IRCTC: ಎರಡು ವರ್ಷದಲ್ಲಿ ಹತ್ತು ಪಟ್ಟಿಗೂ ಹೆಚ್ಚಿನ ರಿಟರ್ನ್ಸ್ ನೀಡಿದ ಸರ್ಕಾರಿ ಸ್ವಾಮ್ಯದ ಈ ಷೇರು

ಸರ್ಕಾರಿ ಸ್ವಾಮ್ಯದ ಈ ಷೇರು ಕೇವಲ ಎರಡು ವರ್ಷದಲ್ಲಿ 10 ಪಟ್ಟಿಗೂ ಹೆಚ್ಚು ಹೆಚ್ಚಳವಾಗಿದೆ. ಯಾವುದು ಆ ಕಂಪೆನಿ ಮತ್ತು ವಲಯ ಎಂಬುದರ ವಿವರ ಇಲ್ಲಿದೆ.

IRCTC: ಎರಡು ವರ್ಷದಲ್ಲಿ ಹತ್ತು ಪಟ್ಟಿಗೂ ಹೆಚ್ಚಿನ ರಿಟರ್ನ್ಸ್ ನೀಡಿದ ಸರ್ಕಾರಿ ಸ್ವಾಮ್ಯದ ಈ ಷೇರು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Srinivas Mata

Updated on: Sep 07, 2021 | 11:32 PM

ಸರ್ಕಾರಿ ಸ್ವಾಮ್ಯದ ಐಆರ್‌ಸಿಟಿಸಿ (IRCTC) ಷೇರು ಶಿಖರದ ಮೇಲೆ ಹಾರಾಡುತ್ತಿದೆ. ಲಿಸ್ಟಿಂಗ್ ಮಾಡಿದ ಎರಡು ವರ್ಷಗಳಲ್ಲಿ ಕಂಪೆನಿಯು ಬಿಎಸ್‌ಇಯಲ್ಲಿ ಅಗ್ರ 100 ಅತ್ಯಮೂಲ್ಯ ಲಿಸ್ಟಿಂಗ್ ಆದ ಕಂಪೆನಿಗಳ ಕ್ಲಬ್‌ಗೆ ಪ್ರವೇಶಿಸಿದೆ. ಏಕೆಂದರೆ ಅದರ ಮಾರುಕಟ್ಟೆ ಬಂಡವಾಳವು ರೂ. 50,000 ಕೋಟಿಯನ್ನು ಮೀರಿದೆ. ಅಕ್ಟೋಬರ್ 14, 2019ರಿಂದ ಇಂದಿನ (ಸೆಪ್ಟೆಂಬರ್ 7, 2021) ಸೆಷನ್​ ತನಕ ಈ ಸ್ಟಾಕ್ 10X (ಹತ್ತು ಪಟ್ಟು) ಗಗನಕ್ಕೇರಿದ್ದು, 3,305 ರೂಪಾಯಿಗೆ ತಲುಪಿದೆ. ಹೋಲಿಕೆ ಮಾಡಿ ನೋಡಿದರೆ ಕಳೆದ ಹದಿನೆಂಟು ತಿಂಗಳಲ್ಲಿ ಈ ಪಿಎಸ್‌ಯು ಷೇರು ವಿತರಣೆ ಮಾಡಿದ ಬೆಲೆ 320 ರೂಪಾಯಿಯಿಂದ ಇವತ್ತಿನ ಸೆಷನ್​ನಲ್ಲಿ ಪ್ರತಿ ಷೇರಿಗೆ ರೂ.3,295.90ಕ್ಕೆ ಕೊನೆಗೊಂಡಿದೆ. ರೈಲ್ವೆ ಸಚಿವಾಲಯದ ಆಡಳಿತ ನಿಯಂತ್ರಣದಲ್ಲಿ ಇರುವ ಮಿನಿ ರತ್ನ ಸಾರ್ವಜನಿಕ ವಲಯದ ಉದ್ಯಮವಾದ ಐಆರ್‌ಸಿಟಿಸಿಯಿಂದ ರೈಲ್ವೆ ಕ್ಯಾಟರಿಂಗ್ ಸೇವೆಗಳು, ಆನ್‌ಲೈನ್ ರೈಲ್ವೆ ಟಿಕೆಟ್‌ಗಳು ಮತ್ತು ಭಾರತದಲ್ಲಿ ರೈಲು ನಿಲ್ದಾಣಗಳಲ್ಲಿ ಮತ್ತು ರೈಲುಗಳಲ್ಲಿ ಪ್ಯಾಕೇಜ್ ನೀರು ಒದಗಿಸಲು ಭಾರತೀಯ ರೈಲ್ವೆ (ಐಆರ್)ಯಿಂದ ಅಧಿಕಾರ ಪಡೆದ ಏಕೈಕ ಸಂಸ್ಥೆಯಾಗಿದೆ. ಅಂದ ಹಾಗೆ 30 ಜೂನ್ 2021ರ ಹೊತ್ತಿಗೆ, ಭಾರತ ಸರ್ಕಾರವು ಕಂಪೆನಿಯಲ್ಲಿ ಶೇ 67.4ರಷ್ಟು ಪಾಲನ್ನು ಹೊಂದಿತ್ತು.

ಸ್ಟಾಕ್ ವಿಭಜನೆ ಸುಮಾರು ಒಂದು ತಿಂಗಳಲ್ಲಿ ಕಂಪೆನಿಯ ಮಂಡಳಿಯು ಕಂಪೆನಿಯ ಒಂದು (1) ಈಕ್ವಿಟಿ ಷೇರಿನ ಮುಖಬೆಲೆಯ ರೂ. 10 ಅನ್ನು ತಲಾ ಐದು (5) ಈಕ್ವಿಟಿ ಷೇರುಗಳಾದ ಮುಖಬೆಲೆ ತಲಾ 2 ರೂಪಾಯಿಗೆ ಸೀಳುವಂತೆ ಅನುಮೋದನೆ ಮಾಡಿದೆ. ಈ ವಿಚಾರವು ರೈಲ್ವೆ ಸಚಿವಾಲಯ, ಷೇರುದಾರರು ಮತ್ತು ಅಗತ್ಯವಿರುವ ಇತರ ಅನುಮೋದನೆಗಳ ಅಗತ್ಯಕ್ಕೆ ಒಳಪಟ್ಟಿದೆ. ಸರ್ಕಾರಿ ಸ್ವಾಮ್ಯದ ಆನ್‌ಲೈನ್ ಪೋರ್ಟಲ್ ಮತ್ತು ಕ್ಯಾಟರಿಂಗ್ ಪ್ರಮುಖವಾದ ಐಆರ್​ಸಿಟಿಸಿ, ಕಳೆದ ವರ್ಷ ಇದೇ ಅವಧಿಯಲ್ಲಿ ರೂ. 24.60 ಕೋಟಿ ನಷ್ಟಕ್ಕೆ ಹೋಲಿಸಿದರೆ Q1 FY22ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಮುಂದುವರಿದ ಕಾರ್ಯಾಚರಣೆಯಿಂದ ರೂ. 82.52 ಕೋಟಿ ನಿವ್ವಳ ಲಾಭ ಗಳಿಸಿದೆ. ಆದರೆ ಒಂದರ ನಂತರದ ತ್ರೈಮಾಸಿಕ ವರದಿಯಲ್ಲಿ, Q4FY21 ತ್ರೈಮಾಸಿಕಕ್ಕೆ 103.78 ಕೋಟಿ ರೂಪಾಯಿಗೆ ಹೋಲಿಸಿದರೆ ಶೇ 20ರಷ್ಟು ಕುಸಿತ ಕಂಡಿದೆ.

ಅದರ ಕಾರ್ಯಾಚರಣೆಗಳ ಮೂಲಕ ಬರುವ ಆದಾಯವು ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ರೂ. 131.33 ಕೋಟಿಗೆ ಹೋಲಿಸಿದರೆ Q1 FY22ರಲ್ಲಿ ಶೇ 85ರಷ್ಟು ಹೆಚ್ಚಳವಾಗಿ ರೂ. 243.37 ಕೋಟಿ ಆಗಿದೆ. QoQ (ತ್ರೈಮಾಸಿಕದಿಂದ ತ್ರೈಮಾಸಿಕದ) ಆಧಾರದ ಮೇಲೆ ಆದಾಯವು Q4FY22ರಲ್ಲಿ ವರದಿಯಾದ ರೂ. 338.79 ಕೋಟಿಯಿಂದ ಶೇ 28ರಷ್ಟು ಕಡಿಮೆಯಾಗಿದೆ.

ಬಾಹ್ಯ ನೋಟ ಆನ್‌ಲೈನ್ ಟಿಕೆಟ್ ಬುಕಿಂಗ್ ಬಹುತೇಕ ಕೋವಿಡ್ ಪೂರ್ವ ಮಟ್ಟವನ್ನು ತಲುಪಿದ್ದರಿಂದ ಐಆರ್‌ಸಿಟಿಸಿ ಸ್ಟಾಕ್​ನಲ್ಲಿ ಇನ್ನೂ ಸಾಕಷ್ಟು ಕಸುವು ಉಳಿದಿದೆ. ಧಾರ್ಮಿಕ ಪ್ರವಾಸೋದ್ಯಮವು ಕಂಪೆನಿಗೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಹೊರತಾಗಿ, ಶೀಘ್ರದಲ್ಲೇ ಹೊಸ ವಿಶೇಷ ರೈಲುಗಳು ಮತ್ತು ಪ್ಯಾಕೇಜ್‌ಗಳನ್ನು ಘೋಷಿಸಲಿದೆ. ಅದರ ಹೊರತಾಗಿ ಕಂಪೆನಿಯು ಕ್ರೂಸ್ ಆಪರೇಟರ್‌ಗಳೊಂದಿಗೆ ಐಆರ್‌ಸಿಟಿಸಿ ಪ್ಲಾಟ್‌ಫಾರ್ಮ್‌ನಲ್ಲಿ ಮಾರ್ಕೆಟಿಂಗ್ ಮತ್ತು ಬುಕಿಂಗ್ ಉದ್ದೇಶಗಳಿಗಾಗಿ ಮಾತುಕತೆ ನಡೆಸುತ್ತಿದೆ. ಅಲ್ಲದೆ, ಲೇಹ್, ಲಡಾಖ್, ತವಾಂಗ್ ಮತ್ತು ಇತರ ಪ್ರದೇಶಗಳಲ್ಲಿ ಬೈಕ್ ಸವಾರಿಗಾಗಿ ಕಂಪೆನಿಯು ನವೀನ ಪ್ರವಾಸೋದ್ಯಮ ಪ್ಯಾಕೇಜ್‌ಗಳಲ್ಲಿ ಕೆಲಸ ಮಾಡುತ್ತಿದೆ.

