ಮದುವೆಗೆ ಹೋದವರಿಗೆ ಫುಲ್​ ಶಾಕ್​ ಕೊಟ್ಟ ಪೊಲೀಸರು; ಕಪ್ಪೆಯಂತೆ ಜಿಗಿಯುತ್ತ ವಾಪಸ್​ ಬಂದ ಅತಿಥಿಗಳು

ಮದುವೆ ಮನೆಯಲ್ಲಿ ಪೊಲೀಸರನ್ನು ನೋಡುತ್ತಿದ್ದಂತೆ ಅನೇಕರು ತಪ್ಪಿಸಿಕೊಂಡು ಓಡಿದರೂ, ಮತ್ತೊಂದಷ್ಟು ಮಂದಿ ಸಿಕ್ಕಿಬಿದ್ದರು. ಹೀಗೆ ಸಿಕ್ಕಿಬಿದ್ದವರಿಗೆ ಪೊಲೀಸರು ವಿಭಿನ್ನವಾದ ಶಿಕ್ಷೆ ನೀಡಿದ್ದಾರೆ.

ಮದುವೆಗೆ ಹೋದವರಿಗೆ ಫುಲ್​ ಶಾಕ್​ ಕೊಟ್ಟ ಪೊಲೀಸರು; ಕಪ್ಪೆಯಂತೆ ಜಿಗಿಯುತ್ತ ವಾಪಸ್​ ಬಂದ ಅತಿಥಿಗಳು
ಲಾಕ್​ಡೌನ್ ನಿಯಮ ಮೀರಿದವರಿಗೆ ಕಪ್ಪೆ ಜಿಗಿತದ ಶಿಕ್ಷೆ
Follow us
Lakshmi Hegde
|

Updated on:May 20, 2021 | 11:06 PM

ಮದುವೆ ಮನೆಗೆ ಖುಷಿಯಿಂದ ಹೋದ ಅತಿಥಿಗಳಿಗೆ ಪೊಲೀಸರು ಫುಲ್ ಶಾಕ್​ ಕೊಟ್ಟ ಘಟನೆ ಮಧ್ಯಪ್ರದೇಶದ ಭಿಂಡ್​ನಲ್ಲಿ ನಡೆದಿದೆ. ಬಹುಶಃ ಮದುವೆಗೆ ಬರುವಾಗ ಈ ಅತಿಥಿಗಳು ಕಲ್ಪನೆಯನ್ನೂ ಮಾಡಿರಲಿಲ್ಲ ನಮಗೆ ಇಂಥದ್ದೊಂದು ಸ್ಥಿತಿ ಬರಬಹುದು ಎಂದು..! ಮತ್ತೇನಲ್ಲ ಕೊವಿಡ್​ 19 ಕಠಿಣ ನಿಯಮ ಜಾರಿಯಲ್ಲಿದ್ದರೂ, ಅದನ್ನೆಲ್ಲ ಮೀರಿ ಮದುವೆಯಲ್ಲಿ ಗುಂಪುಗೂಡಿದ್ದವರಲ್ಲಿ ಹಲವರಿಗೆ ಪೊಲೀಸರು ಕಪ್ಪೆ ಜಿಗಿತದ ಶಿಕ್ಷೆ ನೀಡಿದ್ದಾರೆ. ಇದರ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿವೆ.

ಮಧ್ಯಪ್ರದೇಶದ ಉಮಾರಿ ಎಂಬ ಹಳ್ಳಿಯಲ್ಲಿ ಮದುವೆ ನಡೆಯುತ್ತಿತ್ತು. ಈ ವಿವಾಹದಲ್ಲಿ ಸುಮಾರು 300 ಮಂದಿ ಸೇರಿದ್ದರು. ಈಗ ಯಾವುದೇ ಮದುವೆ, ಶುಭಸಮಾರಂಭ ನಡೆಯಬೇಕೆಂದರೂ ಜಿಲ್ಲಾಡಳಿತದ ಅನುಮತಿ ಬೇಕು. ಹಾಗಾಗಿ ಸಹಜವಾಗಿಯೇ ಜಿಲ್ಲಾಡಳಿತ, ಪೊಲೀಸರು ಒಂದು ಗಮನ ಇಟ್ಟಿರುತ್ತಾರೆ. ಅಂತೆಯೇ ಇಲ್ಲಿಯೂ ಸಹ ಕೊರೊನಾ ಲಾಕ್​ಡೌನ್​ ನಿಯಮ ಪಾಲನೆಯಾಗಿದೆಯೇ ಎಂದು ಪರಿಶೀಲನೆ ನಡೆಸಲು ಪೊಲೀಸರು ಬಂದಿದ್ದರು. ಪೊಲೀಸರು ಸ್ಥಳಕ್ಕೆ ಬಂದಾಗ ಅಲ್ಲಿ 300ಕ್ಕೂ ಹೆಚ್ಚು ಮಂದಿ ಸೇರಿದ್ದು ಕಂಡುಬಂತು.

