ದೆಹಲಿ: ಎರಡು ದಿನಗಳ ವಿರಾಮದ ನಂತರ ಇಂದು (ಮೇ 21)) ಪೆಟ್ರೋಲ್ ಮತ್ತು ಡೀಸೆಲ್ ದರ ಮತ್ತೆ ಏರಿಕೆಯಾಗಿದೆ. ಸರ್ಕಾರಿ ತೈಲ ಕಂಪನಿಗಳು ತೈಲ ದರ ಪರಿಷ್ಕರಿಸಿದ ಬಳಿಕ ಪೆಟ್ರೋಲ್ ದರದಲ್ಲಿ 19 ಪೈಸೆ ಮತ್ತು ಲೀಟರ್ ಡೀಸೆಲ್ಗೆ 29 ಪೈಸೆಯಷ್ಟು ಬೆಲೆ ಏರಿಕೆ ಮಾಡಿದೆ. ಮೇ ತಿಂಗಳಿನಲ್ಲಿ ಒಟ್ಟು 11 ಬಾರಿ ತೈಲ ದರವನ್ನು ಏರಿಸಲಾಯಿತು. ಈ ಮೂಲಕ ವಿವಿಧ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಸಾರ್ವಕಾಲಿಕ ಗರಿಷ್ಟ ಮಟ್ಟ ತಲುಪಿದೆ.
ದೆಹಲಿಯಲ್ಲಿ ನಿನ್ನೆ (ಗುರವಾರ) ಲೀಟರ್ ಡೀಸೆಲ್ ದರ 83.51 ರೂಪಾಯಿ ಇತ್ತು. ಇಂದು ಬೆಲೆ ಹೆಚ್ಚಳದ ಬಳಿಕ 83.80 ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ ಲೀಟರ್ ಪೆಟ್ರೋಲ್ ದರ 92.85 ರೂಪಾಯಿಯಿಂದ 93.04 ರೂಪಾಯಿಗೆ ಏರಿಕೆಯಾಗಿದೆ. ಇತ್ತೀಚಿಗಿನ ದರ ಏರಿಕೆಯು ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಲು ಕಾರಣವಾಗಿದೆ ಎಂದು ವಿಶ್ಲೇಷಿಸಬಹುದು. ಮೇ ತಿಂಗಳ ಆರಂಭದಲ್ಲಿ 4 ನೇ ತಾರೀಕಿನಿಂದ ದರ ಹೆಚ್ಚಳವಾಗಲು ಪ್ರಾರಂಭಿಸಿದ ತೈಲ ದರ ಇಂದಿಗೆ ಒಟ್ಟು 11 ಬಾರಿ ಏರಿಕೆ ಆಗಿದೆ. ಲೀಟರ್ ಪೆಟ್ರೋಲ್ ದರದಲ್ಲಿ 2.49 ರೂಪಾಯಿ ಹಾಗೆಯೇ ಲೀಟರ್ ಡೀಸೆಲ್ ದರದಲ್ಲಿ 2.89 ರೂಪಾಯಿಯಷ್ಟು ಹೆಚ್ಚಳವಾಗಿದೆ.
ವಾಣಿಜ್ಯ ನಗರಿ ಮುಂಬೈನಲ್ಲಿ ಇಂಧನ ದರ ಗರಿಷ್ಠ ಮಟ್ಟದಲ್ಲಿದೆ. ಇಂದು ಪೆಟ್ರೋಲ್ದಲ್ಲಿ 18 ಪೈಸೆ ಏರಿಕೆ ಆಗಿದ್ದು ಲೀಟರ್ ಪೆಟ್ರೋಲ್ ದರ 99.32 ರೂಪಾಯಿ ದಾಖಲಾಗಿದೆ. ಇನ್ನೇನು ಕೆಲ ಪೈಸೆಗಳಷ್ಟು ಏರಿಕೆ ಆದರೆ ಶತಕ ಬಾರಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಅದೇ ರೀತಿ ಡೀಸೆಲ್ ದರದಲ್ಲಿ 30 ಪೈಸೆ ಹೆಚ್ಚಳದ ಬಳಿಕ ಲೀಟರ್ ಡೀಸೆಲ್ ಬೆಲೆ 91.01 ರೂಪಾಯಿ ಆಗಿದೆ. ಇನ್ನು, ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ರಾಜಸ್ಥಾನದ ಕೆಲ ನಗರಗಳು ಪೆಟ್ರೋಲ್ ದರದಲ್ಲಿ 100ರ ಗಡಿ ದಾಟಿದೆ. ಇನ್ನು ಬೆಂಗಳೂರು ನಗರದಲ್ಲಿ ಪೆಟ್ರೋಲ್ ದರದಲ್ಲಿ 20 ಪೈಸೆ ಏರಿಕೆಯ ಬಳಿಕ ಲೀಟರ್ಗೆ 96.14 ರೂಪಾಯಿಗೆ ಹೆಚ್ಚಳವಾಗಿದೆ. ಹಾಗೆಯೇ ಡೀಸೆಲ್ ದರದಲ್ಲಿ 31 ಪೈಸೆ ಹೆಚ್ಚಳದ ನಂತರ 88.84 ರೂಪಾಯಿಗೆ ಏರಿಕೆಯಾಗಿದೆ.
ಗುರುವಾರಕ್ಕಿಂತ 19 ಪೈಸೆ ಏರಿಕೆಯಾದ ಬಳಿಕ ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ದರ 93.11 ರೂಪಾಯಿ ಆಗಿದೆ. ಲೀಟರ್ ಡೀಸೆಲ್ ದರ 86.64 ರೂಪಾಯಿಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಪೆಟ್ರೋಲ್ ದರದಲ್ಲಿ 17 ಪೈಸೆ ಏರಿಕೆ ಮಾಡಲಾಗಿದ್ದು ಇಂದಿನ ಬೆಲೆ 94.71 ರೂಪಾಯಿ ಆಗಿದೆ. ಡೀಸೆಲ್ ದರದಲ್ಲಿ 28 ಪೈಸೆ ಹೆಚ್ಚಿಸಲಾಗಿದ್ದು 88.62 ರೂಪಾಯಿಗೆ ಹೆಚ್ಚಳವಾಗಿದೆ.
ಇದನ್ನೂ ಓದಿ:
ವಿವಿಧ ನಗರದಲ್ಲಿ ಪೆಟ್ರೋಲ್ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ:
https://tv9kannada.com/business/petrol-price-today.html
ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ:
https://tv9kannada.com/business/diesel-price-today.html
Published On - 8:43 am, Fri, 21 May 21