
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಸತತವಾಗಿ ಇಂಧನದ ಬೆಲೆ ಏರಿಕೆಯತ್ತ ಸಾಗುತ್ತಲೇ ಇದೆ. ಇದೀಗ ಇಂದು (ಗುರವಾರ) ರಾಜಸ್ಥಾನದ ಶ್ರೀಗಂಗನಗರದಲ್ಲಿ ಪೆಟ್ರೋಲ್ ದರ ಶತಕ ಬಾರಿಸಿದ್ದು, ಪ್ರತಿ ಲೀ. ಪೆಟ್ರೋಲ್ ಬೆಲೆ 25 ಪೈಸೆ ಹೆಚ್ಚಳದೊಂದಿಗೆ ದರ ₹100.13 ಆಗಿದೆ. ಡೀಸೆಲ್ ದರ ₹ 92.13 ಆಗಿದ್ದು, ಡೀಸೆಲ್ ಕೂಡಾ ಶತಕ ಭಾರಿಸುವ ಹಾದಿಯಲ್ಲಿ ಸಾಗುತ್ತಿದೆ.
ಕಳೆದ ತಿಂಗಳು ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಇಂಧನಗಳಲ್ಲಿ ಶೇ.2ರಷ್ಟು ಕಡಿತಗೊಳಿಸಿದ್ದರೂ ಕೂಡಾ ರಾಜಸ್ಥಾನ ಅತಿ ಹೆಚ್ಚು ವ್ಯಾಟ್ ದರವನ್ನು ಹೊಂದಿದೆ. ಉತ್ತರ ರಾಜಸ್ಥಾನದಲ್ಲಿರುವ ಶ್ರೀಗಂಗನಗರಕ್ಕೆ ಜೋದ್ಪುರ್ ಮತ್ತು ಜೈಪುರ ಡಿಪೋಗಳಿಂದ ಇಂಧನವನ್ನು ಪೂರೈಸಲಾಗುತ್ತಿದ್ದು, ಇಂದು ರಾಜಸ್ಥಾನ ಪೆಟ್ರೋಲ್ ದರದಲ್ಲಿ ಶತಕ ಭಾರಿಸಿ ಗರಿಷ್ಠ ಮಟ್ಟ ತಲುಪಿದೆ.
ಇದನ್ನೂ ಓದಿ: Petrol Price Today: ಸತತ 9ನೇ ದಿನ ಪೆಟ್ರೋಲ್ ದರ ಏರಿಕೆ.. 25 ಪೈಸೆ ಹೆಚ್ಚಳ!
ಭಾರತದಲ್ಲಿ ಗುರವಾರವೂ ಕೂಡಾ ಇಂಧನದ ದರ ಹೆಚ್ಚಳವಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ 34 ಪೈಸೆ ಹೆಚ್ಚಳವಾಗಿದೆ. ಇದೀಗ ಪ್ರತಿ ಲೀ.ಗೆ ₹89.88 ಹಾಗೂ ಡೀಸೆಲ್ ದರದಲ್ಲಿ 32 ಪೈಸೆ ಹೆಚ್ಚಳವಾಗಿದ್ದು ಇದೀಗ ₹80.27 ಆಗಿದೆ. ಬೆಂಗಳೂರಿನಲ್ಲೂ ಕೂಡಾ ಅದೆಷ್ಟೋ ಪ್ರತಿಭಟನೆ, ಧರಣಿ ನಡೆದಿದ್ದರೂ ಕೂಡಾ ಯಾವುದಕ್ಕೂ ಕ್ಯಾರೇ ಅನ್ನದೇ ದರ ಏರಿಕೆಯತ್ತ ಓಡುತ್ತಿದೆ. ಇದೀಗ ಪೆಟ್ರೋಲ್ ಬೆಲೆ ಪ್ರತಿ ಲೀ.ಗೆ ₹92.54 ಹಾಗೂ ಡೀಸೆಲ್ ₹85.07 ಇದೆ.
Published On - 9:39 am, Thu, 18 February 21