AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

21ನೇ ವಯಸ್ಸಿಗೆ ಮದುವೆ ಆದ ಸ್ಟಾರ್ ನಟಿ; ಆ ಹೀರೋಯಿನ್ ಬಗ್ಗೆ ಇಲ್ಲಿದೆ ವಿವರ

Sayyeshaa Saigal Birthday: ಸಾಯೇಶಾ ಸೈಗಲ್ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಮಿಂಚಿ ನಂತರ ಕನ್ನಡ ಚಿತ್ರರಂಗಕ್ಕೆ 'ಯುವರತ್ನ' ಚಿತ್ರದ ಮೂಲಕ ಪ್ರವೇಶಿಸಿದರು. ಸಾಯೇಶಾ ಬಾಲಿವುಡ್ ನಟ ಸುಮೀತ್ ಸೈಗಲ್ ಅವರ ಪುತ್ರಿ. ಅವರು ತಮ್ಮ 21 ನೇ ವಯಸ್ಸಿನಲ್ಲಿ ಆರ್ಯ ಅವರನ್ನು ವಿವಾಹವಾದರು.

21ನೇ ವಯಸ್ಸಿಗೆ ಮದುವೆ ಆದ ಸ್ಟಾರ್ ನಟಿ; ಆ ಹೀರೋಯಿನ್ ಬಗ್ಗೆ ಇಲ್ಲಿದೆ ವಿವರ
ಸಾಯೇಶಾ-ಆರ್ಯ
 ಶ್ರೀಲಕ್ಷ್ಮೀ ಎಚ್
| Edited By: |

Updated on: Aug 12, 2025 | 7:42 AM

Share

ತೆಲುಗು ಹಾಗೂ ತಮಿಳಿನಲ್ಲಿ ಮಿಂಚಿ ನಂತರ ‘ಯುವರತ್ನ’  (Sayyeshaa Saigal) ಸಿನಿಮಾ ಮೂಲಕ ಸ್ಯಾಂಡಲ್​​ವುಡ್​ಗೆ ಕಾಲಿಟ್ಟವರು ನಟಿ ಸಾಯೇಶಾ ಸೈಗಲ್​. ‘ಯುವರತ್ನ’ದಲ್ಲಿ ಸಿಕ್ಕ ಅವಕಾಶವನ್ನು ಸಾಯೇಶಾ ಒಳ್ಳೆಯ ರೀತಿಯಲ್ಲಿ ಬಳಕೆ ಮಾಡಿಕೊಂಡರು ಎಂದೇ ಹೇಳಬಹುದು. ಅವರಿಗೆ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ಹೀಗಿರುವಾಗಲೇ ನಟ ಆರ್ಯ ಅವರನ್ನು ಮದುವೆ ಆದರು. ಸಾಯೇಶಾಗೆ ಈಗ 28 ವರ್ಷ. ಅವರ ಬಗ್ಗೆ ಇಂದು ತಿಳಿದುಕೊಳ್ಳೋಣ.

ಸಾಯೇಶಾ ಅವರು ಮುಂಬೈ ಮೂಲದವರು. ಅವರು ಜನಿಸಿದ್ದು 1997ರ ಆಗಸ್ಟ್​ 12ರಂದು. ಸಾಯೇಶಾ ಹಿನ್ನೆಲೆ ಸಣ್ಣದೇನು ಅಲ್ಲ. ಅವರಿಗೆ ಚಿತ್ರರಂಗದ ಹಿನ್ನೆಲೆ ಇದೆ. 90ರ ದಶಕದಲ್ಲಿ ಬಾಲಿವುಡ್​ನಲ್ಲಿ ಆ್ಯಕ್ಟಿವ್​ ಆಗಿದ್ದ ನಟ ಹಾಗೂ ನಿರ್ಮಾಪಕ ಸುಮೀತ್​ ಸೈಗಲ್​ ಪುತ್ರಿಯೇ ಸಾಯೇಶಾ. ಹೀಗಾಗಿ, ಇವರಿಗೆ ಸಹಜವಾಗಿಯೇ ನಟನೆ ಬಗ್ಗೆ ಆಸಕ್ತಿ ಮೂಡಿತ್ತು ಎನ್ನಬಹುದು. ಜೊತೆಗೆ ಅವಕಾಶ ಕೂಡ ಸಿಕ್ಕಿತು.

