Coronavirus India Update: ದೇಶದಲ್ಲಿ 3.68 ಲಕ್ಷ ಹೊಸ ಕೊವಿಡ್ ಪ್ರಕರಣ, 2 ಕೋಟಿ ಸನಿಹಕ್ಕೆ ಸೋಂಕಿತರ ಸಂಖ್ಯೆ
Covid 19 India: ಭಾರತದಲ್ಲಿ ಒಂದೇ ದಿನ 3,68,147 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 1,99,25,604 ಕ್ಕೆ ತಲುಪಿದೆ. 3, 417 ಮಂದಿ ಸಾವಿಗೀಡಾಗಿದ್ದು, ಮರಣ ಸಂಖ್ಯೆ 2,18,959ಕ್ಕೇರಿದೆ.
ದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 3,68,147 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 1,99,25,604 ಕ್ಕೆ ತಲುಪಿದೆ. 3, 417 ಮಂದಿ ಸಾವಿಗೀಡಾಗಿದ್ದು, ಮರಣ ಸಂಖ್ಯೆ 2,18,959ಕ್ಕೇರಿದೆ. ಒಟ್ಟು 16,29,3003 ಮಂದಿ ಚೇತರಿಸಿಕೊಂಡಿದ್ದಾರೆ. 15,71,98,207 ಮಂದಿಗೆ ಕೊವಿಡ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ.
ದೆಹಲಿಯಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ಆಕ್ಸಿಜನ್ ಸಿಗದೆ 12 ಮಂದಿ ಸಾವಿಗೀಡಾದ ಘಟನೆಯನ್ನು ಉಲ್ಲೇಖಿಸಿದ ಸುಪ್ರೀಂಕೋರ್ಟ್ 2021 ಮೇ 3 ಮಧ್ಯರಾತ್ರಿಗಿಂತ ಮುಂಚೆ ಆಕ್ಸಿಜನ್ ಕೊರತೆ ನೀಗಿಸುವ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಗೆ ಹೇಳಿದೆ. ಅದೇ ವೇಳೆ ಹೆಚ್ಚಿನ ಸಂಗ್ರಹ ಇರಿಸಿ ಮುಂದೆ ವೈದ್ಯಕೀಯ ಆಕ್ಸಿಜನ್ಗೆ ಕೊರತೆಯುಂಟಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದೆ. ಕೊವಿಡ್ ಎರಡನೇ ಅಲೆ ಅತೀ ತೀವ್ರವಾಗಿರುವುದರಿಂದ ಜನರ ಆರೋಗ್ಯದ ದೃಷ್ಟಿಯಲ್ಲಿ ಲಾಕ್ಡೌನ್ ಹೇರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಹೇಳಿದೆ. ಪಂಜಾಬ್, ಒಡಿಶಾ ಮತ್ತು ಗೋವಾ ಸೇರಿದಂತೆ ಹಲವು ರಾಜ್ಯಗಳು ಕೊವಿಡ್ ನಿಯಂತ್ರಣಕ್ಕಾಗಿ ಲಾಕ್ಡೌನ್ ಹೇರಿವೆ.
India reports 3,68,147 new #COVID19 cases, 3,00,732 discharges, and 3,417 deaths in the last 24 hours, as per Union Health Ministry
Total cases: 1,99,25,604 Total recoveries: 16,29,3003 Death toll: 2,18,959 Active cases: 34,13,642
Total vaccination: 15,71,98,207 pic.twitter.com/C0UrYU3q44
— ANI (@ANI) May 3, 2021
ತೆಲಂಗಾಣದಲ್ಲಿ 5, 695 ಹೊಸ ಕೊವಿಡ್ ಪ್ರಕರಣ ಕಳೆದ 24 ಗಂಟೆಗಳಲ್ಲಿ ತೆಲಂಗಾಮದಲ್ಲಿ 5, 695 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು 6,206 ಮಂದಿ ಚೇತರಿಸಿದ್ದಾರೆ. 49 ಮಂದಿ ಸಾವಿಗೀಡಾಗಿದ್ದಾರೆ ಎಂದು ಆರೋಗ್ಯಇಲಾಖೆ ಹೇಳಿದೆ
Telangana reported 5,695 new COVID-19 cases, 6,206 recoveries, and 49 deaths yesterday, as State Health Department
Active cases: 80,135 Total discharges: 3,73,933 Death toll: 2,417 pic.twitter.com/hs8Kke34l7
— ANI (@ANI) May 3, 2021
ಮಹಾರಾಷ್ಟ್ರದ ಥಾಣೆಯಲ್ಲಿ 2,774 ಹೊಸ ಕೊವಿಡ್ ಪ್ರಕರಣ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ 2,774 ಹೊಸ ಕೊವಿಡ್ ಪ್ರಕರಣಗಳು ವರದಿ ಆಗಿದ್ದು ಸೋಂಕಿತರ ಸಂಖ್ಯೆ 4,72,794ಕ್ಕೇರಿದೆ. 42 ಮಂದಿ ರೋಗಿಗಳು ಕೊವಿಡ್ ನಿಂದ ಮೃತಪಟ್ಟಿದ್ದು ಸಾವಿನ ಸಂಖ್ಯೆ 7,685ಕ್ಕೇರಿದೆ ಪಾಲ್ಗಾರ್ ಜಿಲ್ಲೆಯಲ್ಲಿ ಕೊವಿಡ್ ಸೋಂಕಿತರ ಸಂಖ್ಯೆ 88,625ಕ್ಕೇರಿದ್ದು ಸಾವಿನ ಸಂಖ್ಯೆ 1,593ಕ್ಕೆ ತಲುಪಿದೆ
Odisha reported 8,914 new COVID-19 cases, 6,527 recoveries, and 5 deaths yesterday
Total cases: 4,71,536 Total recoveries: 3,97,575 Active cases: 71,835 Death toll: 2,073
— ANI (@ANI) May 3, 2021
ಒಡಿಶಾದಲ್ಲಿ 9,000 ಹೊಸ ಪ್ರಕರಣ ಕಳೆದ 24 ಗಂಟೆಗಳಲ್ಲಿ ಒಡಿಶಾದಲ್ಲಿ 8,914 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು 5 ಮಂದಿಸಾವಿಗೀಡಾಗಿದ್ದಾರೆ. 6,527 ಮಂದಿ ಚೇತರಿಸಿಕೊಂಡಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 71,835ಕ್ಕೇರಿದೆ
(Coronavirus India reports 3.68 lakh new Covid19 cases 3417 deaths in last 24 hours)
ಇದನ್ನೂ ಓದಿ: Killer Coronavirus| ಭಾರತದಲ್ಲಿ ಯುದ್ಧಗಳಲ್ಲಿ ಸತ್ತವರಿಗಿಂತ ಹೆಚ್ಚಿನ ಮಂದಿ ಕೊರೊನಾದಿಂದ ಸಾವು
Published On - 10:40 am, Mon, 3 May 21