Petrol- Diesel Price Hike: ಪೆಟ್ರೋಲ್- ಡೀಸೆಲ್ ದರ ಏರಿಕೆ; ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧ ಕೋರ್ಟ್​​ನಲ್ಲಿ ದಾವೆ

| Updated By: Srinivas Mata

Updated on: Jun 28, 2021 | 11:16 PM

ದೇಶದಲ್ಲಿ ಪೆಟ್ರೋಲ್- ಡೀಸೆಲ್ ದರದಲ್ಲಿ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಷಡ್ಯಂತ್ರ ಇದೆ ಎಂದು ಆರೋಪಿಸಿ ಬಿಹಾರದ ಕೋರ್ಟ್​ನಲ್ಲಿ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧ ಮೊಕದ್ದಮೆ ಹೂಡಲಾಗಿದೆ.

Petrol- Diesel Price Hike: ಪೆಟ್ರೋಲ್- ಡೀಸೆಲ್ ದರ ಏರಿಕೆ; ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧ ಕೋರ್ಟ್​​ನಲ್ಲಿ ದಾವೆ
ಸಚಿವ ಧರ್ಮೇಂದ್ರ ಪ್ರಧಾನ್ (ಸಂಗ್ರಹ ಚಿತ್ರ)
Follow us on

ದೇಶದಲ್ಲಿ ತೈಲ ದರಗಳಲ್ಲಿ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಬಿಹಾರದಲ್ಲಿ ವ್ಯಕ್ತಿಯೊಬ್ಬರು ಕೇಂದ್ರ ಪೆಟ್ರೋಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧ ದಾವೆ ಹೂಡಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ಸೋಮವಾರ ವರದಿ ಮಾಡಿದೆ. ಮುಜಾಫರ್​ಪುರ್​ ಮುಖ್ಯ ಮ್ಯಾಜಿಸ್ಟ್ರೇಟ್ ಕೋರ್ಟ್​ ಮುಂದೆ ಪ್ರಕರಣ ದಾಖಲು ಮಾಡಿದ್ದಾರೆ. ದೂರುದಾರರಾದ ತಮನ್ನ ಹಶ್ಮಿ ಆರೋಪಿಸಿರುವ ಪ್ರಕಾರ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಏರಿಕೆಯಲ್ಲಿ “ಷಡ್ಯಂತ್ರ” ಇದೆ. ಕಚ್ಚಾ ತೈಲ ಬೆಲೆ ಕಡಿಮೆ ಇರುವಾಗಲೂ ಹೀಗೆ ಏರಿಕೆ ಆಗುತ್ತಿದೆ ಎಂದು ಆರೋಪ ಮಾಡಿರುವ ಹಶ್ಮಿ, ಇದು ದೇಶದ ಜನರನ್ನು ಹೆದರಿಸುತ್ತಿದೆ ಮತ್ತು ಕ್ರೋಧಗೊಳಿಸುತ್ತಿದೆ ಎಂದಿದ್ದಾರೆ. ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 420 (ವಂಚನೆ), 295 ಮತ್ತು 295 (ಎ) ಉದ್ದೇಶಪೂರ್ವಕ ದುರ್ನಡತೆ ಮತ್ತು 511 (ಅಪರಾಧ ಮಾಡುವುದಕ್ಕೆ ಪ್ರಯತ್ನ) ಅಡಿಯಲ್ಲಿ ಮೊಕದ್ದಮೆ ಹೂಡಲಾಗಿದೆ. ಈ ಅರ್ಜಿಯನ್ನು ವಿಚಾರಣೆ ಅಹವಾಲಿಗೆ ಕೈಗೆತ್ತಿಕೊಳ್ಳುವ ನಿರೀಕ್ಷೆ ಇದೆ.

ತಮನ್ನ ಹಶ್ಮಿ ತಮ್ಮನ್ನು ಸಾಮಾಜಿಕ ಕಾರ್ಯಕರ್ತ ಎಂದ ಕರೆದುಕೊಳ್ಳುತ್ತಾರೆ. ಅಪಾರ ಸಂಖ್ಯೆಯಲ್ಲಿ ಕೋರ್ಟ್​ಗಳಲ್ಲಿ ದಾವೆ ಹೂಡಿರುವವರಲ್ಲಿ ರಾಜಕಾರಣಿಗಳೇ ಹೆಚ್ಚು. ವಿವಿಧ ವಿಚಾರಗಳಲ್ಲಿ ದಾವೆ ಹೂಡಿ, ಸುದ್ದಿಯಲ್ಲಿದ್ದಾರೆ. ಜೂನ್ 24ನೇ ತಾರೀಕಿನಂದು ಯೋಗ ಗುರು ಬಾಬಾ ರಾಮ್​ದೇವ್ ಮತ್ತು ಪತಂಜಲಿ ಆಯುರ್ವೇದ ಎಂ.ಡಿ. ಆಚಾರ್ಯ ಬಾಲಕೃಷ್ಣ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿದ್ದರು. ಕೊವಿಡ್​- 19ಗೆ ಔಷಧಿ ಕಂಡುಹಿಡಿದಿರುವುದಾಗಿ ಹೇಳಿ, ಜನರ ದಿಕ್ಕುತಪ್ಪಿಸಿ, ಲಕ್ಷಾಂತರ ಮಂದಿಯ ಜೀವವನ್ನು ಅಪಾಯಕ್ಕೊಡ್ಡಿದ್ದಾರೆ ಎಂಬುದು ಆ ದೂರಿನ ಸಾರಾಂಶ ಆಗಿತ್ತು. ಜೂನ್ 30ನೇ ತಾರೀಕಿಗೆ ಕೋರ್ಟ್​ನಲ್ಲಿ ಈ ವಿಷಯದ ವಿಚಾರಣೆ ಇದೆ.

2019ನೇ ಇಸವಿಯಲ್ಲಿ ಹಶ್ಮಿ ಅವರು ರಾಷ್ಟ್ರೀಯ ಜನತಾ ದಳದ (ಆರ್​ಜೆಡಿ) ನಾಯಕ ತೇಜಸ್ವಿ ಯಾದವ್​ ಇರುವ ನಾಪತ್ತೆ ಪೋಸ್ಟರ್​ ಹಾಕಿ ಸುದ್ದಿಯಾಗಿದ್ದರು. ತೇಜಸ್ವಿ ಯಾದವ್ ಎಲ್ಲಿದ್ದಾರೆಂದು ಮಾಹಿತಿ ನೀಡುವವರಿಗೆ 5100 ರೂಪಾಯಿ ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದರು. 2019ರ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ತೇಜಸ್ವಿ ಯಾದವ್ ನಾಪತ್ತೆ ಆಗಿದ್ದಾರೆ ಎಂಬ ಒಕ್ಕಣೆಯನ್ನು ಸಹ ಆ ಪೋಸ್ಟರ್​ ಹೊಂದಿತ್ತು.

ಇದನ್ನೂ ಓದಿ: ರಾಜ್ಯ ಸರ್ಕಾರಗಳೊಂದಿಗೆ ಚರ್ಚಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿಯಂತ್ರಣಕ್ಕೆ ತರುವಂತೆ ಧರ್ಮೇಂದ್ರ ಪ್ರಧಾನ್​ಗೆ ಎಫ್​ಕೆಸಿಸಿಐ ಪತ್ರ

(Due to petrol and diesel price hike in the country case has filed in Bihar’s Muzaffarpur court against union minister Dharmendra Pradhan)

Published On - 11:14 pm, Mon, 28 June 21