ಬರಾಕ್ ಒಬಾಮ ಟ್ವಿಟರ್ ಹ್ಯಾಕ್ ಮಾಡಿ ಸೈಬರ್ ಕ್ರಿಮಿನಲ್ಸ್ ದೋಚಿದ್ದು ಎಷ್ಟು ಗೊತ್ತಾ?
ಇದು ಸೋಷಿಯಲ್ ಮೀಡಿಯಾಗಳ ಕಾಲ. ಬಹುತೇಕ ಶಿಕ್ಷಿತರು ಒಂದಿಲ್ಲೊಂದು ಸಾಮಾಜಿಕ ತಾಣಗಳಲ್ಲಿ ತಮ್ಮ ಅಕೌಂಟ್ ಹೊಂದಿದ್ದಾರೆ. ವಿಶ್ವದ ಅತಿ ಹೆಚ್ಚು ಜನಪ್ರೀಯ ಸೋಷಿಯಲ್ ಮೀಡಿಯಾಗಳಾದ ಟ್ವೀಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಟಿಕ್ ಟಾಕ್‌ಗಳಲ್ಲಿ ಅವರದೇ ಆದ ಒಂದು ಅಕೌಂಟ್ ಹೊಂದಿರುವವರ ಸಂಖ್ಯೆ ಸಾಕಷ್ಟಿದೆ. ಹೀಗೆ ಇಂಥ ಸೋಷಿಯಲ್ ಮೀಡಿಯಾಗಳಲ್ಲಿ ಅಕೌಂಟ್ ಹೊಂದಿರೋರು ತಮ್ಮ ಅಕೌಂಟ್ ಭಾರೀ ಸೆಕ್ಯೂರ್ ಆಗಿದೆ. ಯಾರಿಗೂ ಕೂಡಾ ಹ್ಯಾಕ್ ಮಾಡಲು ಸಾಧ್ಯವಿಲ್ಲ ಹಾಗೆ ಪಾಸ್‌ವರ್ಡ್ ಸೆಟ್ ಮಾಡಿದ್ದೇನೆ ಅಂತಾ ಅಂದುಕೊಂಡಿದ್ರೆ, ಒಂದು ಕ್ಷಣ ಯೋಚಿಸಿ. […]
ಇದು ಸೋಷಿಯಲ್ ಮೀಡಿಯಾಗಳ ಕಾಲ. ಬಹುತೇಕ ಶಿಕ್ಷಿತರು ಒಂದಿಲ್ಲೊಂದು ಸಾಮಾಜಿಕ ತಾಣಗಳಲ್ಲಿ ತಮ್ಮ ಅಕೌಂಟ್ ಹೊಂದಿದ್ದಾರೆ. ವಿಶ್ವದ ಅತಿ ಹೆಚ್ಚು ಜನಪ್ರೀಯ ಸೋಷಿಯಲ್ ಮೀಡಿಯಾಗಳಾದ ಟ್ವೀಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಟಿಕ್ ಟಾಕ್‌ಗಳಲ್ಲಿ ಅವರದೇ ಆದ ಒಂದು ಅಕೌಂಟ್ ಹೊಂದಿರುವವರ ಸಂಖ್ಯೆ ಸಾಕಷ್ಟಿದೆ. ಹೀಗೆ ಇಂಥ ಸೋಷಿಯಲ್ ಮೀಡಿಯಾಗಳಲ್ಲಿ ಅಕೌಂಟ್ ಹೊಂದಿರೋರು ತಮ್ಮ ಅಕೌಂಟ್ ಭಾರೀ ಸೆಕ್ಯೂರ್ ಆಗಿದೆ. ಯಾರಿಗೂ ಕೂಡಾ ಹ್ಯಾಕ್ ಮಾಡಲು ಸಾಧ್ಯವಿಲ್ಲ ಹಾಗೆ ಪಾಸ್‌ವರ್ಡ್ ಸೆಟ್ ಮಾಡಿದ್ದೇನೆ ಅಂತಾ ಅಂದುಕೊಂಡಿದ್ರೆ, ಒಂದು ಕ್ಷಣ ಯೋಚಿಸಿ. ಯಾಕಂದ್ರೆ ಸೋಷಿಯಲ್ ಮೀಡಿಯಾದಲ್ಲಿ ಯಾವುದು ಸೇಫ್ ಅಲ್ಲ. ಟ್ವಿಟರ್ ಅಂತಾ ಟ್ವಿಟರ್ ಅನ್ನೇ ಹ್ಯಾಕರ್‌ಗಳು ಯಾಮಾರಿಸಿದ್ದಾರೆ. ಅದೂ ವಿಶ್ವದ ಪ್ರಭಾವಿ ವ್ಯಕ್ತಿಗಳ ಟ್ವಿಟರ್ ಅಕೌಂಟ್‌ಗಳನ್ನೇ ಹ್ಯಾಕ್ ಮಾಡಿದ್ದಾರೆ.
