ದೀಪಿಕಾ ಪಡುಕೋಣೆ ಇನ್ಸ್ಟಾಗ್ರಾಮ್- ಟ್ವಿಟರ್ ಅಕೌಂಟ್ ಖಾಲಿ ಖಾಲಿ.. ಅಕೌಂಟ್ ಹ್ಯಾಕ್ ಆಗಿರಬಹುದೆಂದ ನೆಟ್ಟಿಗರು
ಗುಳಿಕೆನ್ನೆ ಸುಂದರಿ ದೀಪಿಕಾ ಪಡುಕೋಣೆ ಅವರ ಇನ್ಸ್ಟಾಗ್ರಾಮ್ ಖಾತೆ ಹಾಗೂ ಟ್ವಿಟ್ಟರ್ ಖಾತೆಗಳಲ್ಲಿನ ಎಲ್ಲಾ ಪೋಸ್ಟ್‌ಗಳು ಡಿಲೀಟ್ ಆಗಿವೆ. ಹೀಗಾಗಿ ದೀಪಿಕಾ ಅವರ ಇನ್ಸ್ಟಾಗ್ರಾಮ್ ಹಾಗೂ ಟ್ವಿಟ್ಟರ್ ಖಾತೆಗಳಲ್ಲಿ ಯಾವುದೇ ವಿಡಿಯೋ ಹಾಗೂ ಫೋಟೋಗಳು ಕಾಣಸಿಗುತ್ತಿಲ್ಲ.
ಕರ್ನಾಟಕ ಮೂಲದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು 2020 ರ ಕೊನೆಯ ದಿನದಂದು ಅವರ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ಗುಳಿಕೆನ್ನೆ ಸುಂದರಿ ದೀಪಿಕಾ ಪಡುಕೋಣೆ ಅವರ ಇನ್ಸ್ಟಾಗ್ರಾಮ್ ಖಾತೆ ಹಾಗೂ ಟ್ವಿಟ್ಟರ್ ಖಾತೆಗಳಲ್ಲಿನ ಎಲ್ಲಾ ಪೋಸ್ಟ್‌ಗಳು ಡಿಲೀಟ್ ಆಗಿವೆ. ಹೀಗಾಗಿ ದೀಪಿಕಾ ಅವರ ಇನ್ಸ್ಟಾಗ್ರಾಮ್ ಹಾಗೂ ಟ್ವಿಟ್ಟರ್ ಖಾತೆಗಳಲ್ಲಿ ಯಾವುದೇ ವಿಡಿಯೋ ಹಾಗೂ ಫೋಟೋಗಳು ಕಾಣಸಿಗುತ್ತಿಲ್ಲ.
ಇನ್ಸ್ಟಾಗ್ರಾಮ್ನಲ್ಲಿ 52.5 ಮಿಲಿಯನ್ ಮತ್ತು ಟ್ವಿಟ್ಟರ್ನಲ್ಲಿ 27.7 ಮಿಲಿಯನ್ ಫಾಲೋವರ್ಸ್ ಹೊಂದಿರುವ ದೀಪಿಕಾ ಪಡುಕೋಣೆ ತಾವಾಗಿಯೇ ತಮ್ಮ ಎರಡು ಖಾತೆಗಳನ್ನ ಡಿಲೀಟ್ ಮಾಡಿದ್ದಾರೋ ಅಥವಾ ದೀಪಿಕಾ ಅಕೌಂಟನ್ನು ಯಾರದರೂ ಹ್ಯಾಕ್ ಮಾಡಿದ್ದಾರೋ ಎಂಬುದು ಸ್ಪಷ್ಟವಾಗಿಲ್ಲ.