‘ದಿ ಪ್ಯಾರಡೈಸ್’ ಸಿನಿಮಾಕ್ಕೆ ತೀವ್ರ ಟೀಕೆ: ನಟ ನಾನಿ ಹೇಳಿದ್ದೇನು?
ನಟ ನಾನಿ, ‘ದಿ ಪ್ಯಾರಡೈಸ್’ ಸಿನಿಮಾನಲ್ಲಿ ಸಂಪೂರ್ಣ ಆಕ್ಷನ್ ಹಿರೋ ರೀತಿಯ ಪಾತ್ರದಲ್ಲಿ ನಟಿಸಿದ್ದಾರೆ. ಎರಡು ಜಡೆ ಬಿಟ್ಟುಕೊಂಡು, ಶರ್ಟ್ ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಸಹ ವಿಪರೀತ ಆಕ್ಷನ್ ಹೊಂದಿದ್ದು, ಬಹಳ ವಯಲೆಂಟ್ ಆಗಿದೆ ಎನ್ನಲಾಗಿದೆ. ಆದರೆ ಜನಕ್ಕೆ ಸಿನಿಮಾ ಇಷ್ಟವಾಗಿಲ್ಲ.

ತೆಲುಗಿನ ಸ್ಟಾರ್ ನಟ ನಾನಿಯ ‘ದಿ ಪ್ಯಾರಡೈಸ್’ ಸಿನಿಮಾ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿತ್ತು. ಕೌಟುಂಬಿಕ ಸಿನಿಮಾಗಳು, ಲವ್ವರ್ ಬಾಯ್ ರೀತಿಯ ಪಾತ್ರಗಳನ್ನಷ್ಟೆ ಮಾಡುತ್ತಾ ಬಂದಿದ್ದ ನಟ ನಾನಿ, ‘ದಿ ಪ್ಯಾರಡೈಸ್’ ಸಿನಿಮಾನಲ್ಲಿ ಸಂಪೂರ್ಣ ಆಕ್ಷನ್ ಹಿರೋ ರೀತಿಯ ಪಾತ್ರದಲ್ಲಿ ನಟಿಸಿದ್ದಾರೆ. ಎರಡು ಜಡೆ ಬಿಟ್ಟುಕೊಂಡು, ಶರ್ಟ್ ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಸಹ ವಿಪರೀತ ಆಕ್ಷನ್ ಹೊಂದಿದ್ದು, ಬಹಳ ವಯಲೆಂಟ್ ಆಗಿದೆ ಎನ್ನಲಾಗಿದೆ. ಆದರೆ ಜನಕ್ಕೆ ಸಿನಿಮಾ ಇಷ್ಟವಾಗಿಲ್ಲ.
‘ದಿ ಪ್ಯಾರಡೈಸ್’ ಸಿನಿಮಾಕ್ಕೆ ಜನ ಋಣಾತ್ಮಕ ವಿಮರ್ಶೆಗಳನ್ನು ನೀಡಿದ್ದಾರೆ. ಆನ್ಲೈನ್ನಲ್ಲಿ ಸಿನಿಮಾ ಅನ್ನು ವಿಪರೀತ ಟ್ರೋಲ್ ಮಾಡಲಾಗಿದೆ. ಸಿನಿಮಾನಲ್ಲಿ ಅತಿಯಾದ ಮತ್ತು ಅನವಶ್ಯಕ ಹಿಂಸೆಯ ಬಗ್ಗೆಯಂತೂ ತೀವ್ರ ಟೀಕೆ ವ್ಯಕ್ತಪಡಿಸಲಾಗಿದೆ. ನಾನಿಯ ಹಿಂದಿನ ಯಾವ ಸಿನಿಮಾಕ್ಕೂ ಬರದ ರೀತಿಯಲ್ಲಿ ಋಣಾತ್ಮಕ ವಿಮರ್ಶೆಗಳು ಈ ಸಿನಿಮಾಕ್ಕೆ ವ್ಯಕ್ತವಾಗಿವೆ. ನಟ ನಾನಿ ಆ ವಿಮರ್ಶೆ, ಟೀಕೆಗಳ ಬಗ್ಗೆ ಇದೀಗ ಟ್ವೀಟ್ ಮಾಡಿದ್ದಾರೆ.
