Petrol Price Today: ಎಷ್ಟಿದೆ ಇಂದು ಪೆಟ್ರೋಲ್-ಡೀಸೆಲ್ ಬೆಲೆ?, ಎಸ್ಎಂಎಸ್ ಮೂಲಕವೇ ತೈಲ ಬೆಲೆ ತಿಳಿಯುವ ವಿಧಾನ ಹೇಗೆ? ಇಲ್ಲಿದೆ ಮಾಹಿತಿ
Fuel Rate Today 13-12-2021: ಭಾರತದ ಯಾವುದೇ ನಗರಗಳಲ್ಲೂ ಇಂದು ತೈಲಬೆಲೆಯಲ್ಲಿ ಬದಲಾವಣೆಯಾಗಿಲ್ಲ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 100.58 ರೂ. ಮತ್ತು ಡೀಸೆಲ್ ಬೆಲೆ 85.01 ರೂ. ಇದ್ದರೆ, ಮೈಸೂರಿನಲ್ಲಿ ಪೆಟ್ರೋಲ್ ದರ 100.08 ರೂ., ಡೀಸೆಲ್ ದರ 84.56 ರೂ. ಆಗಿದೆ.
Petrol Diesel Price Today |ಭಾರತದ ತೈಲ ಕಂಪನಿಗಳು ಇಂದು ಬೆಳಗ್ಗೆ ಪೆಟ್ರೋಲ್-ಡೀಸೆಲ್ ಬೆಲೆಯನ್ನು ಬಿಡುಗಡೆ ಮಾಡಿದ್ದು,ಇಂದು ಕೂಡ ಇಂಧನಗಳ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕಳೆದ ಎರಡೂವರೆ ತಿಂಗಳುಗಳಿಂದಲೂ ತೈಲಗಳ ಬೆಲೆ ಸ್ಥಿರವಾಗಿಯೇ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯಲ್ಲಿ ಏರಿಳಿತವಾಗುತ್ತಿದ್ದರೂ, ಅದು ಪೆಟ್ರೋಲ್-ಡೀಸೆಲ್ ಬೆಲೆಯ ಮೇಲೆ ಯಾವುದೇ ಪ್ರಭಾವ ಬೀರುತ್ತಿಲ್ಲ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 95.41 ರೂಪಾಯಿಯೇ ಇದ್ದು, ಡೀಸೆಲ್ ಪ್ರತಿ ಲೀಟರ್ಗೆ 86.67 ರೂ.ಇದೆ. ತೈಲ ಕಂಪನಿಗಳು ಪ್ರತಿದಿನ ಬೆಳಗ್ಗೆಯೇ ವಿವಿಧ ಪ್ರಮುಖ ನಗರಗಳ ಪೆಟ್ರೋಲ್-ಡೀಸೆಲ್ ಬೆಲೆಯನ್ನು ಬಿಡುಗಡೆ ಮಾಡುತ್ತವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲಕ್ಕೆ ಇರುವ ಬೆಲೆ ಆಧಾರದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ನಿರ್ಧರಿಸಲಾಗುತ್ತದೆ.
ನವೆಂಬರ್ಗೂ ಮೊದಲು ದೇಶದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಇತ್ತು. ಆದರೆ ದೀಪಾವಳಿಗೂ ಮುನ್ನಾದಿನ ಅಂದರೆ ನವೆಂಬರ್ 4ರಂದು ಕೇಂದ್ರ ಸರ್ಕಾರ ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿತ್ತು. ಅದಾದ ಮೇಲೆ ಹಲವು ರಾಜ್ಯಸರ್ಕಾರಗಳೂ ಕೂಡ ವ್ಯಾಟ್ (VAT) ಕಡಿತಗೊಳಿಸಿವೆ. ಹೀಗಾಗಿ ಅಂದಿನಿಂದಲೂ ಪೆಟ್ರೋಲ್-ಡೀಸೆಲ್ ಬೆಲೆ ಮಹಾನಗರಗಳಲ್ಲಿ ಸ್ಥಿರವಾಗಿಯೇ ಇವೆ. ಹಾಗಿದ್ದಾಗ್ಯೂ ಕೂಡ ದೇಶದ 25ಕ್ಕೂ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಬೆಲೆ 100 ರೂಪಾಯಿ ಮೇಲೆ ಇದೆ.
