AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

How To Get LPG Cylinder New Connection: ಒಂದು ಮಿಸ್ಡ್​ ಕಾಲ್​ನಲ್ಲಿ ಪಡೆಯಬಹುದು ಎಲ್​ಪಿಜಿ ಹೊಸ ಸಂಪರ್ಕ

ಮಿಸ್ಡ್ ಕಾಲ್ ನೀಡುವ ಮೂಲಕ ಹೊಸದಾಗಿ ಎಲ್​ಪಿಜಿ ಸಂಪರ್ಕ ಪಡೆಯುವುದು ಹೇಗೆ ಎಂಬುದರ ಬಗ್ಗೆ ಹಂತಹಂತವಾದ ವಿವರ ಇಲ್ಲಿದೆ.

How To Get LPG Cylinder New Connection: ಒಂದು ಮಿಸ್ಡ್​ ಕಾಲ್​ನಲ್ಲಿ ಪಡೆಯಬಹುದು ಎಲ್​ಪಿಜಿ ಹೊಸ ಸಂಪರ್ಕ
ಎಲ್​ಪಿಜಿ
Follow us
TV9 Web
| Updated By: Srinivas Mata

Updated on: Sep 07, 2021 | 7:27 PM

ಹೊಸ LPG ಸಂಪರ್ಕವನ್ನು ಪಡೆಯಬೇಕು ಅಂತಿದ್ದೀರಾ? ಸರಿ, ಇಂಡೇನ್ ಎಲ್‌ಪಿಜಿ ಸಂಪರ್ಕವು ಈಗ ಒಂದೇ ಒಂದು ಮಿಸ್ಡ್ ಕಾಲ್ ದೂರದಲ್ಲಿದೆ. ಅಲ್ಲದೆ, ಇಂಡೇನ್ ಎಲ್‌ಪಿಜಿ ಬಳಕೆದಾರರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಮಿಸ್ಡ್ ಕಾಲ್ ನೀಡುವ ಮೂಲಕ ರೀಫಿಲ್ ಅನ್ನು ಸಹ ಬುಕ್ ಮಾಡಬಹುದು. ಇಂಡೇನ್​ನ ಈ ಸೌಲಭ್ಯವನ್ನು ಇತ್ತೀಚೆಗೆ ಇಂಡಿಯನ್ ಆಯಿಲ್​ನ ಅಧಿಕೃತ ಟ್ವಿಟರ್ ಹ್ಯಾಂಡಲ್​ನಿಂದ ಹೀಗೆ ಟ್ವೀಟ್ ಮಾಡಲಾಗಿದೆ: “ನಿಮ್ಮ ಹೊಸ #Indane ಎಲ್‌ಪಿಜಿ ಸಂಪರ್ಕವು ಕೇವಲ ಒಂದು ಮಿಸ್ಡ್ ಕಾಲ್ ದೂರ! 8454955555 ಅನ್ನು ಡಯಲ್ ಮಾಡಿ ಮತ್ತು ನಿಮ್ಮ ಮನೆ ಬಾಗಿಲಿಗೆ ಎಲ್‌ಪಿಜಿ ಸಂಪರ್ಕವನ್ನು ಪಡೆಯಿರಿ. ಈಗಿರುವ ಇಂಡೇನ್ ಗ್ರಾಹಕರು ತಮ್ಮ ನೋಂದಾಯಿತ ಫೋನ್ ಸಂಖ್ಯೆಯಿಂದ ನಮಗೆ ಮಿಸ್ಡ್ ಕಾಲ್ ನೀಡುವ ಮೂಲಕ ರೀಫಿಲ್ ಅನ್ನು ಬುಕ್ ಮಾಡಬಹುದು.”

ಇಂಡೇನ್ ಎಲ್‌ಪಿಜಿ ಸಂಪರ್ಕವನ್ನು ಪಡೆಯಲು, 8454955555ಗೆ ಮಿಸ್ಡ್ ಕಾಲ್ ನೀಡಬಹುದು. ಇಂಡೇನ್ ಎಲ್‌ಪಿಜಿ ಸಿಲಿಂಡರ್ ಅನ್ನು ರೀಫಿಲ್ ಮಾಡಲು ಕೆಲವು ಸ್ಮಾರ್ಟ್ ಬುಕಿಂಗ್ ಮೋಡ್‌ಗಳಿವೆ. ಅವು ಈ ಕೆಳಗಿನಂತಿವೆ:

