ಭೂಪಾಲ್: ಮೂವರು ಹೆಂಡಿರ ಮುದ್ದಿನ ಗಂಡನಾಗಿರುವ ಬಿಜೆಪಿ ನಾಯಕರೊಬ್ಬರ (BJP Leader) ಇಬ್ಬರು ಪತ್ನಿಯರೂ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಕಂಡಿದ್ದಾರೆ. ಮಧ್ಯಪ್ರದೇಶದ (Madhya Pradesh) ಅಲಿರಾಜ್‌ಪುರದ ನಾನ್‌ಪುರ್ ಗ್ರಾಮದ ಮಾಜಿ ಪಂಚಾಯತ್ ಅಧ್ಯಕ್ಷ ಸಾಮ್ರಾಟ್ ಮೌರ್ಯ ಅವರು ತಮ್ಮ ಇಬ್ಬರು ಪತ್ನಿಯರನ್ನು ಪಂಚಾಯಿತಿ ಚುನಾವಣೆಯಲ್ಲಿ ಕಣಕ್ಕಿಳಿಸುವ ಮೂಲಕ ಸುದ್ದಿಯಾಗಿದ್ದಾರೆ. ಅವರ ಇಬ್ಬರು ಹೆಂಡತಿಯರೂ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಈ ವೇಳೆ ಅವರು ಮಾಡಿರುವ ಭಾಷಣ ವೈರಲ್ ಆಗಿದೆ.
ಸಾಮ್ರಾಟ್ ಮೌರ್ಯ ಅವರ ಇಬ್ಬರು ಪತ್ನಿಯರು ಪಂಚಾಯತ್ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅವರ ಮೂರನೇ ಹೆಂಡತಿಗೂ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವ ಆಸೆ ಇತ್ತು. 35 ವರ್ಷದ ಸಾಮ್ರಾಟ್ ಮೌರ್ಯ ತಮ್ಮ ಮೂರನೇ ಪತ್ನಿ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಬಯಸಿದ್ದರು. ಆದರೆ ಅದಕ್ಕಾಗಿ ಮೌರ್ಯ ಅವರ ಹೆಂಡತಿ ನಾನಿ ಶಿಕ್ಷಣ ಇಲಾಖೆಯಲ್ಲಿ ಪ್ಯೂನ್ ಆಗಿ ಕೆಲಸ ಮಾಡುವುದನ್ನು ಬಿಡಬೇಕಾಗಿತ್ತು. ಆದರೆ, ಅವರು ಸರ್ಕಾರಿ ಕೆಲಸ ಬಿಡುವು ಮೌರ್ಯ ಅವರಿಗೆ ಇಷ್ಟವಿರಲಿಲ್ಲ. ಹೀಗಾಗಿ, ಅವರು ತಮ್ಮ ಮೂರನೇ ಹೆಂಡತಿಯನ್ನು ಚುನಾವಣೆಗೆ ನಿಲ್ಲಿಸಲಿಲ್ಲ.
ಇದನ್ನೂ ಓದಿ: Viral News: 15 ವರ್ಷದ ಬಾಲಕಿ ಮದುವೆಯಾಗಲು ನಿರಾಕರಿಸಿದ್ದಕ್ಕೆ ವಿದ್ಯುತ್ ಟವರ್ ಏರಿ ಕುಳಿತ ಭೂಪ!
