‘ದಿ ಪ್ಯಾರಡೈಸ್’ ಒಟಿಟಿ ರಿಲೀಸ್, 24 ನಿಮಿಷಗಳ ದೃಶ್ಯಕ್ಕೆ ಕತ್ತರಿ
ಸಿನಿಮಾ ಆರಂಭದ ಕೆಲ ಬಾಕ್ಸ್ ಆಫೀಸ್ನಲ್ಲಿ ಒಳ್ಳೆ ಗಳಿಕೆ ಮಾಡಿತು ಆದರೆ ಸಿನಿಮಾದ ಬಗ್ಗೆ ಭಾರಿ ಟೀಕೆ, ನೆಗೆಟಿವ್ ವಿಮರ್ಶೆ ಗಳು ವ್ಯಕ್ತವಾದವು. ಸಿನಿಮಾದ ಹಲವು ದೃಶ್ಯಗಳು, ಡ್ಯಾನ್ಸ್ ಇನ್ನೂ ಕೆಲವು ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ವಿಪರೀತ ಟ್ರೋಲ್ ಸಹ ಮಾಡಲಾಯ್ತು. ಇದೀಗ ಸಿನಿಮಾ ಒಟಿಟಿಗೆ ಬಂದಿದ್ದು, ಟ್ರೋಲಿಂಗ್ನಿಂದ ಪಾರಾಗಲು ಸಿನಿಮಾದ ಹಲವು ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ.

ಮುಖ್ಯಾಂಶಗಳು
- ‘ದಿ ಪ್ಯಾರಡೈಸ್’ ಒಟಿಟಿಗೆ ರಿಲೀಸ್ ಆಗಿದೆ
- ‘ದಿ ಪ್ಯಾರಡೈಸ್’ ಸಿನಿಮಾದ 24 ನಿಮಿಷದ ದೃಶ್ಯ ಕಟ್
- ಸಿನಿಮಾ ಸಖತ್ ಟ್ರೋಲ್ ಆಗಿತ್ತು
ತೆಲುಗಿನ ಸ್ಟಾರ್ ನಟ ನಾನಿ ‘ದಿ ಪ್ಯಾರಡೈಸ್’ (The Paradise) ಕೆಲ ವಾರಗಳ ಹಿಂದೆ ಬಿಡುಗಡೆ ಆಗಿತ್ತು. ಸಿನಿಮಾ ಆರಂಭದ ಕೆಲ ಬಾಕ್ಸ್ ಆಫೀಸ್ನಲ್ಲಿ ಒಳ್ಳೆ ಗಳಿಕೆ ಮಾಡಿತು ಆದರೆ ಸಿನಿಮಾದ ಬಗ್ಗೆ ಭಾರಿ ಟೀಕೆ, ನೆಗೆಟಿವ್ ವಿಮರ್ಶೆ ಗಳು ವ್ಯಕ್ತವಾದವು. ಸಿನಿಮಾದ ಹಲವು ದೃಶ್ಯಗಳು, ಡ್ಯಾನ್ಸ್ ಇನ್ನೂ ಕೆಲವು ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ವಿಪರೀತ ಟ್ರೋಲ್ ಸಹ ಮಾಡಲಾಯ್ತು. ಇದೀಗ ಸಿನಿಮಾ ಒಟಿಟಿಗೆ ಬಂದಿದ್ದು, ಟ್ರೋಲಿಂಗ್ನಿಂದ ಪಾರಾಗಲು ಸಿನಿಮಾದ ಹಲವು ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ.
ನಾನಿ ಅಭಿನಯದ ‘ದಿ ಪ್ಯಾರಡೈಸ್’ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ರಿಲೀಸ್ ಆಗಿದೆ. ಶ್ರೀಕಾಂತ್ ಒಡೆಲಾ ನಿರ್ದೇಶನದ ಈ ತೆಲುಗು ಆಕ್ಷನ್ ಡ್ರಾಮಾ ಚಿತ್ರವು ಈಗ ಕಡಿಮೆ ಅವಧಿಯ ಆವೃತ್ತಿಯಲ್ಲಿ ಲಭ್ಯವಿದೆ. ಸಾಮಾನ್ಯವಾಗಿ ಒಟಿಟಿಗೆ ರಿಲೀಸ್ ಮಾಡಿದಾಗ ಹೆಚ್ಚಿನ ದೃಶ್ಯಗಳನ್ನು ಸೇರಿಸಿ ರಿಲೀಸ್ ಮಾಡಲಾಗುತ್ತದೆ. ಆದರೆ ‘ದಿ ಪ್ಯಾರಡೈಸ್’ ಸಿನಿಮಾದ ದೃಶ್ಯಗಳನ್ನು ಕಟ್ ಮಾಡಿ ರಿಲೀಸ್ ಮಾಡಲಾಗಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಬಳಿಕ ವ್ಯಕ್ತವಾದ ಟೀಕೆಗಳನ್ನು ಆಧರಿಸಿ ಸಿನಿಮಾದ ಹಲವು ದೃಶ್ಯಗಳಿಗೆ ಕತ್ತರಿ ಹಾಕಲಾಗಿದ್ದು, ಒಟ್ಟು 24 ನಿಮಿಷಗಳ ದೃಶ್ಯಗಳನ್ನು ಕತ್ತರಿಸಿ ತೆಗೆಯಲಾಗಿದೆ.
