LPG Cylinder Price: ಮತ್ತೆ ಬೆಲೆ ಏರಿಕೆ ಬರೆ, ಎಲ್​ಪಿಜಿ ಅಡುಗೆ ಸಿಲಿಂಡರ್ ಬೆಲೆ ಮತ್ತೆ 15 ರೂ. ಹೆಚ್ಚಳ

| Updated By: ಆಯೇಷಾ ಬಾನು

Updated on: Oct 06, 2021 | 10:15 AM

ಎಲ್ಪಿಜಿ ಅಡುಗೆ ಸಿಲಿಂಡರ್ ಬೆಲೆ ಮತ್ತೆ 15 ರೂ. ಹೆಚ್ಚಳವಾಗಿದೆ. ದೇಶಾದ್ಯಂತ ಇಂದಿನಿಂದಲೇ ಹೊಸ ದರ ಜಾರಿಯಾಗಲಿದೆ. ಬೆಲೆ ಏರಿಕೆ ಬಳಿಕ ಕರ್ನಾಟಕದಲ್ಲಿ ಸಿಲಿಂಡರ್ ದರ ₹902.5 ರೂ ಆಗಲಿದ್ದು ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್ ದರ 899.50 ರೂ. ಇರಲಿದೆ.

LPG Cylinder Price: ಮತ್ತೆ ಬೆಲೆ ಏರಿಕೆ ಬರೆ, ಎಲ್​ಪಿಜಿ ಅಡುಗೆ ಸಿಲಿಂಡರ್ ಬೆಲೆ ಮತ್ತೆ 15 ರೂ. ಹೆಚ್ಚಳ
ಸಾಂದರ್ಭಿಕ ಚಿತ್ರ
Follow us on

ದೆಹಲಿ: ಅಕ್ಟೋಬರ್ ಮೊದಲ ದಿನವೇ ಪೆಟ್ರೋಲಿಯಂ ಕಂಪನಿಗಳು ಅನಿಲದ ಬೆಲೆಯನ್ನು ಹೆಚ್ಚಿಸಿದ್ದವು. ವಾಣಿಜ್ಯ ಸಿಲಿಂಡರ್​ಗಳ(Commercial Cylinder) ಬೆಲೆಯನ್ನು 43.5 ರೂಪಾಯಿಗಳಷ್ಟು ಏರಿಕೆ ಮಾಡಿದ್ದವು. ಆದ್ರೆ ಈಗ ಗ್ರಾಹಕರಿಗೆ ಎಲ್‌ಪಿಜಿ ಅಡುಗೆ ಸಿಲಿಂಡರ್ ದರ ಏರಿಕೆ ಶಾಕ್ ಕೊಟ್ಟಿದೆ. ಮತ್ತೆ ಎಲ್​ಪಿಜಿ ಅಡುಗೆ ಸಿಲಿಂಡರ್( Domestic LPG Cylinders) ಬೆಲೆ ಮತ್ತೆ 15 ರೂ. ಹೆಚ್ಚಳವಾಗಿದೆ. ದೇಶಾದ್ಯಂತ ಇಂದಿನಿಂದಲೇ ಹೊಸ ದರ ಜಾರಿಯಾಗಲಿದೆ.

ಬೆಲೆ ಏರಿಕೆ ಬಳಿಕ ಕರ್ನಾಟಕದಲ್ಲಿ ಸಿಲಿಂಡರ್ ದರ ₹902.5 ರೂ ಆಗಲಿದ್ದು ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್ ದರ 899.50 ರೂ. ಇರಲಿದೆ.

