AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿ ತವರು ರಾಜ್ಯದಲ್ಲೇ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಜಾರಿಗೆ ನಿರಾಸಕ್ತಿ

ಮೋದಿ ಅವರ ತವರು ರಾಜ್ಯ ಗುಜರಾತ್ ರಾಜ್ಯದಲ್ಲಿ​ ಈ ಯೋಜನೆ ಜಾರಿಯಾಗಿಲ್ಲ. ಗುಜರಾತ್ ಮಾತ್ರವಲ್ಲದೆ, ಬಿಜೆಪಿಯ ಮೈತ್ರಿ ಸರ್ಕಾರ ಇರುವ ಬಿಹಾರದಲ್ಲೂ ಯೋಜನೆ ಜಾರಿಯಾಗಿಲ್ಲ.

ಮೋದಿ ತವರು ರಾಜ್ಯದಲ್ಲೇ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಜಾರಿಗೆ ನಿರಾಸಕ್ತಿ
ಪ್ರಾತಿನಿಧಿಕ ಚಿತ್ರ
Follow us
S Chandramohan
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 10, 2021 | 10:56 PM

ಕೇಂದ್ರ ಸರ್ಕಾರದ ಯೋಜನೆಗಳನ್ನು ಬಿಜೆಪಿ ಆಡಳಿತದ ರಾಜ್ಯಗಳು ಚಾಚೂ ತಪ್ಪದೇ ಜಾರಿಗೊಳಿಸುತ್ತವೆ. ಆದರೆ ನರೇಂದ್ರ ಮೋದಿ ಅವರು ತವರು ರಾಜ್ಯ ಗುಜರಾತ್​ನಲ್ಲಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೊಳಿಸಿಲ್ಲ. ಗುಜರಾತ್ ಮಾತ್ರವಲ್ಲದೆ, ದೇಶದ ಇತರ 7 ರಾಜ್ಯಗಳಲ್ಲಿಯೂ ಫಸಲ್ ಭೀಮಾ ಯೋಜನೆ ಜಾರಿಯಾಗಿಲ್ಲ.

ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆಸ್ತಿತ್ವಕ್ಕೆ ಬಂದ ಮೇಲೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಬಿಜೆಪಿ ಆಡಳಿತದ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ. ಆದರೆ, ಮೋದಿ ಅವರ ತವರು ರಾಜ್ಯ ಗುಜರಾತ್​ ಈ ಯೋಜನೆ ಜಾರಿಯಾಗಿಲ್ಲ. ಗುಜರಾತ್ ಮಾತ್ರವಲ್ಲದೆ, ಬಿಜೆಪಿಯ ಮೈತ್ರಿ ಸರ್ಕಾರ ಇರುವ ಬಿಹಾರದಲ್ಲೂ ಯೋಜನೆ ಜಾರಿಯಾಗಿಲ್ಲ.

