AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಮ್ಸ್​ ಮೇಲೆ ದಾಳಿ ಪ್ರಕರಣ: ಸರ್ಕಾರದ ಆಸ್ತಿ ಹಾಳು ಮಾಡಿದ ಶಾಸಕನಿಗೆ ₹ 1 ಲಕ್ಷ ದಂಡ, 2 ವರ್ಷ ಜೈಲು ಶಿಕ್ಷೆ

ಸಾರ್ವಜನಿಕ ಆಸ್ತಿ ಮತ್ತು ಮೂಲ ಸೌಕರ್ಯವನ್ನು ಹಾಳು ಮಾಡುವುದು ದೇಶದ ಸಾಮಾನ್ಯ ಜನರ ಮೇಲೆ ದಾಳಿ ಮಾಡುವುದಕ್ಕೆ ಸಮ. ಸಾರ್ವಜನಿಕ ಆಸ್ತಿಯು ದೇಶದ ಯಾವುದೇ ನಾಯಕ, ಪಕ್ಷ ಅಥವಾ ಸರ್ಕಾರಕ್ಕೆ ಸೇರಿದ್ದಲ್ಲ ಎಂದು ನ್ಯಾಯಾಲಯ ಹೇಳಿತು.

ಏಮ್ಸ್​ ಮೇಲೆ ದಾಳಿ ಪ್ರಕರಣ: ಸರ್ಕಾರದ ಆಸ್ತಿ ಹಾಳು ಮಾಡಿದ ಶಾಸಕನಿಗೆ ₹ 1 ಲಕ್ಷ ದಂಡ, 2 ವರ್ಷ ಜೈಲು ಶಿಕ್ಷೆ
ದೆಹಲಿ ಆಪ್ ಶಾಸಕ ಸೋಮನಾಥ್ ಭಾರತಿ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on: Mar 23, 2021 | 10:22 PM

ದೆಹಲಿ: ಆಮ್ ಆದ್ಮಿ ಪಕ್ಷದ ಶಾಸಕ ಸೋಮನಾಥ ಭಾರತಿಗೆ 2 ವರ್ಷದ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ತೀರ್ಪನ್ನು ದೆಹಲಿಯ ಸೆಷನ್ಸ್​ ಕೋರ್ಟ್​ ಮಂಗಳವಾರ ಎತ್ತಿಹಿಡಿದಿದೆ. ಸಾರ್ವಜನಿಕ ಆಸ್ತಿಗಳನ್ನು ಹಾಳುಮಾಡುವವರಿಗೆ ದಯೆ ತೋರಿಸಲು ಆಗುವುದಿಲ್ಲ ಎಂದು ನ್ಯಾಯಾಲಯ ಕಡ್ಡಿ ತುಂಡು ಮಾಡಿದಂತೆ ಹೇಳಿದೆ. ನ್ಯಾಯಾಲಯದ ಆವರಣದಲ್ಲಿಯೇ ಸೋಮನಾಥ ಭಾರತಿಯನ್ನು ಪೊಲೀಸರು ಬಂಧಿಸಿದರು.

ಅಖಿಲ ಭಾರತ ವೈದ್ಯಕೀಯ ಸಂಶೋಧನಾ ಸಂಸ್ಥೆಯ (All India Insitute of Medical Sciences – AIIMS) ಮೇಲೆ ಸೆಪ್ಟೆಂಬರ್ 2016ರಲ್ಲಿ ನಡೆದಿದ್ದ ದಾಳಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮನಾಥ್ ಭಾರತಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಕಳೆದ ಜನವರಿಯಲ್ಲಿ ಈ ಸಂಬಂಧ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವೂ ಹೊರಬಿದ್ದಿತ್ತು.

ವಾದ-ಪ್ರತಿವಾದ ನ್ಯಾಯಾಲಯದಲ್ಲಿ ವಾದ ಮಂಡಿಸಿದ ಸರ್ಕಾರಿ ವಕೀಲರು, ಸೆಪ್ಟೆಂಬರ್ 9, 2016ರಂದು ಸೋಮನಾಥ್ ಭಾರತಿ ಮತ್ತು ಅವರ ಸಹಚರರಾದ ಜಗತ್​ ಸಿಂಗ್ ಸೈನಿ, ದಿಲೀಪ್ ಝಾ, ಸಂದೀಪ್ ಸೋನು, ರಾಕೇಶ್ ಪಾಂಡೆ ಮತ್ತು ಇತರ 300 ಮಂದಿ ಏಮ್ಸ್​ ಕಟ್ಟಡದ ಮೇಲೆ ದಾಳಿ ನಡೆಸಿದ್ದರು ಎಂದು ಹೇಳಿದರು. ಏಮ್ಸ್​ ಗೋಡೆಯನ್ನು ಜೆಸಿಬಿಯಿಂದ ಒಡೆದಿದ್ದರು ಎಂಬ ಸಂಗತಿಯನ್ನು ನ್ಯಾಯಾಲಯದ ಗಮನಕ್ಕೆ ತಂದರು.

