AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೈಲಿನಲ್ಲಿದ್ದುಕೊಂಡೇ ಜಾಕ್ವೆಲಿನ್ ಹೆಸರಲ್ಲಿ 25 ಕೋಟಿ ರೂ. ದೇಣಿಗೆ ನೀಡಿದ ಸುಕೇಶ್

ಜಾಕ್ವೆಲಿನ್ ಫರ್ನಾಂಡಿಸ್ ಅವರು 40ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಈ ವೇಳೆ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿ ಸುಕೇಶ್ ಚಂದ್ರಶೇಖರ್ ಅವರು ಪತ್ರ ಬರೆದು ಶುಭಾಶಯ ಕೋರಿದ್ದಾರೆ. ಪತ್ರದಲ್ಲಿ, ಜೈಲಿನಿಂದಲೇ 25 ಕೋಟಿ ರೂಪಾಯಿಗಳನ್ನು ಉತ್ತರಾಖಂಡ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.

ಜೈಲಿನಲ್ಲಿದ್ದುಕೊಂಡೇ ಜಾಕ್ವೆಲಿನ್ ಹೆಸರಲ್ಲಿ 25 ಕೋಟಿ ರೂ. ದೇಣಿಗೆ ನೀಡಿದ ಸುಕೇಶ್
ಜಾಕ್ವೆಲಿನ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Aug 12, 2025 | 8:02 AM

Share

ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಆಗಸ್ಟ್ 11ರಂದು ತಮ್ಮ 40ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ, ದೇಶಾದ್ಯಂತ ಅಭಿಮಾನಿಗಳಿಂದ ಅವರಿಗೆ ಶುಭಾಶಯಗಳ ಮಹಾಪೂರ ಹರಿದು ಬಂತು. ಅದೇ ರೀತಿ, 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿ ಸುಕೇಶ್ ಚಂದ್ರಶೇಖರ್ ಕೂಡ ಅವರಿಗೆ ಪತ್ರ ಬರೆದಿದ್ದಾನೆ. ಹಬ್ಬವಾಗಲಿ ಅಥವಾ ಹುಟ್ಟುಹಬ್ಬವಾಗಲಿ.. ಜಾಕ್ವೆಲಿನ್​ಗೆ ಸುಕೇಶ್ ಕಡೆಯಿಂದ ಪತ್ರ ಬರುತ್ತದೆ.

ದೆಹಲಿಯ ಮಂಡೋಲಿ ಜೈಲಿನಲ್ಲಿರುವ ಸುಕೇಶ್, ಪತ್ರ ಬರೆದು ಜಾಕ್ವೆಲಿನ್​ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾನೆ. ‘ನಿಮಗೆ ಹುಟ್ಟುಹಬ್ಬದ ಶುಭಾಶಯಗಳು.. ದೇವರು ನಿಮ್ಮನ್ನು ಆಶೀರ್ವದಿಸಲಿ’ ಎಂದು ಆತ ಈ ಪತ್ರದಲ್ಲಿ ಬರೆದಿದ್ದಾನೆ. ಇದು ಮಾತ್ರವಲ್ಲದೆ, ಜೈಲಿನಲ್ಲಿ ಕುಳಿತು, ಜಾಕ್ವೆಲಿನ್ ಹೆಸರಲ್ಲಿ 25 ಕೋಟಿ ರೂಪಾಯಿ ನೀಡಿದ್ದಾಗಿ ಆತ ಹೇಳಿದ್ದಾನೆ.

‘ಉತ್ತರಾಖಂಡದಲ್ಲಿ ಬಹಳ ದುರದೃಷ್ಟಕರ ಘಟನೆ ನಡೆದಿದೆ. ನೂರಾರು ಜನರು ಮೇಘಸ್ಫೋಟದಿಂದ ತೊಂದರೆಗೀಡಾಗಿದ್ದಾರೆ. ಅನೇಕರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ. ನಾನು ನಿಮ್ಮ ಹುಟ್ಟುಹಬ್ಬದ ಉಡುಗೊರೆಯಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25 ಕೋಟಿ ರೂ.ಗಳನ್ನು ದೇಣಿಗೆ ನೀಡುತ್ತಿದ್ದೇನೆ. ಈ ಹಣವು ಅಲ್ಲಿನ ಜನರಿಗೆ ಸ್ವಲ್ಪ ಸಹಾಯ ಮಾಡುತ್ತದೆ’ ಎಂದು ಬರೆದಿದ್ದಾನೆ. ಅಂದಹಾಗೆ, ಸುಕೇಶ್ ಈ ರೀತಿ ಜಾಕ್ವೆಲಿನ್‌ಗೆ ಮುಕ್ತ ಪತ್ರ ಬರೆದಿರುವುದು ಇದೇ ಮೊದಲಲ್ಲ.

