‘ಪ್ರೇಮದ ಊರಲಿ’ ಕ್ರೇಜ್: ಟಿಕೆಟ್ಗಾಗಿ ಪರಸ್ಪರ ಬಡಿದಾಡಿಕೊಂಡ ಮಹಿಳೆಯರು, ತಾಳಿ ಪೀಸ್ ಪೀಸ್
'ಪ್ರೇಮದ ಊರಲಿ' ಸಿನಿಮಾ, ಇದೀಗ ಭರ್ಜರಿಯಾಗಿ ಸದ್ದು ಮಾಡುತ್ತಾ, ಬಾಕ್ಸ್ ಆಫೀಸ್ ಚಿಂದಿ ಉಡಾಯಿಸುತ್ತಿದೆ. ಸೆಪ್ಟೆಂಬರ್ 25ರಂದು ಬಿಡುಗಡೆಯಾದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ರಿಲೀಸ್ ಆಗಿ ಒಂದು ತಿಂಗಳು ಆಗುತ್ತಾ ಆದ್ರೂ ಸಿನಿಮಾದ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಕೆಲವೆಡೆ ಸಿನಿಮಾ ಟಿಕೆಟ್ಗಾಗಿ ನೂಕುನುಗ್ಗಲು, ಗಲಾಟೆಗಳು ಆಗುತ್ತಿವೆ. ಇದಕ್ಕೆ ಪೂರಕವೆಂಬಂತೆ ಹಾವೇರಿಯಲ್ಲಿ ಟಿಕೆಟ್ಗಾಗಿ ಮಹಿಳೆಯರ ನಡುವೆ ಮಾರಾಮಾರಿ ನಡೆದ ಘಟನೆ ಬೆಳಕಿಗೆ ಬಂದಿದೆ.
ಹಾವೇರಿ, (ಅಕ್ಟೋಬರ್ 22): ಮನೋಜ್ ಕುಮಾರ್ ನಿರ್ದೇಶನದ ರಂಗಾಯಣ ರಘು, ಶ್ರೀರಾಮ್, ತಪಸ್ವಿನಿ ಪೂಣಚ್ಚ, ರಮಿಕಾ ಶಿವು ಮುಖ್ಯ ಪಾತ್ರದಲ್ಲಿ ನಟಿಸಿರುವ ಸಣ್ಣ ಬಜೆಟ್ ನ ‘ಪ್ರೇಮದ ಊರಲಿ’ ಸಿನಿಮಾ, ಇದೀಗ ಭರ್ಜರಿಯಾಗಿ ಸದ್ದು ಮಾಡುತ್ತಾ, ಬಾಕ್ಸ್ ಆಫೀಸ್ ಚಿಂದಿ ಉಡಾಯಿಸುತ್ತಿದೆ. ಸೆಪ್ಟೆಂಬರ್ 25ರಂದು ಬಿಡುಗಡೆಯಾದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ರಿಲೀಸ್ ಆಗಿ ಒಂದು ತಿಂಗಳು ಆಗುತ್ತಾ ಆದ್ರೂ ಸಿನಿಮಾದ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಕೆಲವೆಡೆ ಸಿನಿಮಾ ಟಿಕೆಟ್ಗಾಗಿ ನೂಕುನುಗ್ಗಲು, ಗಲಾಟೆಗಳು ಆಗುತ್ತಿವೆ. ಇದಕ್ಕೆ ಪೂರಕವೆಂಬಂತೆ ಹಾವೇರಿಯಲ್ಲಿ ಟಿಕೆಟ್ಗಾಗಿ ಮಹಿಳೆಯರ ನಡುವೆ ಮಾರಾಮಾರಿ ನಡೆದ ಘಟನೆ ಬೆಳಕಿಗೆ ಬಂದಿದೆ.
ಹೌದು….ಹಾವೇರಿಯ ಮಾಗಾವಿ ಚಿತ್ರಮಂದಿರದಲ್ಲಿ ಪ್ರೇಮದ ಊರಲಿ ಸಿನಿಮಾ ಟಿಕೆಟ್ ವಿಚಾರಕ್ಕೆ ಮಹಿಳೆಯರು ಕಿತ್ತಾಡಿಕೊಂಡಿದ್ದಾರೆ. ಗಂಡಂದಿರ ಮುಂದೆ ಇಬ್ಬರು ಮಹಿಳೆಯರು ಪರಸ್ಪರ ಕೂದಲು ಹಿಡಿದು, ಮಾಂಗಲ್ಯಸರ ಕಿತ್ತುಕೊಂಡು ಜಗಳವಾಡಿಕೊಂಡಿದ್ದಾರೆ. ಮುಖ-ಮೈ ಪರಚಿಕೊಂಡು ಹೊಡೆದಾಡಿಕೊಂಡ ಗೃಹಿಣಿಯರು, ಕೊನೆಗೆ ನಿಸಿಮಾ ನೋಡದೆ ಹೋಗಿದ್ದಾರೆ.

