NEET Answer Key 2021: ಈ ವಾರದಲ್ಲಿ ನೀಟ್ ಪರೀಕ್ಷೆ ಕೀ ಉತ್ತರ ಬಿಡುಗಡೆ; ವೆಬ್ಸೈಟ್ ಲಿಂಕ್ ಇಲ್ಲಿದೆ
NTA Neet Exam: ನೀಟ್ ಕೀ ಉತ್ತರಗಳನ್ನು ಎನ್ಟಿಎಯ ಅಧಿಕೃತ ವೆಬ್ಸೈಟ್ neet.nta.nic.inಯಲ್ಲಿ ಚೆಕ್ ಮಾಡಬಹುದು.
ನವದೆಹಲಿ: ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET UG Exam 2021)ಯ ಕೀ ಉತ್ತರಗಳು ಈ ವಾರದಲ್ಲಿ ಬಿಡುಗಡೆ ಆಗಲಿದೆ. ನೀಟ್ ಪರೀಕ್ಷೆ ಬರೆದ ಅಭ್ಯರ್ಥಿಗಳು ಕೀ ಉತ್ತರಗಳನ್ನು ಪರಿಶೀಲಿಸಿ, ತಮ್ಮ ಉತ್ತರಗಳು ಸರಿಯಾಗಿದೆಯೇ ಎಂದು ಪರಿಶೀಲಿಸಿಕೊಳ್ಳಬಹುದು. ನೀಟ್ ಕೀ ಉತ್ತರಗಳನ್ನು ಎನ್ಟಿಎಯ ಅಧಿಕೃತ ವೆಬ್ಸೈಟ್ neet.nta.nic.inಯಲ್ಲಿ ಚೆಕ್ ಮಾಡಬಹುದು.
ನೀಟ್ ಪರೀಕ್ಷೆ ಮುಂದೂಡಬೇಕೆಂದು ಅನೇಕ ವಿದ್ಯಾರ್ಥಿಗಳು ಒತ್ತಾಯಿಸಿ ಅಭಿಯಾನವನ್ನೂ ಮಾಡಿದ್ದರು. ಈ ಸಂಬಂಧ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿಯನ್ನೂ ಸಲ್ಲಿಸಲಾಗಿತ್ತು. ಆ ಅರ್ಜಿಯನ್ನು ವಜಾ ಮಾಡಿದ್ದ ಸುಪ್ರೀಂ ಕೋರ್ಟ್ ನೀಟ್-2021 ಯುಜಿ ಪರೀಕ್ಷೆಯ ಮುಂದೂಡಿಕೆ ಸಾಧ್ಯವಿಲ್ಲ ಎಂದು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಸೆ. 12ರಂದು ನೀಟ್ ಯುಜಿ ಪರೀಕ್ಷೆ ನಡೆಸಲಾಗಿತ್ತು. ಸೆ. 25ರಂದು ನೀಟ್ ಪರೀಕ್ಷೆ ಕೀ ಉತ್ತರಗಳು ಎನ್ಟಿಎ ವೆಬ್ಸೈಟ್ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಾಗಿದೆ.
ಈ ಬಾರಿ ಸುಮಾರು 16 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆದಿದ್ದಾರೆ. ಇಂಗ್ಲಿಷ್, ಕನ್ನಡ, ಹಿಂದಿ, ಅಸ್ಸಾಮೀಸ್, ಬೆಂಗಾಲಿ, ಗುಜರಾತಿ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು, ಉರ್ದು ಈ 13 ಭಾಷೆಗಳಲ್ಲಿ ನೀಟ್ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು. ಎಂಬಿಬಿಎಸ್. ಬಿಡಿಎಸ್, ಬಿಎಎಂಎಸ್, ಬಿಯುಎಂಎಸ್, ಬಿಎಚ್ಎಂಎಸ್ ಕೋರ್ಸ್ಗಳ ಪ್ರವೇಶಾತಿಗೆ ನೀಟ್ ಪರೀಕ್ಷೆಯ ಫಲಿತಾಂಶವನ್ನು ಬಳಸಬಹುದು. ಭಾರತದಲ್ಲಿ ಮಾತ್ರವಲ್ಲದೆ ಮಧ್ಯಪ್ರಾಚ್ಯದಲ್ಲಿರುವ ಭಾರತೀಯ ಸಮುದಾಯಗಳಲ್ಲಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಈ ಬಾರಿ ಕುವೈತ್ ಹಾಗೂ ದುಬೈನಲ್ಲಿ ಕೂಡ ನೀಟ್ ಯುಜಿ ಪರೀಕ್ಷೆ ನಡೆದಿತ್ತು.
ಅಂದಾಜಿನ ಪ್ರಕಾರ, ಅ. 10ರ ವೇಳೆಗೆ ನೀಟ್ ಪರೀಕ್ಷಾ ಫಲಿತಾಂಶ ಪ್ರಕಟವಾಗಲಿದೆ. ನೀಟ್ ಮೆಡಿಕಲ್, ಡೆಂಟಲ್ ಕೋರ್ಸ್ನಡಿ 55,000 ಸೀಟ್ಗಳು ಲಭ್ಯ ಇವೆ. 16 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿರುವುದರಿಂದ ಕಾಂಪಿಟೇಷನ್ ಹೆಚ್ಚೇ ಇದೆ. ಈ ವಾರದಲ್ಲಿ ನೀಟ್ ಕೀ ಉತ್ತರಗಳು ಬಿಡುಗಡೆ ಆಗಲಿವೆ.
NEET UG Admit Card 2021: ನೀಟ್ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ; ಡೌನ್ಲೋಡ್ ಮಾಡಿಕೊಳ್ಳುವ ವಿಧಾನ ಹೀಗಿದೆ
(NEET Answer Key 2021 NTA likely to release official answer key soon by This Week)
Published On - 1:50 pm, Thu, 23 September 21