AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬನ್ನಿ ಕೊರೊನಾ ಓಡಿಸೋಣ ವಿದ್ಯಾರ್ಥಿಗಳನ್ನು ಓದಿಸೋಣ’ 10 ತಿಂಗಳ ಬಳಿಕ ಇಂದಿನಿಂದ ಶಾಲಾ-ಕಾಲೇಜು ರೀ ಓಪನ್

ಇಂದು ಹೊಸ ವರ್ಷ.. ನೂತನ ವರ್ಷದ ಸಂಭ್ರಮ ಜೊತೆಗೆ ಶಾಲೆಗಳು ಆರಂಭವಾಗುತ್ತಿವೆ. ವಿದ್ಯಾರ್ಥಿಗಳು ಶಾಲೆಗೆ ಬರಲು ಸಿದ್ದರಾಗಿದ್ದಾರೆ. ಅದರಂತೆ ಶಿಕ್ಷಕರು ಕೂಡ ಮಧುವಣಗಿತ್ತಿಯಂತೆ ಶಾಲೆಯನ್ನ ಸಿಂಗರಿಸಿ, ವಿದ್ಯಾರ್ಥಿಗಳ ಸ್ವಾಗತಕ್ಕೆ ಸಜ್ಜಾಗಿದ್ದಾರೆ.

‘ಬನ್ನಿ ಕೊರೊನಾ ಓಡಿಸೋಣ ವಿದ್ಯಾರ್ಥಿಗಳನ್ನು ಓದಿಸೋಣ' 10 ತಿಂಗಳ ಬಳಿಕ ಇಂದಿನಿಂದ ಶಾಲಾ-ಕಾಲೇಜು ರೀ ಓಪನ್
ರಾಜ್ಯದಲ್ಲಿ ಇಂದಿನಿಂದ ಪೂರ್ಣ ಪ್ರಮಾಣದ ತರಗತಿಗಳು ಆರಂಭ
ಆಯೇಷಾ ಬಾನು
|

Updated on:Jan 01, 2021 | 7:08 AM

Share

ಬೆಂಗಳೂರು: ಎಲ್ಲೆಡೆ ಹೊಸ ವರ್ಷದ ಸಂಭ್ರಮ ಮನೆ ಮಾಡಿದೆ. ಹೊಸ ಹುರುಪಿನೊಂದಿಗೆ ಶಾಲೆಗಳನ್ನ ಆರಂಭಿಸಲು ಶಿಕ್ಷಕರು ಸಜ್ಜಾಗಿದ್ದಾರೆ. ಇನ್ನು 10 ತಿಂಗಳಿಂದ ಮನೆಯಲ್ಲೇ ಇದ್ದ ಮಕ್ಕಳು ಕೂಡ ಶಾಲೆಯತ್ತ ಹೆಜ್ಜೆ ಹಾಕಲು ತುದಿಗಾಲಲ್ಲಿ ನಿಂತಿದ್ದಾರೆ.

ತುಮಕೂರಿನಲ್ಲಿ ಮಕ್ಕಳನ್ನ ಆಕರ್ಷಿಸಲು ಶಾಲೆ ಶಿಕ್ಷಕರೇ ಗೋಡೆಗಳ ಬಣ್ಣ ಬಣ್ಣದ ಚಿತ್ರಗಳನ್ನು ಬಿಡಿಸಿದ್ದಾರೆ. ರೋಗಿ ಹಾಗೂ ವೈದ್ಯರ ಚಿತ್ರ, ಆನೆ, ಅರಣ್ಯ ಪ್ರದೇಶ, ರೈಲು ಸೇರಿದಂತೆ ಸ್ವಚ್ಚತಾ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲು ಚಿತ್ರ ಬಿಡಿಸಲಾಗಿದೆ.

ಅಷ್ಟೇ ಅಲ್ಲ ಶಾಲೆ ಆರಂಭವಾಗ್ತಿರುವ ಹಿನ್ನೆಲೆಯಲ್ಲಿ ಶಾಲಾ ಕೊಠಡಿಗಳನ್ನು ಶಿಕ್ಷಕರೇ ಸ್ವಚ್ಛ ಮಾಡಿ ಸ್ಯಾನಿಟೈಸ್ ಮಾಡಿದ್ದಾರೆ. ಇನ್ನು ಸರ್ಕಾರದ ಗೈಡ್ ಲೈನ್ಸ್ ಪ್ರಕಾರವೇ ಶಾಲೆ ತೆರೆಯಲು ಶಿಕ್ಷಣ ಇಲಾಖೆಗಳು ಸಜ್ಜಾಗಿವೆ.

ಇಂದಿನಿಂದ ಶಾಲೆಗಳು ಆರಂಭವಾಗ್ತಿರುವ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಕೊಠಡಿಗಳನ್ನ ಸ್ಯಾನಿಟೈಸ್ ಮಾಡಲಾಗಿದೆ. ನಗರದ ಪ್ರದೇಶದಲ್ಲಿ ನಗರಸಭೆ ವತಿಯಿಂದ ಹಾಗೂ ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯ್ತಿ ವತಿಯಿಂದ ಸ್ಯಾನಿಟೈಸ್ ಮಾಡಲಾಗಿದ್ದು, ಮಕ್ಕಳ ಸುರಕ್ಷತೆ ಬಗ್ಗೆ ಹೆಚ್ಚು ಗಮನ ಕೊಡಲಾಗಿದೆ.

