Sign In

By signing in or creating an account, you agree with Associated Broadcasting Company's Terms & Conditions and Privacy Policy.

LPG Subsidy: ಎಲ್​ಪಿಜಿ ಸಬ್ಸಿಡಿ ಪಾವತಿಸದ ಕೇಂದ್ರ ಸರ್ಕಾರದಿಂದ 27,255 ಕೋಟಿ ರೂ. ಉಳಿತಾಯ

ಕೊವಿಡ್ 19 ಬಿಕ್ಕಟ್ಟಿನ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಎಲ್​ಪಿಜಿ ಸಬ್ಸಿಡಿ 27 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ಉಳಿತಾಯ ಮಾಡಿದೆ.

LPG Subsidy: ಎಲ್​ಪಿಜಿ ಸಬ್ಸಿಡಿ ಪಾವತಿಸದ ಕೇಂದ್ರ ಸರ್ಕಾರದಿಂದ 27,255 ಕೋಟಿ ರೂ. ಉಳಿತಾಯ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Sep 03, 2021 | 4:44 PM

ಸೆಪ್ಟೆಂಬರ್ 1ರಂದು 25 ರೂಪಾಯಿ ಏರಿಕೆ ಆಗುವುದರೊಂದಿಗೆ ಈ ವಾರ ಅಡುಗೆ ಅನಿಲ ಸಿಲಿಂಡರ್ ದರವು ಮತ್ತೊಂದು ಏರಿಕೆಯನ್ನು ಕಂಡಿತು. ದೆಹಲಿಯಲ್ಲಿ 14.2 ಕೇಜಿ ತೂಕದ ಸಿಲಿಂಡರ್ ಬೆಲೆಯು ಈ ಮೂಲಕ 885 ರೂಪಾಯಿ ಮುಟ್ಟಿತು. ದೇಶದಲ್ಲಿ ಕೊವಿಡ್ -19 ಪ್ರಕರಣಗಳು ಕಾಣಿಸಿಕೊಂಡಾಗಿನಿಂದ ಮತ್ತು ನಂತರದ ಲಾಕ್‌ಡೌನ್‌ಗಳನ್ನು ಎದುರಿಸುತ್ತಿದ್ದಾಗ 2020ರ ಮೇ ತಿಂಗಳಿಂದ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ರೂ. 300ಕ್ಕಿಂತ ಹೆಚ್ಚಾಗಿದೆ. ಭಾರತೀಯ ಮನೆಗಳಲ್ಲಿ ಈ ಗಗನಕ್ಕೇರಿರುವ ಎಲ್‌ಪಿಜಿಯ ಬೆಲೆಗಳಿಂದ ರಕ್ಷಿಸಲು ಸರ್ಕಾರವು ಅಡುಗೆ ಅನಿಲದ ಮೇಲೆ ಸಬ್ಸಿಡಿಗಳನ್ನು ನೀಡುತ್ತದೆ. ಅದು ಏರಿಳಿಕೆಯನ್ನು ಎದುರಿಸಲು ಮತ್ತು ಬೆಲೆ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಯೋಜನೆಯಂತೆ ಸಂಗತಿಗಳು ನಡೆದಿಲ್ಲ. ಬಿಜಿನೆಸ್ ಸ್ಟ್ಯಾಂಡರ್ಡ್ ವರದಿಯ ಪ್ರಕಾರ, ಮೇ 2020ರಿಂದ ಸುಮಾರು 29 ಕೋಟಿ ಕುಟುಂಬಗಳು ಎಲ್‌ಪಿಜಿ ಖರೀದಿಯಲ್ಲಿ ಗ್ರಾಹಕ ಸಬ್ಸಿಡಿ ಪಡೆದಿಲ್ಲ. ಕೇಂದ್ರವು ಸಬ್ಸಿಡಿಯನ್ನು ಅಧಿಕೃತವಾಗಿ ನಿಲ್ಲಿಸುವುದನ್ನು ಘೋಷಿಸಿಲ್ಲ, ಜತೆಗೆ ಯಾವುದೇ ಸಬ್ಸಿಡಿಯ ಠೇವಣಿಯನ್ನೂ ಮಾಡಿಲ್ಲ.