I have seen all your reactions and responses. I’ve received all your love and equally enjoyed your hilarious trolls. I’m heartwarmed by the way audience have owned the film, and also learnt from the flaws that critics and reviewers have pointed out.
Thank you for everything is…
— Nani (@NameisNani) September 25, 2026
ನಿಮ್ಮ ಎಲ್ಲಾ ಪ್ರತಿಕ್ರಿಯೆಗಳು ಮತ್ತು ಅಭಿಪ್ರಾಯಗಳನ್ನು ನಾನು ಗಮನಿಸಿದ್ದೇನೆ. ನಿಮ್ಮ ಪ್ರೀತಿಯನ್ನು ಸ್ವೀಕರಿಸಿದ್ದೇನೆ ಮತ್ತು ನಿಮ್ಮ ತಮಾಷೆಯ ಟ್ರೋಲ್‌ಗಳನ್ನು ಕೂಡ ಆನಂದಿಸಿದ್ದೇನೆ. ಪ್ರೇಕ್ಷಕರು ಈ ಚಿತ್ರವನ್ನು ತಮ್ಮದೆಂದು ಭಾವಿಸಿ ಅಪ್ಪಿಕೊಂಡಿರುವುದು ನನ್ನ ಮನಸ್ಸಿಗೆ ಹತ್ತಿರವಾಗಿದೆ. ಹಾಗೆಯೇ, ವಿಮರ್ಶಕರು ಎತ್ತಿ ತೋರಿಸಿದ ಲೋಪದೋಷಗಳಿಂದಲೂ ನಾನು ಪಾಠ ಕಲಿತಿದ್ದೇನೆ. ಎಲ್ಲದಕ್ಕೂ ಧನ್ಯವಾದಗಳು, ಇದಷ್ಟೇ ನಾನು ಹೇಳಬಲ್ಲೆ’ ಎಂದಿದ್ದಾರೆ.
ಇದನ್ನೂ ಓದಿ: ‘ರುದ್ರಾಭಿಷೇಕಂ’ ಸಿನಿಮಾ ವಿಮರ್ಶೆ: ಹೇಗಿದೆ ವಿಜಯ್ ರಾಘವೇಂದ್ರ ಸಿನಿಮಾ?
ಮುಂದುವರೆದು, ‘ನಿಮಗೆ ವಿಶಿಷ್ಟ ಅನುಭವವನ್ನು ನೀಡುವ ಉದ್ದೇಶದಿಂದ ನಾವು ಅಪಾರ ಶ್ರಮವಹಿಸಿ ‘ದಿ ಪ್ಯಾರಡೈಸ್’ ಚಿತ್ರವನ್ನು ರೂಪಿಸಿದ್ದೇವೆ. ಇದನ್ನು ಸಂಭ್ರಮಿಸುವುದು ಅಥವಾ ಇದರ ಬಗ್ಗೆ ತೀರ್ಪು ನೀಡುವುದು ಈಗ ನಿಮ್ಮ ಕೈಯಲ್ಲಿದೆ. ಈ ಚಿತ್ರದ ಬಗ್ಗೆ ನೀವು ತೋರಿದ ಉತ್ಸಾಹ ಮತ್ತು ನನ್ನ ಮೇಲಿಟ್ಟಿರುವ ಪ್ರೀತಿಯಿಂದಾಗಿ ನನ್ನ ಮನಸ್ಸು ಕೃತಜ್ಞತೆಯ ಭಾವನೆಯಿಂದ ತುಂಬಿದೆ’ ಎಂದಿದ್ದಾರೆ.
‘ದಿ ಪ್ಯಾರಡೈಸ್’ ಸಿನಿಮಾ ಅನ್ನು ಶ್ರೀಕಾಂತ್ ಒಡೆಲ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ನಾನಿಯ ಜೊತೆಗೆ ಖಯಾದು ಲೋಹರ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾನಲ್ಲಿ ಮೋಹನ್ಬಾಸ್ ಹಾಗೂ ಬಾಲಿವುಡ್ನ ರಾಘವ್ ಜುರೆಲ್ ವಿಲನ್ಗಳಾಗಿ ನಟನೆ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