ಹೀಗಾಗಿ ಕೃಷಿ ಸಂಸದೀಯ ಸ್ಥಾಯಿ ಸಮಿತಿಯು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ದೇಶದ 7 ದೊಡ್ಡ ರಾಜ್ಯಗಳಲ್ಲಿ ಜಾರಿಯಾಗದೇ ಇರಲು ಏನು ಕಾರಣ ಎನ್ನುವುದನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುವಂತೆ ಕೇಂದ್ರ ಕೃಷಿ ಇಲಾಖೆಗೆ ಹೇಳಿದೆ. ಇದು ಯೋಜನೆಯ ವೈಫಲ್ಯವೇ ಅಥವಾ ಯೋಜನೆಯ ಲೋಪದೋಷಗಳಿಂದಾಗಿ ಯೋಜನೆಯು ಜನಪ್ರಿಯತೆ ಕಳೆದುಕೊಂಡಿದೆಯೇ ಎಂದು ಕೇಳಿದೆ. ಕೃಷಿ ಸಂಸದೀಯ ಸ್ಥಾಯಿ ಸಮಿತಿಯ ವರದಿಯನ್ನು ಮಂಗಳವಾರ ಸಂಸತ್‌ನಲ್ಲಿ ಮಂಡಿಸಲಾಗಿದೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು 2016ರಲ್ಲಿ ಆರಂಭಿಸಲಾಗಿದೆ. ಪಂಜಾಬ್ ರಾಜ್ಯವು ಎಂದೂ ಕೂಡ ಯೋಜನೆಯನ್ನು ಜಾರಿಗೊಳಿಸಿಯೇ ಇಲ್ಲ. ಬಿಹಾರ ರಾಜ್ಯ 2018 ರಲ್ಲಿ ಯೋಜನೆ ಜಾರಿಯಿಂದ ಹಿಂದೆ ಸರಿದಿದೆ. 2019ರಲ್ಲಿ ಪಶ್ಚಿಮ ಬಂಗಾಳ ರಾಜ್ಯ ಯೋಜನೆ ಜಾರಿಯಿಂದ ಹಿಂದೆ ಸರಿದಿದೆ. 2020ರಿಂದ ಆಂಧ್ರಪ್ರದೇಶ, ಗುಜರಾತ್, ತೆಲಂಗಾಣ, ಜಾರ್ಖಂಡ್ ರಾಜ್ಯಗಳು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಸ್ಥಗಿತಗೊಳಿಸಿವೆ.

ಕೇಂದ್ರದ ಕೃಷಿ ಇಲಾಖೆಯು ಸಂಸದೀಯ ಸ್ಥಾಯಿ ಸಮಿತಿಯ ವರದಿಗೆ ಪ್ರತ್ಯುತ್ತರವನ್ನು ನೀಡಿದೆ. 2015-16ರಲ್ಲಿ ಯೋಜನೆಗೆ 4.85 ಕೋಟಿ ರೈತರು ಅರ್ಜಿ ಸಲ್ಲಿಸಿದ್ದರು. 2019-20ರ ವೇಳೆಗೆ ಅರ್ಜಿ ಸಲ್ಲಿಸಿದ್ದ ರೈತರ ಸಂಖ್ಯೆ 6.08 ಕೋಟಿಗೆ ಏರಿಕೆ ಆಗಿದೆ. ಇದು ಯೋಜನೆಯ ಜನಪ್ರಿಯತೆ ಹಾಗೂ ಯಶಸ್ಸುನ್ನು ತೋರಿಸುತ್ತೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ರಾಜ್ಯ ಸರ್ಕಾರಗಳ ಹಣಕಾಸು ಸಮಸ್ಯೆ ಮತ್ತು ಸಾಮಾನ್ಯ ವರ್ಷಗಳಲ್ಲಿ ಕಡಿಮೆ ಕ್ಲೇಮ್ ಅನುಪಾತವು ರಾಜ್ಯಗಳು ಯೋಜನೆಯನ್ನು ಜಾರಿಗೊಳಿಸದೇ ಇರಲು ಪ್ರಮುಖ ಕಾರಣಗಳು. ಯೋಜನೆ ಜಾರಿಯಿಂದ ಹಿಂದೆ ಸರಿದ ರಾಜ್ಯಗಳು ತಮ್ಮದೇ ಆದ ಸ್ವಂತ ಫಸಲ್ ಬಿಮಾ ಯೋಜನೆಯನ್ನು ಜಾರಿಗೊಳಿಸುತ್ತಿವೆ. ಯೋಜನೆಯಿಂದ ರಾಜ್ಯಗಳು ಹಿಂದೆ ಸರಿದಿರುವುದು, ಯೋಜನೆ ಜಾರಿಗೊಳಿಸದೇ ಇರುವುದು ಯೋಜನೆಯ ಉದ್ದೇಶವನ್ನೇ ವಿಫಲಗೊಳಿಸಿದಂತೆ ಎಂದು ಸ್ಥಾಯಿ ಸಮಿತಿಯು ಹೇಳಿದೆ. ಇದಕ್ಕೆ ಕಾರಣವಾದ ಅಂಶಗಳ ಬಗ್ಗೆ ಗಮನ ಹರಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಯೋಜನೆ ಜಾರಿಗೊಳಿಸಿರುವ 17 ರಾಜ್ಯಗಳಲ್ಲಿ 2019 ಹಾಗೂ 2020ರ ಮುಂಗಾರು ಹಂಗಾಮಿನಲ್ಲಿ ರೈತರ ಅರ್ಜಿಗಳ ಸಂಖ್ಯೆಯು 3.58 ಕೋಟಿಯಿಂದ 4.27 ಕೋಟಿಗೆ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರವು ಸ್ಥಾಯಿ ಸಮಿತಿಗೆ ತಿಳಿಸಿದೆ. 2020ರಿಂದ ರೈತರು ಸ್ವ ಪ್ರೇರಣೆಯಿಂದ ಯೋಜನೆಯ ವ್ಯಾಪ್ತಿಗೆ ಒಳಪಡಬಹುದು. ರೈತರು ಕೇವಲ ಶೇ 1.5ರಿಂದ ಶೇ5ರಷ್ಟು ವಿಮಾ ಪ್ರೀಮಿಯಂ ಹಣವನ್ನು ಪಾವತಿಸಬೇಕು. ಉಳಿದ ಹಣವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 50:50 ಅನುಪಾತದಲ್ಲಿ ಪಾವತಿಸಬೇಕಿದೆ. ಖಾಸಗಿ ವಿಮಾ ಕಂಪನಿಗಳು ಯೋಜನೆಯನ್ನು ಜಾರಿಗೊಳಿಸುತ್ತಿವೆ.