ಕೊವಿಡ್-19 ಕಾಣಿಸಿಕೊಂಡ ನಂತರ ಸಬ್ಸಿಡಿ ಕಡಿತ ಕೊವಿಡ್ – 19 ಪ್ರಾರಂಭ ಆದಾಗಿನಿಂದಲೂ ಎಲ್‌ಪಿಜಿ ಸಬ್ಸಿಡಿಗಳನ್ನು ನೀಡದೆ ಕೇಂದ್ರವು 27,000 ಕೋಟಿ ರೂಪಾಯಿಗಳನ್ನು ಉಳಿಸಿರಬಹುದು ಎಂದು ಮಾಧ್ಯಮ ನಡೆಸಿದ ವಿಶ್ಲೇಷಣೆಯಲ್ಲಿ ತಿಳಿಸಲಾಗಿದೆ. ಈ ವಿಶ್ಲೇಷಣೆಗಾಗಿ, ಸಬ್ಸಿಡಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ರೂ.600 ಎಂದು ಪರಿಗಣಿಸಲಾಗಿದೆ, ಇದನ್ನು ಕೊನೆಯದಾಗಿ ಏಪ್ರಿಲ್-ಮೇ 2020ರಲ್ಲಿ ಗಮನಿಸಲಾಯಿತು. ಈಗಿರುವ ರೂ. 885 ದರದಲ್ಲಿ ಸರಾಸರಿ ಗ್ರಾಹಕರು ಪ್ರತಿ ಖರೀದಿ ಅಥವಾ ರೀಫಿಲ್​ಗಾಗಿ ರೂ. 285 (885-600) ಸಬ್ಸಿಡಿಯನ್ನು ಪಡೆಯುತ್ತಾರೆ. ಭಾರತದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಮಾಸಿಕ ಬಳಕೆ 14.5 ಕೋಟಿ ಎಂದು ಬಿಜಿನೆಸ್​ ಸ್ಟ್ಯಾಂಡರ್ಡ್​​ನಿಂದ ಸೇರಿಸಲಾಗಿದೆ. ರೇಟಿಂಗ್ ಏಜೆನ್ಸಿ CRISILನಿಂದ ಮಾಸಿಕ ಡೇಟಾವನ್ನು ಮತ್ತು ಸಂಸತ್ತಿನಲ್ಲಿ ಹಂಚಿಕೊಂಡ ಡೇಟಾವನ್ನು ಕ್ರೋಡೀಕರಿಸಿದ ನಂತರ, ಈವರೆಗೆ ಕೇಂದ್ರವು ರೂ. 27,255 ಕೋಟಿ ರೂಪಾಯಿಗಳನ್ನು ಉಳಿಸಿದೆ ಎಂದು ತೀರ್ಮಾನಿಸಲಾಗಿದೆ, ಸಬ್ಸಿಡಿ ಸಿಲಿಂಡರ್‌ನ ಬೆಲೆ ರೂ. 600 ದರದಲ್ಲಿ ಇದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಎಲ್‌ಪಿಜಿ ಸಬ್ಸಿಡಿಗಳ ಮೇಲಿನ ವೆಚ್ಚವನ್ನು ಕಡಿಮೆ ಮಾಡಲಾಗುವುದು ಎಂದು ಕೇಂದ್ರವು ಫೆಬ್ರವರಿಯಲ್ಲಿ ಘೋಷಿಸಿತ್ತು. FY22ಗಾಗಿ ಕೇಂದ್ರ ಬಜೆಟ್ ಅನ್ನು ಮಂಡಿಸುವಾಗ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, LPG ಸಬ್ಸಿಡಿ ಹೊರಹರಿವು 14,073 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದು ಕಳೆದ ಹಣಕಾಸು ವರ್ಷದಲ್ಲಿ ಖರ್ಚು ಮಾಡಿದ ತಾತ್ಕಾಲಿಕ ಮೊತ್ತ 36,178 ಕೋಟಿ ರೂಪಾಯಿಗಿಂತ ಗಣನೀಯವಾಗಿ ಕಡಿಮೆಯಾಗಿದೆ ಎಂದು ವರದಿಯಿಂದ ಸೇರಿಸಲಾಗಿದೆ.

ಇದನ್ನೂ ಓದಿ: ಸೀಮೆಎಣ್ಣೆ ಸಬ್ಸಿಡಿ ರದ್ದು; ಕೇಂದ್ರ ಬಜೆಟ್ ಘೋಷಣೆ

(Central Government Saved LPG Subsidy Rs 27255 Crore During Covid 19)

ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್
ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್
ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಗೂಳಿ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಗೂಳಿ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ಬೀದರ್ ಜಡ್ಜ್​​ ಮನೆಯಲ್ಲಿಯೇ ಕಳ್ಳತನ ಮಾಡಿದ ಖತರ್ನಾಕ್ ಖದೀಮರು
ಬೀದರ್ ಜಡ್ಜ್​​ ಮನೆಯಲ್ಲಿಯೇ ಕಳ್ಳತನ ಮಾಡಿದ ಖತರ್ನಾಕ್ ಖದೀಮರು
ಕರ್ನಾಟಕದಲ್ಲಿ 30,000 ಎಕರೆ ವಕ್ಫ್ ಭೂಮಿ ವಿದೇಶಿ ಕಂಪನಿಗಳಿಗೆ ಗುತ್ತಿಗೆ;ಶಾ
ಕರ್ನಾಟಕದಲ್ಲಿ 30,000 ಎಕರೆ ವಕ್ಫ್ ಭೂಮಿ ವಿದೇಶಿ ಕಂಪನಿಗಳಿಗೆ ಗುತ್ತಿಗೆ;ಶಾ
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್