ಟ್ವಿಟರ್ ಅಕೌಂಟ್ ಹ್ಯಾಕ್ ಸೃಷ್ಟಿಸಿದ ಹಲ್‌ಚಲ್ ಹೌದು, ವಿಶ್ವದ ಅತ್ಯಂತ ಪ್ರಭಾವಶಾಲಿ ಸೋಷಿಯಲ್ ಮೀಡಿಯಾಗಳಲ್ಲೊಂದಾದ ಟ್ವಿಟರ್ ಈಗ ಇಡೀ ವಿಶ್ವದ ಗಮನ ಸೆಳೆದಿದೆ. ನೆಟ್ಟಿಗರ ಬಾಯಲ್ಲಿ ಇದೇ ಮಾತು. ಇದಕ್ಕೆ ಕಾರಣ ಹ್ಯಾಕರ್‌ಗಳು ಟ್ವಿಟರ್‌ನ್ನೇ ಯಾಮಾರಿಸಿದ್ದಾರೆ. ಬುಧವಾರ ವಿಶ್ವದ ಗಣ್ಯಾತಿ ಗಣ್ಯರ ಟ್ವಿಟರ್ ಅಕೌಂಟ್‌ಗಳಿಗೆ ಕನ್ನಹಾಕಿದ್ದಾರೆ. ವಿಶ್ವಾದ್ಯಂತ ಟ್ವಿಟರ್‌ನಲ್ಲಿ ಹಲ್‌ಚಲ್ ಸೃಷ್ಟಿಸಿದ್ದ ಈ ಸೈಬರ್ ಕ್ರಿಮಿನಲ್‌ಗಳು ವಿಶ್ವಕ್ಕೆ ವಿಶ್ವವನ್ನೇ ದಂಗು ಪಡಿಸಿದ್ದಾರೆ. ಹೀಗೆ ಹ್ಯಾಕ್ ಆದ ಟ್ವಿಟರ್ ಅಕೌಂಟ್‌ಗಳಲ್ಲಿ ಭಾರೀ ಜನಪ್ರೀಯ ವ್ಯಕ್ತಿಗಳು, ಪ್ರಭಾವಿ ರಾಜಕಾರಣಿಗಳು, ವಿಶ್ವದ ದೊಡ್ಡ ಕಂಪನಿಗಳ ಮಾಲೀಕರು, ಸಿಇಓಗಳು ಮತ್ತು ಸೆಲೆಬ್ರಿಟಿಗಳು ಸೇರಿದ್ದಾರೆ.
ಒಬಾಮಾ ಸೇರಿ ಗಣ್ಯವ್ಯಕ್ತಿಗಳ ಅಕೌಂಟ್ ಹ್ಯಾಕ್ ಇದರಲ್ಲಿ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಮಾಜಿ ಉಪಾಧ್ಯಕ್ಷ ಮತ್ತು 2020ರ ಡೆಮಾಕ್ರೆಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಲ್ಲಿ ಮುಂಚೂಣಿಯಲ್ಲಿರುವ ಜೋಯ್ ಬಿಡೆನ್, ಸ್ವತಂತ್ರ ಅಭ್ಯರ್ಥಿ ಹಾಗೂ ಖ್ಯಾತ ಗಾಯಕ ಕನೀಯೇ ವೆಸ್ಟ್, ಮೈಕ್ರೋಸಾಫ್ಟ್ ಮಾಲೀಕ ಬಿಲ್ ಗೇಟ್ಸ್ ಮತ್ತು ಟೆಸ್ಲಾ ಕಂಪನಿಯ ಮಾಲೀಕ ಎಲಾನ್ ಮಸ್ಕ್, ಕಿಮ್ ಕರದಾಸಿನ್ ಸೇರಿದ್ದಾರೆ. ಹ್ಯಾಕರ್‌ಗಳು ಕೇವಲ ವ್ಯಕ್ತಿಗಳನ್ನು ಮಾತ್ರ ಟಾರ್ಗೆಟ್ ಮಾಡಿಲ್ಲ. ಪ್ರಖ್ಯಾತ ಕಂಪನಿಗಳನ್ನೂ ಕೂಡಾ ಟಾರ್ಗೆಟ್ ಮಾಡಿದ್ದಾರೆ. ಇದರಲ್ಲಿ ಖ್ಯಾತ ಆಪಲ್ ಕಂಪನಿ ಹಾಗೂ ಟ್ಯಾಕ್ಸಿ ಸರ್ವಿಸ್ ಕಂಪನಿ ಉಬರ್ ಕೂಡಾ ಸೇರಿವೆ.
