ಬೆಂಗಳೂರು: ಮಾರ್ಚ್ ತಿಂಗಳ ಪ್ರಾರಂಭದಿಂದಲೂ ಪೆಟ್ರೋಲ್, ಡೀಸೆಲ್ ದರದಲ್ಲಿ ವ್ಯತ್ಯಾಸ ಕಂಡು ಬಂದಿರಲ್ಲ. ಕಳೆದ ಫೆಬ್ರವರಿ ತಿಂಗಳ 27ನೇ ತಾರೀಕು ಶನಿವಾರ ಪ್ರತಿ ಲೀಟರ್ ಪೆಟ್ರೋಲ್ ದರ 24 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ದರ 15 ಪೈಸೆ ಏರಿಕೆಯ ನಂತರದಲ್ಲಿ ದರ ವ್ಯತ್ಯಾಸ ಕಂಡು ಬಂದಿರಲಿಲ್ಲ. ಗರಿಷ್ಠ ದಾಖಲೆ ಕಂಡಿದ್ದ ಇಂಧನ ದರವನ್ನು ನೋಡುತ್ತಿದ್ದ ಗ್ರಾಹಕರಿಗೆ ದರ ಇಳಿಕೆಯತ್ತ ಮುಖ ಮಾಡುವುದು ಯಾವಾಗ ಎಂಬ ಪ್ರಶ್ನೆ ಎದುರಾಗಿತ್ತು. ಈ ನಿಟ್ಟಿನಲ್ಲಿ ಗ್ರಾಹಕರಿಗೆ ಇಂದು(ಮಾರ್ಚ್ 24) ಖುಷಿ ತರುವ ಸುದ್ದಿಯೊಂದು ಎದುರಿಗಿದೆ. ಅದೇನೆಂದರೆ, ಪೆಟ್ರೋಲ್ ದರ 18 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ದರ 17 ಪೈಸೆ ಇಳಿಕೆ ಕಂಡಿದೆ. ಇದೀಗ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 94.04 ರೂಪಾಯಿಗೆ ಇಳಿಕೆಯಾಗಿದೆ. ಡೀಸೆಲ್ ದರ 86.37 ರೂಪಾಯಿಗೆ ಇಳಿದಿದೆ.
ಅಂತರಾಷ್ಟ್ರೀಯ ಕಚ್ಚಾ ತೈಲ ದರ ಸತತ 15 ದಿನಗಳಿಂದ ಇಳಿಕೆಯ ಹಾದಿಯಲ್ಲಿದೆ. ಈ ವರ್ಷ ಇದೇ ಮೊದಲ ಬಾರಿಗೆ ತೈಲ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆಯ ಕಾರಣದಿಂದ ಪೆಟ್ರೋಲ್ ದರ ಇಳಿಕೆ ಕಂಡಿದೆ. ಕಚ್ಚಾತೈಲ ದರ ಬ್ಯಾರೆಲ್ಗೆ 71 ರಿಂದ 63 ಡಾಲರ್ಗೆ ಕುಸಿತ ಕಂಡಿದೆ. ಜೊತೆಗೆ ಸೌದಿ ಅರೇಬಿಯಾ ಬದಲು ಆಮೆರಿಕಾದಿಂದ ತೈಲ ಅಮದಿಗೆ ಭಾರತ ಯೋಚಿಸುತ್ತಿತ್ತು. ಪಶ್ಚಿಮದ ಬಂಗಾಳದ ಚುನಾವಣಾ ಮತದಾನ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಜನರ ಆಕ್ರೋಶ ತಣಿಸಲು ಕೇಂದ್ರ ಸಣ್ಣ ಹೆಜ್ಜೆ ಮುಂದಿಟ್ಟಿದೆ.
ದೆಹಲಿಯಲ್ಲಿ ಮೊದಲು ಪ್ರತಿ ಲೀಟರ್ ಪೆಟ್ರೋಲ್ ದರ 91.17 ರೂಪಾಯಿಗೆ ಮಾರಾಟವಾಗುತ್ತಿತ್ತು. ಇದೀಗ 18 ಪೈಸೆ ಇಳಿಕೆಯ ನಂತರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 90.99 ರೂಪಾಯಿ ಆಗಿದೆ. ಹಾಗೆಯೇ ಡೀಸೆಲ್ ದರವನ್ನು ಗಮನಿಸಿದಾಗ ಈ ಹಿಂದೆ ಪ್ರತಿ ಲೀಟರ್ ಡೀಸೆಲ್ 81.47 ರೂಪಾಯಿಗೆ ಮಾರಾಟವಾಗುತ್ತಿತ್ತು. ಇದೀಗ ಡೀಸೆಲ್ ದರದಲ್ಲಿ 17 ಪೈಸೆ ಇಳಿಕೆಯ ನಂತರ 81.30 ರೂಪಾಯಿ ಆಗಿದೆ. ಹಾಗೆಯೇ ದರ ಇಳೀಕೆಯ ನಂತರ ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್, 97.40 ರೂಪಾಯಿ ಇದೆ. ಹಾಗೂ ಡೀಸೆಲ್ ಪ್ರತಿ ಲೀಟರಿಗೆ 88.42 ರೂಪಾಯಿಗೆ ಮಾರಾಟವಾಗುತ್ತಿದೆ.
ಪೆಟ್ರೋಲ್, ಡೀಸೆಲ್ ದರ ಶ್ರೀಗಂಗನಗರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 101.84 ರೂಪಾಯಿಗೆ ಮಾರಾಟವಾಗುತ್ತಿತ್ತು. ಹಾಗೂ ಡೀಸೆಲ್ಅನ್ನು ಪ್ರತಿ ಲೀಟರಿಗೆ 93.77 ರೂಪಾಯಿಗೆ ಗ್ರಾಹಕರು ಕೊಳ್ಳುತ್ತಿದ್ದರು. ಅನುಪ್ಪುರಲ್ಲಿ ಪ್ರತಿ ಲೀಟರ್ ಪೆಟ್ರೋಲ್ 101.59 ರೂಪಾಯಿಗೆ ಮಾರಾಟವಾಗುತ್ತಿತ್ತು. ಮತ್ತು ಡೀಸೆಲ್ ಪ್ರತಿ ಲೀಟರಿಗೆ 91.97 ರೂಪಾಯಿಗೆ ಗ್ರಾಹಕರು ಕೊಳ್ಳುತ್ತಿದ್ದರು.
ಪೆಟ್ರೋಲ್ ದರ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ವ್ಯತ್ಯಾಸವಿರುತ್ತದೆ. ಹಾಗಿದ್ದಾಗ ಯಾವ ಯಾವ ದೇಶಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಕ್ಕೆ ಮಾರಾಟವಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಬಯಸಿದ್ದೀರಿ ಎಂದಾದರೆ ಇಲ್ಲಿದೆ ವಿವರ.
ವಿವಿಧ ನಗರದ ಪೆಟ್ರೋಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ:
https://tv9kannada.com/business/petrol-price-today.html
ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ:
Published On - 10:47 am, Wed, 24 March 21