‘ದಿ ಪ್ಯಾರಡೈಸ್’ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆದಾಗ 2 ಗಂಟೆ 54 ನಿಮಿಷಗಳಿತ್ತು. ಈಗ ಒಟಿಟಿಯಲ್ಲಿ ಸುಮಾರು 2 ಗಂಟೆ 30 ನಿಮಿಷಗಳಿಗೆ ಇಳಿಕೆಯಾಗಿದೆ. ಒಟಿಟಿ ಆವೃತ್ತಿಯಲ್ಲಿ ಮಾಡಲಾದ ಪ್ರಮುಖ ಬದಲಾವಣೆಗಳಲ್ಲಿ ಸೋನಾಲಿ ಕುಲಕರ್ಣಿ ಅವರ ಪಾತ್ರವಾದ ‘ಧೂಮಾವತಿ’ಯ ನೃತ್ಯದ ದೃಶ್ಯವನ್ನು ತೆಗೆದುಹಾಕಿರುವುದು ಮುಖ್ಯವಾಗಿದೆ. ಥಿಯೇಟರ್ ಕಟ್‌ನಲ್ಲಿ, ಆ ನೃತ್ಯದ ತುಣುಕು ಜಗಳದ ದೃಶ್ಯದ ಮಧ್ಯೆ ಬಂದು ಆನ್‌ಲೈನ್‌ನಲ್ಲಿ ಬೇಗನೆ ಚರ್ಚೆಗೆ ಗ್ರಾಸವಾಗಿತ್ತು ಮತ್ತು ವೀಕ್ಷಕರು ಅದನ್ನು ಮೀಮ್ ಮಾಡಿದ್ದರು.
ಇದನ್ನೂ ಓದಿ:‘ದಿ ಪ್ಯಾರಡೈಸ್’ ಸಿನಿಮಾಕ್ಕೆ ತೀವ್ರ ಟೀಕೆ: ನಟ ನಾನಿ ಹೇಳಿದ್ದೇನು?
ಇಂಟರ್ವೆಲ್ ನಂತರ ಚಿತ್ರದ ವೇಗ ಕುಂಟಿತಗೊಂಡಿದೆ ಮತ್ತು ದೀರ್ಘವಾದ ಆಕ್ಷನ್ ದೃಶ್ಯಗಳಿಂದಾಗಿ ಸಿನಿಮಾ ಅಗತ್ಯಕ್ಕಿಂತ ಹೆಚ್ಚು ಸಮಯ ಎನಿಸುತ್ತದೆ ಎಂದು ಚಿತ್ರಮಂದಿರಗಳ ಬಿಡುಗಡೆಯ ಸಮಯದಲ್ಲಿ ಅನೇಕರು ಅಭಿಪ್ರಾಯಪಟ್ಟಿದ್ದರು. ಈ ಕಾರಣಕ್ಕಾಗಿ ಕೆಲವು ಆಕ್ಷನ್ ದೃಶ್ಯಗಳಿಗೆ ಸಹ ಕತ್ತರಿ ಹಾಕಲಾಗಿದೆ. ಹಿಂಸೆ ಹೆಚ್ಚಾಗಿದೆ ಎಂಬ ಟೀಕೆಯೂ ವ್ಯಕ್ತವಾಗಿತ್ತು. ಹಾಗಾಗಿ ಅತಿಯಾದ ಹಿಂಸಾತ್ಮಕ ದೃಶ್ಯಗಳಿಗೂ ಸಹ ಕತ್ತರಿ ಹಾಕಲಾಗಿದೆ.
ನೆಟ್‌ಫ್ಲಿಕ್ಸ್ ಆವೃತ್ತಿಯಲ್ಲಿ ಕೆಲವು ದೃಶ್ಯಗಳ ದೃಶ್ಯ ಪರಿಣಾಮಗಳನ್ನು (VFX) ಸುಧಾರಿಸಲಾಗಿದೆ ಎಂದು ವರದಿಯಾಗಿದೆ, ಇದರೊಂದಿಗೆ ಕೊನೆಯಲ್ಲಿ ಬರುವ ಕ್ರೆಡಿಟ್ಸ್ ಅನ್ನು ಸಹ ನಿಧಾನವಾಗಿ ಚಲಿಸುವಂತೆ ಬದಲಾಯಿಸಲಾಗಿದೆ. ಥಿಯೇಟರ್‌ಗಳಲ್ಲಿ ಅವು ಓದಲು ಬಾರದಷ್ಟು ವೇಗವಾಗಿ ಓಡುತ್ತಿವೆ ಎಂದು ವೀಕ್ಷಕರು ದೂರಿದ್ದರು. ಈಗ ಪರಿಷ್ಕೃತ ಆವೃತ್ತಿಯಲ್ಲಿ ಹೆಸರುಗಳನ್ನು ಓದಲು ಹೆಚ್ಚಿನ ಸಮಯ ನೀಡಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