1) ಎಲ್‌ಪಿಜಿ ಸಿಲಿಂಡರ್ ರೀಫಿಲ್ಲಿಂಗ್​ ಅನ್ನು ವಾಟ್ಸಾಪ್ ಸಂಖ್ಯೆ 7588888824 ಮೂಲಕ ವಿನಂತಿಸಬಹುದು 2) 8454955555 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಬಹುದು 3) 7718955555ರಲ್ಲಿ ಎಸ್‌ಎಂಎಸ್ ಅಥವಾ ಐವಿಆರ್‌ಎಸ್ ಬುಕಿಂಗ್ ಮೂಲಕ ಇಂಡೇನ್ ಎಲ್‌ಪಿಜಿ ಸಿಲಿಂಡರ್ ರೀಫಿಲ್ ಬುಕ್ ಮಾಡಬಹುದು. 4) ಇಂಡಿಯನ್ ಆಯಿಲ್ ಒನ್ ಆ್ಯಪ್ ಮೂಲಕ LPG ಸಿಲಿಂಡರ್ ರೀಫಿಲ್ ಬುಕ್ಕಿಂಗ್ ಕೂಡ ಸಾಧ್ಯ 5) ಭಾರತ್ ಬಿಲ್ ಪಾವತಿ ವ್ಯವಸ್ಥೆಯ ಮೂಲಕ ಇಂಡೇನ್ ಎಲ್‌ಪಿಜಿ ಸಿಲಿಂಡರ್ ರೀಫಿಲ್ ಬುಕ್ ಮಾಡಬಹುದು 6) LPG ಸಿಲಿಂಡರ್ ರೀಫಿಲ್ ಬುಕಿಂಗ್ ಅನ್ನು cx.indianoil.in ಆನ್​ಲೈನ್ ​​ಪೋರ್ಟಲ್ ಮೂಲಕವೂ ಮಾಡಬಹುದು.

ಈಗ, ಎಲ್‌ಪಿಜಿ ಸಿಲಿಂಡರ್‌ಗಳ (14.2 ಕೆಜಿ ಸಿಲಿಂಡರ್‌ಗಳಿಗೆ) ಬೆಲೆಯನ್ನು ಸೆಪ್ಟೆಂಬರ್ 1, 2021ರಿಂದ ಮತ್ತೆ 25 ರೂಪಾಯಿ ಹೆಚ್ಚಿಸಲಾಗಿದೆ ಎಂಬುದನ್ನು ಗಮನಿಸಬೇಕು. IOCL ವೆಬ್‌ಸೈಟ್‌ನ ಪ್ರಕಾರ, ಆಗಸ್ಟ್ 17, 2021ರಿಂದ 14.2 ಕೇಜಿ ಸಿಲಿಂಡರ್‌ಗಾಗಿ ಇಂಡೇನ್ ಸಬ್ಸಿಡಿ ರಹಿತ ಬೆಲೆಗಳು ಹೀಗಿವೆ:

1) ದೆಹಲಿ – 884.50 2) ಕೋಲ್ಕತ್ತಾ – 911.00 3) ಮುಂಬೈ – 884.50 4) ಚೆನ್ನೈ – 900.50

ಆಗಸ್ಟ್ 17, 2021ರಿಂದ 19 ಕೇಜಿ ಸಿಲಿಂಡರ್‌ಗಾಗಿ ಇಂಡೇನ್ ಸಬ್ಸಿಡಿ ರಹಿತ ಬೆಲೆಗಳು ಹೀಗಿವೆ: 1) ದೆಹಲಿ – 1693.00 2) ಕೋಲ್ಕತ್ತಾ – 1770.50 3) ಮುಂಬೈ – 1649.50 4) ಚೆನ್ನೈ – 1831.00

ಆದ್ದರಿಂದ, ಎಲ್‌ಪಿಜಿ ಸಂಪರ್ಕಕ್ಕಾಗಿ ಎದುರು ನೋಡುತ್ತಿದ್ದರೆ ಮೇಲಿನ ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿ ಮತ್ತು ಇಂಡೇನ್ ಎಲ್‌ಪಿಜಿ ಸಂಪರ್ಕವನ್ನು ಪಡೆಯಬಹುದು. ಒಂದು ವೇಳೆ ಹೆಚ್ಚಿನ ಪ್ರಶ್ನೆ ಮತ್ತು ವಿವರಗಳು ಬೇಕಾಗಿದ್ದಲ್ಲಿ iocl.comನಲ್ಲಿ IOCLನ ಅಧಿಕೃತ ವೆಬ್‌ಸೈಟ್‌ಗೆ ಲಾಗಿನ್ ಮಾಡಬಹುದು.

ಇದನ್ನೂ ಓದಿ: LPG Subsidy: ಎಲ್​ಪಿಜಿ ಸಬ್ಸಿಡಿ ಪಾವತಿಸದ ಕೇಂದ್ರ ಸರ್ಕಾರದಿಂದ 27,255 ಕೋಟಿ ರೂ. ಉಳಿತಾಯ

(How To Get New LPG Connection By Giving Missed Call Here Is The Step By Strep Details)

ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್
Krunal Pandya: 9 ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಕೃನಾಲ್ ಪಾಂಡ್ಯ
Krunal Pandya: 9 ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಕೃನಾಲ್ ಪಾಂಡ್ಯ