AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ: ಕಾಂಗ್ರೆಸ್​​ನಿಂದ ಗಿಫ್ಟ್ ಕೂಪನ್, ಹಣ ಹಂಚಿಕೆ ಆರೋಪ

ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ: ಕಾಂಗ್ರೆಸ್​​ನಿಂದ ಗಿಫ್ಟ್ ಕೂಪನ್, ಹಣ ಹಂಚಿಕೆ ಆರೋಪ

ಕಿರಣ್​ ಹನಿಯಡ್ಕ
| Edited By: |

Updated on:Oct 22, 2026 | 2:36 PM

Share

ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಗಿಫ್ಟ್ ಕೂಪನ್‌, ಫ್ಲಾಸ್ಕ್, ಟಿಫಿನ್ ಬಾಕ್ಸ್ ಮತ್ತು ಹಣ ಹಂಚುವ ಮೂಲಕ ಮತದಾರರನ್ನು ಸೆಳೆಯಲು ಯತ್ನಿಸುತ್ತಿದ್ದಾರೆಂದು ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಬಿಇಒಗಳ ಮೂಲಕ ಈ ಚಟುವಟಿಕೆ ನಡೆಯುತ್ತಿದೆ ಎಂದು ದೂರಿದ ಅವರು, ತಕ್ಷಣವೇ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್​​ 22: ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನಲೆ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಗಿಫ್ಟ್ ಕೂಪನ್‌, ಫ್ಲಾಸ್ಕ್, ಟಿಫಿನ್ ಬಾಕ್ಸ್ ಮತ್ತು ಹಣವನ್ನು ಹಂಚುವ ಮೂಲಕ ಮತದಾರರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ ಎಂದು ಪರಿಷತ್​​ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ. ಪುಟ್ಟಣ್ಣರಿಂದ ದಸರಾ ಹಬ್ಬದ ಶುಭಾಶಯಗಳು ಎನ್ನುವ ಗಿಫ್ಟ್ ಕೂಪನ್ ಕಾರ್ಡ್ ಹಂಚಲಾಗಿದೆ. ಈ ಗಿಫ್ಟ್ ಕಾರ್ಡ್​​ಗಳನ್ನು ಕೊಟ್ಟು ಲುಲು ಮಾಲ್​​ನಲ್ಲಿ ವಸ್ತು ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಬಿಇಒಗಳ ಮೂಲಕ ಗಿಫ್ಟ್ ಕೂಪನ್ ಹಂಚುವ ಕೆಲಸ ನಡೆಯುತ್ತಿದ್ದು, ಹಣದ ಆಮಿಷ ಒಡ್ಡುವ ಕೆಲಸವೂ ನಡೆಯುತ್ತಿದೆ. ನಿಮಗೆ ಏನಾದರೂ ಮಾನ ಮರ್ಯಾದೆ ಇದೆಯಾ? ಈ ರೀತಿಯಲ್ಲಿ ನೀವು ಶಾಸಕರಾಗಬೇಕಾ? ಕಾಂಗ್ರೆಸ್​​ನವರು ಇದಕ್ಕೆ ಉತ್ತರಿಸಬೇಕಿದೆ. ಇದು ವೋಟ್ ಚೋರಿ ಅಲ್ಲ ಅಂತಾ ಹೇಳಿ ನೋಡೋಣ ಎಂದ ಛಲವಾದಿ ನಾರಾಯಣಸ್ವಾಮಿ, ಕಾಂಗ್ರೆಸ್ ಅಭ್ಯರ್ಥಿ ಜೊತೆ ಶಾಮೀಲಾಗಿರುವ ಬಿಇಒಗಳ ಫೋಟೋ ಬಿಡುಗಡೆ ಮಾಡುತ್ತೇವೆ ಎಂದೂ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Oct 22, 2026 02:14 PM

Follow Us
ಕಿರಣ್​ ಹನಿಯಡ್ಕ
ಕಿರಣ್​ ಹನಿಯಡ್ಕ

TV9 ಕನ್ನಡದಲ್ಲಿ ಹಿರಿಯ ರಾಜಕೀಯ ವರದಿಗಾರ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. 17 ವರ್ಷಗಳಿಂದ ಮಾಧ್ಯಮ ವೃತ್ತಿ. ಮುದ್ರಣ ಮಾಧ್ಯಮದಲ್ಲಿ ಸಬ್ ಎಡಿಟರ್, ವಿದ್ಯುನ್ಮಾನ ಮಾಧ್ಯಮದಲ್ಲಿ ನ್ಯೂಸ್ ಡೆಸ್ಕ್ ಮತ್ತು ರಾಜಕೀಯ ವರದಿಗಾರಿಕೆಯಲ್ಲಿ ಅನುಭವ.

Read More