ಬೆಂಗಳೂರು: ನಿವೃತ್ತ ಡಿಜಿಐಜಿಪಿ ಶಂಕರ್ ಬಿದರಿ ಅವರ ಇ-ಮೇಲ್ ಹ್ಯಾಕ್ ಮಾಡಿ ಹಣ ವಸೂಲಿಗೆ ಮುಂದಾದ ನ್ಯಾಗಲ್ಯಾಂಡ್ ಗ್ಯಾಂಗ್ ಬಂಧನ!
ಬೆಂಗಳೂರು: ಇ- ಮೇಲ್ ಖಾತೆ ಹ್ಯಾಕ್ ಮಾಡುತ್ತಿದ್ದು, ಹಣ ಕಳುಹಿಸುವಂತೆ ಸಂದೇಶ ಕಳುಹಿಸುತ್ತಿದ್ದ ನಾಗಾಲ್ಯಾಂಡ್ ಮೂಲದ ಗ್ಯಾಂಗ್ರನ್ನು ಪೊಲೀಸರು ಬಂಧಿಸಿದ್ದಾರೆ. ನಿವೃತ್ತ ಡಿಜಿಐಜಿಪಿ ಶಂಕರ್ ಬಿದರಿ ಅವರ ಖಾತೆ ಹ್ಯಾಕ್ ಮಾಡಿದ್ದು, ಹಣ ನೀಡುವಂತೆ ಒತ್ತಾಯಿಸುತ್ತಿದ್ದರು. ಇದನ್ನು ತಿಳಿದ ಶಂಕರ್ ಬಿದರಿ, ಪೊಲೀಸರಿಗೆ ದೂರು ನೀಡಿದ್ದಾರೆ. ಥಿಯಾ(31) ಸೆರೋಪಾ (27) ಹಾಗೂ ಇಸ್ಟರ್ ಕೊನ್ಯಾಕ್ ಅಲಿಯಾಸ್ ರೂಬಿಕಾ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಶಂಕರ್ ಬಿದರಿ ಇ-ಮೇಲ್ ಖಾತೆ ಹ್ಯಾಕ್ ಮಾಡಿ ಹಣವನ್ನ ಕಳುಹಿಸುವಂತೆ ಸಂದೇಶ ಕಳುಹಿಸಿದ್ದ ಆರೋಪಿಗಳು […]
ಬೆಂಗಳೂರು: ಇ- ಮೇಲ್ ಖಾತೆ ಹ್ಯಾಕ್ ಮಾಡುತ್ತಿದ್ದು, ಹಣ ಕಳುಹಿಸುವಂತೆ ಸಂದೇಶ ಕಳುಹಿಸುತ್ತಿದ್ದ ನಾಗಾಲ್ಯಾಂಡ್ ಮೂಲದ ಗ್ಯಾಂಗ್ರನ್ನು ಪೊಲೀಸರು ಬಂಧಿಸಿದ್ದಾರೆ. ನಿವೃತ್ತ ಡಿಜಿಐಜಿಪಿ ಶಂಕರ್ ಬಿದರಿ ಅವರ ಖಾತೆ ಹ್ಯಾಕ್ ಮಾಡಿದ್ದು, ಹಣ ನೀಡುವಂತೆ ಒತ್ತಾಯಿಸುತ್ತಿದ್ದರು. ಇದನ್ನು ತಿಳಿದ ಶಂಕರ್ ಬಿದರಿ, ಪೊಲೀಸರಿಗೆ ದೂರು ನೀಡಿದ್ದಾರೆ.
ಥಿಯಾ(31) ಸೆರೋಪಾ (27) ಹಾಗೂ ಇಸ್ಟರ್ ಕೊನ್ಯಾಕ್ ಅಲಿಯಾಸ್ ರೂಬಿಕಾ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಶಂಕರ್ ಬಿದರಿ ಇ-ಮೇಲ್ ಖಾತೆ ಹ್ಯಾಕ್ ಮಾಡಿ ಹಣವನ್ನ ಕಳುಹಿಸುವಂತೆ ಸಂದೇಶ ಕಳುಹಿಸಿದ್ದ ಆರೋಪಿಗಳು ಜೈಲು ಪಾಲಾಗಿದ್ದಾರೆ. ಶಂಕರ್ ಬಿದರಿ ಸ್ನೇಹಿತರಿಗೂ ಇದೇ ರೀತಿ ಸಂದೇಶ ಬಂದಿದೆ. ಮೆಸೇಜ್ ನೋಡಿ 25 ಸಾವಿರ ಹಣವನ್ನ ಆರೋಪಿಗಳ ಖಾತೆಗೆ ಜಮಾ ಮಾಡಿದ್ದಾರೆ. ಈ ಬಗ್ಗೆ ಆಗ್ನೇಯ ವಿಭಾಗ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಶಂಕರ್ ಬಿದರಿ ದೂರು ನೀಡಿದ್ದರು. ದೂರಿನ ಅನ್ವಯ ಪೊಲೀಸರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.
