ದಿಲ್ಜೀತ್ ಕಾನ್ಸರ್ಟ್ಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸ್
ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಲೈವ್ ಕಾನ್ಸರ್ಟ್ ಮಾರುಕಟ್ಟೆ ಬೆಳೆಯುತ್ತಿರುವ ರೀತಿ, ಅದು ಸೃಷ್ಟಿಸುವ ಅವಕಾಶಗಳ ಬಗ್ಗೆ ಚರ್ಚಿಸಿದ್ದರು. ಅದಾದ ಬಳಿಕ ಮೋದಿ ಅವರು ಎಲ್ಲ ರಾಜ್ಯ ಸರ್ಕಾರಗಳ ಬಳಿ ಮನವಿ ಮಾಡಿ ಲೈವ್ ಕಾನ್ಸರ್ಟ್ಗಳಿಗೆ ಪೂರಕ ವಾತಾವರಣ ನಿರ್ಮಾಣ ಮಾಡುವಂತೆ ಮನವಿ ಮಾಡಿದ್ದರು. ಇದರಿಂದ ಭಾರತದಲ್ಲಿ ಲೈವ್ ಕಾನ್ಸರ್ಟ್ಗಳು ಹೆಚ್ಚಾಗುತ್ತವೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇದೀಗ ಅದೇ ದಿಲ್ಜೀತ್ ಅವರ ಹೊಸ ಲೈವ್ ಕಾನ್ಸರ್ಟ್ಗೆ ದೆಹಲಿ ಸರ್ಕಾರ ಅವಕಾಶ ನಿರಾಕರಿಸಿದೆ.

ಮುಖ್ಯಾಂಶಗಳು
- ದಿಲ್ಜಿತ್ ದೊಸ್ಸಾಂಜ್ ಶೋಗೆ ಅನುಮತಿ ನಿರಾಕರಣೆ
- ದಿಲ್ಜೀತ್ ದೊಸ್ಸಾಂಜ್ ಲೈವ್ ಕಾನ್ಸರ್ಟ್ ಆಯೋಜಿಸಲಾಗಿತ್ತು
- ದೆಹಲಿ ಪೊಲೀಸರಿಂದ ಅವಕಾಶ ನಿರಾಕರಣೆ
ಕೆಲ ತಿಂಗಳ ಹಿಂದೆ, ಖ್ಯಾತ ಗಾಯಕ, ನಟ ದಿಲ್ಜೀತ್ ದೊಸ್ಸಾಂಜ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಲೈವ್ ಕಾನ್ಸರ್ಟ್ಗಳ ಬಗ್ಗೆ ಮಾತನಾಡಿದ್ದರು. ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಲೈವ್ ಕಾನ್ಸರ್ಟ್ ಮಾರುಕಟ್ಟೆ ಬೆಳೆಯುತ್ತಿರುವ ರೀತಿ, ಅದು ಸೃಷ್ಟಿಸುವ ಅವಕಾಶಗಳ ಬಗ್ಗೆ ಚರ್ಚಿಸಿದ್ದರು. ಅದಾದ ಬಳಿಕ ಮೋದಿ ಅವರು ಎಲ್ಲ ರಾಜ್ಯ ಸರ್ಕಾರಗಳ ಬಳಿ ಮನವಿ ಮಾಡಿ ಲೈವ್ ಕಾನ್ಸರ್ಟ್ಗಳಿಗೆ ಪೂರಕ ವಾತಾವರಣ ನಿರ್ಮಾಣ ಮಾಡುವಂತೆ ಮನವಿ ಮಾಡಿದ್ದರು. ಇದರಿಂದ ಭಾರತದಲ್ಲಿ ಲೈವ್ ಕಾನ್ಸರ್ಟ್ಗಳು ಹೆಚ್ಚಾಗುತ್ತವೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇದೀಗ ಅದೇ ದಿಲ್ಜೀತ್ ಅವರ ಹೊಸ ಲೈವ್ ಕಾನ್ಸರ್ಟ್ಗೆ ದೆಹಲಿ ಸರ್ಕಾರ ಅವಕಾಶ ನಿರಾಕರಿಸಿದೆ.
