AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದಿ ಪ್ಯಾರಡೈಸ್’ ಸಿನಿಮಾನಲ್ಲಿ ನಟಿಸಿದ್ದ ದೃಶ್ಯಕ್ಕೆ ಕತ್ತರಿ, ನಟ ಬೇಸರ

‘ದಿ ಪ್ಯಾರಡೈಸ್’ ಸಿನಿಮಾ ರಿಲೀಸ್ ಆಗಿದೆ. ಭಾರಿ ಬಜೆಟ್​​ನ ಈ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್​​ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಿದೆ. ಸಿನಿಮಾನಲ್ಲಿ ಖಯಾದು ಲೋಹರ್ ನಾಯಕಿ, ಮೋಹನ್​​ಬಾಬು, ಬಾಲಿವುಡ್​​ನ ರಾಘವ್ ಜುರೆಲ್ ವಿಲನ್. ಹಲವು ಅದ್ಭುತ ಕಲಾವಿದರು ಈ ಸಿನಿಮಾನಲ್ಲಿ ನಟನೆ ಮಾಡಿದ್ದಾರೆ. ಭಾರಿ ವೈಲೆನ್ಸ್ ಇರುವ ಈ ಸಿನಿಮಾನಲ್ಲಿ ಕೆಲವು ದೈತ್ಯ ಬಾಡಿಬಿಲ್ಡರ್​​ಗಳು ಸಹ ಇದ್ದಾರೆ. ಅವರುಗಳಲ್ಲಿ ರೆಮೊ ರಹೀಮ್ ಸಹ ಒಬ್ಬರು.

‘ದಿ ಪ್ಯಾರಡೈಸ್’ ಸಿನಿಮಾನಲ್ಲಿ ನಟಿಸಿದ್ದ ದೃಶ್ಯಕ್ಕೆ ಕತ್ತರಿ, ನಟ ಬೇಸರ
The Paradise1
ಮಂಜುನಾಥ ಸಿ.
|

Updated on: Sep 25, 2026 | 7:20 PM

Share

ಸಿನಿಮಾಗಳಲ್ಲಿ ನಟಿಸುವುದು ಎಷ್ಟೋ ಮಂದಿ ಕಲಾವಿದರ ಕನಸು. ಅದರಲ್ಲೂ ದೊಡ್ಡ ನಟರ, ದೊಡ್ಡ ಬ್ಯಾನರ್​​ನ ಸಿನಿಮಾಗಳಲ್ಲಿ ನಟಿಸಲು ಅವಕಾಶ ಸಿಕ್ಕಿತೆಂದರೆ ಅದೃಷ್ಟವೇ ಸರಿ. ಆದರೆ ಹೀಗೆ ಸಿಕ್ಕ ಅವಕಾಶ ಕೊನೆಯ ಕ್ಷಣದಲ್ಲಿ ಕೈಕೊಟ್ಟರೆ? ಚಿತ್ರರಂಗದ ಹಲವರಿಗೆ ಇದರ ಅನುಭವ ಆಗಿರುತ್ತದೆ. ತಾವು ನಟಿಸಿದ ಪಾತ್ರ ಕೊನೆಯ ಕ್ಷಣದಲ್ಲಿ ಕಟ್ ಆಗಿ ಹೋಗಿರುತ್ತದೆ. ಆದರೆ ನಿರ್ದೇಶಕರ ಮೇಲಿನ ಗೌರವ, ಮತ್ತೆ ಪಾತ್ರ ಸಿಗದೇನೋ ಎಂಬ ಭಯದಲ್ಲಿ ಹೆಚ್ಚಿನ ಕಲಾವಿದರು ಆ ಬಗ್ಗೆ ಮಾತನಾಡುವುದಿಲ್ಲ. ಆದರೆ ಇಲ್ಲೊಬ್ಬ ಕಲಾವಿದರು, ಈ ಬಗ್ಗೆ ಬೇಸರ ತೋಡಿಕೊಂಡಿದ್ದಾರೆ.

