ಬೆಂಗಳೂರು: ಇಂದು ಭಾನುವಾರ ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಕಳೆದ ಐದು ದಿಗಳಿಂದ ಇಂಧನ ದರ ಸ್ಥಿರತೆಯನ್ನು ಕಾಪಾಡಿಕೊಂಡಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 90.56 ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ ದರ 80.87 ರೂಪಾಯಿ ಇದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕುಸಿತ ಕಂಡಿರುವುದರಿಂದ ಇಂಧನ ದರ ಇಳಿಕೆಯತ್ತ ಸಾಗಿತ್ತು. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 93.59 ರೂಪಾಯಿಗೆ ಮಾರಾಟವಾಗುತ್ತಿದ್ದು, ಪ್ರತಿ ಲೀಟರ್ ಡೀಸೆಲ್ಅನ್ನು ಗ್ರಾಹಕರು 85.75 ರೂಪಾಯಿಗೆ ಕೊಳ್ಳುತ್ತಿದ್ದಾರೆ.
ಮಾರ್ಚ್ ತಿಂಗಳಿನಲ್ಲಿ ಒಟ್ಟು ಪೆಟ್ರೋಲ್, ಡೀಸೆಲ್ ದರವನ್ನು ಮೂರು ಬಾರಿ ಕಡಿತಗೊಳಿಸಲಾಗಿದೆ. ಮಾರ್ಚ್ 24ರಂದು ಪೆಟ್ರೋಲ್ ದರವನ್ನು 18 ಪೈಸೆ ಮತ್ತು ಡೀಸೆಲ್ಅನ್ನು 17 ಪೈಸೆ ಕಡಿತಗೊಳಿಸಲಾಗಿದೆ. ಮಾರ್ಚ್ 25ರಂದು ಡೀಸೆಲ್ 20 ಪೈಸೆ ಮತ್ತು ಪೆಟ್ರೋಲ್ 21 ಪೈಸೆ ಕಡಿತಗೊಳಿಸಲಾಗಿತ್ತು. ತದನಂತರ ಮಾರ್ಚ್ 30ರ ಮಂಗಳವಾರ ಪೆಟ್ರೋಲ್ ದರವನ್ನು 22 ಪೈಸೆ ಮತ್ತು ಡೀಸೆಲ್ ದರವನ್ನು 23 ಪೈಸೆಗಳಷ್ಟು ಇಳಿಕೆ ಮಾಡಲಾಯಿತು. ಒಟ್ಟು ಮಾರ್ಚ್ ತಿಂಗಳಲ್ಲಿ ಪೆಟ್ರೋಲ್ಅನ್ನು 61 ಪೈಸೆ ಕಡಿತಗೊಳಿಸಲಾಗಿದೆ.
ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 90.56 ರೂಪಾಯಿ ಇದೆ ಹಾಗೂ ಪ್ರತಿ ಲೀಟರ್ ಡೀಸೆಲ್ ದರ 87.96 ರೂಪಾಯಿ ಇದೆ. ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 92.58 ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ ದರ 85.88 ರೂಪಾಯಿ ಇದೆ. ಕೊಲ್ಕತ್ತಾದಲ್ಲಿ ಪ್ರತಿ ಲೀಟರ್ಪೆಟ್ರೋಲ್ 90.77 ರೂಪಾಯಿಗೆ ಮಾರಾಟವಾಗುತ್ತಿದ್ದು, ಪ್ರತಿ ಲೀಟರ್ ಡೀಸೆಲ್ ದರ 83.75 ರೂಪಾಯಿ ಇದೆ.
ಭೂಪಾಲ್ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 98.58 ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ 89.13 ರೂಪಾಯಿ ಇದೆ. ಚಂಡೀಗಢದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 87.14 ರೂಪಾಯಿ ಇದ್ದು, ಪ್ರತಿ ಲೀಟರ್ ಡೀಸೆಲ್ ದರ 89.13 ರೂಪಾಯಿ ಇದೆ. ಪಾಟ್ನಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 92.89 ರೂಪಾಯಿ ಇದ್ದು, ಪ್ರತಿ ಲೀಟರ್ ಡೀಸೆಲ್ ದರ 86.12 ರೂಪಾಯಿ ಇದೆ. ಲಕ್ನೋದಲ್ಲಿ ಪ್ರತಿ ಲಿಟರ್ ಪೆಟ್ರೋಲ್ 88.85 ರೂಪಾಯಿಗೆ ಮಾರಾಟವಾಗುತ್ತಿದ್ದು, ಪ್ರತಿ ಲೀಟರ್ ಡೀಸೆಲ್ಅನ್ನು ಗ್ರಾಹಕರು 81.27 ರೂಪಾಯಿಗೆ ಕೊಳ್ಳುತ್ತಿದ್ದಾರೆ.
ವಿವಿಧ ನಗರದ ಪೆಟ್ರೋಲ್ ದರ ಎಷ್ಟಿದೆ ಎಂಬ ಕುತೂಹಲವಿದ್ದರೆ ದರದ ಮಾಹಿತಿ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ:
https://tv9kannada.com/business/petrol-price-today.html
ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ:
https://tv9kannada.com/business/diesel-price-today.html
(Petrol Price Today in Bangalore Delhi Mumbai and Chennai Diesel price on 4th April 2021)