AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲ್ಲು ಹೊಸ ಸಿನಿಮಾಗೆ ವಿಘ್ನ; ಮುಂಬೈ ಸೆಟ್​ ತೆಗೆದಿದ್ದು ಏಕೆ?

ಸಲ್ಮಾನ್ ಖಾನ್ ನಟನೆಯ ‘ಗಲ್ವಾನ್ ಯುದ್ಧ’ ಚಿತ್ರದ ಮುಂಬೈ ಶೂಟಿಂಗ್ ಮುಂದೂಡಲ್ಪಟ್ಟಿದೆ. ಲಡಾಕ್‌ನಲ್ಲಿ ಆಗಸ್ಟ್ 22 ರಿಂದ ಶೂಟಿಂಗ್ ನಡೆಯಲಿದೆ. ಚಿತ್ರದಲ್ಲಿ ಸಲ್ಮಾನ್ ಖಾನ್ ಕರ್ನಲ್ ಬಿಕ್ಕುಮಲ್ಲ ಸಂತೋಷ್ ಬಾಬು ಪಾತ್ರ ನಿರ್ವಹಿಸುತ್ತಿದ್ದಾರೆ. ಭದ್ರತಾ ಕಾರಣಗಳಿಂದಾಗಿ ಶೂಟಿಂಗ್ ಮುಂದೂಡಲ್ಪಟ್ಟಿದೆ ಎಂದು ವರದಿಯಾಗಿದೆ.

ಸಲ್ಲು ಹೊಸ ಸಿನಿಮಾಗೆ ವಿಘ್ನ; ಮುಂಬೈ ಸೆಟ್​ ತೆಗೆದಿದ್ದು ಏಕೆ?
ಸಲ್ಮಾನ್ ಖಾನ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Aug 11, 2025 | 3:06 PM

Share

ಸಲ್ಮಾನ್ ಖಾನ್ ಅವರು ‘ ಬ್ಯಾಟಲ್ ಆಫ್ ಗಾಲ್ವಾನ್​’ ಸಿನಿಮಾದ ಭಾಗ ಆಗಬೇಕಿತ್ತು. ಈ ಚಿತ್ರ ನೈಜ ಘಟನೆಯನ್ನು ಆಧರಿಸಿದೆ. 2020ರಲ್ಲಿ ಭಾರತ ಮತ್ತು ಚೀನಾದ ಮಧ್ಯೆ ಗಾಲ್ವಾನ್​ ಕಣಿವೆಯಲ್ಲಿ ನಡೆದ ಘರ್ಷಣೆಯನ್ನು ಈ ಸಿನಿಮಾ ಹೊಂದಿದೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ (Salman Khan) ಅವರು ಕರ್ನಲ್ ಬಿಕ್ಕುಮಲ್ಲ ಸಂತೋಷ್ ಬಾಬು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಮುಂಬೈನಲ್ಲಿ ಸಿನಿಮಾದ ಸೆಟ್ ಕೂಡ ಹಾಕಲಾಗಿತ್ತು. ಆದರೆ, ಸದ್ಯದ ಸ್ಥಿತಿಯಲ್ಲಿ ಈ ಭಾಗದ ಶೂಟ್​ನ ಮುಂದಕ್ಕೆ ಹಾಕಲಾಗಿದ್ದು, ಸೆಟ್​ನ ಕೂಡ ತೆಗೆದಿದ್ದಾರೆ ಎಂದು ವರದಿ ಆಗಿದೆ.

ಬಾಂದ್ರಾದ ಮೆಹಬೂಬ್ ಸ್ಟುಡಿಯೋದಲ್ಲಿ ಗಾಲ್ವಾನ್ ಕಣಿವೆಯ ಸೆಟ್ ನಿರ್ಮಾಣ ಆಗಿತ್ತು. ಈ ತಿಂಗಳಾಂತ್ಯದಲ್ಲಿ ಶೂಟ್ ಕೂಡ ಆರಂಭ ಆಗಬೇಕಿತ್ತು. ಆದರೆ, ಮುಂಬೈ ಶೂಟ್ ಮುಂದಕ್ಕೆ ಹೋಗಿದ್ದು ಸೆಟ್​ನ ತೆಗೆಯಲಾಗಿದೆ. ಇದು ತಂಡದ ನಿರ್ಧಾರವಾಗಿದೆ. ಲಡಾಕ್​ನಲ್ಲಿ ಆಗಸ್ಟ್ 22ರಿಂದ ಸೆಪ್ಟೆಂಬರ್ 3ರವರೆಗೆ ಸಿನಿಮಾದ ಶೂಟ್ ನಡೆಯಲಿದೆ. ನೇರವಾಗಿ ಫೈಟ್ ದೃಶ್ಯದ ಜೊತೆ ಶೂಟ್ ಆರಂಭ ಆಗಲಿದೆ.

ಸಲ್ಮಾನ್ ಖಾನ್ ಈ ಚಿತ್ರದಲ್ಲಿ ವಿಶಿಷ್ಟವಾದ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಶೂಟ್ ಮುಂದಕ್ಕೆ ಹೋಗಿದ್ದಕ್ಕೆ ಭದ್ರತಾ ಸಚಿವಾಲಯದಿಂದ ಅಡ್ಡಗಾಲು ಇದೆ ಎಂಬ ಮಾತಿದೆ. ಆದರೆ, ಇದನ್ನು ಕೆಲವರು ಅಲ್ಲಗಳೆದಿದ್ದಾರೆ. ಈ ಚಿತ್ರವು ಭಾರತದ ಸೈನಿಕರ ಧೈರ್ಯವನ್ನು ವಿವರಿಸಲಿದೆ. ಹೀಗಾಗಿ, ರಕ್ಷಣಾ ಸಚಿವಾಲಯದ ಕಡೆಯಿಂದ ಸಿನಿಮಾಗೆ ಬೆಂಬಲ ಇದೆಯಂತೆ.

ಇದನ್ನೂ ಓದಿ
Image
ಎಷ್ಟು ಅರ್ಥಗರ್ಭಿತವಾಗಿತ್ತು ನೋಡಿ 11 ವರ್ಷಗಳ ಹಿಂದೆ ಬಂದ ರಾಜ್ ಕಿರುಚಿತ್ರ
Image
‘ಕಾಟೇರ’ ಕಲೆಕ್ಷನ್​ ದಾಖಲೆ ಮುರಿಯಲು ‘ಸು ಫ್ರಮ್ ಸೋ’ಗೆ ಬೇಕು ಕೆಲವೇ ಕೋಟಿ
Image
‘ಕೂಲಿ’ ಚಿತ್ರದ ರಜನಿ ಸಂಭಾವನೆಯಲ್ಲಿ ಬಿಗ್ ಬಜೆಟ್ ಸಿನಿಮಾ ಮಾಡಬಹುದು
Image
‘ಬ್ಲಾಕ್​ಬಸ್ಟರ್’; ಒಂದು ವಾರ ಮೊದಲೇ ಹೊರಬಿತ್ತು ಕೂಲಿ ಸಿನಿಮಾ ವಿಮರ್ಶೆ

ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಚಿತ್ರವು ಹೀನಾಯವಾಗಿ ಸೋತಿದೆ. ಈ ಚಿತ್ರ ಫ್ಯಾನ್ಸ್​ಗೂ ಇಷ್ಟ ಆಗಿಲ್ಲ. ಈ ಬಗ್ಗೆ ಅಭಿಮಾನಿಗಳಿಗೆ ಬೇಸರ ಇದೆ. ಈ ಕಾರಣಕ್ಕೆ ಸಲ್ಮಾನ್ ಖಾನ್ ಅವರು ಮುಂದಿನ ಸಿನಿಮಾ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ಚಿತ್ರಾಂಗದಾ ಸಿಂಗ್ ಕಾಣಿಸುತ್ತಿದ್ದಾರೆ. ಇವರ ಜೊತೆ ಜಿಯಾನ್ ಶಾ, ಅಂಕುರ್ ಭಾಟಿ, ಹರ್ಷಿಲ್ ಶಾ, ವಿಪಿನ್ ಭಾರದ್ವಾಜ್ ಮೊದಲಾದವರು ನಟಿಸಿದ್ದಾರೆ.

ಇದನ್ನೂ ಓದಿ: ಮಲಯಾಳಂ ನಿರ್ದೇಶಕನೊಟ್ಟಿಗೆ ಸಲ್ಮಾನ್ ಖಾನ್ ಐತಿಹಾಸಿಕ ಹಿನ್ನೆಲೆಯ ಸಿನಿಮಾ

ನೈಜ ಘಟನೆಯ ಸಿನಿಮಾ ಮಾಡುವಾಗ ಸಾಕಷ್ಟು ಎಚ್ಚರಿಕೆ ಬೇಕು. ಆ ರಿಸ್ಕ್​ನ ಸಲ್ಮಾನ್ ಖಾನ್ ತೆಗೆದುಕೊಳ್ಳುತ್ತಿದ್ದಾರೆ. ಜೂನ್ 2020ರಲ್ಲಿ ಭಾರತ ಹಾಗೂ ಚೀನಾ ಸೈನಿಕರು ಹೊಡೆದಾಡಿಕೊಂಡಿದ್ದರು. ಇದೇ ವಿಚಾರ ಇಟ್ಟುಕೊಂಡು ಸಲ್ಲು ಸಿನಿಮಾ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.