Petrol Diesel Price: ಸತತ 11ನೇ ದಿನದವರೆಗೆ ಸ್ಥಿರತೆ ಕಾಪಾಡಿಕೊಂಡ ಪೆಟ್ರೊಲ್ ದರ! ವಿಧಾನಸಭಾ ಚುನಾವಣೆಯಿಂದಾಗಿ ತೈಲ ಬೆಲೆಗಳು ಹೆಚ್ಚಾಗುತ್ತಿಲ್ಲವೇ?

|

Updated on: Mar 10, 2021 | 12:18 PM

Petrol Diesel Rate in Bangalore: ಕಳೆದ ತಿಂಗಳಿನಲ್ಲಿ ದರ ಬದಲಾವಣೆಗೊಂಡ ನಂತರ ಪೆಟ್ರೋಲ್​, ಡೀಸೆಲ್​ ಸತತ 11ನೇ ದಿನದವರೆಗೆ ಸ್ಥಿರತೆ ಕಾಪಾಡಿಕೊಂಡಿದೆ. ವಿಧಾನಸಭಾ ಚುನಾವಣೆಯಿಂದಾಗಿ ಬೆಲೆಗಳು ಹೆಚ್ಚಾಗುತ್ತಿಲ್ಲವೇ ಎಂಬ ಊಹಾಪೋಹಗಳು ಸೃಷ್ಟಿಯಾಗಿವೆ.

Petrol Diesel Price: ಸತತ 11ನೇ ದಿನದವರೆಗೆ ಸ್ಥಿರತೆ ಕಾಪಾಡಿಕೊಂಡ ಪೆಟ್ರೊಲ್ ದರ! ವಿಧಾನಸಭಾ ಚುನಾವಣೆಯಿಂದಾಗಿ ತೈಲ ಬೆಲೆಗಳು ಹೆಚ್ಚಾಗುತ್ತಿಲ್ಲವೇ?
ಸಂಗ್ರಹ ಚಿತ್ರ
Follow us on

ಬೆಂಗಳೂರು: ಕಳೆದ ಕೆಲವು ದಿನಗಳಲ್ಲಿ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಇಂಧನ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಇಂಧನ ದರ ಗಮನಿಸಿದ ಕೆಲವು ವ್ಯಾಪಾರಿಗಳು ಇಂಧನ ಕೊಳ್ಳಲು ಕೈಕುಲುಕಲು ಪ್ರಾರಂಭಿಸಿದ್ದಾರೆ. ಸತತ 11 ನೇ ದಿನವೂ ಇಂಧನ ದರ ಬದಲಾಗದೆ ಸ್ಥಿರವಾಗಿದೆ. ದೆಹಲಿ ಮಾರುಕಟ್ಟೆಯಲ್ಲಿ ಇಂದು ಬುಧವಾರ ಪೆಟ್ರೋಲ್ 91.17 ರೂಪಾಯಿ ಮತ್ತು ಡೀಸೆಲ್ ಲೀಟರ್‌ಗೆ 81.47 ರೂಪಾಯಿಗೆ ಮಾರಾಟವಾಗುತ್ತಿದೆ. ಪ್ರಸ್ತುತದಲ್ಲಿ, ಒಂದು ವಾರದಿಂದ ಎರಡೂ ಇಂಧನಗಳ ಬೆಲೆಗಳು ಸ್ಥಿರತೆ ಕಾಪಾಡಿಕೊಂಡಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್​ ದರ 94.22 ರೂಪಾಯಿಗೆ ಮಾರಾಟವಾಗುತ್ತಿದೆ. ಹಾಗೂ ಡೀಸೆಲ್ ದರ 86.37 ರೂಪಾಯಿಗೆ ಮಾರಾಟವಾಗುತ್ತಿದೆ. ದೆಹಲಿ ಪೆಟ್ರೋಲ್​ ಪ್ರತಿ ಲೀಟರಿಗೆ 91.21ರೂಪಾಯಿ ಹಾಗೂ 81.51 ರೂಪಾಯಿ ಇದೆ. ಮುಂಬೈನಲ್ಲಿ ಪೆಟ್ರೋಲ್​ ಪ್ರತಿ ಲೀಟರಿಗೆ 97.57 ರೂಪಾಯಿ ಹಾಗೂ ಡೀಸೆಲ್ 88.60 ರೂಪಾಯಿ ಇದೆ. ಚೆನ್ನೈನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ 93.11 ರೂಪಾಯಿ ಹಾಗೂ ಡೀಸೆಲ್​ 86.45 ರೂಪಾಯಿಗೆ ಮಾರಾಟವಾಗುತ್ತಿದೆ. ಕೊಲ್ಕತ್ತದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 91.35 ರೂಪಾಯಿ ಹಾಗೂ ಡೀಸೆಲ್​ 84.35 ರೂಪಾಯಿಗೆ ಮಾರಾಟವಾಗುತ್ತಿದೆ.