10 ವರ್ಷಗಳ ಹಿಂದೆ ಅಂದರೆ 2015ರಲ್ಲಿ ತೆರೆಗೆ ಬಂದ ತೆಲುಗಿನ ‘ಅಖಿಲ್​’ ಸಿನಿಮಾ ಮೂಲಕ ಸಾಯೇಶಾ ಸಿನಿಮಾ ಇಂಡಸ್ಟ್ರಿಗೆ ಕಾಲನ್ನು ಇಟ್ಟಿದ್ದಾರೆ. ನಂತರ ಅಜಯ್​ ದೇವಗನ್​ ನಟನೆಯ ‘ಶಿವಾಯ್​’ ಸಿನಿಮಾದಲ್ಲಿ ಬಣ್ಣ ಹಚ್ಚಲು ಅವಕಾಶ ಪಡೆದುಕೊಂಡರು ಎನ್ನಬಹುದು. ಈ ಮೂಲಕ ಬಾಲಿವುಡ್​ನಲ್ಲೂ ಅವರು ಖಾತೆ ತೆರೆದಿದ್ದಾರೆ. ನಂತರ ಸಾಲು ಸಾಲು ತಮಿಳು ಸಿನಿಮಾಗಳಲ್ಲಿ ನಟಿಸಿ ಸಾಯೇಶಾ ಗಮನ ಸೆಳೆದರು.

ಇದನ್ನೂ ಓದಿ
Image
‘ಸು ಫ್ರಮ್ ಸೋ’ಗೆ 3ನೇ ಸೋಮವಾರವೂ ತಗ್ಗದ ಕಲೆಕ್ಷನ್; 100 ಕೋಟಿ ಕ್ಲಬ್ ಪಕ್ಕಾ
Image
ಗೇಲ್ ಜೊತೆ ಚಂದನ್ ಶೆಟ್ಟಿ ವಿಡಿಯೋ ಸಾಂಗ್; ಕನ್ನಡ ಹಾಡಿಗೆ ಎಗ್ಸೈಟ್ ಆದ್ರು
Image
‘ಕಾಟೇರ’ ಕಲೆಕ್ಷನ್​ ದಾಖಲೆ ಮುರಿಯಲು ‘ಸು ಫ್ರಮ್ ಸೋ’ಗೆ ಬೇಕು ಕೆಲವೇ ಕೋಟಿ
Image
‘ಕೂಲಿ’ ಚಿತ್ರದ ರಜನಿ ಸಂಭಾವನೆಯಲ್ಲಿ ಬಿಗ್ ಬಜೆಟ್ ಸಿನಿಮಾ ಮಾಡಬಹುದು

ಆರ್ಯ ಅವರನ್ನು ಭೇಟಿ ಆಗಿದ್ದು ಕೂಡ ಸೆಟ್​ನಲ್ಲಿಯೇ. 2018ರಲ್ಲಿ ತೆರೆಗೆ ಬಂದ ‘ಗಜನಿಕಾಂತ್’​ ಸಿನಿಮಾದಲ್ಲಿ ತಮಿಳಿನ ಸ್ಟಾರ್​ ಹೀರೋ ಆರ್ಯಗೆ ಜೋಡಿಯಾಗಿ ಸಾಯೇಶಾ ನಟಿಸಿದ್ದರು. ನಂತರ ‘ಕಾಪನ್’​, ‘ಟೆಡ್ಡಿ’ ಸಿನಿಮಾಗಳಲ್ಲೂ ಇಬ್ಬರೂ ಒಟ್ಟಾಗಿ ಬಣ್ಣ ಹಚ್ಚಿದರು. ಸಾಲು ಸಾಲು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ ಇವರ ಮಧ್ಯೆ ಸೆಟ್​ನಲ್ಲೇ ಪ್ರೀತಿ ಮೂಡಿತು.

ಇದನ್ನೂ ಓದಿ: ‘ಯುವರತ್ನ’ ನಾಯಕಿಗೆ ವಿವಾಹ ವಾರ್ಷಿಕೋತ್ಸವ; ಸಂತಸ ಹಂಚಿಕೊಂಡ ಸಾಯೇಶಾ

ಆರ್ಯ ಹಾಗೂ ಸಾಯೇಶಾ ಕದ್ದುಮುಚ್ಚಿ ಓಡಾಡುತ್ತಿರುವ ಸುದ್ದಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು. ನಂತರ 2019ರ ಮಾರ್ಚ್​​ 10ರಂದು ಇಬ್ಬರೂ ಮದುವೆ ಆಗಿ ಅಭಿಮಾನಿಗಳಿಗೆ ಸರ್​ಪ್ರೈಸ್​ ನೀಡಿದರು. ಈ ಮೂಲಕ 21ನೇ ವಯಸ್ಸಿಗೆ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕೆಲ ವರ್ಷಗಳ ಹಿಂದೆ ಅವರು ಮಗು ಕೂಡ ಜನಿಸಿದೆ ಅನ್ನೋದು ವಿಶೇಷ.

ಸಾಯೇಶಾ ಹಾಗೂ ಆರ್ಯ ನಡುವಿನ ವಯಸ್ಸಿನ ಅಂತರ ಆಗಾಗ ಚರ್ಚೆ ಆಗುತ್ತದೆ. ಇವರ ಮಧ್ಯೆ 17 ವರ್ಷಗಳ ಅಂತರ ಇದೆ. ಇದು ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದ್ದಂತೂ ಸತ್ಯ. ಆದರೆ, ಈ ಬಗ್ಗೆ ಅವರು ತಲೆಕೆಡಿಸಿಕೊಂಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು