ಬೆಂಗಳೂರು: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ತೀವ್ರವಾಗಿ ಏರಿಕೆಯಾಗಿರುವುದರಿಂದ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕೂಡಾ ಮಂಗಳವಾರವೂ ಮತ್ತೆ ಏರಿಕೆಯತ್ತ ಸಾಗಿದೆ. ದೆಹಲಿಯಲ್ಲಿ ದೈನಂದಿನ ಇಂಧನ ದರದ ಪರಿಷ್ಕರಣೆಯ ನಂತರ ಪೆಟ್ರೋಲ್ ದರ 25 ಪೈಸೆ ಹಾಗೂ ಡೀಸೆಲ್ 35 ಪೈಸೆ ಹೆಚ್ಚಾಗಿದೆ.
ನಿನ್ನೆ ಪೆಟ್ರೋಲ್ ದರ ₹90.58 ಇತ್ತು. ಇದೀಗ ಪ್ರತಿ ಲೀಟರ್ ₹90.93ಕ್ಕೆ ಜಿಗಿದಿದೆ. ಹಾಗೂ ಡೀಸೆಲ್ ಬೆಲೆ ಪ್ರತಿ ಲೀಟರ್ ₹81.32 ಇದ್ದು, ಇದೀಗ ₹81.32ಕ್ಕೆ ಮಾರಾಟವಾಗುತ್ತಿದೆ. ಈ ತಿಂಗಳಲ್ಲಿ ಪೆಟ್ರೋಲ್ ದರ ಒಟ್ಟು ಪ್ರತಿ ಲೀಟರ್ಗೆ ₹4.63ರಷ್ಟು ಏರಿಕೆ ಕಂಡಿದೆ ಹಾಗೂ ಡೀಸೆಲ್₹4.84ರಷ್ಟು ಹೆಚ್ಚಳವಾಗಿದೆ.
ಇಂದು 34 ಪೈಸೆ ಹೆಚ್ಚಳದ ನಂತರ ಮುಂಬೈನಲ್ಲಿ ಇದೀಗ ಪೆಟ್ರೋಲ್ ದರ ಪ್ರತಿ ಲೀಟರ್ಗೆ ₹97.34 ಹಾಗೂ 38ಪೈಸೆ ಹೆಚ್ಚಳದಿಂದ ಡೀಸೆಲ್ ದರ ₹ 88.44ಕ್ಕೆ ಗ್ರಾಹಕರು ಕೊಂಡುಕೊಳ್ಳುತ್ತಿದ್ದಾರೆ. ಹಾಗೆಯೇ ಚೆನ್ನೈನಲ್ಲಿ ಪೆಟ್ರೋಲ್ ದರದಲ್ಲಿ 31 ಪೈಸೆ ಏಋಇಕೆ ಮಾಡಲಾಗಿದ್ದು, ಪ್ರತಿ ಲೀಟರ್ ಬೆಲೆ ₹92.90 ಆಗಿದೆ. ಹಾಗೂ ಡೀಸೆಲ್ ದರ 33 ಪೈಸೆ ಹೆಚ್ಚಳವಾಗಿದ್ದು, ₹86.06ಕ್ಕೆ ಮಾರಾಟವಾಗುತ್ತಿದೆ.
ಕೊಲ್ಕತ್ತಾದಲ್ಲಿ ಪೆಟ್ರೋಲ್ ದರ 66ಪೈಸೆ ಇಳಿಕೆ ಕಂಡಿದ್ದು ₹91.78 ಇದ್ದ ಪೆಟ್ರೋಲ್ ದರ ಇದೀಗ ₹91.12ಕ್ಕೆ ಲಭ್ಯವಾಗುತ್ತಿದೆ. ಹಾಗೂ ಡೀಸೆಲ್ ದರವೂ ಕೂಡಾ 36 ಪೈಸೆ ಕಡಿಮೆಯಾಗಿದ್ದು, ಇದೀಗ ಪ್ರತಿ ಲೀಟರ್ ಡೀಸೆಲ್ ದರ ₹84.20ಕ್ಕೆ ಲಭ್ಯವಾಗುತ್ತಿದೆ. ಇಷ್ಟು ದಿನ ಏರುತ್ತಲೇ ಇದ್ದ ಇಂಧನ ದರವನ್ನು ನೋಡುತ್ತಿದ್ದ ಕೊಲ್ಕತ್ತ ನಾಗರಿಕರಿಗೆ ಕೊಂಚ ಖುಷಿಯುಂಟಾಗಿದೆ.
Petrol and diesel prices in Delhi stand at Rs 90.83 per litre (increase by 25 paise) and Rs 81.32 per litre (increase by 35 paise), respectively
(file photo) pic.twitter.com/gloY1YPoNL
— ANI (@ANI) February 23, 2021
ಇದನ್ನೂ ಓದಿ: Petrol Diesel Price: ಏರುತ್ತಲೇ ಇದೆ ಪೆಟ್ರೋಲ್ ದರ.. ಬೆಲೆ ಏರಿಕೆ ಕಾರಣ ಬಿಚ್ಚಿಟ್ಟ ಸಚಿವ ಧರ್ಮೇಂದ್ರ ಪ್ರಧಾನ್
ಇದನ್ನೂ ಓದಿ: Petrol/Diesel Price: ಸತತ 13ನೇ ದಿನವೂ ಪೆಟ್ರೋಲ್ ದರ 39 ಪೈಸೆ ಹೆಚ್ಚಳ.. ಜನಸಾಮಾನ್ಯರ ಕೆಂಗಣ್ಣು