ಉತ್ತರಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳು ಓಪನ್, ಬಂದ್ ಆಗಿದ್ದ ಜಲಸಾಹಸ ಕ್ರೀಡೆಗಳಿಗೆ ಅನುಮತಿ ಕೊಟ್ಟ ಜಿಲ್ಲಾಡಳಿತ
ಎಲ್ಲಾದ್ರು ಟ್ರಿಪ್ ಹೋಗ್ಬೇಕು. ಫುಲ್ ಗಿಡ, ಮರ ಇರ್ಬೇಕು. ಆಟ ಆಡೋಕೆ ನೀರು ಇರಬೇಕು ಅಂತಾ ಅದೆಷ್ಟೋ ಜನ ಉತ್ತರಕನ್ನಡ ಜಿಲ್ಲೆಯ ಪ್ರವಾಸಿ ತಾಣಕ್ಕೆ ಆಗಮಿಸ್ತಿದ್ರು. ಆದ್ರೆ ಪ್ರವಾಸಿಗರು ಸ್ವಲ್ಪ ಬೇಸರಗೊಂಡಿದ್ರು. ಯಾಕಂದ್ರೆ, ಜಲಕ್ರೀಡೆ ಅವಕಾಶ ಇರಲಿಲ್ಲ. ಆದ್ರೀಗ, ಜಿಲ್ಲಾಡಳಿತ ಜಲಕ್ರೀಡೆ ನಡೆಸಲು ಅನುಮತಿ ನೀಡಿದೆ.
ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕಾರವಾರ, ಗೋಕರ್ಣ, ಹೊನ್ನಾವರ ಹಾಗೂ ಮುರ್ಡೇಶ್ವರ ಸೇರಿ ಹತ್ತಾರು ಕಡಲತೀರಗಳಿವೆ. ಇಲ್ಲಿನ ಬೀಚ್‌ಗಳಲ್ಲಿ ಆಟವಾಡಿ ಎಂಜಾಯ್ ಮಾಡೋಕೆ ಅಂತ್ಲೇ ರಾಜ್ಯ, ಹೊರ ರಾಜ್ಯಗಳಿಂದ್ಲೂ ಪ್ರವಾಸಿಗರು ಆಗಮಿಸ್ತಾರೆ. ಅದ್ರಲ್ಲೂ ದಾಂಡೇಲಿ, ಜೋಯಿಡಾ ಭಾಗಗಳಿಗೆ ಕಾಳಿ ನದಿಯಲ್ಲಿನ ವಿವಿಧ ಜಲಸಾಹಸ ಕ್ರೀಡೆಗಳಲ್ಲಿ ಭಾಗಿ ಆಗೋಕೆ ಸಾವಿರಾರು ಮಂದಿ ಬರ್ತಿದ್ರು. ಆದ್ರೆ ರಾಜ್ಯ ಅನ್‌ಲಾಕ್ ಆಗಿದ್ರೂ, 3ನೆ ಅಲೆ ಭೀತಿಯಿಂದ ಜಲಸಾಹಸ ಕ್ರೀಡೆಗಳಿಗೆ ಬ್ರೇಕ್ ಹಾಕಿದ್ರಿಂದ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿತ್ತು. ಇದೀಗ ಕೊರೊನಾ ಪ್ರಕರಣಗಳ ಸಂಖ್ಯೆ ನಿಯಂತ್ರಣಕ್ಕೆ ಬರುತ್ತಿದೆ. ಹೀಗಾಗಿ ಜಲಸಾಹಸ ಕ್ರೀಡೆಗಳನ್ನ ನಡೆಸಲು ಜಿಲ್ಲಾಡಳಿತ ಗ್ರೀನ್ ಸಿಗ್ನಲ್ ನೀಡಿದೆ. ಕೊರೊನಾ ಮಾರ್ಗಸೂಚಿಗಳ ಪಾಲನೆಯೊಂದಿಗೆ ವಾಟರ್ ಸ್ಪೋರ್ಟ್ಸ್ ಆಯೋಜಿಸುವಂತೆ ಸೂಚನೆ ಕೊಟ್ಟಿದೆ.
ಇನ್ನು ಜಿಲ್ಲೆಯ ಕಾರವಾರ ರವೀಂದ್ರನಾಥ ಠಾಗೋರ್ ಕಡಲತೀರ, ಗೋಕರ್ಣದ ಓಂ ಬೀಚ್, ಕುಡ್ಲೇ ಬೀಚ್ ಹಾಗೂ ಮುರ್ಡೇಶ್ವರ ಕಡಲತೀರಗಳಲ್ಲಿ ಹಿಂದಿನಿಂದಲೂ ಜಲಸಾಹಸ ಕ್ರೀಡೆಗಳನ್ನ ನಡೆಸಲಾಗುತ್ತಿತ್ತು. ಬೋಟ್ ರೈಡ್, ಜೆಟ್ ಸ್ಕೀ ಸೇರಿದಂತೆ ರಿವರ್ ಱಫ್ಟಿಂಗ್ ನಂತಹ ವಾಟರ್ ಕ್ರೀಡೆ ಆಯೋಜಿಸಲಾಗುತ್ತಿತ್ತು. ಆದ್ರೆ ಕೊರೊನಾ ಕಾರಣದಿಂದ ವಾಟರ್ ಸ್ಪೋರ್ಟ್ಸ್ ಗೆ ಬ್ರೇಕ್ ಬಿದ್ದಿತ್ತು. ಇದ್ರಿಂದ ಜಲಸಾಹಸ ಕ್ರೀಡೆಗಳನ್ನ ನಡೆಸುತ್ತಿದ್ದವರು ನಷ್ಟದ ಸುಳಿಯಲ್ಲಿ ಸಿಲುಕಿದ್ರು. ಇದೀಗ ಜಲ ಕ್ರೀಡೆಗೆ ಮತ್ತೆ ಅನುಮತಿ ನೀಡಿರುವುದಕ್ಕೆ ಆಯೋಜಕರು ಸಂತಸಗೊಂಡಿದ್ದಾರೆ. ಈಗಾಗಲೇ ಜಲಸಾಹಸ ಕ್ರೀಡೆಗಳನ್ನ ಪ್ರಾರಂಭಿಸಲು ಸಿದ್ಧತೆಗಳನ್ನ ಮಾಡಿಕೊಂಡಿದ್ದಾರೆ.
ಸದ್ಯ, ಕೊರೊನಾ ಅಬ್ಬರದಿಂದಾಗಿ ಕಳೆದೆರಡು ವರ್ಷಗಳಿಂದ ಮಂಕಾಗಿದ್ದ ಪ್ರವಾಸೋದ್ಯಮ ಇದೀಗ ಜಲಸಾಹಸ ಕ್ರೀಡೆಗಳ ಪ್ರಾರಂಭದೊಂದಿಗೆ ಮತ್ತೆ ಚೇತರಿಸಿಕೊಳ್ತಿದೆ. ವಾಟರ್ ಸ್ಪೋರ್ಟ್ಸ್ ಆಯೋಜಕರಿಗೆ ಜಿಲ್ಲಾಡಳಿತದ ಆದೇಶ ಖುಷಿ ಕೊಟ್ಟಿದೆ.
ಇದನ್ನೂ ಓದಿ: ಕಾರವಾರದ ಕಡಲತೀರದಲ್ಲಿ ಅಪರೂಪದ ಗ್ರೀನ್ ಸೀ ಆಮೆ ಕಳೆಬರ ಪತ್ತೆ