ಬ್ಯಾಂಕ್ ನಿಂದ ಸಾಲ ಪಡೆದ ರೈತರು, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ವ್ಯಾಪ್ತಿಯಿಂದ ಹೊರಗೆ ಉಳಿಯುವ ಆಯ್ಕೆಯೂ ಇದೆ. ಇದಕ್ಕಾಗಿ ಘೋಷಣಾ ಪತ್ರವನ್ನು ಬ್ಯಾಂಕ್​ಗೆ ನೀಡಬೇಕು. ಆದರೆ, ಬಹಳಷ್ಟು ರೈತರಿಗೆ ಇದರ ಬಗ್ಗೆ ಮಾಹಿತಿಯೇ ಇಲ್ಲ. ಆದರೆ, ರೈತರ ಬ್ಯಾಂಕ್ ಖಾತೆಯಿಂದ ಕಡ್ಡಾಯವಾಗಿ ಹಣ ಕಡಿತವಾಗುತ್ತಿದೆ. ಹೀಗಾಗಿ ಇದನ್ನು ಬದಲಾಯಿಸಬೇಕೆಂದು ಸಂಸತ್ ಸ್ಥಾಯಿ ಸಮಿತಿಯು ಕೇಂದ್ರ ಸರ್ಕಾರಕ್ಕೆ ಹೇಳಿದೆ. ಯಾವ ರೈತರು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ವ್ಯಾಪ್ತಿಗೊಳಪಡಲು ಬಯಸುತ್ತಾರೋ ಅಂಥವರು ಮಾತ್ರವೇ ಬ್ಯಾಂಕ್​ಗೆ ಅರ್ಜಿ ಸಲ್ಲಿಸಿ, ಯೋಜನೆಯ ವ್ಯಾಪ್ತಿಗೆ ಸೇರಲು ಅವಕಾಶ ಕೊಡಬೇಕು. ಕಡ್ಡಾಯವಾಗಿ ರೈತರ ಬ್ಯಾಂಕ್ ಖಾತೆಯಿಂದ ಹಣ ಕಡಿತ ಮಾಡುವುದು ಬೇಡ ಎಂದು ಸಂಸತ್ ಸ್ಥಾಯಿ ಸಮಿತಿಯ ತನ್ನ ವರದಿಯಲ್ಲಿ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.

ಇದನ್ನೂ ಓದಿ: Kisan Credit Card: ಎಸ್​ಬಿಐನ ರೈತ ಗ್ರಾಹಕರು ಕೆಸಿಸಿ ಪರಿಶೀಲನೆ YONO ಮೂಲಕ ಆನ್​ಲೈನ್​ನಲ್ಲಿ ಮಾಡೋದು ಹೇಗೆ?