ಬಿಟ್‌ಕಾಯಿನ್ ಲಿಂಕ್ ಮೂಲಕ ಮನಿ ಡಬ್ಲಿಂಗ್ ಆಫರ್ ಹ್ಯಾಕ್‌ರ್‌ಗಳ ಈ ಕರಾಮತ್ತು ಶುರುವಾಗಿದ್ದು ಬುಧವಾರ 4ಗಂಟೆಯ ಸುಮಾರಿಗೆ. ಅಮೆರಿಕದ ಪ್ರಭಾವಿ ವ್ಯಕ್ತಿಗಳ ಅಕೌಂಟ್‌ನಿಂದ ಯಾರಾದ್ರೂ ಈ ಕೆಳಗೆ ಸೂಚಿಸಿದ ಲಿಂಕ್‌ಗೆ 1000 ರೂಪಾಯಿಗಳ ಬಿಟ್‌ಕಾಯಿನ್ ಕಳಿಸಿದ್ರೆ, ನಿಮಗೆ ಅದನ್ನು ಡಬಲ್ ಮಾಡಿಕೊಡಲಾಗುವುದು ಎಂದು ಟ್ವೀಟ್ ಮಾಡಿದ್ದಾರೆ. ಟ್ವೀಟ್ ಕೆಳಗೆ ಬಿಟ್‌ಕಾಯಿನ್ ಕಳಿಸಬೇಕಾದ ಲಿಂಕ್ ಅನ್ನು ಕೂಡಾ ಸೂಚಿಸಿದ್ದಾರೆ. ಇಷ್ಟೇ ಅಲ್ಲ ಇಂಥ ಆಫರ್ ಇರೋದು ಕೇವಲ 30 ನಿಮಿಷಗಳವರೆಗೆ ಮಾತ್ರ, ಹೀಗಾಗಿ ಬೇಗ ಬೇಗ ಅದೃಷ್ಟ ನಿಮ್ಮದಾಗಿಸಿಕೊಳ್ಳಿ ಎಂದು ಸರಣಿಯಾಗಿ ಟ್ವೀಟ್ ಮಾಡಿದ್ದಾರೆ.
ಒಬಾಮಾ, ಬಿಲ್ ಗೇಟ್ಸ್ ಹೆಸರಲ್ಲಿ ಕಮಾಯಿಸಿದ್ದು ಕೋಟಿ ಕೋಟಿ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಕಿಮ್ ಕರದಾಸಿನ್, ಅಮೆಜಾನ್ ಸ್ಥಾಪಕ ಜೆಫ್ ಬೆಜೋಸ್, ವಿಶ್ವದ ಖ್ಯಾತ ಬಾಕ್ಸರ್ ಫ್ಲಾಯ್ಡ್ ಮೇವೆದರ್, ಜೋಯ್ ಬಿಡೆನ್, ಬಿಲ್ ಗೇಟ್ಸ್, ಎಲಾನ್ ಮಸ್ಕ್, ಆಪಲ್ ಕಂಪನಿಯ ಅಕೌಂಟ್‌ಗಳಿಂದ ಈ ರೀತಿಯ ಅದೃಷ್ಟದ ಬಿಟ್‌ಕಾಯಿನ್ ಟ್ವೀಟ್ಸ್ ಬರುತ್ತಿದ್ದಂತೆ ಅವರ ಅಸಂಖ್ಯ ಹಿಂಬಾಲಕರು ಹಿಂದೆ ಮಂದೆ ನೋಡದೆ ಲಿಂಕ್ ಮೇಲೆ ಕ್ಲಿಕ್ ಮಾಡಿ ಸಾವಿರ ಸಾವಿರಗಳ ಬಿಟ್‌ಕಾಯಿನ್ ಕಳಿಸಿದ್ದಾರೆ. ಕೇವಲ ನಾಲ್ಕು ಗಂಟೆಗಳಲ್ಲಿ ಹೀಗೆ ಸರಣಿ ಮೇಲೆ ಸರಣಿ ಟ್ವೀಟ್ ಮಾಡಿರುವ ಹ್ಯಾಕರ್‌ಗಳು ಕಮಾಯಿಸಿದ್ದು ಬರೋಬ್ಬರಿ 100,000 ಅಮೆರಿಕನ್ ಡಾಲರ್ಸ್.