ಐಆರ್‌ಸಿಟಿಸಿ ಕುರಿತು ಪ್ರತಿಕ್ರಿಯಿಸಿದ ಸ್ವಸ್ತಿಕ ಇನ್ವೆಸ್ಟ್‌ಮಾರ್ಟ್ ಸಂಶೋಧನಾ ಮುಖ್ಯಸ್ಥ ಸಂತೋಷ್ ಮೀನಾ : “ಐಆರ್‌ಸಿಟಿಸಿ ಬಲವಾದ ಏರಿಕೆ ವೇಗದಲ್ಲಿದೆ. ಪುನಃ ಆರ್ಥಿಕ ಚಟುವಟಿಕೆಗಳು ತೆರೆಯುವ ಕಾರಣಕ್ಕೆ ವೇಗ ಪಡೆಯುತ್ತಿದೆ. ಆದರೆ ಇದು ಷೇರು ಸೀಳಿಕೆ ಸುದ್ದಿಯ ಹಿನ್ನೆಲೆಯನ್ನೂ ಹೊಂದಿದೆ. ರೈಲ್ವೆಯ ಆಸ್ತಿ ಗಳಿಕೆ ಯೋಜನೆ ಅದರ ಮರು-ರೇಟಿಂಗ್‌ಗೆ ಮತ್ತೊಂದು ಉತ್ತೇಜಕವಾಗಿದೆ. ರೂ. 3,070-3,100 ತಕ್ಷಣದ ರೆಸಿಸ್ಟೆನ್ಸ್ ಮಟ್ಟವಾಗಿದ್ದು, ಏರಿಕೆ ಮುಂದುವರಿಯಬಹುದು” ಎಂದಿದ್ದಾರೆ.

(ಎಚ್ಚರಿಕೆ: ಈ ಲೇಖನದಲ್ಲಿನ ಶಿಫಾರಸುಗಳು ಆಯಾ ಸಂಶೋಧನೆ ಮತ್ತು ಬ್ರೋಕರೇಜ್ ಸಂಸ್ಥೆಯಿಂದ ಬಂದಿವೆ. ಟಿವಿ9 ಮತ್ತು ಅದರ ನಿರ್ವಹಣೆ ಅವರ ಹೂಡಿಕೆ ಸಲಹೆಗೆ ಯಾವುದೇ ಜವಾಬ್ದಾರಿಯನ್ನು ಹೊರುವುದಿಲ್ಲ. ಹೂಡಿಕೆ ಮಾಡುವ ಮೊದಲು ದಯವಿಟ್ಟು ನಿಮ್ಮ ಹೂಡಿಕೆ ಸಲಹೆಗಾರರನ್ನು ಸಂಪರ್ಕಿಸಿ) (ಮೂಲ ಲೇಖಕರು: ಹರ್ಷ್ ಚೌಹಾಣ್, ಮಾಹಿತಿ ಕೃಪೆ: ಮನಿ9.ಕಾಮ್)

ಇದನ್ನೂ ಓದಿ: Multibagger 2021: 1.20 ಲಕ್ಷ ರೂಪಾಯಿ ಮೊತ್ತವು 5 ವರ್ಷದಲ್ಲಿ 62 ಲಕ್ಷ ರೂಪಾಯಿ ಆದ ಮಲ್ಟಿಬ್ಯಾಗರ್ ಇದು

Multibagger: 10 ವರ್ಷ ಹಿಂದೆ ಟಾಟಾ ನ್ಯಾನೋ ಖರೀದಿ ದುಡ್ಡು ಈ ಷೇರಿಗೆ ಹಾಕಿದ್ದರೆ ಇವತ್ತಿಗೆ ಬರ್ತಿತ್ತು ಮರ್ಸಿಡೀಸ್ ಬೆಂಜ್ ಕಾರು

(IRCTC Share Value Increased More Than 10 Times Within Two Years Of Time)