Petrol Price Today: ಮೇ ತಿಂಗಳಿನಲ್ಲಿ ಸತತವಾಗಿ 3ನೇ ದಿನವೂ ಪೆಟ್ರೋಲ್​, ಡೀಸೆಲ್​ ದರ ಹೆಚ್ಚಳ

|

Updated on: May 06, 2021 | 8:48 AM

Petrol Diesel Price in Bangalore: ಇಂದು ಬೆಂಗಳೂರು ನಗರದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 94.01 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್​ ಬೆಲೆ 86.31 ರೂಪಾಯಿ ಆಗಿದೆ. ದೆಹಲಿಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರದಲ್ಲಿ 25 ಪೈಸೆ ಹಾಗೂ ಪ್ರತಿ ಲೀಟರ್​ ಡೀಸೆಲ್​ ದರದಲ್ಲಿ 30 ಪೈಸೆ ಏರಿಕೆಯಾಗಿದೆ.

Petrol Price Today: ಮೇ ತಿಂಗಳಿನಲ್ಲಿ ಸತತವಾಗಿ 3ನೇ ದಿನವೂ ಪೆಟ್ರೋಲ್​, ಡೀಸೆಲ್​ ದರ ಹೆಚ್ಚಳ
ಸಾಂದರ್ಭಿಕ ಚಿತ್ರ
Follow us on

ದೆಹಲಿ: ಪೆಟ್ರೋಲ್​ ಮತ್ತು ಡೀಸೆಲ್​ ದರ ಸತತ 3ನೇ ದಿನ ಏರಿಕೆಯಾಗಿದೆ. ಇಂದು ಪ್ರತಿ ಲೀಟರ್​ ಪೆಟ್ರೋಲ್​ ದರದಲ್ಲಿ 25 ಪೈಸೆ ಹಾಗೂ ಪ್ರತಿ ಲೀಟರ್​ ಡೀಸೆಲ್​ ದರದಲ್ಲಿ 30 ಪೈಸೆ ಏರಿಕೆಯಾಗಿದೆ. ಅದಾದ ನಂತರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 90.99 ರೂಪಾಯಿಯಷ್ಟಾಗಿದೆ. ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ 81.42ರೂಪಾಯಿಯಷ್ಟಾಗಿದೆ.

ನಿನ್ನೆ ಬುಧವಾರವೂ ಕೂಡಾ ಪೆಟ್ರೋಲ್​, ಡೀಸೆಲ್​ ದರ ಏರಿಕೆಯಾಗಿತ್ತು. ಪ್ರತಿ ಲೀಟರ್​ ಪೆಟ್ರೋಲ್​ ದರದಲ್ಲಿ 22 ಪೈಸೆ ಹಾಗೂ ಪ್ರತಿ ಲೀಟರ್​ ಡೀಸೆಲ್​ ದರದಲ್ಲಿ 39 ಪೈಸೆ ಏರಿಕೆಯಾಗಿ ದೆಹಲಿಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 90.74 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ 81.12 ರೂಪಾಯಿ ಆಗಿತ್ತು. ಇಂದು ಗುರವಾರವೂ ದರ ಏರಿಕೆಯ ನಂತರ ಪ್ರತಿ ಲೀಟರ್​ ಪೆಟ್ರೋಲ್​ ದರ 90.99 ರೂಪಾಯಿಗೆ ಏರಿಕೆಯಾಗಿದೆ.

