AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರಿದಾಗುತ್ತಿದೆ 4 ಜಿಲ್ಲೆಗಳ ಜೀವನಾಡಿ: ಬಸವಸಾಗರ ಜಲಾಶಯದಲ್ಲಿ ತೀರಾ ಕನಿಷ್ಠ ಮಟ್ಟಕ್ಕೆ ಕುಸಿದ ನೀರಿನ ಸಂಗ್ರಹ

ಯಾದಗಿರಿ, ರಾಯಚೂರು, ಕಲಬುರಗಿ ಹಾಗೂ ವಿಜಯಪುರ ಜಿಲ್ಲೆಯ ಜೀವನಾಡಿಯಾದ ಬಸವಸಾಗರ ಜಲಾಶಯದಲ್ಲಿ ನೀರಿನ ಸಂಗ್ರಹ ತೀರಾ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಕೇವಲ 4 ಟಿಎಂಸಿ ನೀರು ಮಾತ್ರ ಬಳಕೆಗೆ ಲಭ್ಯವಿರುವುದು ರೈತರ ಕಂಗೆಡಿಸಿದೆ. ಮೇ, ಜೂನ್​​​ನಲ್ಲಿ ಮಳೆ ಆಗದ ಹಿನ್ನಲೆ ಆ ಸಮಯದಲ್ಲಿಯೇ ಜಲಾಶಯ ಬತ್ತಿ ಹೋಗಲಿದೆ ಎಂದು ಭಾವಿಸಲಾಗಿತ್ತು. ಆದರೆ ಜುಲೈ ಹಾಗೂ ಆಗಸ್ಟ್ ತಿಂಗಳುಗಳಲ್ಲಿ ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗಿದ್ದ ಪರಿಣಾಮ ಜಲಾಶಯ ಭರ್ತಿ ಆಗಿತ್ತು. ಆದರೆ ಬಳಿಕ ಮಳೆಯಾಗದ ಕಾರಣ ಈಗ ಡ್ಯಾಂ ಮತ್ತೆ ಬರಿದಾಗುತ್ತಿದೆ.

ಬರಿದಾಗುತ್ತಿದೆ 4 ಜಿಲ್ಲೆಗಳ ಜೀವನಾಡಿ: ಬಸವಸಾಗರ ಜಲಾಶಯದಲ್ಲಿ ತೀರಾ ಕನಿಷ್ಠ ಮಟ್ಟಕ್ಕೆ ಕುಸಿದ ನೀರಿನ ಸಂಗ್ರಹ
ಬಸವಸಾಗರ ಜಲಾಶಯದಲ್ಲಿ ತೀರಾ ಕನಿಷ್ಠ ಮಟ್ಟಕ್ಕೆ ಕುಸಿದ ನೀರಿನ ಸಂಗ್ರಹ
ಅಮೀನ್​ ಸಾಬ್​
| Edited By: |

Updated on: Oct 22, 2026 | 3:51 PM

Share

ಯಾದಗಿರಿ, ಅಕ್ಟೋಬರ್​​ 22: ಮುಂಗಾರು ಮಳೆಯ ಅಭಾವದಿಂದಾಗಿ ಕರ್ನಾಟಕವನ್ನು ಭೀಕರ ಬರಗಾಲ ಕಾಡಿದ್ದು, ಅದಾಗಲೇ ಸಾವಿರಾರು ಕೆರೆ ಕಟ್ಟೆಗಳು ನೀರಿಲ್ಲದೆ ಒಣಗಿ ಭಣಗುಡುತ್ತಿವೆ. ಈ ನಡುವೆ ಯಾದಗಿರಿ, ರಾಯಚೂರು, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಯ ರೈತರ ಜೀವನಾಡಿಯಾಗಿರುವ ಬಸವಸಾಗರ ಜಲಾಶಯವೂ ಸಂಪೂರ್ಣ ಖಾಲಿ ಖಾಲಿಯಾಗಿರೋದು ಅನ್ನದಾತರನ್ನು ಕಂಗೆಡಿಸಿದೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಳಿಯ ಬಸವಸಾಗರ ಜಲಾಶಯದಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಕುಡಿಯುವ ನೀರಿಗೂ ಸಂಕಷ್ಟ ಎದುರಾಗುವ ಎಲ್ಲ ಲಕ್ಷಣಗಳು ಗೋಚರಿಸಿವೆ.

