ವಿಕೆ ಸಕ್ಸೇನಾ ವಿರುದ್ಧದ ಮಾನನಷ್ಟ ಪ್ರಕರಣ; ಸುಪ್ರೀಂ ಕೋರ್ಟ್ನಲ್ಲೂ ಮೇಧಾ ಪಾಟ್ಕರ್‌ಗೆ ಹಿನ್ನಡೆ
ದೆಹಲಿಯ ಲೆಫ್ಟಿನೆಂಟ್ ಜನರಲ್ ವಿಕೆ ಸಕ್ಸೇನಾ ಅವರು ಸಲ್ಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಮೇಧಾ ಪಾಟ್ಕರ್ ಅವರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ದೃಢಪಡಿಸಿದೆ. 2001ರಲ್ಲಿ ಈಗ ದೆಹಲಿಯ ಲೆಫ್ಟಿನೆಂಟ್ ಜನರಲ್ ಆಗಿರುವ ವಿಕೆ ಸಕ್ಸೇನಾ ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ನರ್ಮದಾ ಬಚಾವೋ ಆಂದೋಲನದ ನಾಯಕಿ ಮತ್ತು ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರ ಶಿಕ್ಷೆ ಘೋಷಿಸಿದ್ದ ದೆಹಲಿ ಹೈಕೋರ್ಟ್ ತೀರ್ಪನ್ನು ಇಂದು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.

ನವದೆಹಲಿ, ಆಗಸ್ಟ್ 11: ದೆಹಲಿಯ ಲೆಫ್ಟಿನೆಂಟ್ ಜನರಲ್ ವಿಕೆ ಸಕ್ಸೇನಾ (VK Saxena) ಅವರು ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಇಂದು ದೃಢಪಡಿಸಿದೆ. ಈ ಪ್ರಕರಣದಲ್ಲಿ ಮೇಧಾ ಪಾಟ್ಕರ್ (Medha Patkar) ಅವರಿಗೆ ಸುಪ್ರೀಂ ಕೋರ್ಟ್ನಲ್ಲೂ (Supreme Court) ಹಿನ್ನಡೆಯಾಗಿದೆ. ಆದರೆ, ಈ ಪ್ರಕರಣದಲ್ಲಿ ಮೇಧಾ ಪಾಟ್ಕರ್ ಅವರಿಗೆ ವಿಧಿಸಲಾದ 1 ಲಕ್ಷ ರೂ. ದಂಡವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದ್ರೇಶ್ ಮತ್ತು ನ್ಯಾಯಮೂರ್ತಿ ಎನ್. ಕೋಟೀಶ್ವರ್ ಸಿಂಗ್ ಅವರ ನ್ಯಾಯಪೀಠವು ಮೇಧಾ ಪಾಟ್ಕರ್ ಅವರಿಗೆ 1 ಲಕ್ಷ ರೂ. ಪರಿಹಾರ ನೀಡುವಂತೆ ನಿರ್ದೇಶಿಸಿದ್ದ ಆದೇಶವನ್ನು ರದ್ದುಗೊಳಿಸಿದೆ. “ಅರ್ಜಿದಾರರ ಪರ ವಕೀಲರ ವಾದವನ್ನು ಪರಿಗಣಿಸಿ ವಿಧಿಸಲಾದ ದಂಡವನ್ನು ರದ್ದುಗೊಳಿಸಲಾಗಿದೆ. ಮೇಲ್ವಿಚಾರಣೆಯ ಆದೇಶವು ಜಾರಿಗೆ ಬರುವುದಿಲ್ಲ ಎಂದು ನಾವು ಸ್ಪಷ್ಟಪಡಿಸುತ್ತೇವೆ” ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಇದನ್ನೂ ಓದಿ: ನೀವೇ ಏಕೆ ದುಡಿಯಬಾರದು?; ವಿಚ್ಛೇದನದ ವೇಳೆ 12 ಕೋಟಿ ರೂ., ಮನೆ, ಬಿಎಂಡಬ್ಲ್ಯೂ ಕೇಳಿದ ಮಹಿಳೆಗೆ ಸುಪ್ರೀಂ ಕೋರ್ಟ್ ತರಾಟೆ
ನ್ಯಾಯಮೂರ್ತಿಗಳಾದ ಎಂ.ಎಂ ಸುಂದ್ರೇಶ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರ ಪೀಠವು ಮೇಧಾ ಪಾಟ್ಕರ್ ಅವರನ್ನು “ಉತ್ತಮ ನಡವಳಿಕೆ” ಆಧಾರದ ಮೇಲೆ ಬಿಡುಗಡೆ ಮಾಡಿದ ದೆಹಲಿ ಹೈಕೋರ್ಟ್‌ನ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ ಎಂದು ಹೇಳಿದೆ. ಆದರೆ, ಅವರು ಪ್ರತಿ 3 ವರ್ಷಗಳಿಗೊಮ್ಮೆ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗಬೇಕಾಗುತ್ತದೆ ಎಂದು ಹೇಳಿದೆ.
