EPF explainer: ಇಪಿಎಫ್​ ಕೊಡುಗೆ 2.5 ಲಕ್ಷ ರೂಪಾಯಿಗಿಂತ ಹೆಚ್ಚಾದಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?

ಪ್ರಸಕ್ತ ಹಣಕಾಸು ವರ್ಷದಿಂದ ಇಪಿಎಫ್ ಕೊಡುಗೆ 2..5 ಲಕ್ಷ ರೂಪಾಯಿ ದಾಟಿದಲ್ಲಿ ಆದಾಯ ತೆರಿಗೆ ಲೆಕ್ಕಾಚಾರ ಹೇಗೆ ಎಂಬ ವಿವರ ಇಲ್ಲಿದೆ.

EPF explainer: ಇಪಿಎಫ್​ ಕೊಡುಗೆ 2.5 ಲಕ್ಷ ರೂಪಾಯಿಗಿಂತ ಹೆಚ್ಚಾದಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Sep 03, 2021 | 1:40 PM

ಈ ಹಣಕಾಸು ವರ್ಷದಿಂದ (2021-22) ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಸ್ಟೇಟ್​ಮೆಂಟ್ ನಿಮ್ಮದೇ ಭವಿಷ್ಯ ನಿಧಿ ಖಾತೆಯಲ್ಲಿ ಎರಡು ಖಾತೆಗಳನ್ನು ನೀಡುತ್ತದೆ. ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಅಧಿಸೂಚನೆ ಪ್ರಕಾರ, ನೌಕರರ ಇಪಿಎಫ್ ಕೊಡುಗೆಯ ತೆರಿಗೆಯಲ್ಲದ ಭಾಗವನ್ನು ಒಂದರಲ್ಲಿ ತೋರಿಸಿದರೆ, ಮತ್ತೊಂದರಲ್ಲಿ ತೆರಿಗೆ ಬೀಳುವ ಭಾಗದ ಬಗ್ಗೆ ಮಾಹಿತಿ ಇರುತ್ತದೆ. “ತೆರಿಗೆ ಬೀಳುವಂಥ ಬಡ್ಡಿಯ ಲೆಕ್ಕಾಚಾರದ ಉದ್ದೇಶಕ್ಕಾಗಿಯೇ ಭವಿಷ್ಯ ನಿಧಿ ಖಾತೆಯೊಳಗಿನ ಪ್ರತ್ಯೇಕ ಖಾತೆಗಳನ್ನು ಹಿಂದಿನ ವರ್ಷ 2021-2022 ಮತ್ತು ನಂತರದ ಎಲ್ಲ ಹಿಂದಿನ ವರ್ಷಗಳಲ್ಲಿ ವ್ಯಕ್ತಿಯೊಬ್ಬರ ತೆರಿಗೆಯ ಕೊಡುಗೆಗಾಗಿ ಮತ್ತು ತೆರಿಗೆಯಲ್ಲದ ಕೊಡುಗೆಗಾಗಿ ನಿರ್ವಹಿಸಲೇಬೇಕು,” ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಇದರರ್ಥ ನೀವು ಎರಡು ಪ್ರತ್ಯೇಕ ಖಾತೆಗಳನ್ನು ತೆರೆಯಬೇಕು ಎಂದಲ್ಲ; ನಿಮ್ಮ EPF UAN (ಯೂನಿಕ್ ಅಕೌಂಟ್​ ನಂಬರ್) ಹಾಗೆಯೇ ಇರುತ್ತದೆ. “ಸದ್ಯಕ್ಕೆ, ವಾರ್ಷಿಕ ಭವಿಷ್ಯ ನಿಧಿ ಸ್ಟೇಟ್​ಮೆಂಟ್​ನಲ್ಲಿ ಉದ್ಯೋಗಿಗಳ ಪಿಂಚಣಿ ಯೋಜನೆಗೆ (ಇಪಿಎಸ್) ಮೀಸಲಿಟ್ಟ ಮೊತ್ತದ ಜೊತೆಗೆ ನಿಮ್ಮ ಬಡ್ಡಿಯ ಗಳಿಕೆ, ಉದ್ಯೋಗದಾತರ ಕೊಡುಗೆ ಮತ್ತು ಗಳಿಸಿದ ಬಡ್ಡಿಯೊಂದಿಗೆ ನಿಮ್ಮ ಕೊಡುಗೆಯನ್ನು ತೋರಿಸುತ್ತದೆ. ಈಗ, ಉದ್ಯೋಗಿಗಳ ಕೊಡುಗೆ ಅಡಿಯಲ್ಲಿ ಇನ್ನೂ ಎರಡು ಕಾಲಮ್‌ ಸೇರಿಸಬಹುದು- ಹೆಚ್ಚುವರಿ ಕೊಡುಗೆ ಮತ್ತು ಈ ಮೊತ್ತದ ಮೇಲೆ ಗಳಿಸಿದ ಬಡ್ಡಿಯನ್ನು ತೆರಿಗೆಗೆ ತರಲಾಗುತ್ತದೆ,” ಎಂದು ವಿಷಯ ತಜ್ಞರು ಹೇಳುತ್ತಾರೆ.