ಇತ್ತೀಚೆಗಷ್ಟೆ ತೆಲುಗಿನ ಸ್ಟಾರ್ ನಟ ನಾನಿಯ ‘ದಿ ಪ್ಯಾರಡೈಸ್’ ಸಿನಿಮಾ ರಿಲೀಸ್ ಆಗಿದೆ. ಭಾರಿ ಬಜೆಟ್​​ನ ಈ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್​​ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಿದೆ. ಸಿನಿಮಾನಲ್ಲಿ ಖಯಾದು ಲೋಹರ್ ನಾಯಕಿ, ಮೋಹನ್​​ಬಾಬು, ಬಾಲಿವುಡ್​​ನ ರಾಘವ್ ಜುರೆಲ್ ವಿಲನ್. ಹಲವು ಅದ್ಭುತ ಕಲಾವಿದರು ಈ ಸಿನಿಮಾನಲ್ಲಿ ನಟನೆ ಮಾಡಿದ್ದಾರೆ. ಭಾರಿ ವೈಲೆನ್ಸ್ ಇರುವ ಈ ಸಿನಿಮಾನಲ್ಲಿ ಕೆಲವು ದೈತ್ಯ ಬಾಡಿಬಿಲ್ಡರ್​​ಗಳು ಸಹ ಇದ್ದಾರೆ. ಅವರುಗಳಲ್ಲಿ ರೆಮೊ ರಹೀಮ್ ಸಹ ಒಬ್ಬರು.

ಇದೀಗ ರೆಮೊ ರಹೀಮ್, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು, ತಾವು ‘ದಿ ಪ್ಯಾರಡೈಸ್’ ಸಿನಿಮಾನಲ್ಲಿ ನಟಿಸಿದ್ದ ಸುಮಾರು ಏಳು ನಿಮಿಷದ ದೃಶ್ಯಕ್ಕೆ ಕತ್ತರಿ ಹಾಕಿರುವುದನ್ನು ಹೇಳಿಕೊಂಡಿದ್ದಾರೆ. ‘ದಿ ಪ್ಯಾರಡೈಸ್’ ಸಿನಿಮಾದ ಬಗ್ಗೆ ನೆಗೆಟಿವ್ ವಿಮರ್ಶೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಬಗ್ಗೆ ಮಾತನಾಡಿರುವ ಅವರು, ‘ಸಿನಿಮಾ ಅನ್ನು ಕೊಲ್ಲಬೇಡಿ, ಖುದ್ದು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ’ ಎಂದಿದ್ದಾರೆ.

ಇದನ್ನೂ ಓದಿ:‘ದಿ ಪ್ಯಾರಡೈಸ್’ ಸಿನಿಮಾಕ್ಕೆ ತೀವ್ರ ಟೀಕೆ: ನಟ ನಾನಿ ಹೇಳಿದ್ದೇನು?

‘ಸಿನಿಮಾನಲ್ಲಿ ನಾನು ನಟಿಸಿದ ಏಳು ನಿಮಿಷದ ಫುಟೇಜ್ ಡಿಲೀಟ್ ಮಾಡಲಾಗಿದೆ. ಸಿನಿಮಾನಲ್ಲಿ ಬರುವ ಎರಡನೇ ಫೈಟ್​​ನಲ್ಲಿ ನಾನಿದ್ದೆ ಆದರೆ ಆ ಫೈಟ್​​ನ ದೃಶ್ಯಗಳನ್ನು ಕತ್ತರಿಸಲಾಗಿದೆ. ಆದರೆ ಆ ಬಗ್ಗೆ ನನಗೆ ಬೇಸರ ಇಲ್ಲ. ಆದರೆ ನೆಗೆಟಿವ್ ಟ್ರೋಲುಗಳಿಂದ ಒಂದು ಸಿನಿಮಾ ಅನ್ನು ಕೊಲ್ಲಬೇಡಿ, ದಯವಿಟ್ಟು ಚಿತ್ರರಂಗಕ್ಕೆ ಬನ್ನಿ’ ಎಂದು ಅವರು ಮನವಿ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More