ಹ್ಯಾಕರ್ ಕರಾಮತ್ತಿಗೆ ಟ್ವಿಟರ್ ಕಂಗಾಲು ಹೀಗೆ ಟ್ವಿಟರ್ ದುನಿಯಾದಲ್ಲಿ ಹಲ್‌ಚಲ್ ಆಗುತ್ತಿದ್ದಂತೆ, ಟ್ವಿಟರ್ ಕಂಪನಿ ಎಚ್ಚೆತ್ತುಕೊಂಡಿದೆ. ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಅರ್ದದಿನ ಕಳೆದಿದೆ. ಆದ್ರೂ ಸಾವರಿಸಿಕೊಂಡಿರೋ ಟ್ವಿಟರ್, ತನ್ನೆಲ್ಲಾ ಸೆಕ್ಯೂರಿಟಿ ಸೈನಿಕರನ್ನ ಹ್ಯಾಕರ್ಸ್ ವಿರುದ್ಧ ಕಣಕ್ಕಿಳಿಸಿದೆ. ವಿಷಯ ಅದೆಷ್ಟು ಗಂಭೀರ ವಾಗಿತ್ತೆಂದ್ರೆ, ಸ್ವತಃ ಟ್ವಿಟರ್ ಕಂಪನಿಯ ಸಂಸ್ಥಾಪಕ ಮತ್ತು ಸಿಇಓ ಜ್ಯಾಕ್ ಡೋರ್ಸಿ ಟ್ವೀಟ್ ಮಾಡಿ ಸೆಕ್ಯುರಿಟಿಯಲ್ಲಾದ ಅವಘಡಕ್ಕೆ ಕ್ಷಮೆ ಕೋರಿದ್ದಾರೆ. ಅಷ್ಟೇ ಅಲ್ಲ ಈ ಕುರಿತು ಏನಾಗ್ತಿದೆ ಎನ್ನೋದನ್ನ ಸ್ಟಡೀ ಮಾಡುತ್ತಿದ್ದೇವೆ. ಭದ್ರತೆಯಲ್ಲಿ ಆಗಿರುವ ಲೋಪವನ್ನು ಸರಿಪಡಿಸುತ್ತೆವೆ ಎಂದು ಭರವಸೆ ನೀಡಿದ್ದಾರೆ.
ಕನ್ನ ಹಾಕಿದವರ ಪತ್ತೆ ಹಚ್ಚಲು ಟ್ವಿಟರ್ ಪರದಾಟ ಕೆಲ ಸಮಯದ ನಂತರ ಮತ್ತೇ ಟ್ವೀಟ್ ಮಾಡಿರುವ ಡೋರ್ಸಿ, ಇದು ಯಾವುದೇ ಟ್ವಿಟರ್ ಅಕೌಂಟ್ ಹೋಲ್ಡರ್‌ಗಳಿಂದ ಆದ ಹ್ಯಾಕ್ ಅಲ್ಲ, ಬದಲು ಕೆಲ ದುರುಳರು ನಮ್ಮ ಟ್ವಿಟರ್ ಸಂಸ್ಥೆಯ ಒಳಗಿನ ವ್ಯವಸ್ಥೆಯ ಲೋಪ ಮತ್ತು ವ್ಯಕ್ತಿಗಳನ್ನು ಬಳಸಿಕೊಂಡು ಭಾರೀ ವ್ಯವಸ್ಥಿತವಾಗಿ ನಡೆಸಿರುವ ಕುತಂತ್ರವಿದು. ಇದು ಹೆಗಾಯ್ತು ಮತ್ತು ಯಾವ ರೀತಿಯಾಗಿದೆ ಅನ್ನೋದನ್ನ ಸಮಗ್ರವಾಗಿ ಪತ್ತೆ ಹಚ್ಚಿ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಟ್ವಿಟರ್‌ಗೆ ಲೀಗಲ್ ನೋಟೀಸ್ ಕಳಿಸಿದ ಅಮೆರಿಕಾದ ಸೆನೆಟರ್ ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಲ್ ಗೇಟ್ಸ್, ಇದು ಟ್ವಿಟರ್ ಎದುರಿಸುತ್ತಿರುವ ಗಂಭೀರ ಸಮಸ್ಯೆ ಈ ಬಗ್ಗೆ ಅದು ಗಂಭೀರವಾಗಿ ಚಿಂತಿಸಬೇಕು ಎಂದಿದ್ದಾರೆ. ಹೀಗೆ ಹ್ಯಾಕ್‌ಗೊಳಗಾದ ಅಮೆರಿಕದ ಸೆನೆಟರ್ ಜ್ಯಾಕ್ ಹೌಲಿಯಂತೂ ಟ್ವಿಟರ್ ಸಿಇಓಗೆ ಲೀಗಲ್ ನೋಟಿಸ್ ಕಳಿಸಿದ್ದಾರೆ. ಎಲಾನ್ ಮಸ್ಕ್ ವಕ್ತಾರ ಭದ್ರತೆಯಲ್ಲಾದ ಲೋಪದ ಬಗ್ಗೆ ಏನು ಕ್ರಮ ಕೈಗೊಳ್ಳಬೇಕು ಎಂದು ಚಿಂತಿಸುತ್ತಿದ್ದೇವೆ ಎಂದಿದ್ದಾರೆ.