ಎಷ್ಟಿದೆ ಮಹಾನಗರಗಳಲ್ಲಿ ಇಂದು ಇಂಧನ ದರ?
ಭಾರತದ ಯಾವುದೇ ನಗರಗಳಲ್ಲೂ ಇಂದು ತೈಲಬೆಲೆಯಲ್ಲಿ ಬದಲಾವಣೆಯಾಗಿಲ್ಲ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 100.58 ರೂ. ಮತ್ತು ಡೀಸೆಲ್ ಬೆಲೆ 85.01 ರೂ. ಇದ್ದರೆ, ಮೈಸೂರಿನಲ್ಲಿ ಪೆಟ್ರೋಲ್ ದರ 100.08 ರೂ., ಡೀಸೆಲ್ ದರ 84.56 ರೂ. ಆಗಿದೆ. ಹಾಗೇ ಮಂಗಳೂರಿನಲ್ಲಿ ಪೆಟ್ರೋಲ್ 99.76 ರೂ. ಮತ್ತು ಡೀಸೆಲ್ 84.24 ರೂ.ಗೆ ಮಾರಾಟವಾಗುತ್ತಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 86.67 ರೂ. ಇದ್ದರೆ, ಪೆಟ್ರೋಲ್ ದರ 95.41 ರೂ.ಆಗಿದೆ. ಮುಂಬೈ ಮಹಾನಗರಿಯಲ್ಲೂ ಸಹ ಯಾವುದೇ ಬದಲಾವಣೆಯಾಗಿಲ್ಲ. ಇಲ್ಲಿ ಪೆಟ್ರೋಲ್ ದರ 109.98 ರೂ. ಮತ್ತು ಡೀಸೆಲ್ ದರ 94.14 ರೂ. ಆಗಿದೆ. ಹಾಗೇ, ಚೆನ್ನೈನಲ್ಲಿ ಪೆಟ್ರೋಲ್ ದರ 101.40 ರೂ. ಇದೆ. ಡೀಸೆಲ್ ದರ 91.43 ರೂ. ಆಗಿದೆ. ರಾಷ್ಟ್ರದ ಸುಮಾರು 27 ಮಹಾನಗರಗಳಲ್ಲಿ ಪೆಟ್ರೋಲ್ ದರ 100 ರೂ.ಗಡಿ ದಾಟಿದೆ.
ನೀವೇ ಚೆಕ್ ಮಾಡಿಕೊಳ್ಳಬಹುದು
ನಿಮ್ಮ ನಗರದಲ್ಲಿರುವ ಪೆಟ್ರೋಲ್-ಡೀಸೆಲ್ ಬೆಲೆಯನ್ನು ಗ್ರಾಹಕರೇ ಎಸ್ಎಂಎಸ್ ಮೂಲಕ ಪಡೆದುಕೊಳ್ಳಬಹುದು. ಇಂಡಿಯನ್ ಆಯ್ಲ್ ಕಂಪನಿ ಗ್ರಾಹಕರು RSP <space> (Dealer Code of Petrol Pump -ಡೀಲರ್ ಕೋಡ್ ಹಾಕಿ ) ಎಂದು 9224992249 ನಂಬರ್ಗೆ ಎಸ್ಎಂಎಸ್ ಕಳಿಸಬೇಕು. ನಂತರ ಬಿಪಿಸಿಎಲ್ ಗ್ರಾಹಕರು ಇದೇ ಮಾದರಿಯಲ್ಲಿ 9223112222 ಕ್ಕೆ ಮತ್ತು ಎಚ್ಪಿಸಿಎಲ್ ಗ್ರಾಹಕರು HPPrice ಎಂದು ಬರೆದು, ಕೋಡ್ ಹಾಕಿ 9222201122ಕ್ಕೆ ಕಳಿಸಬೇಕು.
ಇದನ್ನೂ ಓದಿ:
ವಿವಿಧ ನಗರದಲ್ಲಿ ಪೆಟ್ರೋಲ್ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ: https://tv9kannada.com/business/petrol-price-today.html
ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ: https://tv9kannada.com/business/diesel-price-today.htm
Published On - 9:31 am, Thu, 13 January 22