ಜುಲೈ 29ರಂದು ದೆಹಲಿ ಹೈಕೋರ್ಟ್ 70 ವರ್ಷದ ಮೇಧಾ ಪಾಟ್ಕರ್‌ಗೆ ನೀಡಲಾದ ಶಿಕ್ಷೆಯನ್ನು ಎತ್ತಿಹಿಡಿದಿತ್ತು. ಸಾಕ್ಷ್ಯಾಧಾರಗಳು ಮತ್ತು ಅನ್ವಯವಾಗುವ ಕಾನೂನನ್ನು ಸೂಕ್ತವಾಗಿ ಪರಿಗಣಿಸಿದ ನಂತರ ಆದೇಶವನ್ನು ಅಂಗೀಕರಿಸಲಾಗಿದೆ ಎಂದು ಪ್ರತಿಪಾದಿಸಿತು. ದೆಹಲಿ ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್ನಲ್ಲಿ ಮೇಧಾ ಪಾಟ್ಕರ್ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಮದುವೆಯಾದರೂ ಲೈಂಗಿಕ ಸಂಬಂಧ ಬೆಳೆಸಿದ್ದು ಅಪರಾಧ; ಮಹಿಳೆಗೆ ಸುಪ್ರೀಂ ಕೋರ್ಟ್ ತರಾಟೆ
ಗುಜರಾತಿನಲ್ಲಿ ಎನ್ಜಿಎ ನಡೆಸುತ್ತಿದ್ದ ವಿಕೆ ಸಕ್ಸೇನಾ 23 ವರ್ಷಗಳ ಹಿಂದೆ ಮೇಧಾ ಪಾರ್ಟರ್ ವಿರುದ್ಧ ಮಾನಹಾನಿ ಪ್ರಕರಣವನ್ನು ದಾಖಲಿಸಿದ್ದರು. 2000ನೇ ಇಸವಿಯಲ್ಲಿ ದಾಖಲಾಗಿದ್ದ ಮಾನನಷ್ಟ ಪ್ರಕರಣದಲ್ಲಿ ಮೇಧಾ ಪಾಟ್ಕರ್ ಅಪರಾಧಿ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿತ್ತು. 5 ತಿಂಗಳ ಶಿಕ್ಷೆಯನ್ನು ಕೂಡ ವಿಧಿಸಿತ್ತು.
ನವೆಂಬರ್ 25, 2000ರಂದು ಮೇಧಾ ಪಾಟ್ಕರ್ ಅವರು “ದೇಶಭಕ್ತನ ನಿಜವಾದ ಮುಖ” ಎಂಬ ಶೀರ್ಷಿಕೆಯ ಪತ್ರಿಕಾ ಬರಹವೊಂದರಲ್ಲಿ ವಿಕೆ ಸಕ್ಸೇನಾ ಹವಾಲಾ ವ್ಯವಹಾರಗಳಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿದ್ದರು. ತಾವು ನರ್ಮದಾ ಬಚಾವೊ ಆಂದೋಲನಕ್ಕೆ (NBA) 40,000 ರೂ.ಗಳ ಚೆಕ್ ಅನ್ನು ನೀಡಿರುವುದಾಗಿ ಹೇಳಿಕೊಂಡಿದ್ದರು. ವಿಕೆ ಸಕ್ಸೇನಾ 25 ವರ್ಷಗಳ ಹಿಂದೆ ಗುಜರಾತ್‌ನಲ್ಲಿ ಎನ್‌ಜಿಒ ಮುಖ್ಯಸ್ಥರಾಗಿದ್ದಾಗ ಮೇಧಾ ಪಾಟ್ಕರ್ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:52 pm, Mon, 11 August 25