2.5 ಲಕ್ಷ ರೂಪಾಯಿಗಿಂತ ಹೆಚ್ಚಿನ (ರೂ. 5 ಲಕ್ಷ ಪ್ರಾಥಮಿಕವಾಗಿ ಸರ್ಕಾರಿ ನೌಕರರಿಗೆ ಮಿತಿ) ನಿಮ್ಮ ವಾರ್ಷಿಕ ಇಪಿಎಫ್ ಕೊಡುಗೆಯ ಮೇಲಿನ ಬಡ್ಡಿಯ ಆದಾಯಕ್ಕೆ ಹೇಗೆ ತೆರಿಗೆ ವಿಧಿಸಲಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಮುಂದೆ ಓದಿ.

ಹೆಚ್ಚುವರಿ ಇಪಿಎಫ್ ಕೊಡುಗೆ ಮೇಲೆ ಬಡ್ಡಿಗೆ ತೆರಿಗೆ ವಿಧಿಸಲು ನಿಯಮ ಕೇಂದ್ರ ಬಜೆಟ್ 2021ರಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ನೌಕರರ ಕೊಡುಗೆಗಳ ಮೇಲೆ ಅವರ ಭವಿಷ್ಯ ನಿಧಿಗೆ ವರ್ಷಕ್ಕೆ ಗಳಿಸಿದ ಬಡ್ಡಿಯು 2.5 ಲಕ್ಷ ರೂಪಾಯಿಗಿಂತ ಹೆಚ್ಚು ಆದಲ್ಲಿ ತೆರಿಗೆಗೆ ಒಳಪಡುತ್ತದೆ ಎಂದು ಘೋಷಿಸಿದ್ದರು. ಈ ಕ್ರಮವು ಶೇಕಡಾ 1ಕ್ಕಿಂತ ಕಡಿಮೆ ತೆರಿಗೆ ಪಾವತಿದಾರರ ಮೇಲೆ ಪರಿಣಾಮ ಬೀರುತ್ತದೆ ಎಂದು ಸರ್ಕಾರ ಹೇಳಿತ್ತು. ಅಂದರೆ, ವಾರ್ಷಿಕ ಮೂಲ ವೇತನ 21 ಲಕ್ಷಕ್ಕಿಂತ ಹೆಚ್ಚಾಗಿರಬೇಕು (ತಿಂಗಳಿಗೆ ರೂ 1,73,612). ಸರ್ಕಾರಿ ಉದ್ಯೋಗಿಗಳಿಗೆ ಈ ಇಪಿಎಫ್ ಕೊಡುಗೆ ಮಿತಿ 5 ಲಕ್ಷ ರೂಪಾಯಿ. ಇದು 2021-22 ಹಣಕಾಸು ವರ್ಷದಿಂದ (ಅಸೆಸ್​​ಮೆಂಟ್ ವರ್ಷ 2022-23) ಜಾರಿಗೆ ಬಂದಿದೆ.

ಉದ್ಯೋಗದಾತರು ಉದ್ಯೋಗಿಗಳ ಮೂಲ ವೇತನದ ಶೇ 12ರಷ್ಟು ಮೊತ್ತವನ್ನು ಇಪಿಎಫ್‌ಗೆ ಕೊಡುಗೆಯಾಗಿ ಪ್ರತಿ ತಿಂಗಳು ಕಡಿತಗೊಳಿಸುತ್ತಾರೆ. ಅದಕ್ಕೆ ಸಮಾನವಾದ ಮೊತ್ತವನ್ನು ತಮ್ಮ ಕೊಡುಗೆಯಾಗಿ ಸೇರಿಸಿ ಮತ್ತು ಅದನ್ನು ಇಪಿಎಫ್‌ಒಗೆ ಜಮಾ ಮಾಡುತ್ತಾರೆ. ಒಂದು ಹಣಕಾಸಿನ ವರ್ಷದಲ್ಲಿ ನಿಮ್ಮ ಕೊಡುಗೆಯಾಗಿ ಕಡಿತಗೊಳಿಸಿದ ಮೊತ್ತವು ರೂ. 2.5 ಲಕ್ಷಕ್ಕಿಂತ ಹೆಚ್ಚಿದ್ದರೆ, ಈ ಹೆಚ್ಚುವರಿ ಮೊತ್ತದ ಮೇಲೆ ಗಳಿಸಿದ ಬಡ್ಡಿಗೆ ನಿಮಗೆ ಅನ್ವಯವಾಗುವ ಸ್ಲ್ಯಾಬ್ ದರದಂತೆ ತೆರಿಗೆ ವಿಧಿಸಲಾಗುತ್ತದೆ. ವರ್ಷದಲ್ಲಿ ನೀವು ಯಾವುದೇ ಹೆಚ್ಚುವರಿ, ಸ್ವಯಂಪ್ರೇರಿತ ಕೊಡುಗೆಯನ್ನು ನೀಡಿದ್ದರೆ ಅದನ್ನೂ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಆದರೆ ಈ ಅನುಷ್ಠಾನದ ನಿಯಮಗಳನ್ನು ಇಲ್ಲಿಯವರೆಗೆ ರೂಪಿಸಿಲ್ಲ.

ಪಿಎಫ್ ಸ್ಟೇಟ್​ಮೆಂಟ್​ ಒಟ್ಟು ಮಾಹಿತಿಯನ್ನು ಒದಗಿಸಬಹುದು ಈಗ ವಿವರಗಳನ್ನು ದಾಖಲಿಸಲು ಐಟಿ ಇಲಾಖೆಯು ನಿಮ್ಮ ಪಿಎಫ್ ಖಾತೆಯೊಳಗೆ ಎರಡು ಖಾತೆಗಳನ್ನು ಸೂಚಿಸಿದೆ. ಆದರೂ ಆ ಬಗ್ಗೆ ಹೆಚ್ಚಿನ ಸ್ಪಷ್ಟತೆ ಅಗತ್ಯವಿದೆ. ಅಧಿಸೂಚನೆ ಪ್ರಕಾರ, ಇದು ಇಪಿಎಫ್ ಪಾಸ್‌ಬುಕ್ ಅಥವಾ ಸ್ಟೇಟ್​ಮಂಟ್​ನಲ್ಲಿ ಹೆಚ್ಚು ಸ್ಪಷ್ಟವಾಗಿದೆ. ಇಪಿಎಫ್ ಸದಸ್ಯರಿಗೆ ಉತ್ತಮ ಸ್ಪಷ್ಟೀಕರಣಕ್ಕಾಗಿ ದಾಖಲಿಸಲು ತೆರಿಗೆ ಕಡಿತ ಮೌಲ್ಯವನ್ನು ಹಿಡಿದಿಡಲು ಹೆಚ್ಚುವರಿ ಲೈನ್. ಇಪಿಎಫ್‌ಒ ಮತ್ತು ಉದ್ಯೋಗದಾತರಿಂದ ಯಾವುದೇ ವಿಶೇಷ ಅಧಿಸೂಚನೆ ಅಥವಾ ವ್ಯವಸ್ಥೆಯ ಅಗತ್ಯವಿಲ್ಲ

ನಿಮ್ಮ ಪಿಎಫ್ ಖಾತೆಯಲ್ಲಿ ಎರಡು ಪ್ರತ್ಯೇಕ ಖಾತೆಗಳು ಇರುತ್ತವೆ ಎಂದು ಇತರರು ನಂಬುತ್ತಾರೆ. ಆದರೂ ಯಾವುದೇ ಹೊಸ ಖಾತೆಗಳನ್ನು ತೆರೆಯಲು ಉದ್ಯೋಗಿಯು ಹೆಚ್ಚುವರಿ ಪ್ರಯತ್ನವನ್ನೇನೂ ಮಾಡಬೇಕಾಗಿಲ್ಲ. “ಎರಡು ಖಾತೆಗಳನ್ನು ತೆರೆಯುವ ಮತ್ತು ನಿರ್ವಹಿಸುವ ಜವಾಬ್ದಾರಿ-ಅಂದರೆ, (ಎ) ಮಾರ್ಚ್ 31, 2021ರಂತೆ ಬಾಕಿಗೆ ತೆರಿಗೆ ವಿಧಿಸುವುದಿಲ್ಲ ಮತ್ತು ವರ್ಷಕ್ಕೆ 2.5/5 ಲಕ್ಷದವರೆಗೆ ಹೆಚ್ಚಿನ ಠೇವಣಿಗಳು ಮತ್ತು (ಬಿ) 2.5/5 ಲಕ್ಷ ವರ್ಷಕ್ಕೆ EPFO ​​ನಲ್ಲಿ ತೆರಿಗೆ ಇದೆ. ಉದ್ಯೋಗದಾತರು ಅಥವಾ ಉದ್ಯೋಗಿಯಿಂದ ಯಾವುದೇ ಕ್ರಮ ಅಥವಾ ಸೌಕರ್ಯದ ಅಗತ್ಯವಿಲ್ಲ. ಇದು ತೆರಿಗೆಗೆ ಒಳಪಡುವ ಖಾತೆಗೆ ಸ್ವಯಂಚಾಲಿತವಾಗಿ ವರ್ಗಾವಣೆಯಾಗಲಿದೆ,” ಎಂದು ವಿವರಿಸುತ್ತಾರೆ ತಜ್ಞರು.

ಎಲ್ಲರಿಗೂ ಹೆಚ್ಚುವರಿ ನಿಯಮಾವಳಿಯ ಹೊರೆ ಎಲ್ಲ ಭಾಗೀದಾರರು – ಉದ್ಯೋಗದಾತರು, ಉದ್ಯೋಗಿಗಳು, ಇಪಿಎಫ್‌ಒ ಮತ್ತು ಖಾಸಗಿ ಮಾನ್ಯತೆ ಪಡೆದ ಪಿಎಫ್ ಟ್ರಸ್ಟ್‌ಗಳು – ತಮ್ಮ ಕಾರ್ಯತಂತ್ರಗಳನ್ನು ಪರಿಷ್ಕರಿಸುವ ಅಗತ್ಯವಿದೆ. ಉದ್ಯೋಗಿಗಳಾಗಿ, ಬಡ್ಡಿಯ ಮೇಲಿನ ತೆರಿಗೆಯನ್ನು ಹಿಡಿದ ದರವನ್ನು ನೀವು ಪರಿಶೀಲಿಸಬೇಕು. “ಕಡಿತದ ದರವು ಅನ್ವಯವಾಗುವ ದರಕ್ಕಿಂತ ಹೆಚ್ಚಿದ್ದರೆ (ನಿಮ್ಮ ಅಂತಿಮ ಸ್ಲಾಬ್ ದರ), ನೀವು ಮರುಪಾವತಿಗಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಇದು ಕಡಿಮೆಯಾಗಿದ್ದರೆ ನೀವು ಹೆಚ್ಚುವರಿ ತೆರಿಗೆಯನ್ನು ಪಾವತಿಸಬೇಕಾಗುತ್ತದೆ,” ಎಂದು ವಿವರಿಸುತ್ತಾರೆ.

ಇಪಿಎಫ್‌ಒ ಕೂಡ ತನ್ನ ಸ್ಟೇಟ್​ಮೆಂಟ್ ಸ್ವರೂಪ ಪರಿಷ್ಕರಿಸಬೇಕಾಗಬಹುದು. “ಟ್ರಸ್ಟ್​ನಿಂದ ಕೊಡುಗೆಯ ಮೇಲ್ವಿಚಾರಣೆ ಮಾಡಬೇಕು, ತೆರಿಗೆ ದರವನ್ನು ನಿರ್ಧರಿಸಬೇಕು, ಅದು ಉದ್ಯೋಗಿಯ ಪಾಸ್‌ಬುಕ್‌ನಲ್ಲಿ ಪ್ರತಿಫಲಿಸುತ್ತಿದೆಯೆ ಎಂದು ಖಚಿತಪಡಿಸಿಕೊಳ್ಳಬೇಕು ಹಾಗೂ ಉದ್ಯೋಗಿಯ ಪ್ಯಾನ್ ಸಂಖ್ಯೆಗೆ ಮೊತ್ತವನ್ನು ಆದಾಯ ತೆರಿಗೆ ಇಲಾಖೆಗೆ ಕಳುಹಿಸಬೇಕು,” ಎಂದು ಹೇಳುತ್ತಾರೆ. ಲೆಕ್ಕಾಚಾರಗಳು ನಿಯಮಗಳ ಪ್ರಕಾರವೇ ಇದೆ ಎಂದು ಖಚಿತಪಡಿಸಿಕೊಳ್ಳಲು ಉದ್ಯೋಗದಾತರು ಲೆಕ್ಕಪರಿಶೋಧನೆಯನ್ನು ಕೈಗೊಳ್ಳಬೇಕಾಗಬಹುದು. “ಇದು ಖಚಿತವಾಗಿ ಹೆಚ್ಚುವರಿ ಆಡಳಿತಾತ್ಮಕ ತಡೆಯಾಗಲಿದೆ,” ಎನ್ನುತ್ತಾರೆ.

ಮತ್ತಷ್ಟು ಸ್ಪಷ್ಟತೆಗಾಗಿ ಕಾಯಲಾಗುತ್ತಿದೆ ಹೆಚ್ಚುವರಿ ಕೊಡುಗೆಗಳ ಮೇಲೆ ಗಳಿಸಿದ ಬಡ್ಡಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ದಾಖಲಿಸುವ ವ್ಯವಸ್ಥೆಯನ್ನು ಇಪಿಎಫ್‌ಒ ಅಧಿಕಾರಿಗಳು ಜಾರಿಗೆ ತರಬೇಕು. “ಇದರ ಉದ್ದೇಶ ಏನೆಂದರೆ ಪಿಎಫ್ ಅಧಿಕಾರಿಗಳು ಮತ್ತು ಪಿಎಫ್​ ಟ್ರಸ್ಟ್ ತೆರಿಗೆಯ ಬಡ್ಡಿಯನ್ನು ಬರುವಂತೆ ಮಾಡುವ ಪಿಎಫ್ ಕೊಡುಗೆಗಳಿಗೆ ಸಂಬಂಧಿಸಿದ ಹೆಚ್ಚುವರಿ ಮಾಹಿತಿಯನ್ನು ದಾಖಲಿಸಬೇಕು. ಈ ಮಾಹಿತಿಯನ್ನು ದಾಖಲಿಸಲು ಅಧಿಕಾರಿಗಳು ತಮ್ಮ ಈಗಿನ ವ್ಯವಸ್ಥೆಯನ್ನು ಪರಿಷ್ಕರಿಸಬೇಕೇ? ಅಲ್ಲದೆ, ಪಿಎಫ್ ಖಾತೆಗಳಿಗೆ ಬಡ್ಡಿ ಕ್ರೆಡಿಟ್ ತಡವಾಗಿ ಬರುತ್ತದೆ. ಆದ್ದರಿಂದ ತೆರಿಗೆ ಪಾವತಿಯನ್ನು ಉದ್ಯೋಗಿಗಳಿಗೆ ಬಿಡಲಾಗುತ್ತದೆಯೇ ಅಥವಾ ಪಿಎಫ್ ಅಧಿಕಾರಿಗಳು ಅಥವಾ ಪಿಎಫ್ ಟ್ರಸ್ಟ್‌ಗಳು ಪಾವತಿಸಬೇಕಾದ ತೆರಿಗೆಯನ್ನು ಅಂತ್ಯದಲ್ಲಿ ಹಿಡಿಯಬೇಕೇ?” ಎಂಬಿತ್ಯಾದಿ ಪ್ರಶ್ನೆಗಳ ಬಗ್ಗೆ ಗಮನ ಸೆಳೆಯಲಾಗುತ್ತಿದೆ.

ಟಿಡಿಎಸ್ ದರ ಯಾವುದಾದರೂ ಇದೆಯಾ ಎಂದು ನಿರ್ದಿಷ್ಟಪಡಿಸಿಲ್ಲ. ಬಜೆಟ್ ಘೋಷಣೆಗಳ ನಂತರ ಸಿಬಿಡಿಟಿಯಲ್ಲಿ ತೆರಿಗೆ ನೀತಿ ವಿಭಾಗದ ಜಂಟಿ ಕಾರ್ಯದರ್ಶಿ ಕಮಲೇಶ್ ವರ್ಶ್ನೆ ಮಾತನಾಡಿ, ಫಿಕ್ಸೆಡ್​ ಡೆಪಾಸಿಟ್​ ಮೇಲಿನ ಬಡ್ಡಿ ಆದಾಯಕ್ಕೆ ಇರುವ ತೆರಿಗೆಯಂತೆಯೇ ಇರುಯತ್ತದೆ ಎಂದು ಹೇಳಿದ್ದಾರೆ. ಫಿಕ್ಸೆಡ್​ ಡೆಪಾಸಿಟ್​ಗೆ ಬರುವ ಬಡ್ಡಿಯ ಮೇಲೆ ಬ್ಯಾಂಕ್​ಗಳು ಶೇಕಡಾ 10ರಷ್ಟು ತೆರಿಗೆಯನ್ನು ಕಡಿತಗೊಳಿಸುತ್ತವೆ (ಮೂಲದಲ್ಲಿ ತೆರಿಗೆ ಕಡಿತಗೊಳಿಸಲಾಗುತ್ತದೆ). ತೆರಿಗೆದಾರರ ತೆರಿಗೆ ಸ್ಲ್ಯಾಬ್ ಶೇಕಡಾ 10 ಪ್ರತಿಶತಕ್ಕಿಂತ ಹೆಚ್ಚಿದ್ದರೆ ಮುಂಗಡ ತೆರಿಗೆಯನ್ನು ಪಾವತಿಸುತ್ತಾರೆ. ಆದರೆ ತೆರಿಗೆ ಜವಾಬ್ದಾರಿ ಶೇ 10ಕ್ಕಿಂತ ಕಡಿಮೆ ಇದ್ದರೆ ಮರುಪಾವತಿ ಪಡೆಯುತ್ತಾರೆ ಎನ್ನಲಾಗಿದೆ. ಇಪಿಎಫ್ ಕೊಡುಗೆಗಳಲ್ಲೂ ಇದೇ ರೀತಿ ವಿಧಾನವನ್ನು ಅಳವಡಿಸಿಕೊಳ್ಳಲಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ.

ಇದನ್ನೂ ಓದಿ: Financial Changes: ಪಿಎಫ್​ನಿಂದ ಎಲ್​ಪಿಜಿ ದರದ ತನಕ ಸೆಪ್ಟೆಂಬರ್ 1ರಿಂದ 5 ಪ್ರಮುಖ ಬದಲಾವಣೆಗಳಿವು

How EPF Saves More Than 1 Crore: ಇಪಿಎಫ್​ ಮೂಲಕ ರೂ. 1.65 ಕೋಟಿ ಉಳಿಸುವುದು ಹೇಗೆಂದು ತಿಳಿಯಿರಿ

(If EPF Contribution More Than Rs 2.5 Lakh How It Will Be Taxed Here Is An Explainer)