ತನಿಖೆಯಿಂದ ಆರೋಪಿಗಳು ಸುಮಾರು 60 ಬ್ಯಾಂಕ್ ಅಕೌಂಟ್ ಹೊಂದಿದ್ದ ಮಾಹಿತಿ ತಿಳಿದು ಬಂದಿದೆ. ಕಳೆದ ವರ್ಷ ನವೆಂಬರ್ನಿಂದ ಇತ್ತೀಚೆಗೆ 60 ಬ್ಯಾಂಕ್ ಅಕೌಂಟ್ ಒಪನ್ ಆಗಿತ್ತು. ನಾಗಾಲ್ಯಾಂಡ್ ನ ನಿರುದ್ಯೋಗಿ ಯುವಕರಿಗೆ ಹಣದ ಆಮಿಷವೊಡ್ಡಿ ಆಧಾರ್ ಕಾರ್ಡ್, ಮನೆ ಬಾಡಿಗೆ ಪತ್ರ ಪಡೆದಿರುವುದು ತಿಳಿದು ಬಂದಿದೆ.
ಪ್ರಕರಣದಲ್ಲಿ ಸೆರೆಯಾದ ಮಹಿಳಾ ಆರೋಪಿತೆ ಇಸ್ಟರ್ ಕೊನ್ಯಾಕ್ ಅಲಿಯಾಸ್ ರೂಬಿಕಾ ನಾಲ್ಕು ವರ್ಷಗಳ ಹಿಂದೆ ನಗರಕ್ಕೆ ಬಂದು ಬ್ಯೂಟಿ ಪಾರ್ಲರ್ ವೊಂದರಲ್ಲಿ ಸೇಲ್ಸ್ ಗರ್ಲ್ ಆಗಿದ್ದರು. ಫೇಸ್ಬುಕ್ನಲ್ಲಿ ಪೀಟರ್ ಹಾಗೂ ಜೇಮ್ಸ್ ಎನ್ನುವವರ ಪರಿಚಯ ಮಾಡಿಕೊಂಡಿದ್ದರು. ಜೇಮ್ಸ್ ಹಾಗೂ ಪೀಟರ್ ಮಾರ್ಗದರ್ಶನದಂತೆ ಅಕೌಂಟ್ ಹ್ಯಾಕ್ ಮಾಡಿ ಹಣ ಎಗರಿಸಿದ್ದಾರೆ. ಈ ಕುರಿತಂತೆ ಆಗ್ನೇಯ ವಿಭಾಗ ಸಿಇಎನ್ ಪೊಲೀಸ್ ಠಾಣೆ ಕೇಸ್ ದಾಖಲಾಗಿತ್ತು.
ಇದನ್ನೂ ಓದಿ: ದೀಪಿಕಾ ಪಡುಕೋಣೆ ಇನ್ಸ್ಟಾಗ್ರಾಮ್- ಟ್ವಿಟರ್ ಅಕೌಂಟ್ ಖಾಲಿ ಖಾಲಿ.. ಅಕೌಂಟ್ ಹ್ಯಾಕ್ ಆಗಿರಬಹುದೆಂದ ನೆಟ್ಟಿಗರು
ಇದನ್ನೂ ಓದಿ: ಬರಾಕ್ ಒಬಾಮ ಟ್ವಿಟರ್ ಹ್ಯಾಕ್ ಮಾಡಿ ಸೈಬರ್ ಕ್ರಿಮಿನಲ್ಸ್ ದೋಚಿದ್ದು ಎಷ್ಟು ಗೊತ್ತಾ?