Gujarat: ನಿಂತಿದ್ದ ಟ್ರಕ್ಗೆ ಡಿಕ್ಕಿ ಹೊಡೆದ ಕಾರು; ಐವರು ಸ್ಥಳದಲ್ಲೇ ದುರ್ಮರಣ
ಕಾರು ಮಾಲಿಯಾದಿಂದ ಮೋರ್ಬಿಗೆ ಹೋಗುತ್ತಿತ್ತು. ಮೃತರೆಲ್ಲರೂ ಪುರುಷರೇ ಆಗಿದ್ದು, ಮೂಲತಃ ರಾಜಸ್ಥಾನದವರು ಎಂದು ಪೊಲೀಸರು ತಿಳಿಸಿದ್ದಾರೆ.
ಗುಜರಾತ್ನ ಮೋರ್ಬಿ ಜಿಲ್ಲೆಯಲ್ಲಿ ಕಾರೊಂದು ನಿಂತಿದ್ದ ಟ್ರಕ್ಗೆ ಡಿಕ್ಕಿಯಾಗಿ ಐದು ಮಂದಿ ಮೃತಪಟ್ಟಿದ್ದಾರೆ. ಇಂದು ಮುಂಜಾನೆ ಹೊತ್ತಿಗೆ ದುರ್ಘಟನೆ ನಡೆದಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಇದೊಂದು ಸ್ಟೇಶನರಿ ಸಾಮಗ್ರಿಗಳನ್ನು ಹೊತ್ತ ಟ್ರಕ್ ಆಗಿದ್ದು, ಮೋರ್ಬಿ-ಮಲಿಯಾ ಹೆದ್ದಾರಿಯಲ್ಲಿ ಟಿಂಬ್ಡಿ ಎಂಬ ಗ್ರಾಮದ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದು. ಆದರೆ ಕಾರ್ ಡ್ರವರ್ ಈ ಟ್ರಕ್ಗೆ ಡಿಕ್ಕಿ ಹೊಡೆದಿದ್ದರಿಂದ ಸಂಪೂರ್ಣ ನಿಯಂತ್ರಣ ಕಳೆದುಕೊಂಡಿದ್ದಾನೆ ಎಂದು ಡಿಎಸ್ಪಿ ರಾಧಿಕಾ ಭಾರಾಯ್ ತಿಳಿಸಿದ್ದಾರೆ.
ಕಾರು ಮಾಲಿಯಾದಿಂದ ಮೋರ್ಬಿಗೆ ಹೋಗುತ್ತಿತ್ತು. ಮೃತರೆಲ್ಲರೂ ಪುರುಷರೇ ಆಗಿದ್ದು, ಆನಂದ್ ಶೇಖಾವತ್, ತಾರಾಚಂದ್ ಬಾರಲಾ, ಅಶೋಲ್ ಬಿಲೆಡಾ, ವಿಜೇಂದ್ರ ಸಿಂಗ್ ಮತ್ತು ಪವನ್ ಮಿಸ್ಟ್ರಿ ಎಂದು ಗುರುತಿಸಲಾಗಿದೆ. ಇವರಲ್ಲಿ ಕಾರನ್ನು ಯಾರು ಚಾಲನೆ ಮಾಡುತ್ತಿದ್ದರು ಎಂಬುದು ಗೊತ್ತಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರು ಮೋರ್ಬಿಯಲ್ಲಿ ಒಂದು ಉದ್ಯಮ ನಡೆಸುತ್ತಿದ್ದರು. ಆದರೆ ಮೂಲತಃ ರಾಜಸ್ಥಾನದವರಾಗಿದ್ದಾರೆ ಎಂಬ ಮಾಹಿತಿಯೂ ಸಿಕ್ಕಿದೆ. ಈ ಮೋರ್ಬಿ ಜಿಲ್ಲೆ ಅಹಮದಾಬಾದ್ನಿಂದ 200 ಕಿಮೀ ದೂರದಲ್ಲಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಉತ್ತರಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳು ಓಪನ್, ಬಂದ್ ಆಗಿದ್ದ ಜಲಸಾಹಸ ಕ್ರೀಡೆಗಳಿಗೆ ಅನುಮತಿ ಕೊಟ್ಟ ಜಿಲ್ಲಾಡಳಿತ
RSS ಬಗ್ಗೆ ಅವಹೇಳನಕಾರಿ ಹೇಳಿಕೆ: ಜಾವೇದ್ ಅಖ್ತರ್ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ
(5 killed as car rams into truck which is parked in road side at Gujarat)