ ವಿ ರಮಣ ಅವರು ಹೇಳಿದರು.

Pegasus row: ತಾಂತ್ರಿಕ ತಜ್ಞರ ಸಮಿತಿ ರಚಿಸಲು ಚಿಂತನೆ; ಪೆಗಾಸಸ್ ಪ್ರಕರಣ ಬಗ್ಗೆ ಸುಪ್ರೀಂ ಆದೇಶ ಮುಂದಿನ ವಾರ
ಸುಪ್ರೀಂ ಕೋರ್ಟ್
Follow us on

ದೆಹಲಿ: ಇಸ್ರೇಲಿ ಸಂಸ್ಥೆ ಎನ್ಎಸ್​​ಒ (NSO) ಗ್ರೂಪ್ ಮಾಡಿದ ಪೆಗಾಸಸ್ (Pegasus) ಸಾಫ್ಟ್‌ವೇರ್ ಅನ್ನು ಬಳಸಿಕೊಂಡು ಅನಧಿಕೃತ ಕಣ್ಗಾವಲು ನಡೆಸಲಾಗಿದೆ ಎಂಬ ಆರೋಪಗಳನ್ನು ಪರಿಶೀಲಿಸಲು ತಾಂತ್ರಿಕ ತಜ್ಞರ ಸಮಿತಿಯನ್ನು ಸ್ಥಾಪಿಸಲು  ಯೋಚಿಸಲಾಗಿದೆ ಮತ್ತು ಮುಂದಿನ ವಾರದೊಳಗೆ ಈ ಕುರಿತು ಆದೇಶಗಳನ್ನು ಪ್ರಕಟಿಸುವುದಾಗಿ ಸುಪ್ರೀಂಕೋರ್ಟ್ ಗುರುವಾರ ಹೇಳಿದೆ. ಸಮಿತಿಯ ಸದಸ್ಯರಾಗಬೇಕೆಂದು ಬಯಸಿದ್ದ ಕೆಲವು ತಜ್ಞರು ವೈಯಕ್ತಿಕ ತೊಂದರೆಗಳ ಕಾರಣ ನೀಡಿ ತಂಡದ ಭಾಗವಾಗಲು ನಿರಾಕರಿಸಿದ್ದರಿಂದ ವಿಷಯವು ಸಮಯ ತೆಗೆದುಕೊಳ್ಳುತ್ತಿದೆ ಎಂದು ವಿಚಾರಣೆಯ ಸಮಯದಲ್ಲಿ,ಭಾರತದ ಮುಖ್ಯ ನ್ಯಾಯಾಧೀಶರಾದ ಎನ್ ವಿ ರಮಣ ಅವರು ಹೇಳಿದರು. “ಆದ್ದರಿದಂದಲೇ ಸಮಿತಿಯನ್ನು ಸ್ಥಾಪಿಸಲು ಸಮಯ ತೆಗೆದುಕೊಳ್ಳುತ್ತಿದೆ. ಎಂದು ಅವರು ಹೇಳಿದ್ದಾರೆ. ನ್ಯಾಯಾಲಯವು ಮುಂದಿನ ವಾರದೊಳಗೆ ಸದಸ್ಯರನ್ನು ಅಂತಿಮಗೊಳಿಸಲು ಮತ್ತು ಆದೇಶಗಳನ್ನು ಘೋಷಿಸಲು ಸಾಧ್ಯವಾಗುತ್ತದೆ ಎಂದು ಸಿಜೆಐ ಹೇಳಿದ್ದಾರೆ.

ಈ ಸಮಸ್ಯೆಯು ರಾಷ್ಟ್ರೀಯ ಭದ್ರತೆಯ ಪ್ರಶ್ನೆಗಳಿಂದ ಕೂಡಿದೆ ಎಂದು ಕೇಂದ್ರ ಪ್ರತಿಕ್ರಿಯಿಸಿದೆ. ಈ ಕಾರಣದಿಂದಾಗಿ, ಎಲ್ಲವನ್ನೂ ಸಾರ್ವಜನಿಕ ಅಫಿಡವಿಟ್‌ನಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲು ಮತ್ತು ಅದನ್ನು ಸಾರ್ವಜನಿಕ ಚರ್ಚೆಯ ವಿಷಯವನ್ನಾಗಿ ಮಾಡಲು ಬಯಸುವುದಿಲ್ಲ, ಆದರೆ ನ್ಯಾಯಾಲಯಕ್ಕೆ ತಮ್ಮ ವರದಿಯನ್ನು ಸಲ್ಲಿಸಬಹುದಾದ ಡೊಮೇನ್ ತಜ್ಞರ ಸಮಿತಿಯು ಅದನ್ನು ಪರೀಕ್ಷಿಸಲು ಸಿದ್ಧವಾಗಿದೆ. ಸಮಿತಿಯೊಂದನ್ನು ರಚಿಸಲು ಸರ್ಕಾರಕ್ಕೆ ಅನುಮತಿ ನೀಡುವಂತೆ ಕೇಂದ್ರ ನ್ಯಾಯಾಲಯವನ್ನು ಒತ್ತಾಯಿಸಿದ್ದು ಈ ವಿಷಯದ ಎಲ್ಲಾ ಅಂಶಗಳಿಗೂ ಒಪ್ಪಿಗೆ ಸೂಚಿಸಿದೆ.