ಮದುವೆ ಮನೆಯಲ್ಲಿ ಪೊಲೀಸರನ್ನು ನೋಡುತ್ತಿದ್ದಂತೆ ಅನೇಕರು ತಪ್ಪಿಸಿಕೊಂಡು ಓಡಿದರೂ, ಮತ್ತೊಂದಷ್ಟು ಮಂದಿ ಸಿಕ್ಕಿಬಿದ್ದರು. ಹೀಗೆ ಸಿಕ್ಕಿಬಿದ್ದವರಿಗೆ ಪೊಲೀಸರು ವಿಭಿನ್ನವಾದ ಶಿಕ್ಷೆ ನೀಡಿದ್ದಾರೆ. ರಸ್ತೆಯಲ್ಲಿ ಕಪ್ಪೆಯಂತೆ ಜಿಗಿಯುತ್ತ ಹೋಗಬೇಕು ಎಂದು ತಾಕೀತು ಮಾಡಿದ ಹಿನ್ನೆಲೆಯಲ್ಲಿ ಸುಮಾರು 17 ಪುರುಷರು ಹೀಗೆ ಕಪ್ಪೆ ಓಟ ನಡೆಸಿದ ಫೋಟೋ ವೈರಲ್ ಆಗಿದೆ. ಅಲ್ಲದೆ, ಸರಿಯಾಗಿ ಜಿಗಿಯದವರಿಗೆ ಪೊಲೀಸರು ಲಾಠಿಯೇಟು ಕೊಟ್ಟಿದ್ದನ್ನೂ ವಿಡಿಯೋದಲ್ಲಿ ನೋಡಬಹುದು. ಈ ಶಿಕ್ಷೆ ನೀಡಿದ ಬಳಿಕ ಅವರಿಗೆ ಎಚ್ಚರಿಕೆ ಕೊಟ್ಟು ಕಳಿಸಿದ್ದಾರೆ. ಲಾಕ್​ಡೌನ್ ನಿಯಮಗಳನ್ನು ಮೀರಿದರೆ ಕಠಿಣ ಶಿಕ್ಷೆ ನೀಡುವುದಾಗಿಯೂ ಪೊಲೀಸರು ಅವರಿಗೆ ಹೇಳಿ ಕಳಿಸಿದ್ದಾರೆ.

ಮಧ್ಯಪ್ರದೇಶದಲ್ಲಿ 7 ಲಕ್ಷಕ್ಕೂ ಅಧಿಕ ಕೊರೊನಾ ಕೇಸ್​​ಗಳಿದ್ದು, ಕಳೆದ 24 ಗಂಟೆಯಲ್ಲಿ 5,065 ಪ್ರಕರಣಗಳು ದಾಖಲಾಗಿವೆ. ಇಲ್ಲಿಯವರೆಗೆ ಆ ರಾಜ್ಯದಲ್ಲಿ 7227 ಮಂದಿ ಮೃತಪಟ್ಟಿದ್ದಾರೆ. ಕೊರೊನಾ ಸೋಂಕಿನ ತೀವ್ರತೆ ಕಡಿಮೆ ಮಾಡಲು ಲಾಕ್​ಡೌನ್​ನಂತಹ ಕಠಿಣ ನಿಯಮಗಳನ್ನು ಜಾರಿ ಮಾಡಲಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ 100ಕ್ಕೂ ಹೆಚ್ಚು ಬ್ಲ್ಯಾಕ್​ ಫಂಗಸ್​ ಪ್ರಕರಣಗಳು ಇವೆ..ಸಾವಿನ ವರದಿಯಾಗಿಲ್ಲ: ಡಿಸಿಎಂ ಅಶ್ವತ್ಥ ನಾರಾಯಣ್​

(Guests attending a wedding made to do frog jumps by the police for violation of Covid  restriction In Madhya Pradesh)

Published On - 10:56 pm, Thu, 20 May 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