ಸೋಮನಾಥ್ ಭಾರತಿ ಪರ ವಾದಿಸಿದ ವಕೀಲ ಹರಿಹರನ್, ತಮ್ಮ ಕಕ್ಷಿದಾರರಿಗೆ ಕ್ಷಮೆ ತೋರುವಂತೆ ಮನವಿ ಮಾಡಿದರು. ಶಿಕ್ಷೆಯ ಪ್ರಮಾಣವನ್ನಾದರೂ ತಗ್ಗಿಸಬೇಕೆಂದು ಪ್ರಾರ್ಥಿಸಿದರು.

ಮಾತಿನಲ್ಲೇ ಚಾಟಿ ಬೀಸಿದ ನ್ಯಾಯಾಧೀಶರು ಆರೋಪಿ ಪರ ವಕೀಲರ ವಾದವನ್ನು ತಿರಸ್ಕರಿಸಿದ ನ್ಯಾಯಾಧೀಶ ರವೀಂದ್ರ ಪಾಂಡೆ, ಇಂಥ ಸುಶಿಕ್ಷಿತ ವ್ಯಕ್ತಿ, ವಿಧಾನಸಭೆಯ ಶಾಸಕ ಸರ್ಕಾರಿ ಆಸ್ತಿ ಹಾಳು ಮಾಡುವುದನ್ನು ಸಹಿಸಲು ಆಗುವುದಿಲ್ಲ ಎಂದು, ₹ 1 ಲಕ್ಷ ದಂಡ ವಿಧಿಸಿದರು.

ಸಾರ್ವಜನಿಕ ಆಸ್ತಿ ಮತ್ತು ಮೂಲ ಸೌಕರ್ಯವನ್ನು ಹಾಳು ಮಾಡುವುದು ದೇಶದ ಸಾಮಾನ್ಯ ಜನರ ಮೇಲೆ ದಾಳಿ ಮಾಡುವುದಕ್ಕೆ ಸಮ. ಮೂಲ ಸೌಕರ್ಯ ಅಥವಾ ಸಾರ್ವಜನಿಕ ಆಸ್ತಿಯು ದೇಶದ ಯಾವುದೇ ನಾಯಕ, ಪಕ್ಷ ಅಥವಾ ಸರ್ಕಾರಕ್ಕೆ ಸೇರಿದ್ದಲ್ಲ. ಅದು ಈ ದೇಶದ ಸಂಪತ್ತು. ದೇಶದ ಎಲ್ಲ ಬಡವರ ಬೆವರು ಅದರಲ್ಲಿದೆ. ಪ್ರತಿ ತೆರಿಗೆದಾರ, ಮಧ್ಯಮ ವರ್ಗದವರು ಮತ್ತು ಸಮಾಜದ ಎಲ್ಲ ವರ್ಗಗಳ ಪರಿಶ್ರಮದಿಂದ ಅದನ್ನು ರೂಪಿಸಲಾಗಿದೆ. (ಪ್ರತಿಭಟನೆಯಂಥ) ಸಂವಿಧಾನಾತ್ಮಕ ಹಕ್ಕುಗಳನ್ನು ಚಲಾಯಿಸುವಾಗ ದೇಶದ ಸಂಪತ್ತು ರಕ್ಷಿಸುವ ರಾಷ್ಟ್ರೀಯ ಕರ್ತವ್ಯವನ್ನು ಯಾರೂ ಮರೆಯಬಾರದು’ ಎಂದು ಮಾತಿನಲ್ಲೇ ಚಾಟಿ ಬೀಸಿದರು.

ಇದನ್ನೂ ಓದಿ: SC on loan moratorium: ಸಾಲ ವಿನಾಯಿತಿ ವಿಸ್ತರಣೆ, ಬಡ್ಡಿ ಮನ್ನಾ ಎರಡೂ ಬಿಲ್ಕುಲ್​ ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್

ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್
ಚಿನ್ನಸ್ವಾಮಿಯಲ್ಲಿ ಮೊದಲ ಗೆಲುವು; ಕುಣಿದು ಕುಪ್ಪಳಿಸಿದ ಕೊಹ್ಲಿ
ಚಿನ್ನಸ್ವಾಮಿಯಲ್ಲಿ ಮೊದಲ ಗೆಲುವು; ಕುಣಿದು ಕುಪ್ಪಳಿಸಿದ ಕೊಹ್ಲಿ
ಜನರಿಗೆ ಮೋಸ ಮಾಡುವ ಕೆಲಸಕ್ಕೆ ಯಾರೂ ಮುಂದಾಗಬಾರದು: ಕುಲಕರ್ಣಿ
ಜನರಿಗೆ ಮೋಸ ಮಾಡುವ ಕೆಲಸಕ್ಕೆ ಯಾರೂ ಮುಂದಾಗಬಾರದು: ಕುಲಕರ್ಣಿ