ದರ ಏರಿಕೆಯ ನಂತರದಲ್ಲಿ ಮೆಟ್ರೋ ನಗರಗಳಲ್ಲಿ ಪೆಟ್ರೋಲ್​, ಡೀಸೆಲ್​ ದರ ಎಷ್ಟಾಗಿದೆ ಎಂಬುದನ್ನು ಗಮನಿಸೋಣ. ಮುಂಬೈನಲ್ಲಿ ದರ ಏರಿಕೆಯ ಬಳಿಕ ನಿನ್ನೆ ಪ್ರತಿ ಲೀಟರ್​ ಪೆಟ್ರೋಲ್​ ದರ 97.20 ರೂಪಾಯಿ ಇತ್ತು. ಇಂದೂ ತೈಲ ದರ ಏರಿಕೆಯ ನಂತರದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 97.34 ರೂಪಾಯಿ ಆಗಿದೆ. ಅದೇ ರೀತಿ ಪ್ರತಿ ಲೀಟರ್​ ಡೀಸೆಲ್​ ದರ ನಿನ್ನೆ 88.19 ರೂಪಾಯಿ ಇದ್ದು ಇಂದು 88.49 ರೂಪಾಯಿಗೆ ಏರಿಕೆಯಾಗಿದೆ.

ಕೋಲ್ಕತ್ತಾದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ ನಿನ್ನೆ 90.92 ರೂಪಾಯಿಗೆ ಏರಿಕೆಯಾಗಿದ್ದು, ಇಂದೂ ಕೂಡಾ ತೈಲ ಬೆಲೆ ಏರಿಕೆ ಕಂಡಿದ್ದರಿಂದ ಪ್ರತಿ ಲೀಟರ್​ ಪೆಟ್ರೋಲ್​ ದರ 91.14 ರೂಪಾಯಿಗೆ ಏರಿದೆ. ಅದೇ ರೀತಿ ಪ್ರತಿ ಲೀಟರ್​ ಡೀಸೆಲ್​ ದರ 83.98 ರೂಪಾಯಿಯಿಂದ 84.26 ರೂಪಾಯಿಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ ನಿನ್ನೆ 92.70 ರೂಪಾಯಿಗೆ ಏರಿಕೆಯಾಗಿತ್ತು. ಇಂದು ಮತ್ತೆ ದರ ಏರಿಕೆ ಕಂಡಿದ್ದರಿಂದ 92.90 ರೂಪಾಯಿಗೆ ಏರಿಕೆಯಾಗಿದೆ. ಪ್ರತಿ ಲೀಟರ್​ ಡೀಸೆಲ್​ ದರವೂ ಸಹ 86.09ರಿಂದ 86.35 ರೂಪಾಯಿಗೆ ಏರಿಕೆಯಾಗಿದೆ.

ಪಂಚ ರಾಜ್ಯಗಳ ಚುಣಾವಣಾ ಫಲಿತಾಂಶದ ಬಳಿಕ ಪೆಟ್ರೋಲ್​ನಲ್ಲಿ 2 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್​ ಬೆಲೆಯಲ್ಲಿ 3 ರೂಪಾಯಿ ಏರಿಕೆ ಕಾಣುತ್ತದೆ ಎಂಬ ಮಾಹಿತಿಗಳು ತಿಳಿದು ಬಂದಿದ್ದವು. ಇದಕ್ಕಿಂತಲೂ ಹೆಚ್ಚು ದರ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಬೆಂಗಳೂರಿನಲ್ಲಿ ನಿನ್ನೆ ದರ ಏರಿಕೆಯ ನಂತರ ಪ್ರತಿ ಲೀಟರ್​ ಪೆಟ್ರೋಲ್​ ದರ 93.77 ರೂಪಾಯಿಗೆ ಏರಿಕೆಯಾಗಿತ್ತು. ಅದೇ ರೀತಿ ಪ್ರತಿ ಲೀಟರ್​ ಡೀಸೆಲ್​ ದರ 86.01 ರೂಪಾಯಿಗೆ ಏರಿಕೆಯಾಗಿತ್ತು. ಬೆಂಗಳೂರು ನಗರದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 94.01 ರೂಪಾಯಿ ಆಗಿದೆ. ಪ್ರತಿ ಲೀಟರ್​ ಡೀಸೆಲ್​ ಬೆಲೆ 86.31 ರೂಪಾಯಿ ಆಗಿದೆ.

ವಿವಿಧ ನಗರದಲ್ಲಿ ಪೆಟ್ರೋಲ್​ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ:

https://tv9kannada.com/business/petrol-price-today.html

ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ:
https://tv9kannada.com/business/diesel-price-today.html