ಇನ್ನು, ಭಾರತದ ವಿವಿಧ ನಗರಗಳಾದ ಭೂಪಾಲ್​ನಲ್ಲಿ ಪೆಟ್ರೋಲ್​ 99.21 ರೂಪಾಯಿ ಇದ್ದು ಇನ್ನೇನು ಶತಕದ ಹಾದಿಯಲ್ಲಿದೆ. ಹಾಗೂ ಡೀಸೆಲ್​ 89.76 ರೂಪಾಯಿಗೆ ಮಾರಾಟವಾಗುತ್ತಿದೆ. ರಾಂಚಿಯಲ್ಲಿ ಪೆಟ್ರೋಲ್​ 88.54 ರೂಪಾಯಿ ಹಾಗೂ ಡೀಸೆಲ್​ 86.37 ರೂಪಾಯಿಗೆ ಮಾರಾಟವಾಗುತ್ತಿದೆ. ಪಾಟ್ನಾದಲ್ಲಿ ಪ್ರತಿ ಲೀ. ಪೆಟ್ರೋಲ್​ ದರ 93.48 ರೂಪಾಯಿ ಹಾಗೂ ಡೀಸೆಲ್​ 86.73 ರೂಪಾಯಿಗೆ ಗ್ರಾಹಕರು ಕೊಳ್ಳುತ್ತಿದ್ದಾರೆ. ಲಕ್ನೋದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ 89.31 ರೂಪಾಯಿ ಹಾಗೂ ಡೀಸೆಲ್​ 81.85 ರೂಪಾಯಿಗೆ ಮಾರಾಟವಾಗುತ್ತಿದೆ.

ವಿಧಾನಸಭಾ ಚುನಾವಣೆಯಿಂದಾಗಿ ಬೆಲೆಗಳು ಹೆಚ್ಚಾಗುತ್ತಿಲ್ಲವೇ?
ಭಾರತದಲ್ಲಿ, ಸರ್ಕಾರಿ ತೈಲ ಕಂಪನಿಗಳು ಪೆಟ್ರೋಲ್-ಡೀಸೆಲ್ ಬೆಲೆಯನ್ನು ನಿಗದಿಪಡಿಸುತ್ತದೆ. ಏಕೆಂದರೆ, ಚುನಾವಣಾ ದಿನಗಳು ಹತ್ತಿರ ಬಂದಾಗ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದುಬಾರಿಯಾಗಿದ್ದರೂ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸ್ಥಿರವಾಗಿರುತ್ತವೆ. ಚುನಾವಣೆ ಮುಗಿದ ನಂತರ, ಬೆಲೆ ಮತ್ತೆ ಏರಲು ಪ್ರಾರಂಭಿಸುತ್ತದೆ. ಕಳೆದ ಅಕ್ಟೋಬರ್-ನವೆಂಬರ್‌ನಲ್ಲಿ ಬಿಹಾರ ವಿಧಾನಸಭಾ ಚುನಾವಣೆ ನಡೆಯುತ್ತಿದ್ದಾಗ, ಸತತ 48 ದಿನಗಳವರೆಗೆ ಇಂಧನ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಅದರ ನಂತರ, ಬೆಲೆಗಳು ಬಹುತೇಕ ಪ್ರತಿದಿನ ಏರಿಕೆಯತ್ತ ಸಾಗಿದೆ.

ಪ್ರಸ್ತುತ, ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ, ಕೇರಳ ಮತ್ತು ಅಸ್ಸಾಂ ಸೇರಿದಂತೆ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯ ಪ್ರಕ್ರಿಯೆ ನಡೆಯುತ್ತಿದೆ. ಹಾಗಾಗಿ ಚುನಾವಣೆ ಎದುರಿಗಿರುವುದರಿಂದ ಇಂಧನ ದರ ಸ್ಥಿರವಾಗಿ ಉಳಿದಿದೆಯೇ ಎಂಬ ಊಹಾಪೋಹಗಳು ಸೃಷ್ಟಿಯಾಗಿವೆ. ಫೆಬ್ರವರಿ ಕೊನೆಯ ತಿಂಗಳಲ್ಲಿ ಪೆಟ್ರೋಲ್ ಬೆಲೆ 16 ದಿನಗಳವರೆಗೆ ಹೆಚ್ಚಾಗಿದೆ. ಹೀಗಾಗಿ ದರ 4.74 ರೂಪಾಯಿ ದುಬಾರಿಯಾಗಿದೆ.

ಪೆಟ್ರೋಲ್ 25 ದಿನಗಳಲ್ಲಿ 7.36 ರೂಪಾಯಿ ಹೆಚ್ಚಳ
ಬಹುತೇಕ ಎಲ್ಲ ನಗರಗಳಲ್ಲಿ ಪೆಟ್ರೋಲ್ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ಈ ವರ್ಷದ ಜನವರಿ ಮತ್ತು ಫೆಬ್ರವರಿ ತಿಂಗಳನ್ನು ಮಾತ್ರ ಗಮನಿಸುವುದಾದರೆ, ಪೆಟ್ರೋಲ್ 25 ದಿನಗಳಲ್ಲಿ 7.36 ರೂಪಾಯಿ ಹೆಚ್ಚಳವಾಗಿದೆ. ಹಾಗೂ ಡೀಸೆಲ್ 16 ದಿನಗಳಲ್ಲಿ 4.52 ರೂ ಹೆಚ್ಚಳವಾಗಿದ್ದು, ಫೆಬ್ರವರಿ ತಿಂಗಳ ಕೊನೆಯ 16 ದಿನಗಳಲ್ಲಿ ಬೆಲೆ 4.52 ರೂಪಾಯಿ ಹೆಚ್ಚಳವಾಗಿದೆ.

ಕಚ್ಚಾ ತೈಲ ಉತ್ಪಾದನೆಯನ್ನು ಎಪ್ರಿಲ್​ ತಿಂಗಳಿನಲ್ಲಿಯೂ ಹೆಚ್ಚುಸುವುದು ಬೇಡ ಎಂದು ಒಪೆಕ್ಸ್​ ದೇಶಗಳು ತೀರ್ಮಾನಿಸಿದ ನಂತರ ತೈಲಕ್ಕಾಗಿ ಮಧ್ಯಪ್ರಾಚ್ಯಕ್ಕೆ ಹೊಂದಿಕೊಂಡಿರುವ ಅವಲಂಬನೆಯನ್ನು ಕಡಿಮೆ ಮಾಡುವಂತೆ ಸರ್ಕಾರ ಹೇಳಿದೆ. ಹಾಗೂ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದರಲ್ಲಿ ಕೆಲವೇ ದೇಶಗಳನ್ನು ಮಾತ್ರ ನೆಚ್ಚಿಕೊಳ್ಳುವುದು ಬೇಡ ಎಂದು ಕೇಂದ್ರ ಸರ್ಕಾರ ತನ್ನ ತೈಲ ಮಾರಾಟ ಕಂಪನಿಗಳಿಗೆ ಸಲಹೆ ನೀಡಿದೆ.

ಭಾರತ ದೇಶಕ್ಕೆ ತೈಲ ಪೂರೈಕೆ ಮಾಡುತ್ತಿರುವ ದೇಶಗಳಲ್ಲಿ ಇರಾಕ್​ ಹಾಗೂ ಸೌದಿ ಅರೇಬಿಯಾ ಮುಂಚೂಣಿಯಲ್ಲಿದೆ. ಈ ಕುರಿತಂತೆ, ಸಣ್ಣ ಅವಧಿಯ ಖರೀದಿ ಒಪ್ಪಂದವನ್ನು ಇನ್ನಿತರ ದೇಶಗಳೊಂದಿಗೆ ಮಾಡಿಕೊಳ್ಳುವ ಪ್ರಯತ್ನ ನಾವು ಮಡೆಸಿದ್ದೇವೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಕರ್ನಾಟಕ ಬಜೆಟ್ 2021: ಪೆಟ್ರೋಲ್ ದರದಲ್ಲಿ ಯಾವ ಇಳಿಕೆಯೂ ಆಗಲಿಲ್ಲ; ಇಂದು ರಾಜ್ಯದಲ್ಲಿ ರೂ. 96ರ ಗಡಿಯಲ್ಲಿ ಪೆಟ್ರೋಲ್​ ಬೆಲೆ

ಇದನ್ನೂ ಓದಿ: Petrol Diesel Price | ವಾಹನ ಸವಾರರಿಗೆ ಕೊಂಚ ರಿಲೀಫ್, ದೇಶದಲ್ಲಿ ಹೀಗಿದೆ ಪೆಟ್ರೋಲ್​, ಡೀಸೆಲ್​ ದರ!

Published On - 9:52 am, Wed, 10 March 21