ಅಮೆರಿಕಾ ಚುನಾವಣೆ ವರ್ಷದಲ್ಲಿ ಇದೆಂಥಾ ಆಟ? ಆದ್ರೆ ಅಮೆರಿಕ ದೇಶ ಈ ವರ್ಷ ಅಧ್ಯಕ್ಷೀಯ ಚುನಾವಣೆ ಎದುರಿಸಿತ್ತಿದೆ. ಇಂಥ ಸಂದರ್ಭದಲ್ಲಿ ಈ ರೀತಿ ಜನಪ್ರೀಯ ವ್ಯಕ್ತಿಗಳ ಟ್ವೀಟರ್ ಅಕೌಂಟ್‌ಗಳು ಹ್ಯಾಕ್ ಆಗಿರೋದು ಭಾರೀ ಚರ್ಚೆಗೊಳಗಾಗಿದೆ. ಯಾಕಂದ್ರೆ ಕಳೆದ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನ ಗೆಲ್ಲಿಸಲು, ರಷ್ಯಾ ಸೋಷಿಯಲ್ ಮೀಡಿಯಾಗಳನ್ನ ಬಳಸಿಕೊಂಡು ಹಿಲರಿ ಕ್ಲಿಂಟನ್ ಸೋಲಿಗೆ ಕಾರಣವಾಯಿತು ಅನ್ನೋ ಆರೋಪಗಳಿವೆ. ಇದು ವಿಶ್ವದಾದ್ಯಂತ ಭಾರೀ ಚರ್ಚೆಯೂ ಆಗಿತ್ತು.
ಅಮೆರಿಕಾದಲ್ಲಿ ಆತಂಕ ಮೂಡಿಸಿದ ಘಟನೆ ಹೀಗಾಗಿ ಮತ್ತೇ ಅಧ್ಯಕ್ಷೀಯ ಚುನಾವಣೆಯ ವರ್ಷದಲ್ಲಿ ಈ ರೀತಿಯ ಘಟನೆ ಸಂಭವಿಸಿದೆ. ಅದು ಪ್ರಭಾವಿ ಮತ್ತು ಜಪ್ರೀಯ ವ್ಕಕ್ತಿಗಳ ಟ್ವಿಟರ್ ಅಕೌಂಟ್ ಹ್ಯಾಕ್ ಆಗಿವೆ. ಇದು ಮುಂಬರುವ ಚುನಾವಣೆಯಲ್ಲಿ ವೋಟರ್ಸ್ ಮೇಲೆ ಪ್ರಭಾವ ಬೀರಲು ಈ ರೀತಿ ಜನಪ್ರೀಯ ವ್ಯಕ್ತಿಗಳ ಅಕೌಂಟ್ ಹ್ಯಾಕ್ ಮಾಡಿ ಪ್ರಭಾವ ಬೀರುವ ಸಾಧ್ಯತೆ ಬಗ್ಗೆ ಅಮೆರಿಕದಲ್ಲಿ ಆತಂಕ ಮೂಡಿಸಿದೆ. ಹಾಗೇನೆ ಸೋಷಿಯಲ್ ಮೀಡಿಯಾಗಳ ಭದ್ರತೆ ಬಗ್ಗೆ ಕೂಡಾ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ.
Tough day for us at Twitter. We all feel terrible this happened.
We’re diagnosing and will share everything we can when we have a more complete understanding of exactly what happened.
? to our teammates working hard to make this right.
— jack (@jack) July 16, 2020