ಅಕ್ಟೋಬರ್ 30ರಂದು ದಿಲ್ಜೀತ್ ದೊಸ್ಸಾಂಜ್ ಅವರು ದೆಹಲಿಯಲ್ಲಿ ಕನ್ಸರ್ಟ್ ಆಯೋಜನೆ ಮಾಡಿದ್ದರು. ಬುಕ್ಮೈ ಶೋನಲ್ಲಿ ಟಿಕೆಟ್ಗಗಳು ಸಹ ಮಾರಾಟ ಆಗಿದ್ದವು. ಆದರೆ ಶೋಗೆ ಇನ್ನೊಂದು ವಾರ ಇರುವಾಗ ದೆಹಲಿ ಪೊಲೀಸರು ಕಾನ್ಸರ್ಟ್ಗೆ ಅವಕಾಶವನ್ನು ನಿರಾಕರಿಸಿದ್ದಾರೆ. ದೆಹಲಿಯ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಕಾನ್ಸರ್ಟ್ ಆಯೋಜನೆಗೊಂಡಿತ್ತು. ಭದ್ರತಾ ಕಾರಣವನ್ನು ನೀಡಿ ಪೊಲೀಸರು ದಿಲ್ಜೀತ್ ಅವರಿಗೆ ಅನುಮತಿಯನ್ನು ನಿರಾಕರಿಸಿದ್ದಾರೆ.
ದಿಲ್ಜಿತ್ ಭಾರತದಲ್ಲಿ ಮಾತ್ರವೇ ಅಲ್ಲದೆ ವಿಶ್ವದಾದ್ಯಂತ ಹಲವಾರು ಶೋಗಳನ್ನು ಕಳೆದ ಕೆಲ ವರ್ಷಗಳಿಂದ ನಡೆಸುತ್ತಾ ಬಂದಿದ್ದಾರೆ. 2024ರಲ್ಲಿ ಅವರು ನಡೆಸಿಕೊಟ್ಟಿದ್ದ ‘ದಿಲ್-ಲುಮಿನಾಟಿ’ ಟೂರ್ ಭಾರಿ ಯಶಸ್ವಿ ಆಗಿತ್ತು. ವಿಶ್ವದ ಹಲವು ಪ್ರಮುಖ ನಗರಗಳಲ್ಲಿ ಭಾರಿ ಅದ್ಧೂರಿ ಶೋಗಳನ್ನು ದಿಲ್ಜಿತ್ ನೀಡಿದರು. ಈಗ ಅವರು ಭಾರತದ ಟೂರ್ ಆರಂಭಿಸಿದ್ದರು. ಆದರೆ ದೆಹಲಿಯಲ್ಲಿ ಅವರಿಗೆ ಅನುಮತಿ ನಿರಾಕರಣೆ ಮಾಡಲಾಗಿದೆ.
ಇದನ್ನೂ ಓದಿ:93 ಕೋಟಿ ರೂಪಾಯಿ ಗಳಿಸಿದ ‘ಪ್ರೇಮದ ಊರಲಿ’ ಸಿನಿಮಾ; ನೂರು ಕೋಟಿ ಗಳಿಕೆ ಫಿಕ್ಸ್
ದಿಲ್ಜೀತ್ ಅವರ ಇಂಡಿಯಾ ಟೂರ್ನ ಮೊದಲ ಕಾನ್ಸರ್ಟ್ ದೆಹಲಿಯಲ್ಲಿಯೇ ಆಯೋಜಿಸಲಾಗಿತ್ತು. ಆದರೆ ಮೊದಲ ಶೋಗೆ ಅವಕಾಶವನ್ನು ಪೊಲೀಸರು ನಿರಾಕರಿಸಿದ್ದಾರೆ. ದೆಹಲಿ, ಇಂಧೋರ್, ಅಹಮದಾಬಾದ್, ಮುಂಬೈ, ಬೆಂಗಳೂರು, ಲಖನೌ, ಕೊಲ್ಕತ್ತ, ಚಂಡೀಘಡಗಳಲ್ಲಿ ದಿಲ್ಜೀತ್ ಅವರ ಶೋ ನಿಗದಿ ಆಗಿದೆ. ಬೆಂಗಳೂರಿನಲ್ಲಿ ನವೆಂಬರ್ 29ರಂದು ಶೋ ನಡೆಯಲಿದೆ. ಬುಕ್ ಮೈ ಶೋನಲ್ಲಿ ಟಿಕೆಟ್ಗಳು ಮಾರಾಟ ಆಗುತ್ತಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