4 ಟಿಎಂಸಿ ನೀರು ಮಾತ್ರ ಬಳಕೆಗೆ ಲಭ್ಯ

Dam (2)

ಬಸವಸಾಗರ ಜಲಾಶಯ

33.33 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಈ ಜಲಾಶಯದಲ್ಲಿ ಹಾಲಿ ಕೇವಲ 24 ಟಿಎಂಸಿ ಮಾತ್ರ ನೀರಿನ ದಾಸ್ತಾನಿದೆ. ಈ ಪೈಕಿ 14 ಟಿಎಂಸಿ ಡೆಡ್ ಸ್ಟೋರೇಜ್ ಆಗಿದ್ದರೆ, 6 ಟಿಎಂಸಿ ನೀರನ್ನು ರಿಸರ್ವ್​​ ಆಗಿ ಇಡಲಾಗುತ್ತದೆ. ಹೀಗಾಗಿ ಬಳಕೆಗೆ ಸಿಗೋದು ಕೇವಲ 4 ಟಿಎಂಸಿ ಮಾತ್ರವಾಗಿದೆ. ಈ 4 ಟಿಎಂಸಿ ನೀರಲ್ಲೇ ಅಗತ್ಯತೆಗಳನ್ನು ಪೂರೈಸಿಕೊಳ್ಳಬೇಕಿದೆ. ಮುಂಗಾರು ಬೆಳೆಗೆ ನೀರಿನ ಕೊರತೆ ಹಿನ್ನಲೆ ವಾರಬಂದಿ ಮೂಲಕ ನೀರು ಹರಿಸಲಾಗುತ್ತಿದ್ದು, ಪ್ರತಿ ಬಾರಿ ನೀರು ಹೆಚ್ಚಿನ ಪ್ರಮಾಣದಲ್ಲಿ ಇರುತ್ತಿರುವ ಕಾರಣ ಮೊದಲ ಬೆಳೆಗೆ ನಿರಂತರವಾಗಿ ಹರಿಸಲಾಗುತ್ತಿತ್ತು. ಆದರೆ ಈ ಬಾರಿ ನೀರಿನ ಲಭ್ಯತೆ ಮೇಲೆ ಬಿಡಲಾಗುತ್ತಿದೆ.

ಇದನ್ನೂ ಓದಿ: ಬರದಿಂದ ಹೆಚ್ಚಿದ ನೀರಿನ ಕೊರತೆ: ಕರ್ನಾಟಕದಲ್ಲಿ ಅಂತರ್ಜಲ ಬಳಕೆ ಶೇ 70ರ ಗಡಿ ದಾಟುವ ಆತಂಕ

ಮೇ, ಜೂನ್​​​ನಲ್ಲಿ ಮಳೆ ಆಗದ ಹಿನ್ನಲೆ ಆ ಸಮಯದಲ್ಲಿಯೇ ಜಲಾಶಯ ಬತ್ತಿ ಹೋಗಲಿದೆ ಎಂದು ಭಾವಿಸಲಾಗಿತ್ತು. ಆದರೆ ಜುಲೈ ಹಾಗೂ ಆಗಸ್ಟ್ ತಿಂಗಳುಗಳಲ್ಲಿ ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗಿದ್ದ ಪರಿಣಾಮ ಜಲಾಶಯ ಭರ್ತಿ ಆಗಿತ್ತು. ಆದರೆ ಬಳಿಕ ಮಳೆಯಾಗದ ಕಾರಣ ಈಗ ಡ್ಯಾಂ ಮತ್ತೆ ಬರಿದಾಗುತ್ತಿದೆ. ಹೀಗಾಗಿ ನೀರಿನ ಅಭಾವದ ಕಾರಣ ಹಿಂಗಾರು ಬೆಳೆಗೆ ಅಗತ್ಯವಿರುವ ನೀರಿನ ಜೊತೆಗೆ ಮುಂದೆ ಕುಡಿಯುವ ನೀರಿಗೂ ಸಾಕಷ್ಟು ತೊಂದರೆ ಆಗುವ ಮುನ್ಸೂಚನೆ ಸಿಕ್ಕಿದೆ. ಇದೇ ಜಲಾಶಯದ ನೀರು ನಂಬಿ ನಾಲ್ಕು ಜಿಲ್ಲೆಗಳ 4.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯಲಾಗುತ್ತದೆ. ಡ್ಯಾಂ ಬರಿದಾಗುತ್ತಿರುವ ಕಾರಣ ಅನ್ನದಾತರಲ್ಲಿ ಚಿಂತೆ ಹೆಚ್ಚಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಅಮೀನ್​ ಸಾಬ್​
ಅಮೀನ್​ ಸಾಬ್​

ಅಮೀನ್​ ಸಾಬ್​ ಕಳೆದ ಹತ್ತು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿತ್ತಿದ್ದಾರೆ. ಬೆಂಗಳೂರಿನಿಂದ ಮಾಧ್ಯಮ ವೃತ್ತಿಯನ್ನ ಆರಂಬಿಸಿದ್ದು ಎರಡು ವರ್ಷಗಳ ಕಾಲ ಬೆಂಗಳೂರಿನಲ್ಲಿ ಮೆಟ್ರೊ ರಿಪೋರ್ಟರ್ ಆಗಿ ಕೆಲಸ‌ ನಿರ್ವಹಿಸಿದ್ದಾರೆ. ಸದ್ಯ ಯಾದಗಿರಿ ಜಿಲ್ಲೆಯಲ್ಲಿ ಕಳೆದ ಎಂಟು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಹವ್ಯಾಸ ಕ್ರಿಕೆಟ್ ಆಡುವುದು, ಮಾನವೀಯ ಮೌಲ್ಯಗಳುಳ್ಳ ಸುದ್ದಿಗಳನ್ನ ವರದಿ ಮಾಡುವುದು.

Read More