ಶಾಲಾ-ಕಾಲೇಜು ಆರಂಭಕ್ಕೆ ಕೌಂಟ್‌ಡೌನ್ ಶಾಲೆಗೆ ಬಂದ ವಿದ್ಯಾರ್ಥಿಗೆ ಕೊರೊನಾ ಸಿಂಟಮ್ಸ್ ಕಂಡು ಬಂದರೆ ಕೂಡಲೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ ಕೋವಿಡ್ ಟೆಸ್ಟ್ ಮಾಡಿಸಲಾಗುತ್ತೆ. ಇದು ಕೇವಲ ಸರ್ಕಾರಿ ಶಾಲೆಗೆ ಮಾತ್ರ ಸೀಮಿತವಲ್ಲ, ಅನುದಾನಿತ ಹಾಗೂ ಖಾಸಗಿ ಶಾಲೆಗಳು ಸಹ ರೂಲ್ಸ್ ಫಾಲೋ ಮಾಡುವಂತೆ ಯಾದಗಿರಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಸೂಚಿಸಿದ್ದಾರೆ.

ಪೋಷಕರ‌ ಒಪ್ಪಿಗೆ ಪತ್ರದೊಂದಿಗೆ ಮಕ್ಕಳು ಇಂದಿನಿಂದ ಶಾಲೆಗೆ ಹಾಜರಾಗುತ್ತಿದ್ದಾರೆ. ಹಾಸನದಲ್ಲೂ ಎಲ್ಲಾ ಶಾಲೆಗಳಲ್ಲೂ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ. ಕೊರೊನಾ ಬಗ್ಗೆ ಅರಿವು ಮೂಡಿಸೋ‌ ಪೋಸ್ಟರ್, ಕೊರೊನಾದಿಂದ ದೂರ ಇರಲು ಅನುಸರಿಸಬೇಕಾದ ಮಾಹಿತಿಗಳ ಬಗ್ಗೆ ಶಾಲಾ ಫಲಕಗಳಲ್ಲಿ ಹಾಕಲಾಗಿದೆ.

ಧಾರವಾಡ ಜಿಲ್ಲೆಯಲ್ಲೂ ಶಾಲೆ ಆರಂಭಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಗುರುತು ಹಾಕಲಾಗಿದೆ. ಕೊಠಡಿಗಳನ್ನ ಸ್ಯಾನಿಟೈಸ್ ಮಾಡಲಾಗಿದ್ದು, ಹೊರ ಭಾಗದಲ್ಲಿ ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದೆ.‌

ಹಾವೇರಿಯಲ್ಲೂ ಶಾಲಾ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ. ಶಾಲೆಗಳ ದ್ವಾರ ಬಾಗಿಲಿಗೆ ಮಾವಿನ ತಳಿರು ತೋರಣ ಕಟ್ಟಿ ವಿದ್ಯಾರ್ಥಿಗಳ ಸ್ವಾಗತಕ್ಕೆ ಶಿಕ್ಷಕರು ಸಜ್ಜಾಗಿದ್ದಾರೆ. ಇನ್ನು ಈಗಾಗಲೇ ಶಾಲೆಯ ಶಿಕ್ಷಕರಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿದ್ದು, ಮಕ್ಕಳ ಹಿತದೃಷ್ಟಿಯಿಂದ ಎಲ್ಲಾ ರೀತಿಯ ಮುಂಜಾಗ್ರತ ಕ್ರಮಕೈಗೊಳ್ಳಲಾಗಿದೆ. ಇನ್ನು ಶಾಲೆಗಳಲ್ಲಿ ವಿದ್ಯಾಗಮ 2 ಆರಂಭಿಸೋದಕ್ಕೆ ಸಂಬಂಧಿಸಿದಂತೆ ಪಾಲಕರ ಸಭೆ ನಡೆಸಲಾಗಿದ್ದು, ಬಹುತೇಕ ಪಾಲಕರು ಮಕ್ಕಳನ್ನ ಶಾಲೆಗೆ ಕಳಿಸೋದಾಗಿ ಹೇಳಿದ್ರೆ, ಕೆಲವರು ಮಾತ್ರ ಮಕ್ಕಳನ್ನ ಶಾಲೆಗೆ ಕಳಿಸಲು ನಿರಾಕರಿಸಿದ್ದಾರಂತೆ.

ಒಟ್ನಲ್ಲಿ ಬಹಳ ತಿಂಗಳುಗಳ ನಂತರ ಶಾಲೆಗಳು ಆರಂಭವಾಗಿವೆ. ಶಿಕ್ಷಣ ಇಲಾಖೆ ಮುಂಜಾಗ್ರತ ಕ್ರಮಕೈಗೊಂಡು ಇಂದಿನಿಂದ ಶಾಲೆಗಳ ಆರಂಭಿಸುತ್ತಿದೆ.

ಮಾರ್ಚ್ ತಿಂಗಳಲ್ಲಿ SSLC ಮತ್ತು PUC ಪರೀಕ್ಷೆ ಮಾಡಲ್ಲ: ಸಚಿವ ಸುರೇಶ್ ಕುಮಾರ್

Published On - 7:06 am, Fri, 1 January 21