ಇದನ್ನೂ ಓದಿ: ಬೀದರ್: ಸಮಗ್ರ ಕೃಷಿಯ ಜತೆಗೆ ವಿವಿಧ ಬಗೆಯ ಸಸಿಗಳನ್ನು ಬೆಳೆಸಿದ ರೈತ; ತಿಂಗಳಿಗೆ ಲಕ್ಷ ರೂಪಾಯಿ ಸಂಪಾದನೆ

(Including Gujarat many states not implementing Pradhan Mantri fasal bima scheme)

Published On - 10:48 pm, Tue, 10 August 21

ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮುಖಾಮುಖಿಯಾಗುವುದನ್ನು ತಪ್ಪಿಸಿದ ಪೊಲೀಸ್
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮುಖಾಮುಖಿಯಾಗುವುದನ್ನು ತಪ್ಪಿಸಿದ ಪೊಲೀಸ್
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ದಸರಾ ಮಹೋತ್ಸವ-2025 ಹನ್ನೊಂದು ದಿನಗಳ ಕಾಲ ನಡೆಯಲಿದೆ: ಸಿದ್ದರಾಮಯ್ಯ
ದಸರಾ ಮಹೋತ್ಸವ-2025 ಹನ್ನೊಂದು ದಿನಗಳ ಕಾಲ ನಡೆಯಲಿದೆ: ಸಿದ್ದರಾಮಯ್ಯ
ಮಧುಗಿರಿ ಜಮೀನು ಒತ್ತುವರಿ ಪ್ರಕರಣ ತನಿಖೆಗೊಪ್ಪಿಸಲಾಗಿದೆ: ರಾಜಣ್ಣ
ಮಧುಗಿರಿ ಜಮೀನು ಒತ್ತುವರಿ ಪ್ರಕರಣ ತನಿಖೆಗೊಪ್ಪಿಸಲಾಗಿದೆ: ರಾಜಣ್ಣ
ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆಯಲ್ಲಿ ಪತ್ನಿ ಪ್ರೀತಿ ಜೊತೆ ಗೌತಮ್ ಅದಾನಿ
ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆಯಲ್ಲಿ ಪತ್ನಿ ಪ್ರೀತಿ ಜೊತೆ ಗೌತಮ್ ಅದಾನಿ
ರಾಜ್ಯಾಧ್ಯಕ್ಷನ ಬದಲಾವಣೆ ಬಗ್ಗೆಯೂ ವರಿಷ್ಠರು ಚರ್ಚಿಸಿಲ್ಲ: ಅಶೋಕ
ರಾಜ್ಯಾಧ್ಯಕ್ಷನ ಬದಲಾವಣೆ ಬಗ್ಗೆಯೂ ವರಿಷ್ಠರು ಚರ್ಚಿಸಿಲ್ಲ: ಅಶೋಕ
ಆಟೋ ಚಾಲಕ 37-ವರ್ಷ ವಯಸ್ಸಿನ ಗೋವಿಂದ ಇಂದು ಬೆಳಗ್ಗೆ ಸಾವನ್ನಪ್ಪಿದವರು
ಆಟೋ ಚಾಲಕ 37-ವರ್ಷ ವಯಸ್ಸಿನ ಗೋವಿಂದ ಇಂದು ಬೆಳಗ್ಗೆ ಸಾವನ್ನಪ್ಪಿದವರು
ಹಿರಿತೆರೆ-ಕಿರುತೆರೆನ ಹೇಗೆ ಬ್ಯಾಲೆನ್ಸ್ ಮಾಡ್ತಾರೆ ನಿಶಾ ರವಿಕೃಷ್ಣನ್?
ಹಿರಿತೆರೆ-ಕಿರುತೆರೆನ ಹೇಗೆ ಬ್ಯಾಲೆನ್ಸ್ ಮಾಡ್ತಾರೆ ನಿಶಾ ರವಿಕೃಷ್ಣನ್?