ಇದನ್ನೂ ಓದಿ
Image
21ನೇ ವಯಸ್ಸಿಗೆ ಮದುವೆ ಆದ ಸ್ಟಾರ್ ನಟಿ; ಆ ಹೀರೋಯಿನ್ ಬಗ್ಗೆ ಇಲ್ಲಿದೆ ವಿವರ
Image
‘ಸು ಫ್ರಮ್ ಸೋ’ಗೆ 3ನೇ ಸೋಮವಾರವೂ ತಗ್ಗದ ಕಲೆಕ್ಷನ್; 100 ಕೋಟಿ ಕ್ಲಬ್ ಪಕ್ಕಾ
Image
ಗೇಲ್ ಜೊತೆ ಚಂದನ್ ಶೆಟ್ಟಿ ವಿಡಿಯೋ ಸಾಂಗ್; ಕನ್ನಡ ಹಾಡಿಗೆ ಎಗ್ಸೈಟ್ ಆದ್ರು
Image
‘ಕಾಟೇರ’ ಕಲೆಕ್ಷನ್​ ದಾಖಲೆ ಮುರಿಯಲು ‘ಸು ಫ್ರಮ್ ಸೋ’ಗೆ ಬೇಕು ಕೆಲವೇ ಕೋಟಿ

ಜಾಕ್ವೆಲಿನ್ ಫರ್ನಾಂಡಿಸ್ ಸುಕೇಶ್ ಜೊತೆ ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಆದರೆ ಜಾಕ್ವೆಲಿನ್ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ಜಾಕ್ವೆಲಿನ್ ಮತ್ತು ಸುಕೇಶ್ ಅವರ ಆತ್ಮೀಯ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಸುಕೇಶ್​ನಿಂದ ಜಾಕ್ವೆಲಿನ್ ತುಂಬಾ ದುಬಾರಿ ಉಡುಗೊರೆಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ: ಪೋಲ್ ಡ್ಯಾನ್ಸ್ ಮಾಡಿದ ಜಾಕ್ವೆಲಿನ್ ಫರ್ನಾಂಡೀಸ್: ಇಲ್ಲಿದೆ ವಿಡಿಯೋ

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾಕ್ವೆಲಿನ್ ಹೇಳಿಕೆ ನೀಡಿದ್ದಾರೆ. ‘ಸುಕೇಶ್ ನನ್ನ ಭಾವನೆಗಳೊಂದಿಗೆ ಆಟವಾಡಿದ್ದಾನೆ. ಅವನು ನನ್ನ ಜೀವನ, ವೃತ್ತಿಜೀವನವನ್ನು ಹಾಳು ಮಾಡಿದ್ದಾನೆ. ಅವನು ನನಗೆ ಮೋಸ ಮಾಡಿದ್ದಾನೆ’ ಎಂದು ಹೇಳಿದ್ದರು. ಸುಕೇಶ್ ತನ್ನ ಸಹೋದ್ಯೋಗಿ ಪಿಂಕಿ ಇರಾನಿ ಮೂಲಕ ಜಾಕ್ವೆಲಿನ್ ಅವರನ್ನು ಸಂಪರ್ಕಿಸಿದ್ದ. ಸುಕೇಶ್ ಗೃಹ ಸಚಿವಾಲಯದೊಂದಿಗೆ ಸಂಬಂಧ ಹೊಂದಿದ್ದಾನೆ ಮತ್ತು ಸರ್ಕಾರಕ್ಕಾಗಿ ಕೆಲಸ ಮಾಡುತ್ತಿದ್ದಾನೆ ಎಂದು ಜಾಕ್ವೆಲಿನ್‌ಗೆ ಪರಿಚಯಿಸಲಾಗಿತ್ತು. ಇದನ್ನು ನಂಬಿ ಜಾಕ್ವೆಲಿನ್ ಮೋಸ ಹೋದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.