ಕಳೆದ ಎರಡು ತಿಂಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಇದು ಸತತ ನಾಲ್ಕನೇ ಬಾರಿ ಹೆಚ್ಚಳ ಕಂಡಿದೆ. ಜನವರಿ 1 ರಿಂದ ಅಡುಗೆ ಅನಿಲ ಬೆಲೆ 205 ರೂನಷ್ಟು ಏರಿಕೆ ಕಂಡಿದೆ. ಸದ್ಯ ಈಗ ದೆಹಲಿಯಲ್ಲಿ 14.5 ಕೆಜಿ ಸಿಲಿಂಡರ್ ಬೆಲೆ 899.50 ರೂ ಮುಂಬೈನಲ್ಲೂ 899.50 ರೂ, ಕೊಲ್ಕತ್ತಾದಲ್ಲಿ 926 ರೂ ಆಗಿದೆ. ಚೆನ್ನೈನಲ್ಲಿ 14.5 ಕೆಜಿ ಅಡುಗೆ ಅನಿಲದ ಬೆಲೆ 915.50 ರೂ. ಇದೆ. ಹೊಸ ದರ ದೇಶಾದ್ಯಂತ ಇಂದಿನಿಂದಲೇ ಜಾರಿಯಾಗಲಿದೆ ಎಂದು ಭಾರತೀಯ ತೈಲ ನಿಗಮ, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಘೋಷಿಸಿದೆ.

LPG ಗ್ಯಾಸ್ ಸಿಲಿಂಡರ್ ಬೆಲೆಯನ್ನು ಆಮದು ಸಮಾನತೆಯ ಬೆಲೆ (IPP) ಆಧರಿಸಿ ಲೆಕ್ಕ ಹಾಕಲಾಗುತ್ತದೆ. ಐಪಿಪಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್‌ಪಿಜಿ ಬೆಲೆಯನ್ನು ಆಧರಿಸಿರುವುದರಿಂದ ದೇಶವು ಇಂಧನವನ್ನು ಆಮದು ಮಾಡಿಕೊಳ್ಳುತ್ತದೆ. ಸೌದಿ ಅರಾಮ್ಕೊದ LPG ಬೆಲೆ, FOB (ಬೋರ್ಡ್ ಆನ್ ಬೋರ್ಡ್) ಬೆಲೆ, ಸಾಗರ ಸರಕು, ವಿಮೆ, ಕಸ್ಟಮ್ಸ್ ಸುಂಕಗಳು, ಬಂದರು ಇತ್ಯಾದಿಗಳನ್ನು ಒಳಗೊಂಡಿದೆ. ನಂತರ ಬೆಲೆಯನ್ನು ರೂಪಾಯಿಗೆ ಪರಿವರ್ತಿಸಲಾಗುತ್ತದೆ. ಅದರ ಮೇಲೆ, ಜಿಎಸ್‌ಟಿ, ಅಬಕಾರಿ ಸುಂಕ, ಸರಕು ಶುಲ್ಕಗಳನ್ನು ಹಾಕಲಾಗುತ್ತೆ. ಈ ಆಧಾರದ ಮೇಲೆ ಅಡುಗೆ ಅನಿಲದ ಬೆಲೆಯನ್ನು ಭಾರತದಲ್ಲಿ ಪ್ರತಿ ತಿಂಗಳು ಮರುಹೊಂದಿಸಲಾಗುತ್ತದೆ. LPG ಸಿಲಿಂಡರ್ ಬೆಲೆಗಳು ಪೆಟ್ರೋಲ್ ಮತ್ತು ಡೀಸೆಲ್ ನಂತೆಯೇ ರಾಜ್ಯವಾರು ತೆರಿಗೆಗಳನ್ನು ಅವಲಂಬಿಸಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಬದಲಾಗುತ್ತವೆ.

ಇದನ್ನೂ ಓದಿ: How To Get LPG Cylinder New Connection: ಒಂದು ಮಿಸ್ಡ್​ ಕಾಲ್​ನಲ್ಲಿ ಪಡೆಯಬಹುದು ಎಲ್​ಪಿಜಿ ಹೊಸ ಸಂಪರ್ಕ

Published On - 9:36 am, Wed, 6 October 21