ಅರ್ಜಿದಾರರು ಸಮಿತಿಯನ್ನು ಸ್ಥಾಪಿಸಲು ಅನುಮತಿ ನೀಡುವಂತೆ ಸರ್ಕಾರದ ಮನವಿಯನ್ನು ವಿರೋಧಿಸಿದರು. ಸುಪ್ರೀಂಕೋರ್ಟ್ ತನ್ನ ಆದೇಶವನ್ನು ಸೆಪ್ಟೆಂಬರ್ 13 ರಂದು ಕಾಯ್ದಿರಿಸಿದ್ದು, ಇದನ್ನು 2-3 ದಿನಗಳಲ್ಲಿ ಹೇಳುವುದಾಗಿ ಹೇಳಿದೆ.

ತನ್ನ ಆದೇಶವನ್ನು ಕಾಯ್ದಿರಿಸುತ್ತಾ ಸಿಜೆಐ ನೇತೃತ್ವದ ತ್ರಿಸದಸ್ಯ ಪೀಠವು ನಾವು ಯಾವುದೇ ರೀತಿಯಲ್ಲಿ ಅಥವಾ  ಭದ್ರತೆ ಅಥವಾ ರಕ್ಷಣೆ ಅಥವಾ ಯಾವುದೇ ಇತರ ರಾಷ್ಟ್ರೀಯ ಹಿತಾಸಕ್ತಿಯ ಬಗ್ಗೆ ಕಾಳಜಿ ಹೊಂದಿರುವ ಸಮಸ್ಯೆಗಳನ್ನು ತಿಳಿದುಕೊಳ್ಳಲು ಆಸಕ್ತಿ ಹೊಂದಿಲ್ಲ. ಕೆಲವು ಸಾಫ್ಟ್‌ವೇರ್ ಅನ್ನು ಕೆಲವು ನಿರ್ದಿಷ್ಟ ನಾಗರಿಕರು, ಪತ್ರಕರ್ತರು, ವಕೀಲರು ಇತ್ಯಾದಿಗಳ ವಿರುದ್ಧ ಬಳಸಲಾಗಿದೆ ಎಂಬ ಆಪಾದನೆಗಳ ಹಿನ್ನೆಲೆಯಲ್ಲಿ, ಕಾನೂನಿನ ಅಡಿಯಲ್ಲಿ ಅನುಮತಿಸಬಹುದಾದ ಯಾವುದೇ ವಿಧಾನದಿಂದ ಸರ್ಕಾರವು ಈ ಸಾಫ್ಟ್‌ವೇರ್ ಅನ್ನು ಬಳಸಿದೆಯೇ ಎಂದು ತಿಳಿಯಲು ಮಾತ್ರ ನಾವು ಕಾಳಜಿ ವಹಿಸುತ್ತೇವೆ ಎಂದಿದೆ.

ಇಸ್ರೇಲಿ ಸಂಸ್ಥೆಯ NSO ನ ಸ್ಪೈವೇರ್ ಪೆಗಾಸಸ್ ಅನ್ನು ಬಳಸಿಕೊಂಡು ಪ್ರಮುಖ ವ್ಯಕ್ತಿಗಳು, ರಾಜಕಾರಣಿಗಳು ಮತ್ತು ಪತ್ರಕರ್ತರ ಮೇಲೆ ಸರ್ಕಾರಿ ಸಂಸ್ಥೆಗಳು ಕಣ್ಗಾವಲಿರಿಸಿದ ಆರೋಪಗಳಿಗೆ ಸಂಬಂಧಿಸಿದ ಅರ್ಜಗಳನ್ನು ನ್ಯಾಯಾಲಯ ವಿಚಾರಣೆ ಮಾಡಿದೆ.

ಪೆಗಾಸಸ್ ಸ್ಪೈವೇರ್ ಬಳಸಿ ಕಣ್ಗಾವಲು ಹಾಕುವ ಸಂಭಾವ್ಯ ಗುರಿಗಳ ಪಟ್ಟಿಯಲ್ಲಿ 300 ಕ್ಕೂ ಹೆಚ್ಚು ಭಾರತೀಯ ಮೊಬೈಲ್ ಫೋನ್ ಸಂಖ್ಯೆಗಳಿವೆ ಎಂದು ಅಂತರಾಷ್ಟ್ರೀಯ ಮಾಧ್ಯಮ ಒಕ್ಕೂಟ ವರದಿ ಮಾಡಿತ್ತು.

ಇದನ್ನೂ ಓದಿ: Pegasus row ಪೆಗಾಸಸ್ ವಿವಾದ ಬಗ್ಗೆ ವಿವರವಾದ ಅಫಿಡವಿಟ್ ಸಲ್ಲಿಸುವುದಿಲ್ಲ: ಸುಪ್ರೀಂಕೋರ್ಟ್​​ನಲ್ಲಿ ಕೇಂದ್ರ ಹೇಳಿಕೆ

ಇದನ್ನೂ ಓದಿ:  RSS ಬಗ್ಗೆ ಅವಹೇಳನಕಾರಿ ಹೇಳಿಕೆ: ಜಾವೇದ್​ ಅಖ್ತರ್​ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ

(Pegasus row Supreme Court is intending to set up a technical experts committee will pronounce order next week)