Petrol Diesel Price: ಏಪ್ರಿಲ್ ತಿಂಗಳಿನಿಂದ ಸತತ 18 ದಿನಗಳ ಕಾಲ ಬದಲಾಗದ ಪೆಟ್ರೋಲ್​, ಡೀಸೆಲ್​ ದರ

| Updated By: sandhya thejappa

Updated on: May 03, 2021 | 9:48 AM

Petrol Diesel Rate in Bangalore: ಸತತ 18ನೇ ದಿನಗಳವರೆಗೆ ಪೆಟ್ರೋಲ್​, ಡೀಸೆಲ್​ ದರ ಬದಲಾಗದೆ ಸ್ಥಿರವಾಗಿ ಉಳಿದಿದೆ. ಮಾರ್ಚ್​ ತಿಂಗಳಿನಲ್ಲಿ ಮೂರು ದಿನ ಮತ್ತು ಏಪ್ರಿಲ್​ ತಿಂಗಳಿನಲ್ಲಿ ಒಂದು ದಿನ ಪೆಟ್ರೋಲ್​, ಡೀಸೆಲ್​ ದರವನ್ನು ಕಡಿತಗೊಳಿಸಲಾಗಿತ್ತು.

Petrol Diesel Price: ಏಪ್ರಿಲ್ ತಿಂಗಳಿನಿಂದ ಸತತ 18 ದಿನಗಳ ಕಾಲ ಬದಲಾಗದ ಪೆಟ್ರೋಲ್​, ಡೀಸೆಲ್​ ದರ
ಸಾಂದರ್ಭಿಕ ಚಿತ್ರ
Follow us on

ದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು ಇಂದು ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್​, ಡೀಸೆಲ್​ ದರವನ್ನು ಬಿಡುಗಡೆ ಮಾಡಿದೆ. ಇಂದು ಸೋಮವಾರ ತೈಲ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಸತತ 18ನೇ ದಿನಗಳವರೆಗೆ ಪೆಟ್ರೋಲ್​, ಡೀಸೆಲ್​ ದರ ಬದಲಾಗದೆ ಸ್ಥಿರವಾಗಿ ಉಳಿದಿದೆ. ಮಾರ್ಚ್​ ತಿಂಗಳಿನಲ್ಲಿ ಮೂರು ದಿನ ಮತ್ತು ಏಪ್ರಿಲ್​ ತಿಂಗಳಿನಲ್ಲಿ ಒಂದು ದಿನ ಪೆಟ್ರೋಲ್​, ಡೀಸೆಲ್​ ದರವನ್ನು ಕಡಿತಗೊಳಿಸಲಾಗಿತ್ತು. ಏಪ್ರಿಲ್​ 15ನೇ ತಾರೀಕಿನಂದು ಪ್ರತಿ ಲೀಟರ್​ ಪೆಟ್ರೋಲ್​ ದರದಲ್ಲಿ 16 ಪೈಸೆ ಹಾಗೂ ಪ್ರತಿ ಲೀಟರ್​ ಡೀಸೆಲ್​ ದರದಲ್ಲಿ 14 ಪೈಸೆ ಇಳಿಕೆ ಮಾಡಲಾಯಿತು.

ಕಳೆದ ಫೆಬ್ರವರಿ ತಿಂಗಳಿನಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ದರವನ್ನು ಸತತವಾಗಿ 16 ದಿನಗಳವರೆಗೆ ಹೆಚ್ಚಿಸಲಾಯಿತು. ಸತತ 16 ದಿನಗಳವರೆಗೆ ಏರಿದ ಪೆಟ್ರೋಲ್​ ದರದಲ್ಲಿ 4.74 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್​ ದರದಲ್ಲಿ 4.52 ರೂಪಾಯಿ ಏರಿಕೆ ಮಾಡಲಾಯಿತು. ದರ ಏರಿಕೆಯ ನಂತರದಲ್ಲಿ ರಾಜಸ್ಥಾನದ ಶ್ರೀ ಗಂಗನಗರದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ಗೆ 100.89 ರೂಪಾಯಿ, ಮಧ್ಯಪ್ರದೇಶದ ಅನುಪ್ಪೂರಿನಲ್ಲಿ ಪೆಟ್ರೋಲ್​ ದರ 100.79 ರೂಪಾಯಿ ಆಗಿದೆ.

ದೆಹಲಿಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 90.40 ರೂಪಾಯಿ ಇದೆ. ಅದೇ ರೀತಿ ಪ್ರತಿ ಲೀಟರ್​ ಡೀಸೆಲ್​ ದರ 80.73 ರೂಪಾಯಿ ಇದೆ. ಮುಂಬೈನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 96.83 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ 87.81 ರೂಪಾಯಿ ಇದೆ. ಕೋಲ್ಕತ್ತಾದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 90.62 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ 83.61 ರೂಪಾಯಿ ಇದೆ. ಚೆನ್ನೈನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 92.43 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ 85.75 ರೂಪಾಯಿ ಇದೆ. ನೋಯ್ಡಾದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 88.79 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ 81.19 ರೂಪಾಯಿ ಇದೆ.

ಬೆಂಗಳೂರು ನಗರದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 93.43 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ 85.60 ರೂಪಾಯಿ ಇದೆ. ಹೈದರಾಬಾದ್​ನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 93.99 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ 88.05 ರೂಪಾಯಿ ಆಗಿದೆ. ಪಟ್ನಾದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 92.74 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ 85.97 ರೂಪಾಯಿ ಇದೆ. ಜೈಪುರದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 96.77 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ 89.20 ರೂಪಾಯಿ ಆಗಿದೆ. ಲಕ್ನೊದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 88.72 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ 81.13 ರೂಪಾಯಿ ಆಗಿದೆ.

ಇದನ್ನೂ ಓದಿ: Petrol Diesel Price: ಗ್ರಾಹಕರು ಕೊಂಚ ನಿರಾಳ.. ಪೆಟ್ರೋಲ್ ದರದಲ್ಲಿ 18 ಪೈಸೆ ಇಳಿಕೆ!

(Petrol Diesel Price today on 2021 may 3 in bangalore mumbai delhi chennai )

Published On - 9:18 am, Mon, 3 May 21