ತನ್ನ ಇಬ್ಬರು ಪತ್ನಿಯರನ್ನು ಗೆಲ್ಲಿಸಿದ್ದಕ್ಕೆ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಸಾಮ್ರಾಟ್ ಮೌರ್ಯ ತನ್ನ ಮೂವರು ಪತ್ನಿಯರೊಂದಿಗೆ ಮನೆ-ಮನೆಗೆ ತೆರಳುತ್ತಿದ್ದಾರೆ. ಇಬ್ಬರು ಪತ್ನಿಯರು ಚುನಾವಣೆಯಲ್ಲಿ ಗೆದ್ದ ನಂತರ ಮಾತನಾಡಿರುವ ಸ್ಥಳೀಯ ಬಿಜೆಪಿ ನಾಯಕ ಸಾಮ್ರಾಟ್, ನನಗೆ ತುಂಬಾ ಸಂತೋಷವಾಗಿದೆ. ಇಲ್ಲಿನ ಜನರು ನನ್ನನ್ನು ಮತ್ತು ನನ್ನ ಹೆಂಡತಿಯರನ್ನು ತುಂಬಾ ಪ್ರೀತಿಸುತ್ತಾರೆ. ಅವರ ಆಶೀರ್ವಾದದಿಂದ ನನ್ನ ಹೆಂಡತಿಯರು ಚುನಾವಣೆಯಲ್ಲಿ ಗೆದ್ದಿದ್ದಾರೆ. ನಾನು ನನ್ನ ಮೂವರು ಹೆಂಡತಿಯರೊಂದಿಗೆ ಶಾಂತಿಯುತವಾಗಿ ವಾಸಿಸುತ್ತಿದ್ದೇನೆ. ನಾವು ಈ ಗ್ರಾಮದ ಎಲ್ಲ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಭಾಗವಹಿಸುತ್ತೇವೆ ಎಂದು ಭಾಷಣ ಮಾಡಿದ್ದಾರೆ.
ಇಬ್ಬರು ಹೆಂಡತಿಯರ ಗೆಲುವಿನಿಂದ ಸಾಮ್ರಾಟ್ ಮೌರ್ಯ ತುಂಬಾ ಸಂತೋಷವಾಗಿದ್ದು, ಅವರು ಹಳ್ಳಿಯಲ್ಲಿ ಪಾರ್ಟಿಗಳನ್ನು ಮಾಡುತ್ತಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಈ ವರ್ಷ ಏಪ್ರಿಲ್ 30ರಂದು ಅಲಿರಾಜ್‌ಪುರದಿಂದ ಸುಮಾರು 14 ಕಿಮೀ ದೂರದಲ್ಲಿರುವ ನಾನ್‌ಪುರದಲ್ಲಿ ಮೂವರು ಪತ್ನಿಯರಾದ ಸಕ್ರಿ, ಮೇಲಾ ಮತ್ತು ನಾನಿ ಅವರನ್ನು ಸಾಮ್ರಾಟ್ ಮೌರ್ಯ ವಿವಾಹವಾಗಿದ್ದರು.
ಇದನ್ನೂ ಓದಿ: Viral News: ದಂಬಾಲು ಬಿದ್ದು 61 ವರ್ಷದ ಮುದುಕನ ಮದುವೆಯಾದ 18ರ ಯುವತಿ
ಸಾಮ್ರಾಟ್ ಮೌರ್ಯ 2003ರಲ್ಲಿ ನಾನಿ, 2008ರಲ್ಲಿ ಮೇಲಾ ಮತ್ತು 2017ರಲ್ಲಿ ಸಕ್ರಿ ಅವರನ್ನು ವಿವಾಹವಾಗಿದ್ದರು. ಆದರೆ ಅಧಿಕೃತವಾಗಿ ಕಳೆದ ಏಪ್ರಿಲ್ 30ರಂದು ಮೂವರನ್ನೂ ಒಟ್ಟಿಗೇ ಮದುವೆಯಾಗಿ ಸುದ್ದಿಯಾಗಿದ್ದರು. ಸಾಮ್ರಾಟ್ ಭಿಲಾಲ ಬುಡಕಟ್ಟಿಗೆ ಸೇರಿದವರಾಗಿದ್ದಾರೆ. ಈ ಜನಾಂಗದಲ್ಲಿ ಇಂದಿಗೂ ಬಹುಪತ್ನಿತ್ವ ಆಚರಣೆಯಲ್ಲಿದೆ. ಸಾಮ್ರಾಟ್ ಮೌರ್ಯ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದರು.