AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

How EPF Saves More Than 1 Crore: ಇಪಿಎಫ್​ ಮೂಲಕ ರೂ. 1.65 ಕೋಟಿ ಉಳಿಸುವುದು ಹೇಗೆಂದು ತಿಳಿಯಿರಿ

ಕಾರ್ಮಿಕರ ಭವಿಷ್ಯ ನಿಧಿಯಲ್ಲಿ ಹಣ ಉಳಿತಾಯ ಮಾಡುವ ಮೂಲಕ ನಿವೃತ್ತ ಬದುಕಿಗೆ ರೂ. 1.65 ಕೋಟಿ ಉಳಿತಾಯ ಮಾಡಬಹುದಾ? ಅದಕ್ಕೆ ಏನು ಮಾಡಬೇಕು ಎಂಬುದರ ವಿವರ ಈ ಲೇಖನದಲ್ಲಿದೆ.

How EPF Saves More Than 1 Crore: ಇಪಿಎಫ್​ ಮೂಲಕ ರೂ. 1.65 ಕೋಟಿ ಉಳಿಸುವುದು ಹೇಗೆಂದು ತಿಳಿಯಿರಿ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Aug 10, 2021 | 8:05 PM

Share

ತಿಂಗಳ ಸಂಬಳದ ಪೇ ಸ್ಲಿಪ್ ಕೈಗೆ ಬರುತ್ತಿದ್ದಂತೆ ಎಷ್ಟು ಮೊತ್ತ ಕಡಿತ ಆಗಿದೆ ಅಂತ ನೋಡಿ ಬೇಸರ ಪಟ್ಟುಕೊಳ್ಳುವವರು ಅದೆಷ್ಟೋ ಮಂದಿ. ಆದರೆ ಅಂಥ ಕಡಿತಗಳ ಪೈಕಿ ಒಂದು ಮಾತ್ರ ಒಬ್ಬ ವ್ಯಕ್ತಿಯನ್ನು ಕೋಟ್ಯಧಿಪತಿಯನ್ನಾಗಿ ಮಾಡುವ ಲೆಕ್ಕಾಚಾರ ಇದೆ ಎಂಬುದು ನಿಮಗೆ ಗೊತ್ತಿದೆಯಾ? ನೀವು ಈಗಾಗಲೇ ಊಹೆ ಮಾಡಿರುತ್ತೀರಿ ಅಂತಾದರೆ, ಅದು ನಿಜ. ಕಾರ್ಮಿಕರ ಭವಿಷ್ಯ ನಿಧಿಯಿಂದ (ಇಪಿಎಫ್) ನಿವೃತ್ತಿ ನಮತರ ಕೋಟ್ಯಂತರ ರೂಪಾಯಿ ಪಡೆಯಬಹುದು. ನಂಬುವುದಕ್ಕೆ ಸಾಧ್ಯವಾಗ್ತಿಲ್ಲವಾ? ಉದ್ಯೋಗಿಯು ಇಪಿಎಫ್​ಗೆ ನೀಡಿದ ಕೊಡುಗೆಯಷ್ಟನ್ನೇ ಉದ್ಯೋಗದಾತರೂ ತುಂಬುತ್ತಾರೆ. ಪ್ರತಿ ತಿಂಗಳೂ ಮೊತ್ತ ಸೇರುತ್ತಾ ಹೋಗುತ್ತದೆ. ಇವೆರಡರ ಜತೆಗೆ ಬಡ್ಡಿಯೂ ವರ್ಷಾವರ್ಷ ಸೇರಿಕೊಳ್ಳುತ್ತದೆ. 2020-21ರ ಹಣಕಾಸು ವರ್ಷಕ್ಕೆ ಇಪಿಎಫ್ ಬಡ್ಡಿ ದರ ಶೇ 8.5 ಇದೆ. ಬ್ಯಾಂಕ್​ಗಳಲ್ಲಿ ಫಿಕ್ಸೆಡ್ ಡೆಪಾಸಿಟ್​ಗಳ ಮೇಲೆ ನೀಡುವ ಬಡ್ಡಿ ಕೂಡ ಶೇ 8.5ರ ಸಮೀಪದಲ್ಲೂ ಇಲ್ಲ.

ಇಪಿಎಫ್​ಗೆ ಈಗಿನ ಬಡ್ಡಿ ದರ ಶೇ 8.5ರ ಲೆಕ್ಕವನ್ನೇ ನೋಡಿದರೂ ಒಬ್ಬ ವ್ಯಕ್ತಿಗೆ ಬೇಸಿಕ್ ಸ್ಯಾಲರಿ (ಮೂಲವೇತನ) 25,000 ರೂಪಾಯಿ ತಿಂಗಳಿಗೆ ಇದ್ದರೆ 35 ವರ್ಷಗಳ ಅವಧಿಯಲ್ಲಿ 1.65 ಕೋಟಿ ರೂಪಾಯಿ ಆಗುತ್ತದೆ. ಇಪಿಎಫ್​ ಠೇವಣಿ ಮೇಲೆ ಬಂದಂಥ ಬಡ್ಡಿ ತೆರಿಗೆಮುಕ್ತವಾಗಿರುತ್ತದೆ. ಹಾಗಿದ್ದಲ್ಲಿ ಇಪಿಎಫ್ ಹೂಡಿಕೆ ಮೂಲಕ 1 ಕೋಟಿ ರೂಪಾಯಿಗೂ ಹೆಚ್ಚು ಹಣ ಒಟ್ಟುಗೂಡಿಸುವುದಕ್ಕೆ ಏನು ಮಾಡಬೇಕು? ಅದಕ್ಕಾಗಿ ನಿವೃತ್ತರಾಗುವವರೆಗೆ ಇಪಿಎಫ್​ ಖಾತೆಯಿಂದ ವಿಥ್​ಡ್ರಾ ಮಾಡಬಾರದು. ಉದ್ಯೋಗಕ್ಕೆ ಸೇರಿ ಐದು ವರ್ಷದೊಳಗೆ ಪಿಎಫ್​ ಡ್ರಾ ಮಾಡಿದಲ್ಲಿ ತೆರಿಗೆ ಬೀಳುತ್ತದೆ. ಯಾವಾಗ ಉದ್ಯೋಗ ಬದಲಾವಣೆ ಮಾಡಲಾಗುತ್ತದೋ ಆಗ ಬಾಕಿಯನ್ನು ವಿಥ್​ಡ್ರಾ ಮಾಡುವ ಬದಲಿಗೆ ಹೊಸ ಉದ್ಯೋಗದಾತರ ಬಳಿ ತೆರೆಯುವ ಖಾತೆಗೆ ವರ್ಗಾವಣೆ ಮಾಡಬೇಕು.

ಭಾರತದಲ್ಲಿ ಸರಾಸರಿ ಹಣದುಬ್ಬರವು ದೀರ್ಘಾವಧಿಗೆ ಶೇ 6ರ ಸಮೀಪ ಇರುತ್ತದೆ. ಆದರೆ ಇಪಿಎಫ್​ನಿಂದ ಶೇ 8.5ರ ಸಮೀಪ ಇದೆ. ವೇತನದಾರರಿಗೆ ಇರುವ ಸೀಮಿತ ಅವಕಾಶ ಇದು. ಈ ಹೂಡಿಕೆಯು ಹಣದುಬ್ಬರದ ಸವಾಲುಗಳನ್ನು ಮೀರುತ್ತದೆ. ನಿವೃತ್ತಿ ಹೊತ್ತಿಗೆ ಅಗತ್ಯ ಇರುವ ನಿಧ ಸಂಗ್ರಹಕ್ಕೆ ಸಹಾಯ ಮಾಡುತ್ತದೆ. ದೀರ್ಘಾವಧಿಗೆ ಸಂಪತ್ತು ಸೃಷ್ಟಿಯಾಗುತ್ತದೆ. ನಿಧಿಯನ್ನು ಸೃಷ್ಟಿಸುವುದಕ್ಕಾಗಿ ಆರಂಭದ ವರ್ಷದಲ್ಲಿ ವಿಥ್​ಡ್ರಾ ಮಾಡಬಾರದು ಎಂದು ಅಭಿಙ್ರಾಯಪಡುತ್ತಾರೆ ತಜ್ಞರು. ಅಂದಹಾಗೆ ಇಪಿಎಫ್ ಜತೆಗೆ ಇತರ ಅನುಕೂಲಗಳಾದ ಇನ್ಷೂರೆನ್ಸ್ ಪಾಲಿಸಿ ಸಹ ದೊರೆಯುತ್ತದೆ. ಈ ರೀತಿಯ ಸ್ಥಿರತೆ ಹಾಗೂ ಸುರಕ್ಷತೆ ಇರುವ ಬೇರೆ ಯಾವ ಇನ್​ಸ್ಟ್ರುಮೆಂಟ್ ಇಲ್ಲ. ಹಣ ಹೂಡಿಕೆಗೆ ಅತ್ಯುತ್ತಮ ಮಾರ್ಗ ಇದು.

ಇದನ್ನೂ ಓದಿ: Taxation on small savings: ಪಿಪಿಎಫ್​, ಸುಕನ್ಯಾ ಸಮೃದ್ಧಿ ಮತ್ತಿತರ ಸಣ್ಣ ಉಳಿತಾಯ ಯೋಜನೆಗೆ ತೆರಿಗೆ ಲೆಕ್ಕಾಚಾರ ಹೇಗೆ?

ಇದನ್ನೂ ಓದಿ: How to merge two UAN: ಪಿಎಫ್​ ಖಾತೆದಾರರು ಒಂದಕ್ಕಿಂತ ಹೆಚ್ಚು ಯುಎಎನ್​ ಹೊಂದಿದ್ದರೆ ನಿಯಮಬಾಹಿರ; ಇಂಥ ಸನ್ನಿವೇಶ ಏನು ಮಾಡಬೇಕು?

(How To Save Nearly Rs 2 Crore For Retirement Through Employees Provident Fund)